ಊರರುಗಳಿಗೆ
ಕಾಲುವೆ ಕಟ್ಟೆಗಳನ್ನಿತ್ತು
ಚಾರುತರದ ಧಾನ್ಯಗಳನ್ನು
ಪೂರಿತ ಫಲವೀಯುತೆ
ಸರ್ವಜನಕುಪಕಾರಿಯಾಗಬೇಕು
ಎನ್ನುವ ಉದ್ದೇಶ
ನಮ್ಮ ಸರ್ಕಾರದ್ದು.
ಅದಕ್ಕಾಗಿ ನೆನೆಗುದಿಗೆ
ಬಿದ್ದಿದ್ದ ೩೬
ನೀರಾವರಿ ಯೋಜನೆಗಳನ್ನು
ಪೂರ್ಣಗೊಳಿಸುವ
ನಿಟ್ಟಿನಲ್ಲಿ
ಬಹುದೂರ ಸಾಗಿದ್ದೇವೆ.
ರೈತಾಪಿ ಜನ
ಸಾಲವೆಂಬ ಶೂಲದಲ್ಲಿ
ಸಿಕ್ಕು ನರಳುತ್ತಿದ್ದಾರೆ.
ಈ ನರಳುವಿಕೆಯನ್ನು
ತಪ್ಪಿಸಬೇಕು,
ಕೃಷಿಕರು ನೆಮ್ಮದಿಯಿಂದ
ತಮ್ಮ ಕೃಷಿ ಚಟುವಟಿಕೆಗಳಲ್ಲಿ
ತೊಡಗಿಕೊಳ್ಳಬೆಕು
ಎನ್ನು ಉದ್ದೇಶದಿಂದ
ರೈತಾಪಿ ವರ್ಗಕ್ಕೆ
ಶೇ. ೪ ರಷ್ಟು
ಕಡಿಮೆ ಬಡ್ಡಿದರದಲ್ಲಿ
ಕೃಷಿ ಸಾಲ ದೊರೆಯುವಂತೆ
ವ್ಯವಸ್ಥೆ ಮಾಡಿದ್ದೇವೆ.
ಈ ಒಂದು ವರ್ಷದ
ಅವಧಿಯಲ್ಲಿ ೧೫೦೦
ಕೋಟಿ ರೂ. ಗಳಿಗೆ
ಹೆಚ್ಚು ಕೃಷಿ
ಸಾಲವನ್ನು ವಿತರಿಸಿ
ನಮ್ಮ ರೈತಾಪಿ
ಜನರ ಹೊರೆಯನ್ನು
ಗಮನಾರ್ಹವಾಗಿ
ಕಡಿಮೆ ಮಾಡಿದ್ದೇವೆ.
ನಮ್ಮ ಕೃಷಿ ಪ್ರಪಂಚಕ್ಕೆ
ಹೊಸದೊಂದು ರೂಪ
ನೀಡುವ ಕೃಷಿ
ನೀತಿಯನ್ನು ಪ್ರಕಟಿಸಿದ್ದೇವೆ.
ಈ ಕೃಷಿ ನೀತಿ
ಸಮಗ್ರವಾಗಿ ಅನುಷ್ಠಾನಕ್ಕೆ
ಬಂದಲ್ಲಿ ರೈತರ
ಆತ್ಮಹತ್ಯೆ ಪ್ರಕರಣಗಳಿಗೆ
ಇತಿಶ್ರೀ ಹಾಡಬಹುದು
ಎನ್ನುವುದು ನನ್ನ
ಗಾಢ ನಂಬಿಕೆ.
ಹೊಲವವುತ್ತ
ಬಿತ್ತೂರು, ಬೆಳೆಯಕೊಯ್ದು
ಬೇವರೋರು, ಬಿಸಿಲಲ್ಲಿ
ಬೇಯೋರು ನನ್ನ
ಜನರು.......ಕವಿ
ಡಾ : ಸಿದ್ದಲಿಂಗಯ್ಯನವರ
ಈ ಕಾಳಜಿ ನಮ್ಮದು
ಕೂಡ. ನಮ್ಮ ರೈತರ
ಹಿತ ನಮಗೆ ಮುಖ್ಯ.
ಬಡತನದ ರೇಖೆಯ
ಕೆಳಗಿರುವ ಕುಟುಂಬಗಳಲ್ಲಿ
ಜನಿಸಿದ ಹೆಣ್ಣು
ಮಕ್ಕಳ ಭವಿಷ್ಯವನ್ನು
ಭದ್ರವಾಗಿಸುವ
ವಿನೂತನವಾದ ಆದರೆ
ಮಾನವೀಯ ಮುಖವನ್ನು
ಹೊಂದಿ ಭಾಗ್ಯಲಕ್ಷ್ಮಿ
ಯೋಜನೆಯನ್ನು
ಜಾರಿಗೆ ತಂದಿದ್ದೇವೆ.
ಸುಮಾರು ಒಂದು
ಲಕ್ಷದ ೭೫ ಸಾವಿರಕ್ಕೂ
ಹೆಚ್ಚೆ ಹೆಣ್ಣು
ಮಕ್ಕಳು ಇದರ
ಪ್ರಯೋಜನ ಪಡೆದ್ದಿದ್ದಾರೆ.
೨೩೪ ಕೋಟಿ ರೂ.ಗಳಷ್ಟು
ಹಣವನ್ನು ಇದಕ್ಕಾಗಿ
ವಿನಿಯೋಗಿಸುತ್ತಿದ್ದೇವೆ.
ನಮ್ಮ ಹೆಣ್ಣು
ಮಕ್ಕಳ ಶಿಕ್ಷಣದ
ಹಾದಿ ಸಂಗಮವಾಗಲೆಂದು
ಶಾಲೆಗಳಿಗೆ ಹೋಗುವ
ಹೆಣ್ಣು ಮಕ್ಕಳಿಗೆ
ಬೈಸಿಕಲ್ ನೀಡುವ
ಮತ್ತೊಂದು ಯೋಜನೆ
ಕೂಡ ಜಾರಿಗೆ
ಬಂದಿದೆ. ಈ ಯೋಜನೆಯನ್ನು
ಹುಡುಗರಿಗೂ ವಿಸ್ತರಿಸುವ
ಆಲೋಚನೆ ನಮ್ಮ
ಮುಂದಿದೆ.
ಕರ್ನಾಟಕದ ಶೈಕ್ಷಣಿಕ
ಇತಿಹಾಸದಲ್ಲಿ
ಹೊಸದೊಂದು ದಾಖಲೆ
ಬರೆದ ಹೆಗ್ಗಳಿಕೆ
ನಮ್ಮ ಸರ್ಕಾರದ್ದು.
ಈ ಹಿಂದೆ ಯಾರೂ
ಮಾಡಿರದ ಸಾಧನೆ
ನಮ್ಮದು ಎನ್ನುವ
ವಿಚಾರ ಕೇವಲ
ಆತ್ಮ ಪ್ರಶಂಸೆಯಲ್ಲ
ಬದಲಿಗೆ ನಮ್ಮ
ಕಾಳಜಿಗೆ ಸಾಕ್ಷಿ
ಎಂದು ನಾನು ಭಾವಿಸಿದ್ದೇನೆ.
ಈವರೆಗೆ ಒಂದು
ಶೈಕ್ಷಣಿಕ ವರ್ಷದಲ್ಲಿ
ಇನ್ನಾವು ಸರ್ಕಾರವು
ಸ್ಥಾಪಿಸಲಾರದಷ್ಟು
ಪ್ರೌಢ ಶಾಲೆ
ಮತ್ತು ಪದವಿ
ಪೂರ್ವ ಕಾಲೇಜುಗಳನ್ನು
ಸ್ಥಾಪಿಸಿದ್ದೇವೆ.
ಈ ಅವಧಿಯಲ್ಲಿ
ಸ್ಥಾಪಿತವಾದ
ಪ್ರೌಢ ಶಾಲೆಗಳ
ಸಂಖ್ಯೆ ೫೦೦
ಮತ್ತು ಪದವಿ
ಪೂರ್ವ ಕಾಲೇಜುಗಳ
ಸಂಖ್ಯೆ ೨೦೦.
ಸಮಾಜ ಕಲ್ಯಾಣ
ಇಲಾಖೆಗೆ ಹಿಂದೆಂದಿಗಿಂತಲೂ
ಹೆಚ್ಚಿನ ಅನುದಾನ
ನೀಡಿ ಅವಕಾಶವಂಚಿತರ,
ದುರ್ಬಲರ, ಶೋಷಿತ
ವರ್ಗದವರ ಅಳಲಿಗೆ
ದನಿ ನೀಡಿದ್ದೇವೆ.
ಈ ಇಲಾಖೆಗೆ ನಾವು
ನೀಡಿದ ಯೋಜನಾ
ಅನುದಾನ ೬೪೦
ಕೋಟಿ ರೂ.ಗಳು
ಇದ್ದು ಕಳೆದ
ಬಾರಿಗಿಂತ ಶೇ.
೪೬ ರಷ್ಟು ಹೆಚ್ಚು.
ನಮ್ಮ ಯುವ ಜನರ
ರಚನಾತ್ಮಕ ಶಕ್ತಿಗೆ
ಹೊಸ ಆಯಾಮ ನೀಡಿ
ಅವರು ಸ್ವ-ಉದ್ಯೋಗ
ಮಾಡಲು ಅಥವಾ
ಉದ್ಯೋಗಾವಕಾಶಗಳಙನ್ನು
ಆರಿಸಿಕೊಂಡು
ಹೋಗಲು ಅನುವಾಗುವಂತೆ
ಸುವರ್ಣಕಾಯಕ
ಉದ್ಯೋಗ ಯೋಜನೆಯನ್ನು
ಜಾರಿಗೆ ತಂದಿದ್ದೇವೆ.
ಈ ಯೋಜನೆಯಿಂದ
ಒಂದು ಲಕ್ಷ ಯುವಕರಿಗೆ
ಉಪಯೋಗವಾಗಲಿದೆ.
ಗ್ರಾಮಗಳು ನಮ್ಮ
ವ್ಯವಸ್ಥೆಯ ಬೆನ್ನೆಲುಬು.
ಅವು ಸ್ವಯಂಪೂರ್ಣವಾಗುವಂತೆ
ಮಾಡುವುದರಿಂದ
ನಾಡಿನ ಒಟ್ಟಾರೆ
ಆರ್ಥಿಕ ಪ್ರಗತಿ
ಸಾಧಿಸುವುದು
ಸುಲಭ ಎನ್ನುವ
ದೃಷ್ಟಿಯಿಂದ
ನಮ್ಮ ಹಳ್ಳಿಗಳನ್ನು
ಸಮಗ್ರವಾಗಿ ಅಭಿವೃದ್ಧಿ
ಪಡಿಸಿವ ಸುವರ್ಣ
ಗ್ರಾಮೋದಯ ಯೋಜನೆ
ಯನ್ನು ಜಾರಿಗೆ
ತಂದಿದ್ದೇವೆ.
ಮೊದಲ ಹಂತದಲ್ಲಿ
ತಲಾ ಒಂದು ಕೋಟಿ
ರೂ.ಗಳ ವೆಚ್ಚದಲ್ಲಿ
೧೦೦೦ ಹಳ್ಳಿಗಳನ್ನು
ಅಭಿವೃದ್ಧಿ ಪಡಿಸುವ
ಸುವರ್ಣ ಗ್ರಾಮೋದಯ
ಯೋಜನೆಯ ಭಾಗವಾದ
ಹಳ್ಳಿಗಳನ್ನು
ಆರಿಸುವ ಕೆಲಸ
ಈಗಾಗಲೇ ಪೂರ್ಣಗೊಂಡಿದೆ.
ನಂತರದ್ದು ಗ್ರಾಮೀಣ
ಅಭಿವೃದ್ಧಿಯ
ಒಂದು ಮೌನಕ್ರಾಂತಿಯ
ಅಧ್ಯಾಯ.
ಗ್ರಾಮೀಣ ಪ್ರದೇಶಗಳಲ್ಲಿ
ನಗರ ಸೌಲಭ್ಯಗಳನ್ನು
ಕಲ್ಪಿಸುವ ಮೂಲಕ
ಸಮಗ್ರ ಅಭಿವೃದ್ಧಿ
ರಾಷ್ಟ್ರಪತಿಗಳ
'ಪುರ' ಯೋಜನೆಗೆ
ರಾಜ್ಯದ ಆಯವ್ಯಯದಲ್ಲಿ
೨೦ ಕೋಟಿ ರೂ.
ಅನುದಾನ ತೆಗೆದಿರಿಸಲಾಗಿದೆ.
ಅಭಿವೃದ್ಧಿ ಪರವಾಗಿರುವ
ಯೋಜನೆಯನ್ನು
ಜಾರಿಗೊಳಿಸುವಲ್ಲಿ
ಯಾವಗಲೂ ಮುಂಚೂಣಿಯಲ್ಲಿರುವ
ಕರ್ನಾಟಕದ ಪುರ
ಜಾರಿಗೊಳಿಸಿದ
ಪ್ರಥಮ ರಾಜ್ಯವಾಗಿದೆ.
ಇನ್ನು ಕೈಗಾರಿಕ
ಅಭಿವೃದ್ಧಿಯ
ವಿಷಯಕ್ಕೆ ಬಂದರೆ,
ನಮ್ಮದು ಯಾದರೂ
ಅಸೂಯೆ ಪಡುವಂತಹ
ಮುಂದವರಿಕೆ.
ಈ ಒಂದು ವರ್ಷದ
ಅವಧಿಯಲ್ಲಿ ಕರ್ನಾಟಕಕ್ಕೆ
ಹರಿದು ಬಂದ ಕೈಗಾರಿಕ
ಬಂಡವಾಳ ೮೦೫೬೧
ಕೋಟಿ ರೂ.ಗಳಿಗೂ
ಹೆಚ್ಚು. ಈ ಬಂಡವಾಳ
ಹೂಡಿಕೆಯ ಕೈಗಾರಿಕೆಗಳು
ಸೃಷ್ಠಿಸುತ್ತಿರುವ
ಉದ್ಯೋಗಾವಕಾಶಗಳ
ಸಂಖ್ಯೆ ೧೫ ಲಕ್ಷದ
೫೮ ಸಾವಿರಕ್ಕೂ
ಹೆಚ್ಚು.
ಇಂಧನ ಯಾವುದೇ
ರಾಜ್ಯದ ಅಭಿವೃದ್ಧಿಗೆ
ಅಗತ್ಯ. ನಮ್ಮ
ಇಂಧನ ಲಭ್ಯತೆ
ಸಾಮರ್ಥ್ಯವನ್ನು
೪೦೦೦ ಮೆ.ವ್ಯಾಟ್‌ಗಳಿಗೆ
ಹೆಚ್ಚಿಸುವ ಗುರಿ
ನಮ್ಮದು. ರಾಜ್ಯದಲಲ್ಲಿ
ಪ್ರಥಮ ಬಾರಿಗೆ
ಏಕಕಾಲಕ್ಕೆ ೪೫೦
ಕೇಂದ್ರಗಳ ಸಾಮರ್ಥ್ಯವನ್ನು
ಹೆಚ್ಚಿಸಿದ್ದೇವೆ.
ಈ ಹಿಂದಿನ ಯಾವ
ಸರ್ಕಾರವಗಳೂ
ಮಾಡದ ಸಾಧನೆ
ಇದು. ರಾಜ್ಯದ
೧೭ ಜಿಲ್ಲೆಗಳಲ್ಲಿ
ರಾಜೀವ್ ಗಾಂಧಿ
ಗ್ರಾಮೀಣ ವಿದ್ಯುದ್ಧೀಕರಣ
ಯೊಜನೆಯನ್ನು
ಜಾರಿಗೆ ತರುತ್ತಿದ್ದೇವೆ.
ಬೆಂಗಳೂರು ಅಭಿವೃದ್ಧಿ
ನನ್ನ ಅಧೀನದಲ್ಲಿಯೇ
ಇದೆ. ಇದಕ್ಕೆ
ಕಾರಣ ಬೆಂಗಳೂರು
ಅಭಿವೃದ್ಧಿ ನನ್ನ
ಅಚ್ಚುಮೆಚ್ಚಿನ
ವಿಷಯ.
ಭಾರತಕ್ಕೆ ಜಗತ್ತನ್ನು
ತಂದುಕೊಟ್ಟು
ಹೆಗ್ಗಳಿಕೆ ಕರ್ನಾಟಕದ್ದು.
ಈ ತಂದುಕೊಡುವಿಕೆಯ
ಮಹಾಯಾನದಲ್ಲಿ
ಬೆಂಗಳೂರಿನದು
ಪ್ರಮುಖ ಭೂಮಿಕೆ.
ಬೆಂಗಳೂರು ಒಂದು
ಪಟ್ಟು ವಿಶ್ವವಿದ್ದಂತೆ.
ಗ್ರಾಮೀಣ ಮತ್ತು
ಮೆಟ್ರೋಪಾಲಿಟನ್
ಸಂಸ್ಕೃತಿಗಳ
ಅತ್ಯತ್ಕೃಷ್ಟವಾದೊಂದು
ಸಮೀಕರಣ ಇಲ್ಲಿದೆ.
ಬೆಂಗಳೂರು ಎಷ್ಟೇ
ಬೆಳೆದರೂ ಅದೊಂದು
ಹಳ್ಳಿ ಎನ್ನುವ
ಅಭಿಪ್ರಾಯ ಅತ್ಯಂತ
ಎಂದು ನನಗನಿಸುತ್ತದೆ.
ಇಲ್ಲಿನ ಎಲ್ಲ
ಸಾಂಪ್ರದಾಯಕ
ಸಂಸ್ಕೃತಿಗಳನ್ನು
ಉಳಿಸಿಕೊಂಡೂ
ಅದನ್ನು ಜಾಗತೀಕ
ನಗರವಾಗಿಸುವ
ಕನಸು ನನ್ನದು.
ಬೆಂಗಳೂರು ಬೆಳೆದಂತೆಲ್ಲ
ಬೆಳೆಯುತ್ತಿರುವ
ಹೊರ ಬೆಂಗಳೂರು
ಮತ್ತು ಮೂಲ ಸ್ವರೂಪದ
ಬೆಂಗಳೂರಿನ ನಡುವೆ
ಅಭಿವೃದ್ಧಿಯ
ಅಸಮತೋಲನ ಇತ್ತೀಚಿನ
ದಿನಗಳಲ್ಲಿ ಕಂಡುಬಂದ
ಒಂದು ಬೆಳವಣಿಗೆ.
ಈ ಅಸಮತೋಲನವನ್ನು
ನಿವಾರಿಸಲು ಮತ್ತು
ಒಟ್ಟಾರೆ ಬೆಂಗಳುರಿಗೆ
ಜಾಗತಿಕ ಸ್ವರೂಪವನ್ನು
ತಂದುಕೊಡಲು ಗ್ರೇಟರ್
ಬೆಂಗಳೂರಿನ ಕಲ್ಪನೆಯನ್ನು
ಸಾಧ್ಯವಾಗಿಸಿದ್ದೇವೆ.
ಬೃಹತ್ ಬೆಂಗಳೂರಿನ
ನಿರ್ಮಾಣದ ಮೂಲಕ
ಕಲ್ಪನೆಗೆ ಮೂರ್ತರೂಪ
ಕೊಟ್ಟ ನಿಮ್ಮದಿ
ನಮ್ಮ ಸರ್ಕಾರದ್ದು.
ಅಂತರಾಷ್ಟ್ರೀಯ
ಮಟ್ಟದ ನಗರವನ್ನಾಗಿ
ಬೆಂಗಳೂರನ್ನು
ರೂಪಿಸಲು ಅಗತ್ಯವಿರವ
ಎಲ್ಲಾ ಕೆಲಸಗಳನ್ನು
ನಾವು ಹಮ್ಮಿಕೊಂಡಿದ್ದೇವೆ.
ಬೆಂಗಳೂರು ತನ್ನದೇ
ಆದ ಒಂದು ಸ್ವತಂತ್ರ
ಸಾರಿಗೆ ವ್ಯವಸ್ಥೆಯನ್ನು
ಹೊಂದಲು ಸಾಧ್ಯವಿಲ್ಲ.
ಬೆಂಗಳೂರಿಗೆ
ಮೆಟ್ರೋದಂತಹ
ಒಂದು ವ್ಯವಸ್ಥೆ
ನಿಜವಾಗಿಯೂ ಕನಸು
ಎನ್ನುವ ಅಭಿಪ್ರಾಯಗಳು
ಇದುವರೆಗೆ ಚರ್ಮಿತ
ಚರ್ಮಣ ಎನ್ನುವಂತೆ
ರೂಢಿಯಲ್ಲಿದ್ದವು.
ಈ ಎಲ್ಲಾ ಊಹಾಪೋಹಗಳಿಗೆ
ನಿಶ್ಚಿತ ತೆರೆ
ಎಳೆದಿದ್ದೇವೆ.
ಬೆಂಗಳೂರಿಗೆ
ಮೆಟ್ರೋ ತರುವ
ಕಾರ್ಯಕ್ಕೆ ಶರವೇಗ
ದೊರೆತಿದೆ. ಮೆಟ್ರೋ
ಸಧ್ಯದಲ್ಲಿಯೇ
ನನಸಾಗಲಿದೆ.
ಬೆಂಗಳೂರಿಗೊಂದು
ಅಂತರಾಷ್ಟ್ರೀಯ
ವಿಮಾನ ನಿಲ್ದಾಣವನ್ನು
ತಂದುಕೊಡುತ್ತೇವೆ
ಎಂದು ಹೇಳಿದವರೆಲ್ಲ
ಕಾಗದದ ಹುಲಿಗಳಾಗಿ
ಹೋದರು. ಆದರೀಗ
ಬೆಂಗಳೂರು ಅಂತರಾಷ್ಟ್ರೀಯ
ವಿಮಾನ ನಿಲ್ದಾಣದ
ನಿರ್ಮಾಣದ ಕಾಮಗಾರಿ
ಊಹೆ ಮೀರಿ ನಿರ್ಧರಿತ
ಗತಿಯಲ್ಲಿ ಸಾಗುತ್ತಿದೆ.
ಇನ್ನೆರೆಡೇ ವರ್ಷಗಳಲ್ಲಿ
ಜಾಗತಿಕ ಭೂಪದಲ್ಲಿ
ಒಂದು ಶಾಶ್ವತ
ಸ್ಥಾನ ದೊರೆಯಲಿದೆ.
ಬೆಂಗಳೂರಿನ
ಮತ್ತು ರಾಜ್ಯದ
ಇತರ ಕಡೆಗಳಲ್ಲಿ
ಸರ್ಕಾರಿ ಜಮೀನನ್ನು
ಕಬಳಿಕೆ ಮಾಡಲಾಗಿದೆ
ಮತ್ತು ಇದರಿಂದ
ಸರ್ಕಾರಕ್ಕೆ
ಬಹುದೊಡ್ಡ ನಷ್ಟವಾಗಿದೆ
ಎನ್ನುವ ವಿಚಾರದ
ಸ್ಪಷ್ಟ ಅರಿವು
ನಮ್ಮ ಸರ್ಕಾರಕ್ಕಿದೆ.
ಈ ಜಮೀನು ಪರಭಾರೆಯ
ಸಮಸ್ಯೆಗೆ ಉತ್ತರವನ್ನು
ಕಂಡುಕೊಳ್ಳುಲು
ಅಧಿಕಾರಿಗಳನ್ನು
ಸಜ್ಜುಗೊಳಿಸಿದ್ದೇನೆ.
ಬೆಂಗಳೂರಿನ
ಮೂಲಭೂತ ಸೌಲಭ್ಯಗಳನ್ನು
ದೃಢಪಡಿಸುವ ಕಾರ್ಯಕ್ಕೆ
ಚಾಲನೆ ನೀಡಿದ್ದೇನೆ.
ಬೆಂಗಳುರಿನ ವಾಹನ
ದಟ್ಟಣೆಯನ್ನು
ನಿವಾರಿಸಲು ಮತ್ತು
ಬೆಂಗಳೂರಿನ ಬೆಳವಣಿಗೆಯ
ಗಾತ್ರವನ್ನು
ಗಮನದಲ್ಲಿರಿಸಿಕೊಂಡು
ನಗರದ ಅನೇಕ ಕಡೆಗಳಲ್ಲಿ
ಅಂಡರ್ ಪಾಸ್‌ಗಳು,
ಮೇಲ್ಸೆತುವೆಗಳು
ಮತ್ತು ಗ್ರೇಡ್
ಸೆಪರೇಟರ್‌ಗಳನ್ನು
ನಿರ್ಮಿಸುವ ಕಾರ್ಯ
ಸಮರೋಪಾದಿಯಲ್ಲಿ
ನಡೆದಿದೆ.
ಬೆಂಗಳೂರಿನ
ಹಾದಿಯಲ್ಲಿಯೇ
ರಾಜ್ಯದ ಇತರ
ಪ್ರಮುಖ ಪಟ್ಟಣಗಳನ್ನು
ಅಭಿವೃದ್ಧಿ ಪಡಿಸುವತ್ತಲೂ
ನಾವು ಗಮನಹರಿಸಿದ್ದೇವೆ.
ಹುಬ್ಬಳ್ಳಿ-ಧಾರವಾಡ,
ಬೆಳಗಾವಿ, ಮೈಸೂರು,
ಮಂಗಳೂರು, ಶಿವಮೊಗ್ಗ,
ಗುಲ್ಬರ್ಗಾ ಮೊದಲಾದ
ನಗರಗಳನ್ನು ಪ್ರಥಮಾದ್ಯತೆಯ
ಮೇರೆಗೆ ಅಭಿವೃದ್ಧಿ
ಪಡಿಸಲಾಗುತ್ತಿದೆ.
ಕರ್ನಾಟಕಕ್ಕೀಗ
೫೦ ರ ಸಂಭ್ರಮ.
ನಾವೊಂದು ಸಮಗ್ರ
ರಾಜ್ಯವಾಗಿ ೫೦
ವರ್ಷಗಳು ಸಂದಿವೆ.
ಈ ಪರ್ವ ಕಾಲದಲ್ಲಿ
ರಾಜ್ಯವನ್ನು
ಮುನ್ನೆಡೆಸುವ
ಸೌಭಾಗ್ಯ ನನಗೆ
ದೊರೆತಿದೆ.
ಕರ್ನಾಟಕದ ಏಕೀಕರಣಕ್ಕಾಗಿ
ದುಡಿದ ಹಿರಿಯ
ಮಹನೀಯರನ್ನು
ಗುರುತಿಸಿ ಅವರಿಗೆ
ನಾಡ ಗೌರವವನ್ನು
ಸಲ್ಲಿಸಿದ ಸಂತೃಪ್ತಿ
ನನ್ನದಾಗಿದೆ.
ಕನ್ನಡ ಸಾಹಿತ್ಯದ
ಮೇರು ಪ್ರಶಸ್ತಿಯಾದ
ರಾಷ್ಟ್ರಕವಿ
ಪ್ರಶಸ್ತಿಯನ್ನು
ಪುನಃ ಪ್ರಾರಂಭಿಸಿ
ಈ ನಾಡಿನ ಜನಮೆಚ್ಚಿದ
ಕವಿ ಡಾ:ಜಿ.ಎಸ್.ಶಿವರುದ್ರಪ್ಪ
ಅವರಿಗೆ ಈ ಗೌರವ
ಸಲ್ಲಿಸಿದ ಸುಕೃತ
ನನ್ನ ಸರ್ಕಾರದ್ದು.
ಸೌಂದರ್ಯ ಕೂಡಿಯಡುವುದಿಲ್ಲ
; ಗತವೈಭವದ ಹೊಗರು
ಹಾಯುತ್ತಿದೆ
ವರ್ತಮಾನದ ಬೆಡಗು
ಬಿಂಕದೊಳು....
ಎಂದು ನಮ್ಮ
ರಾಷ್ಟ್ರಕವಿ
ಕುವೆಂಪು ಅವರು
ಮೈಸೂರನ್ನು ಕುರಿತು
ಬಣ್ಣಿಸಿದ್ದಾರೆ.
ಈ ಬಣ್ಣನೆಯನ್ನು
ರಾಜ್ಯದ ಎಲ್ಲಾ
ವೈಭವಕ್ಕೂ ಈಗಲೂ
ಸಮೀಕರಿಸಬಹುದು
ಎನ್ನುವುದು ನನ್ನ
ಭಾವನೆ. ಗತ ವೈಭವನ್ನು
ಮರಳಿ ತರಬೇಕು.
ಸೌಂದರ್ಯ ತಾನೇ
ತಾನುಗುವಂತೆ
ಮಾಡಬೆಕು, ಈ
೫೦ ರ ಸಂಭ್ರಮ
ಉಳಿಯಬೇಕು ಎನ್ನುವ
ನಿಟ್ಟಿನಲ್ಲಿ
ಹತ್ತು ಹಲವು
ಕಾರ್ಯಕ್ರಮವನ್ನು
ಹಮ್ಮಿಕೊಂಡು
ಜಾರಿಗೆ ತರುತ್ತಿದ್ದೇವೆ.
ಈ ಎಲ್ಲಾ ಕೇಂದ್ರಗಳಲ್ಲಿ
ಸುವರ್ಣ ಸಂಸ್ಕೃತಿ
ಸಮುಚ್ಛಯಗಳ ನಿರ್ಮಾಣ,
ಕನ್ನಡದ ೧೧೦ಕ್ಕೂ
ಹೆಚ್ಚು ಪುಸ್ತಕಗಳ
ಮುದ್ರಣ ಬೆಳಗಾವಿ,
ಬಿಜಾಪುರ, ಚಾಮರಾಜನಗರ,
ದಕ್ಷಿಣ ಕನ್ನಡ
ಜಿಲ್ಲೆಗಳಲ್ಲಿ
ಸುವರ್ಣ ಕನ್ನಡ
ಭವನ ನಿರ್ಮಾಣ,
ಸುವರ್ಣ ಕರ್ನಾಟಕದ
ವಿವಿಧ ಆಯಾಮಗಳ
ಚಿತ್ರಣ ನೀಡುವ
ಸುವರ್ಣ ಕರ್ನಾಟಕದ,
ಬೃಹತ್ ಕರ್ನಾಟಕದ
ಮತ್ತು ಗ್ಯಾಜಿಟಿಯರ್
ಸುವರ್ಣಪಥ ಗ್ರಂಥಗಳ
ಬೃಹತ್ ಸಂಪುಟಗಳ
ಪ್ರಕಟಣೆ, ಕರ್ನಾಟಕದ
ಏಕೀಕರಣದ ಇತಿಹಾಸ
ದಾಖಲಿಸುವ ಸಾಕ್ಷ್ಯ
ಚಿತ್ರ ನಿರ್ಮಾಣ
ಮತ್ತು ಇವೆಲ್ಲಕ್ಕೂ
ಕಳವಿಟ್ಟಂತೆ
ಬೆಳಗಾವಿಯಲ್ಲಿ
ವಿಶ್ವ ಕನ್ನಡ
ಸಮ್ಮೇಳನವನ್ನು
ಆಯೋಜಿಸುವ ನಿರ್ಧಾರ
ಕೈಗೊಂಡಿದ್ದೇವೆ.
ಬೆಳಗಾವಿಯಲ್ಲಿ
ವಿಶ್ವ ಕನ್ನಡ
ಸಮ್ಮೇಳನವನ್ನು
ಆಯೋಜಿಸಿ, ಬೆಳಗಾವಿ
ಮತ್ತು ರಾಜ್ಯದ
ಇತರ ಗಡಿ ಭಾಗಗಳ
ಬಗೆಗಿರುವ ತಂಟೆ
ತಕರಾರುಗಳಿಗೆ
ಶಾಶ್ವತವಾದ ಕೊನೆ
ಕಾಣಿಸುವ ನಿರ್ಧಾರ
ನಮ್ಮದು.
ನಾನು ಅಧಿಕಾರ
ವಹಿಸಿಕೊಂಡಂದಿನಿಂದ
ನಾಡಿನ ಹಿರಿಯ
ಸಾಹಿತಿ ಕಲಾವಿದರ
ಜೊತೆಗೆ ನಿರಂತರ
ಸಂಪರ್ಕ ಹೊಂದಿದ್ದೇನೆ.
ನನ್ನ ಆಡಳಿತದ
ಮಾರ್ಗದಲ್ಲಿ
ಅವರು ನೀಡಿದ
ಮಾರ್ಗದರ್ಶನ,
ಸೂಚನೆಗಳನ್ನು
ನಮ್ರಭಾವದಿಂದ
ಪಾಲಿಸಿದ್ದೇನೆ.
ಅವರ ಸಲಹೆಗಳನ್ನು
ಸಾಕ್ಷತ್ಕಾರಗೊಳಿಸಿದ್ದೇನೆ.
ನಾನು ಅನ್ಯ ವೇದಿಕೆಗಳಲ್ಲಿ
ಹೇಳಿರುವಂತೆ
ಕನ್ನಡದ ಬಗೆಗೆ,
ಅದರ ಸಾಹಿತ್ಯಿಕ
ಹಿರಿಮೆಯ ಬಗೆಗೆ
ನನಗಿರುವ ಅರಿವು
ಅಲ್ಪಮಟ್ಟದ್ದಾದರೂ
ಕನ್ನಡಾಭಿಮಾನದ
ಬಗೆಗೆ ನಾನು
ಯಾರಿಗೂ ಹಿಂದಿಲ್ಲ.
ಕನ್ನಡ ನನ್ನ
ಉಸಿರು ಮತ್ತು
ಜೀವ.
ಕನ್ನಡ ಹೊಲ
ಮಣ್ಣೂ | ಎನಗೆ
ನವನಿಧಿ ಹೊನ್ನು...
ಕನ್ನಡದ ತಿಳಿಜಲವು
| ಸುಧೆಯ ಕಲ್ವಲವು
...
ಎಂದು ಹಾಡಿದ
ಕನ್ನಡದ ನೆಲವನ್ನು
ಐಶ್ವರ್ಯದ ನಿಧಿಯನ್ನಾಗಿ
ಕಂಡ ಬೆನಗಲ್
ರಾಮರಾಯರ ಕವನ
ನನ್ನದೆಯಲ್ಲಿ
ಅಚಲವಾಗಿ ನಿಂತಿದೆ.
ಕನ್ನಡದ ಅಭಿಮಾನಕ್ಕೆ
ಇಷ್ಟು ಸಾಕು
ಎಂದು ನನ್ನ ಭಾವನೆ.
ಕನ್ನಡಕ್ಕೆ
ಶಾಸ್ತ್ರಿಯ ಭಾಷೆಯ
ಸ್ಥಾನವನ್ನು
ದೊರಕಿಸುವ ನಿಟ್ಟಿನಲ್ಲಿ
ನಮ್ಮ ಹೋರಾಟ
ಅವಿಶ್ರಾಂತವಾದದ್ದು.
ಯಾವುದೇ ರಾಜಿಗೂ
ಸಿದ್ಧವಿಲ್ಲದಂತಹದು.
ಕೇಂದ್ರ ಸರ್ಕಾರಕ್ಕೆ
ಈ ಕುರಿತು ಹಕ್ಕೊತ್ತಾಯ
ಸಲ್ಲಿಸಲು ನಾನು
ಸದಾ ಕಾಲದಲ್ಲಿಯೂ
ಸಿದ್ದನಿದ್ದೇನೆ.
ಕನ್ನಡ ಸಂಸ್ಕೃತಿಗಾಗಿ,
ಕನ್ನಡ ಭಾಷೆಗಾಗಿ
ಕಿಂಚಿತ್ ದುಡಿಯುವ
ಅವಕಾಶ ಲಭಯವಾದುದಕ್ಕೆ
ನಾನು ಕನ್ನಡ
ತಾಯಿಗೆ ಚಿರಋಣಿಯಾಗಿದ್ದೇನೆ.
ಯಾವುದೇ ಪ್ರದೇಶದ
ಜನಪದ ಕಲೆಗಳು
ಆಯಾ ಪ್ರದೇಶದ
ಭವ್ಯ ಪರಂಪರೆಯ
ಪ್ರತಿಗಳೇ ಆಗಿರುತ್ತದೆ.
ನಮ್ಮದು ಬಹುದೊಡ್ಡ
ಶ್ರೀಮಂತ ಪರಂಪರೆ.
ನಮ್ಮ ಜನಪರ ಕಲಾ
ವೈವಿದ್ಯ ಅನನ್ಯವಾದದ್ದು.
ನಮ್ಮ ಜನಪದ ಕಲಾವಿದರ
ಪ್ರತಿಭೆ ಅಸದೃಶ್ಯವಾದದ್ದು.
ಈ ಕಲಾವಿದರ ಪ್ರತಿಭೆಗೆ
ಹೊಸದೊಂದು ಆಯಾಮ
ನೀಡುವ, ಅವರ
ಆರ್ಥಿಕ ಸ್ಥಿತಿಗೆ
ಒಂದಿಷ್ಟು ಒತ್ತಾಸೆ
ಒದಗಿಸುವ ಮತ್ತು
ಎಲ್ಲಕ್ಕಿಂತ
ಮಿಗಿಲಾಗಿ ನಗರ
ಮತ್ತು ಗ್ರಾಮೀಣ
ಸಂಸ್ಕೃತಿಗಳ
ನಡುವೆ ಒಂದು
ಕೊಂಡಿ ಬೆಸೆಯುವ
ಉದ್ದೇಶ ನನ್ನದಾಗಿತ್ತು.
ರಾಜ್ಯದ ಮೂಲೆ
ಮೂಲೆಗಳಲ್ಲಿ
ನೆಲೆಗೊಂಡಿರುವ
ನಮ್ಮ ಜಾನಪದ
ಕಲಾವಿದರಿಗೆ
ಹೊಸ ಅಭಿವ್ಯಕ್ತಿ
ವೇದಿಕೆ ಒದಗಿಸಬೇಕು,
ಅವರ ವೃತ್ತಿ
ಬದುಕಿಗೊಂದು
ಆಸರೆ ದೊರಕಿಸಬೇಕು
ಎನ್ನುವ ಉದ್ದೇಶದಿಂದ
ಜಾನಪದ ಜಾತ್ರೆಯನ್ನು
ಸಂಘಟಿಸಲಾಗಿದೆ.
೨೫ ಸಾವಿರಕ್ಕೂ
ಹೆಚ್ಚು ಕಲಾವಿದರಿಗೆ
ಪ್ರೋತ್ಸಾಹ ದೊರಕಿದ
ಸಮಾಧನದ ಜೊತೆಗೆ
ಗ್ರಾಮೀನ ಮತ್ತು
ನಗರ ಸಂಸ್ಕೃತಿಯ
ಬೆಸುಗೆಗೆ ನಾದಿ
ಹಾಡಿದ್ದೇವೆ
ಮತ್ತು ಲಕ್ಷಾಂತರ
ಜನರು ನಮ್ಮ ಜಾನಪದ
ಸಿರಿಯ ಸೊಬಗನ್ನು
ಸವಿದಿದ್ದಾರೆ
ಎನ್ನುವುದು ನನಗೆ
ಅತ್ಯಂತ ಸ್ಮಾದಾನ
ತಂದುಕೊಟ್ಟ ಸಂಗತಿ.
ನನಗೆ ಅತ್ಯಂತ
ಪ್ರಿಯವಾದ ಕಾರ್ಯಕ್ರಮಗಳೆಂದರೆ
ನನ್ನ ಜನತಾ ದರ್ಶನ
ಮತ್ತು ಗ್ರಾಮ
ವಾಸ್ತವ್ಯ ಕಾರ್ಯಕ್ರಮಗಳು.
ನಮ್ಮ ಜನರ ಸಮಸ್ಯೆಗಳ
ಆಗಾಧತೆಯನ್ನು
ಜನತಾ ದರ್ಶನ
ನನಗೆ ಮಾಡಿಕೊಟ್ಟರೆ
ನಮ್ಮ ಗ್ರಾಮೀಣ
ಬದುಕು ಎಷ್ಟು
ಸಮೃದ್ಧ, ಎಷ್ಟು
ಸಂಪನ್ನ ಎನ್ನುವುದನ್ನು
ತಿಳಿಸಿ ಕೊಟ್ಟ
ನನ್ನ ಗ್ರಾಮ
ವಾಸ್ತವ್ಯಗಳು
ಈ ಗ್ರಾಮೀಣ ಪ್ರದೇಶದ
ಜನರು ಎದುರಿಸುತ್ತಿರುವ
ಬವಣೆಗಳು ಸಮ್ಯಕ್
ದರ್ಶನ ಮಾಡಿಕೊಟ್ಟಿದೆ.
ಈ ಜನತಾದರ್ಶನದ
ಪರಿಣಾಮ ಸಕಾರಾತ್ಮಕವಾಗಿದೆ,
ಅಧಿಕಾರಿಗಳು
ಮತ್ತು ನಮ್ಮ
ಶಾಸಕ-ಸಚಿವ ಮಿತ್ರರು
ಜನರ ಬಳಿಗೆ ಹೋಗುವ
ಹೊಸದೊಂದು ಮಾರ್ಗ
ಕಂಡುಕೊಂಡಿದ್ದಾರೆ
ಎನ್ನುವುದು ಕೂಡ
ನನಗೆ ತುಂಬಾ
ಸಮಾದಾನ ತಂದ
ಸಂಗತಿ.
ಜನತಾದರ್ಶನ
ಆಡಳಿತವನ್ನು
ಜನಸಾಮಾನ್ಯರ
ಮನೆ ಬಾಗಿಲಿಗೆ
ಕೊಂಡೊಯ್ಯವ ಒಂದು
ಅತ್ಯಂತ ಪರಿಣಾಮಕರಿ
ಸಾಧನವಾಗಿದೆ.
ಜನತಾದರ್ಶನದಲ್ಲಿ
ವಿಕಲಚೇತನರ ಸಂಕೀರ್ಣ
ಬದುಕು ಎಷ್ಟು
ಕಷ್ಟದ್ದು ಎನ್ನುವ
ಸತ್ಯ ನನಗೆ ಅರಿವಾಗಿ
ಈ ಚಿಕಲಚೇತನರ
ಅಭಿವೃದ್ಧಿಗೆ
ನನ್ನ ಸಾಮಾರ್ಥ್ಯದ
ಅಳವಿನಲ್ಲಿ ಸಾಧ್ಯವಿರುವ
ಎಲ್ಲವನ್ನು ಮಾಡಬೇಕು
ಎನ್ನುವ ಮನಸ್ಸು
ನನ್ನದು. ಅದಕ್ಕಾಗಿ
ಸಾಧ್ಯವಿರುವ
ಕ್ರಮಗಳನ್ನು
ಕೈಗೊಂಡಿದ್ದೇನೆ.
ಗ್ರಾಮ ವಾಸ್ತವ್ಯಗಳು
ಬದುಕಿನ ವಾಸ್ತವ್ಯದ
ಹತ್ತಿರಕ್ಕೆ
ನನ್ನನ್ನು ಕೊಂಡೊಯ್ದಂತಹವು.
ಒಳ ಬದುಕಿನ ಎಲ್ಲಾ
ಹರಹುಗಳನ್ನು
ಕಂಡು ಕೊಳ್ಳಲು
ನನಗೆ ನೆರವೆ
ನೀಡಿದ ಈ ಗ್ರಾಮ
ವಾಸ್ತವ್ಯಗಳು
ಸಮಸ್ಯೆಗಳತ್ತ
ಇನ್ನಷ್ಟು ಸ್ಪಷ್ಟ
ದೃಷ್ಟಿಕೋನ ಹೊಂದಲು
ನನಗೆ ಸಹಾಯ ಮಾಡಿವೆ.
ಗ್ರಾಮ ವಾಸ್ತವ್ಯಗಳಿಮದ
ನನ್ನ ಹಳ್ಳಿಗರಿಗೆ
ನಾನು ಒಂದಿಷ್ಟು
ಸೌಲಭ್ಯಗಳನ್ನು
ಕಲ್ಪಿಸಿಕೊಡಲು
ಶಕ್ತನಾಗಿದ್ದೇನೆ.
ಅವರ ಬಹುದಿನದ
ಕನಸುಗಳಿಗೆ ಒಂದು
ಮೂರ್ತರೂಪ ಕೊಟ್ಟಿದ್ದೇನೆ.
ಪ್ರಮುಖವಾದ
ಈ ಸಾಧನೆಗಳ ಜೊತೆಯಲ್ಲಿಯೇ
ಹೊಸ ಕೈಗಾರಿಕಾ
ನೀತಿಯ ಪ್ರಕಟಣೆ,
ಹೆಚ್ಚುವರಿ ವಿದ್ಯುತ್
ಉತ್ಪಾದನೆಗೆ
ಕ್ರಮ, ರಾಜ್ಯದ
ರಸ್ತೆಗಳ ಅಭಿವೃದ್ಧಿಗೆಂದು
ಬೃಹತ್ ಯೋಜನೆಗಳು,
ಹಾಸನ, ಶಿವಮೊಗ್ಗ
ಮತ್ತು ಮಂಡ್ಯಗಳಲ್ಲಿ
ಮೆಡಿಕಲ್ ಕಾಲೇಜು
ಕಟ್ಟಡಗಳ ನಿರ್ಮಾಣ,
ಹುಬ್ಬಳ್ಳಿ -
ಧಾರವಾಡ ಮತ್ತು
ಗುಲ್ಬರ್ಗಾಗಳಲ್ಲಿ
ಹೈಕೋರ್ಟ್‌ನ
ಸರ್ಕ್ಯೂಟ್ ಬೆಂಚ್
ಕಟ್ಟಡ ನಿರ್ಮಾಣ
ಮೊದಲಾದವು ನಮ್ಮ
ಸರ್ಕಾರ ಕೈಗೊಂಡ
ಇನ್ನಷ್ಟು ರಚನಾತ್ಮಕ
ಕಾರ್ಯಗಳು.
ಬರಿಯ ಬಣ್ಣಗಳ
ನಕ್ಷೆಯಲ್ಲವೋ
ನಮ್ಮ ಭವ್ಯ ನಾಡು
ಆರು ಕೋಟಿ ಹೃದಯಗಳಲಿ
ಉದಯವಾಯ್ತು ನೋಡು...
ಎಲ್ಲಿ ಹೂಗಳು
ಮೆಲ್ಲನರಳಿದವು
ಒಂದು ತೋಟದಲ್ಲಿ
ಎಂದು ದಿನಕರ
ದೇಸಾಯಿ ಹಾಡಿನ
ನಕ್ಷೆಯ ಗೆರೆಗಳಿಂದಾಚೆ
ಪಡಿ ಮೂಡಿದ ಕರ್ನಾಟಕದ
ಜಾನಪದ ಸಿರಿ,
ಸಂಸ್ಕೃತಿಯನ್ನು
ಇಡೀ ಜಗತ್ತಿಗೆ
ತೆರೆದು ತೋರಬೇಕು
ಎನ್ನವುದು ನನ್ನ
ಮಹತ್ವಾಕಂಕ್ಷೆ.
ಬೆಳಗಾವಿಯಲ್ಲಿ
ವಿಧಾನಸಭಾ ಅಧಿವೇಶನ
ನಡೆಸಿ ಗಡಿ ಸಮಸ್ಯೆಗೊಂಡು
ಶಾಶ್ವತ ಪರಿಹಾರ
ರೂಪಿಸುವ ನಿಟ್ಟಿನಲ್ಲಿ
ಹೆಜ್ಜೆ ಹಾಕಿದ್ದೇವೆ.
ಇದೇ ಊರಿನಲ್ಲಿ
ವಿಶ್ವ ಕನ್ನಡ
ಸಮ್ಮೇಳನವನ್ನು
ಆಯೋಜಿಸಿ ಕನ್ನಡದ
ಶ್ರೀಮಂತ ಸಂಸ್ಕೃತಿಗೊಂಡು
ಜಾಗತೀಕ ಬೆಳಕಿಂಡಿ
ತೆರೆಯುವ ಯತ್ನ
ಮಾಡಿದ್ದೇವೆ.
ಭವಿಷ್ಯದ ಬಾಗಿಲಿಗೆ
ಹಸಿರು ತೋರಣ
ಕಟ್ಟಿ
ಭರವಸೆಯ ಬಾಗಿನ
ಹೊತ್ತು
ಕಾತರದಿ ಕಾದಿದ್ದೇವೆ
ಮುಂದಿನ ದಿನಗಳನ್ನು
ಸಹ್ಯವಾಗಿಸುವ
ದಿಸೆಯಲ್ಲಿ ಈ
ಪುಟ್ಟದಾದರೂ
ದಿಟ್ಟ ಹೆಜ್ಜೆಗಳನ್ನಿಟ್ಟಿದ್ದೇವೆ.
ನಮ್ಮ ಹೆಜ್ಜೆ
ಜಾಡಿಗೆ ನೀವೂ
ಹೆಜ್ಜೆ ಜೋಡಿಸುವ
ನಂಬಿಕೆ ನನ್ನದು.
ಯಶ ಕಂಡೇ ತೀರುತ್ತೇವೆ
ಎನ್ನುವ ಭರವಸೆಯೂ
ನನ್ನದು.
-ಹೆಚ್.ಡಿ.ಕುಮಾರಸ್ವಾಮಿ
ಜಲ ಸಂಪನ್ಮೂಲ
ಇಲಾಖೆ :
ರಾಜ್ಯದಲ್ಲಿ
ಪ್ರಗತಿಯಲ್ಲಿರುವ
೩೯ ಭಾರಿ ಮತ್ತು
ಮಧ್ಯಮ ನೀರಾವರಿ
ಯೋಜನೆಯನ್ನು
ಪೂರ್ಣಗೊಳಿಸುವ
ನಿರ್ಧಾರ. ಇದಕ್ಕಾಗಿ
ಒಟ್ಟು ೯೮೩.೧೦
ಕೋಟಿ ರೂ.ಗಳ
ಅನುದಾನ.
ಭದ್ರಾ ಮತ್ತು
ತುಂಗಭದ್ರಾ ಯೋಜನೆಗಳ
ಕಾಲುವೆಗಳಲ್ಲಿ
ಸೋರಿಹೋಗುವ ನೀರಿನ
ಸದ್ಬಳಕೆಗಾಗಿವಿತರಣಾ
ನಾಲೆಗಳ ಆಧುನೀಕರಣ
ಕಾಮಗಾರಿ. ೯೩.೯೫
ಕೋಟಿ ರೂ.ಗಳ
ಅನುದಾನ.
ಬಹುದಿನಗಳಿಂದ
ನೆನೆಗುದಿಗೆ
ಬಿದ್ದಿದ್ದ ಹುಬ್ಬಳ್ಳಿ
ಮತ್ತು ಧಾರವಾಡ
ಅವಳಿ ನಗರಗಳಿಗೆ
ನೀರು ಪೂರೈಸುವ
ಕಳಸಾಬಂಡೂರಿ
ನಾಲಾ ನಿರ್ಮಾಣ
ಕಾರ್ಯಕ್ಕೆ ಚಾಲನೆ.
ಕಳೆದ ೧೧ ತಿಂಗಳ
ಅವಧಿಯಲ್ಲಿ ೨೩
ನೀರು ಬಳಕೆದಾರರ
ಸಹಕಾರ ಸಂಘಗಳ
ಸ್ಥಾಪನೆ.
ರಾಜ್ಯದ ಆಯ್ದ
ಆರು ಜಿಲ್ಲೆಗಳಲ್ಲಿ
ಖಚಿತ ನೀರಾವರಿಗಾಗಿ
೨೧ ಯೋಜನೆಗಳ
ಪ್ರಾರಂಭ. ಈ
ಯೋಜನೆಗಳಿಗಾಗಿ
೧,೨೦೮.೭೧ ಕೋಟಿ
ರೂ.ಗಳ ನೆರವು.
ಜಲಸಂಪನ್ಮೂಲ
ಇಲಾಖೆಯಲ್ಲಿ
ಒಟ್ಟು ೩,೪೪೨
ಕೋಟಿ ರೂ.ಗಳ
ಪ್ರಗತಿ. ೭೪,೪೧೮
ಹೆಕ್ಟೇರ್ ಪ್ರದೇಶ
ನೀರಾವರಿ ವ್ಯಾಪ್ತಿಗೆ.
ಸಣ್ಣ ನೀರಾವರಿ
:
ಬೆಂಗಳೂರು ಗ್ರಾಮಾಂತರ
ಮತ್ತು ಗುಲ್ಬರ್ಗ
ಜಿಲ್ಲೆಗಳಲ್ಲಿ
೨೯೯ ಕೆರೆಗಳ
ದುರಸ್ತಿ, ಜೀರ್ಣೋದ್ಧಾರ
ಮತ್ತು ಪುನರರ್ಜಿವನಕ್ಕಾಗಿ
ಯೋಜನೆ. ೨೬೧
ಕೆರೆಗಳಲ್ಲಿ
ಈ ಕಾರ್ಯ ಪ್ರಗತಿ
ಹಂತದಲ್ಲಿ. ಮಾರ್ಚ್
೨೦೦೭ ರ ವೇಳೆಗೆ
ಎಲ್ಲ ಕೆಲಸಗಳು
ಸಂಪೂರ್ಣ.
ಸಣ್ಣ ನೀರಾವರಿಯಲ್ಲಿ
೬೩ ಕಾಮಗಾರಿಗಳನ್ನು
ಪೂರ್ಣಗೊಳಿಸಲಾಗಿದೆ,
೯,೯೫೧ ಹೆಕ್ಟೇರ್
ಪ್ರದೇಶಕ್ಕೆ
ಅನುಕೂಲ.
ಮುಂದಿನ ಎರಡು
ವರ್ಷದ ವರದಿಯಾಗಿರುವ
ಹಾಸನ, ಚಿಕ್ಕಮಗಳೂರು,
ಕೊಡಗು, ಚಿತ್ರದುರ್ಗ,
ಶಿವಮೊಗ್ಗ, ಮತ್ತು
ಬೆಳಗಾವಿ ಜಿಲ್ಲೆಗಳಲ್ಲಿ
ರೈತರ ಪುನರ್ವಸತಿಗಾಗಿ
೪೫೮ ಕೋಟಿ ರೂ.
ಮೊತ್ತದ ಸಣ್ಣ
ನೀರಾವರಿ ಕಾಮಗಾರಿಗಳ
ಅನುಷ್ಠಾನ.
ಜಲಸಂವರ್ಧನೆ
ಯೋಜನೆಯಡಿ ಒಟ್ಟು
೨,೦೦೫ ಕೆರೆಗಳ
ಪುನರಜ್ಜೀವನ
ಕಾಮಗಾರಿಗಳಣ್ನು
೨೦೦೮ ರ ಅಂತ್ಯದೊಳಗೆ
ಪೂರ್ಣಗೊಳಿಸಲು
ನಿರ್ಧಾರ.
ರಾಜ್ಯದಲ್ಲಿನ
ಅಂತರ್ಜಲ ಮಟ್ಟವನ್ನು
ಸುಧಾರಿಸಲು ರಾಜ್ಯ
ಸರ್ಕಾರದ ಕ್ರಮ.
೧೮ ಕೋಟಿ ರೂ.ಗಳ
ವೆಚ್ಚದಲ್ಲಿ
ಹೈಡ್ರಾಲಜಿ ಪ್ರಾಜೆಕ್ಟ್‌ನ
ಅನುಷ್ಠಾನ.
ಅಂತರ್ಜಲ ವಿನಿಮಯ
ಮತ್ತು ನಿಯಂತ್ರಣ
ವಿಧೇಯಕವನ್ನು
ತರಲು ರಾಜ್ಯ
ಸರ್ಕಾರದ ಪ್ರಯತ್ನ.
ಸಣ್ಣ ನೀರಾವರಿ
ಸಂಪನ್ಮೂಲಗಳ
ಪುನರ್‌ಜ್ಜೀವನಕ್ಕೆ
ಈ ವರ್ಷ ಹೆಚ್ಚಿನ
ಆದ್ಯತೆ ನೀಡಲಾಗಿದೆ.
ಸಣ್ಣ ನೀರಾವರಿ
ಕಾಮಗಾರಿಗಳಗಿಎ
೨೦೦೬-೦೭ನೇ ಸಾಲಿನಲ್ಲಿ
೬೦೦ ಕೋಟಿ ರೂ.
ಹಂಚಿಕೆ ಮಾಡಲಾಗಿದೆ.
ಸಣ್ಣ ನೀರಾವರಿ
ಇದುವರೆಗೆ ಹಂಚಿಕೆ
ಮಾಡಲಾಗಿರುವ
ಅತ್ಯಧಿಕ ಮೊತ್ತ
ಇದು.
೬೦೦ ಕೋಟಿ ರೂ.
ಪೈಕಿ ಡಿಸೆಂಬರ್
ಅಂತ್ಯದವರೆಗೆ
೩೦೦ ಕೋಟಿ ರೂ.ಗೂ
ಹೆಚ್ಚು ಹಣ ವೆಚ್ಚಾಗಿದೆ.
ರಾಜ್ಯಾದ್ಯಂತ
ಕೆರೆ, ಕಟ್ಟೆ,
ಕೊಳ ಮತ್ತಿತರ
ಪಾರಂಪರಿಕ ಜಲ
ಸಂಗ್ರಾಹಾಗಾರಗಳ
ಒತ್ತುವರಿ ತೆಗೆದು
ರಕ್ಷಿಸಲು ಕೆರೆ
ಅಭಿವೃದ್ಧಿ ಪ್ರಾಧಿಕಾರವನ್ನು
ಬಲಪಡಿಸಲಾಗುತ್ತಿದೆ.
ರೈತರಿಗಾಗಿ ರಾಜ್ಯದಿಂದ
ಇನ್ನಷ್ಟು ಸೌಲಭ್ಯಗಳು
:
ಕನಿಷ್ಟ ಬೆಂಬಲ
ಬೆಲೆ ಯೋಜನೆಯಡಿ
ಶಿವಮೊಗ್ಗ, ದಾವಣೆಗೆರೆ
ಮತ್ತು ಬಳ್ಳಾರಿ
ಜಿಲ್ಲೆಗಳ ೨೮,೭೮೦
ರೈತರಿಂದ ೧೧೪.೩
ಕೋಟಿ ರೂ.ಗಳ
ವೆಚ್ಚದಲ್ಲಿ
ಮೆಕ್ಕೆ ಜೋಳ
ಖರೀದಿ.
ರೈತರು ಉಗ್ರಾಣ
ನಿಗಮದ ಗೋದಾಮುಗಳಲ್ಲಿ
ದಾಸ್ತಾನು ಮಾಡಿದ
ಸರಕೆ ಸಂಗ್ರಹಣಾ
ಶುಲ್ಕದಲ್ಲಿ
ವಿನಾಯಿತಿ.
ಉಗ್ರಾಣಗಳಲ್ಲಿ
ದಾಸ್ತಾನು ಮಾಡಿದ
ರಸೀದಿಯ ಆಧಾರದ
ಮೇಲೆ ೨೯೩೬ ರೈತರಿಗೆ
೨೦೦೫-೦೬ನೇ ಸಾಲಿನ
ಮತ್ತು ೨೦೦೬-೦೭
ಸಾಲಿನಲ್ಲಿ ಕ್ರಮವಾಗಿ
೧೦೨ ಮತ್ತು ೬೨
ಕೋಟಿ ರೂ.ಗಳ
ಸುಲಭ್ಯ.
ಕೈಗಾರಿಕಾ ಇಲಾಖೆ
:
ಈ ಹನ್ನೊಂದು
ತಿಂಗಳಲ್ಲಿ ರಾಜ್ಯದಲ್ಲಿ
ಕೈಗಾರಿಕಾ ವಲಯದಲ್ಲಿ
ಒಟ್ಟು ೮೦,೫೬೧
ಕೋಟಿ ರೂ.ಗಳ
ಬಂಡವಾಳ ಹೂಡಿಕೆ.
ಮಂಜೂರಾತಿ ನೀಡಲಾದ
ಮಧ್ಯಮ ಪ್ರಮಾಣದ
ಕೈಗಾರಿಕಾ ಘಟಕಗಳ
ಸಂಖ್ಯೆ ೫೮೯
ಭಾರಿ ಕೈಗಾರಿಕೆಗಳ
ಸಂಖ್ಯೆ ೫೯ ಈ
ಕೈಗಾರಿಕೆಗಳ
ಸೃಷ್ಟಿಸಿರುವುದು
ಒಟ್ಟು ಉದ್ಯೋಗಾವಕಾಶ
೧೫,೫೮,೪೮೬.
ಸಣ್ಣ ಕೈಗಾರಿಕೆಗಳ
ಘಟಕಗಳಿಗೆ ಬಿಡುಗಡೆ
ಮಾಡಿದ ಸಹಾಯಧನ
ಒಟ್ಟು ೬೬ ಕೋಟಿ
ರೂ.ಗಳು.
ಕಳೆದ ಹನ್ನೊಂದು
ತಿಂಗಳ ಅವಧಿಯಲ್ಲಿ
ರಾಜ್ಯದಲ್ಲಿ
ಸ್ಥಾಪಿತವಾದ
ಸಣ್ಣಕೈಗಾರಿಕಾ
ಘಟಕಗಳ ಸಂಖ್ಯೆ
೧೦,೫೪೮. ಇಲ್ಲಿ
ಹೂಡಲಾದ ಬಂಡವಾಳ
೩೬,೯೧೬ ಲಕ್ಷ
ರೂ.ಗಳು, ಸೈಷ್ಠಿಯಾದ
ಉದ್ಯೋಗಾವಕಾಶಗಳು
೪೮,೧೧೮.
ಕುಶಲಕರ್ಮಿಗಳಿಗೆ
ವಸತಿ ಕಾರ್ಯಗಾರಗಳನ್ನು
ನಿರ್ಮಿಸುವ ರಾಜ್ಯ
ಸರ್ಕಾರದ ವಿನೂತನ
ಯೋಜನೆಗೆ ಎಲ್ಲ
ಕಡೆಯಿಂದ ಪ್ರಶಂಸೆ.
'ಕಾಯಕ ನಗರ'
ಸ್ಥಾಪನೆಗಾಗಿ
ಈಗಾಗಲೇ ಬಿಡುಗಡೆ
ಮಾಡಿರುವ ಅನುದಾನ
೫೦ ಲಕ್ಷ ರೂ.ಗಳು.
ಬಾಗಲಕೋಟೆ,
ಮೈಸೂರು ಮತ್ತು
ದಕ್ಷಿಣ ಕನ್ನಡ
ಜಿಲ್ಲೆಗಳಲ್ಲಿ
ವಿಜ್ಞಾನ ಮತ್ತು
ತಂತ್ರಜ್ಞಾನ
ಉದ್ಯಮಿಗಳ ಪಾರ್ಕ್‌ಗಳ
ಪ್ರಾರಂಭ.
ಈ ಅವಧಿಯಲ್ಲಿ
ಕರ್ನಾಟಕದ ಒಟ್ಟಾರೆ
ರಫ್ತು ಮೌಲ್ಯ
೮೨,೨೭೯ ಕೋಟೆ
ರೂ.ಗಳು.
ನಿರುದ್ಯೋಗೆ
ಯುವಕರ ನೆರವಿಗೆ
ಬಂದ ಸರ್ಕಾರದಿಂದ
ಸುವರ್ಣ ಕಾಯಕ
ಹೊಸ ಯೋಜನೆಗೆ
ಚಾಲನೆ. ಒಂದು
ಲಕ್ಷ ಯುವ ನೀರುದ್ಯೋಗೆಗಳಿಗೆ
ಹೊಸ ಉದ್ಯೋಗಾವಕಾಶಗಳನ್ನು
ಅರಸಲು ನೆರವು.
ಮಾಹಿತಿ ತಂತ್ರಜ್ಞಾನ
ಮತ್ತು ಜೈವಿಕ
ತಂತ್ರಜ್ಞಾನ
:
ಈ ಕ್ಷೇತ್ರಗಳಲ್ಲಿ
ರಾಜ್ಯದ್ದು ಇಂದಿಗೂ
ರಾಷ್ಟ್ರದಲ್ಲಿ
ಅಗ್ರಸ್ಥಾನ,
ಈ ಸಾಲಿನಲ್ಲಿ
ರಾಜ್ಯದಲ್ಲಿ
ಸೇರ್ಪಡೆಯಾದ
ಮಾಹಿತಿ ತಂತ್ರಜ್ಞಾನ
ಉದ್ದಿಮೆಗಳ ಸಂಖ್ಯೆ
೯೨. ಇದರಲ್ಲಿ
೫೩ ಉದ್ದಿಮೆಗಳು
ಶೇ. ೧೦೦ ರಷ್ಟು
ವಿದೇಶಿ ಬಂಡವಾಳ
ಸಂಸ್ಥೆಗಳು.
ಹೂಡಲಾದ ಬಂಡವಾಳ
೨,೭೬೦ ಕೋಟಿ
ರೂ.ಗಳು.
ಕಳೆದ ವರ್ಷ
೩೭,೬೦೦ ಕೋಟಿ
ರೂ.ಗಳ ರಫ್ತು
ದಾಖಲಿಸಿದ ರಾಜ್ಯ
ಈ ವರ್ಷ ಈವರೆವಿಗೆ
೧೭,೧೩೦ ಕೋಟಿ
ರೂ.ಗಳಷ್ಟು ರಫ್ತು
ವ್ಯವಹಾರವನ್ನು
ದಾಖಲಿಸಿದೆ.
ಈ ವರ್ಷ ರಾಜ್ಯದಲ್ಲಿ
ಸ್ಥಾಪಿತವಾದ
ಹೊಸ ಜೈವಿಕ ತಂತ್ರಜ್ಞಾನ
ಉದ್ದಿಮೆಗಳು
೨೦. ಕಳೆದ ಇಡೀ
ವರ್ಷದಲ್ಲಿ ಈ
ಸಂಖ್ಯೆ ೩.೨
ಆಗಿತ್ತು.
ಬೆಂಗಳೂರಿನಲ್ಲಿ
ಜೈವಿಕ ತಂತ್ರಜ್ಞಾನ
ಉದ್ಯಾನವನ ಸ್ಥಾಪನೆ.
ಈ ಉದ್ಯಾನವನದ
ಕಾರ್ಯ ಮೇ. ೨೦೦೭
ರಲ್ಲಿ ಪ್ರಾರಂಭ.
ನ್ಯಾನೋ ತಂತ್ರಜ್ಞಾನ
ಇಂದಿನ ಕೈಗಾರಿಕೆಗಳ
ಮೂಲಾಧಾರ. ಈ
ತಂತ್ರಜ್ಞಾನ
ಅಭಿವೃದ್ಧಿಗೆ
೧೦೦ ಲಕ್ಷ ರೂ.ಗಳ
ಅನುದಾನ.
ಮೈಸೂರು, ರಾಯಚೂರು
ಮತ್ತು ತುಮಕೂರುಗಳಲ್ಲಿ
ಕ್ರಮವಾಗಿ ಪ್ರಾದೇಶಿಕ
ಮತ್ತು ಉಪ ಪ್ರಾದೇಶಿಕ
ವಿಜ್ಞಾನ ಕೆಂದ್ರಗಳ
ಸ್ಥಾಪನೆಗೆ ನಿರ್ಧಾರ.
ಶಿವಮೊಗ್ಗ,
ಬೆಳಗಾವಿ, ಕೊಡಗು,
ಉತ್ತರ ಕನ್ನಡ
ಮತ್ತು ಕೊಪ್ಪಳ
ಜಿಲ್ಲೆಗಳಲ್ಲಿ
ವಿಜ್ಞಾನ ಕೇಂದ್ರಗಳನ್ನು
ಸ್ಥಾಪಿಸುವ ಕುರಿತು
ಆಲೋಚನೆ.
ಸಮಾಜ ಕಲ್ಯಾಣ
ಇಲಾಖೆ :
ಸಮಾಜ ಕಲ್ಯಾಣ
ಇಲಾಖೆಗೆ ನೀಡಿರುವ
ಅನುದಾನ ಈ ಹಿಂದಿನ
ಎಲ್ಲಾ ಸರ್ಕಾರಗಳಿಗಿಂತ
ಹೆಚ್ಚು. ಕಳೆದ
ಬಾರಿಗಿಂತ ಶೇ
೪೭.೬ ರಷ್ಟು
ಹೆಚ್ಚಳ.
ನೀಡಿರುವ ಒಟ್ಟಾರೆ
ಅನುದಾನ ೩,೧೭೧
ಕೋಟಿ ರೂ.ಗಳು.
ವಿಶೇಷ ಘಟಕ ಯೋಜನೆಯಲ್ಲಿ
ನೀಡಿದ ಅನುದಾನ
೧,೪೫೭ ಕೋಟಿ
ರೂ.ಗಳು.
ನರ್ಸಿಂಗ್ ತರಬೇತಿ,
ಏರ್‌ಹೋಸ್ಟೇಸ್
ಮತ್ತು ಪೈಲೆಟ್
ತರಬೇತಿಗಾಗಿ
ಪರಿಶಿಷ್ಟ ಜಾತಿಯ
ಯುವಕ ಯುವತಿಯರ
ಆಯ್ಕೆ.
ಪರಿಶಿಷ್ಟ ಜಾತಿಯವರಿಗಾಗಿ
೫೦ ಹೊಸ ವಿದ್ಯಾರ್ಥಿನಿಲಯಗಳು.
೨೦ ಮೊರಾರ್ಜಿ
ದೇಸಾಯಿ ವಸತಿ
ಶಾಲೆಗಳು ಪ್ರಾರಂಭ.
೧೩.೫೦೪ ಬ್ಯಾಕ್
ಲಾಗ್ ಹುದ್ದೆಗಳ
ಭರ್ತಿ.
೧.೫ ಲಕ್ಷ ವಿದ್ಯಾರ್ಥಿಗಳಿಗೆ
೭೦ ಕೋಟಿ ರೂ.ಗಳ
ವಿದ್ಯಾರ್ಥಿ
ವೇತನ.
ದೌರ್ಜನ್ಯಕ್ಕೊಳಕ್ಕಾದ
ಪರಿಶಿಷ್ಟ ಜಾತಿ
ಮತ್ತು ಪಂಗಡದವರಿಗೆ
ತಕ್ಷಣ ಪರಿಹಾರ
ನೀಡಲು ೫ ಕೋಟಿ
ರೂ.ಗಳ ಅನುದಾನ.
ಗಂಗಾ ಕಲ್ಯಾಣ
ಯೋಜನೆಗೆ ೫,೫೪೦
ಲಕ್ಷ ರೂ.ಗಳ
ಅನುದಾನ
೧೮,೭೬೧ ಪರಿಶಿಷ್ಟ
ಜಾತಿ ಮತ್ತು
ವರ್ಗದವರ ಪಲಾನುಭವಿಗಳಿಗೆ
೪,೨೧೪ ಲಕ್ಷ
ರೂ.ಗಳ ಸಹಾಯಧನ,
೫೭೬ ಲಕ್ಷ ರೂ.ಗಳ
ಮಾರ್ಜಿನ ಮನಿ
ಮತ್ತು ೯೮೫ ಲಕ್ಷ
ರೂ.ಗಳ ಎನ್.ಎಫ್.ಡಿ.ಸಿ.
ಸಾಲ.
ಗುಜರಾತ್ ಸರ್ಕಾರದ
ಮಾದರಿಯಂತೆ ಕರ್ನಾಟದಲ್ಲೂ
ವಾಡಿ ಯೋಜನೆಗೆ
ಚಾಲನೆ. ಪರಿಶಿಷ್ಟ
ವರ್ಗದ ಒಂದು
ಸಂಸಾರಕ್ಕೆ ಒಂದು
ಎಕರೆ ಹಣ್ಣಿನ
ತೋಟವನ್ನು ಆರು
ವರ್ಷದ ಅವಧಿಗೆ
ಹಂಚಿಕೆ ಮಾಡುವುದು.
ಈ ಸಂಸಾರದ ತೋಟದ
ಆದಾಯದಲ್ಲಿ ಜೀವಿಸುವಂತೆ
ನೋಡಿಕೊಳ್ಳುವ
ಈ ಯೋಜನೆಗೆ ೩.೨೫
ಕೋಟಿ ರೂ.ಗಳ
ಪ್ರಾರಂಭಿಕ ಹಣಕಾಸು
ನೆರವು.
ಹಿಂದುಳಿದ ವರ್ಗದ
ಕಲ್ಯಾಣ :
ಹಿಂದುಳಿದ ವರ್ಗಗಳ
ಕಲ್ಯಾಣಕ್ಕಾಗಿ
ಈ ವರ್ಷ ಬಿಡುಗಡೆಮಾಡಿದ
೨೦೪.೫೦ ಲಕ್ಷ
ರೂ.ಗಳ ಅನುದಾನ.
ಕಳೆದ ವರ್ಷದ
ಆಯವ್ಯಕ್ಕಿಂತ
ಶೇ. ೧೨ ರಷ್ಟು
ಹೆಚ್ಚು.
ದೇವರಾಜ ಅರಸು
ಹಿಂದುಳಿದ ವರ್ಗಗಳ
ಅಭಿವೃದ್ಧಿ ನಿಗಮ
ಈ ವರ್ಷ ೪೯೭
ಲಕ್ಷ ರೂ.ಗಳ
ವೆಚ್ಚದಲ್ಲಿ
೭೪೦ ಘಟಕಗಳ ೧,೦೧೫
ಹಿಂದುಳಿದ ವರ್ಗಗಳ
ರೈತರಿಗೆ ನೀರಾವರಿ
ಸೌಲಭ್ಯ ಒದಗಿಸಿದೆ.
ಕರ್ನಾಟಕದ ವಸತಿ
ಶಿಕ್ಷಣ ಸಂಸ್ಥೆಗಳ
ಸಂಘಕ್ಕೆ ವಸತಿ
ಶಾಲೆಗಳನ್ನು
ಕಟ್ಟಲು ೪೬.೬೮
ಕೋಟಿ. ರೂ.ಗಳ
ಅನುದಾನ.
ಮೂಲಭೂತ ಸೌಲಭ್ಯ
ಇಲಾಖೆ :
ಬೆಂಗಳೂರು -
ಮೈಸೂರು ಜೋಡಿ
ರೈಲು ಮಾರ್ಗ
ವಿದ್ಯುದೀಕರಣಕ್ಕಾಗಿ
ರಾಜ್ಯ ಸರ್ಕಾರದಿಂದ
೬೦ ಕೋಟಿ ರೂ.ಗಳ
ಬಿಡುಗಡೆ.
ಬೀದರ್-ಗುಲ್ಬರ್ಗ
ಬ್ರಾಡ್‌ಗೇಜ್
ರೈಲ್ವೆ ಮಾರ್ಗ
ಯೋಜನೆಗೆ ಪಾಲುಗಾರಿಕೆ
ಆಧಾರದ ಮೇಲೆ
ರಾಜ್ಯ ಸರ್ಕಾರದ
ಒಪ್ಪಿಗೆ.
ಕೊಟ್ಟೂರು-ಹರಿಹರ
ರೈಲು ಮಾರ್ಗದ
ನಿರ್ಮಾಣಕ್ಕಾಗಿ
ಒಟ್ಟು ೩೫ ಕೋಟಿ
ರೂ.ಗಳ ಬಿಡುಗಡೆ.
ಹಾಸನ - ಮಂಗಳುರು
ರೈಲ್ವೆ ಗೇಜ್
ಪರಿವರ್ತನೆ ಕಾರ್ಯ
ಸಂಪೂರ್ಣ.
ಧಾರವಾಡ ಜಿಲ್ಲೆ
ನವಿಲೂರಿನಲ್ಲಿ
ರೈಲ್ವೆ ಕಾರ್ಗೋ
ಕಾಂಪ್ಲೆಕ್ಸ್
ನಿರ್ಮಾಣಕ್ಕಗಿ
೧೦೦ ಎಕರೆ ಭೂಮೆ
ಕೊಡುಗೆ.
ಬೆಂಗಳೂರು ಅಂತರಾಷ್ಟ್ರೀಯ
ವಿಮಾನ ನಿಲ್ದಾಣ
:
ಕಾಮಗಾರಿ ತೃಪ್ತಿಕರ
ಗತಿಯಲ್ಲಿ. ವಿಮಾನ
ನಿಲ್ದಾಣದಲ್ಲಿ
ಪ್ರಯಾಣಿಕ ನಿರ್ವಹಣಾ
ಸಾಮರ್ಥ್ಯ ೪.೫
ಮಿಲಿಯನ್ ನಿಂದ
೧೧.೪ ಮಿಲಿಯನ್‌ಗೆ
ಹೆಚ್ಚಳ. ಇದರಿಂದಾಗಿ
೧,೪೧೨ ಕೋಟಿ
ರೂ.ಗಳ ಈ ಯೋಜನೆ
ಈಗ ೧,೯೨೦ ಕೋಟಿ
ರೂ.ಗಳ ವೆಚ್ಚದಲ್ಲಿ
ಅನುಷ್ಠಾನಗೊಳ್ಳುತ್ತಿದೆ.
ವಿಮಾಣ ನಿಲ್ದಾಣದಿಂದ
ಮೊದಲ ವಿಮಾನ
ಯಾನ ಏಪ್ರಿಲ್
೨೦೦೮ ರಲ್ಲಿ
ಪ್ರಾರಂಭವಾಗುವ
ನಿರೀಕ್ಷೆ.
ಶಿವಮೊಗ್ಗ,
ಹಾಸನ, ಬಿಜಾಪುರ
ಮತ್ತು ಗುಲ್ಬರ್ಗಗಳಲ್ಲಿ
ವಿಮಾನ ನಿಲ್ದಾ
ಅಭಿವೃದ್ಧಿಗಾಗಿ
೨೫ ಕೋಟಿ ರೂ.ಗಳ
ಅನುದಾನ.
ಬೀದರ್ ಮತ್ತು
ಕಾರವಾರದಲ್ಲಿನ
ರಕ್ಷಣಾ ಇಲಾಖೆಯ
ವಿಮಾನ ನಿಲ್ದಾಣಗಳನ್ನು
ನಾಗರೀಕ ವಿಮಾಣ
ನಿಲ್ದಾಣಗಳನ್ನಾಗಿ
ಪರಿವರ್ತಿಸಲು
ಕೇಂದ್ರಕ್ಕೆ
ಮನವಿ, ಬೀದರ್
ವಿಮಾನ ನಿಲ್ದಾಣಗಳ
ಪುನರ್ಜಿವನಕ್ಕೆ
ಕ್ರಮ ಆರಂಭ.
ಬೆಳಗಾವಿ ವಿಮಾಣ
ನಿಲ್ದಾಣದ ಉನ್ನತೀಕರಣಕ್ಕಾಗಿ
೩೭೦ ಎಕತೆ ಹೆಚ್ಚುವರಿ
ಜಮೀನು ನೀಡಲು
ಭೂಸ್ವಾಧೀನ ಪ್ರಕ್ತಿಯೆಗೆ
ಚಾಲನೆ.
ಮಂಗಳೂರು ವಿಮಾನ
ನಿಲ್ದಾಣವನ್ನು
ಅಂತರಾಷ್ಟ್ರೀಯ
ವಿಮಾನ ನಿಲ್ದಾಣವನ್ನಾಗಿ
ಪರಿವರ್ತಿಸುವಲ್ಲಿ
ಮಹತ್ತರ ಸಾಧನೆ.
ಈಗ ಮಂಗಳೂರಿಗೆ
ಅಂತರ್‌ರಾಷ್ಟ್ರೀಯ
ವಿಮಾನ ಯಾನ ನಕ್ಷೆಯಲ್ಲಿ
ಸ್ಥಾನ.
ಬೆಂಗಳೂರು :
ಬೃಹತ್ ಬೆಂಗಳೂರು
ನಿರ್ಮಾಣಕ್ಕೆ
ನಿರ್ಧಾರ, ಬಿಡದಿ,
ರಾಮನಗರ, ಸಾತನೂರು,
ಸೋಲೂರ್, ಮತ್ತು
ನಂದಗುಡಿಗಳಲ್ಲಿ
ಉಪನಗರಗಳ ನಿರ್ಮಾಣಕ್ಕೆ
ಸಿದ್ಧತೆ.
ಬೆಂಗಳೂರಿನಲ್ಲಿ
ಮೆಟ್ರೋ ರೈಲು
ಕಾಮಗಾರಿ ಆರಂಭ
೬೩೯೫ ಕೋಟಿ
ರೂ. ವೆಚ್ಚದಲ್ಲಿ
ಬೆಂಗಳೂರು ಮೆಟ್ರೋ
ಯೋಜನೆಗೆ ಚಾಲನೆ.
ಇದರ ಜೊತೆಗೆ
೫೨ ಕಿ.ಮೀ. ಉದ್ದಕ್ಕೂ
ಮೋನೋ ರೈಲು ಯೋಜನೆಗೂ
ಚಾಲನೆ.
ಬೆಂಗಳೂರು ನಗರದ
ಸುತ್ತಮುತ್ತಲ
ರಸ್ತೆ ಅಭಿವೃದ್ಧಿಗೆ
೬೦೦ ರೂ.ಗಳ ವೆಚ್ಚ.
ಬೆಂಗಳೂರು-ಮೈಸೂರು
ರಾಜ್ಯ ಹೆದ್ದಾರಿಯನ್ನು
೬ ಲೇನ್‌ಗಳ ರಸ್ತೆಯನ್ನಾಗಿ
ಪರಿವರ್ತಿಸುವ
ಮಹತ್ವದ ಉದ್ದೇಶ.
ಬೆಂಗಳೂರು ಸುತ್ತಮುತ್ತಲ
೭ ನಗರಸಭೆಗಳು
೧ ಪುರಸಭೆ ೧೧೧
ಗ್ರಾಮಗಳನ್ನು
ಒಂದುಗೂಡಿಸಿ
ಬೃಹತ್ ಬೆಂಗಳೂರು
ಮಹಾನಗರ ಪಾಲಿಕೆ
ರಚಿಸಲು ಅಧಿಸೂಚನೆ.
ನಗರಗಳ ಯೋಜಿತ
ಬೆಳವಣಿಗೆಗಾಗಿ
೧೩ ನಗರ ಪಟ್ಟಣಗಳ
ಸ್ಥಳೀಯ ಯೋಜನಾ
ಪ್ರದೇಶಗಳ ಮಹ
ಯೋಜನೆಯ ತಯಾರಿ.
|