jds janatha dal secular
 
 
Sri H D Deve Gowda - Party President

ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ

ಸ್ವತಂತ್ರ ಭಾರತದ ಪ್ರಧಾನಿಯ ಪಟ್ಟ ಉತ್ತರ ಭಾರತದ ಸಂಸದೀಯ ಪಟುಗಳಿಗೆ ಮಾತ್ರ ಮೀಸಲು ಎಂಬ ರೂಢಿ ಸಾಮಾನ್ಯವಾಗಿತ್ತು. ದಕ್ಷಿಣ ಭಾರತದ ರಾಜಕಾರಣಿಗಳು ರಾಷ್ಟ್ರ ರಾಜಕಾರಣಕ್ಕೆ ಯೋಗ್ಯತೆಯುಳ್ಳವರಲ್ಲ ಎಂಬ ಅಭಿಪ್ರಾಯವೂ ಇತ್ತು. ಇದನ್ನು ಮೊದಲ ಬಾರಿಗೆ ಮುರಿದವರು ಆಂದ್ರ ಪ್ರದೇಶದ ಶ್ರೀ.ಪಿ.ವಿ. ನರಸಿಂಹರಾಯರು ನಂತರ ೧೯೯೬ ರಲ್ಲಿ ಹನ್ನೆರಡನೆಯ ಪ್ರಧಾನಿಯಾಗಿ ಆಯ್ಕೆಯಾದ ಶ್ರೀ.ಎಚ್.ಡಿ. ದೇವೇಗೌಡರು, ಅದರೊಂದಿಗೆ ಮೊದಲ ಕನ್ನಡಿಗ ಪ್ರಧಾನಿಯೆಂಬ ಹೆಗ್ಗಳಿಕೆಯೂ ಸೇರಿಕೊಂಡಿದೆ.

ಜನನ :

ಭಾರತದ ಪ್ರಧಾನಿಯಾದ ಆದ್ಯ ಕನ್ನಡಿಗ ಶ್ರೀ.ಹೆಚ್.ಡಿ.ದೇವೇಗೌಡ ಹೊಯ್ಸಳರು ಆಳಿದ ಪ್ರದೇಶ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೊಳೆನರಸೀಪುರದ ರಸ್ತೆಯ ನಡುವೆ ಹರದನಹಳ್ಳಿ ಒಂದು ಸಣ್ಣ ಊರು. ಇಲ್ಲಿನ ದೊಡ್ಡೇಗೌಡ ಹಾಗೂ ಲಕ್ಷ್ಮಿದೇವಮ್ಮ ದಂಪತಿಗಳಿಗೆ ದೇವೇಗೌಡ ಅವರು ೧೯೩೩ ಮೇ ತಿಂಗಳ ಹದಿನೆಂಟರಂದು ಮೊಸಳೆ ಎಂಬ ಇತಿಹಾಸ ಪ್ರಸಿದ್ದ ಗ್ರಾಮದಲ್ಲಿ ಜನಿಸಿದರು.

Deve Gowda

ಬಾಲ್ಯ :

ದೇವೇಗೌಡರ ಬಾಲ್ಯವು ತಂದೆ ತಾಯಿಯವರ ಗ್ರಾಮವಾದ ಹರದನಹಳ್ಳಿಯಲ್ಲೇ ಕಳೆಯಿತು. ಮನೆತನದಲ್ಲಿ ಅಕ್ಷರಸ್ತರಿಲ್ಲದೇ ಹೋದ ಕಾರಣ ಅವರು ತಾಯಿಯೊಂದಿಗೆ ತಮ್ಮ ಕೃಷಿ ಭೂಮಿಯಲ್ಲಿ ಕುಡಿಯಲು ಹೋಗುತ್ತಿದ್ದರು. ಅಲ್ಲದೇ ಮನೆಯ ದೊಡ್ಡಿಯ ಜಾನುವಾರುಗಳನ್ನು ಮೇಯಿಸಲು ಪಕ್ಕದ ಗುಡ್ಡಗಾಡಿಗೆ ಹೋಗಿ ಬರುತ್ತಿದ್ದರು. ತಾಯಿ ಲಕ್ಷ್ಮೀದೇವಮ್ಮ ಸ್ವಲ್ಪ ಲೌಕಿಕ ಬಲ್ಲ ಸ್ತ್ರೀಯಾದುದರಿಂದ ಮಗನ ಭವಿಷ್ಯವು ಹೊಲ ಗದ್ದೆಗಳಲ,ಲಿಯೂ ದನಕರಳನ್ನು ಮೇಯಿಸುವುದಲ್ಲಿಯೂ ಕಳೆದು ಹೋಗಬಾರದೆಂದು ಬಯಸಿ ತನ್ನ ಮಗನು ವಿದ್ಯಾವಂತನಾಗಬೇಕೆಂದು ಬಯಸಿದ್ದರಿಂದ ದೇವೇಗೌಡರು ಭವಿಷ್ಯ ನಿರ್ಧಾರವಾಯಿತೆಂದು ಹೇಳಬಹುದು.

ದೇವೇಗೌಡರ ಪ್ರಾಥಮಿಕ ವಿದ್ಯಾಭ್ಯಾಸವು ಹರದನಹಳ್ಳಿಯ ಶಾಲೆಯಲ್ಲಿ ಪ್ರಾರಂಭವಾಯಿತು. ನಂತರ ಹತ್ತಿರದ ಹಳೆಕೋಟೆಯ ಮಾಧ್ಯಮಿಕ ಶಾಲೆಯಲ್ಲಿ ಆತನ ವಿದ್ಯಾಭ್ಯಾಸ ಮುಂದುವರೆಯಿತು. ದೇವೇಗೌಡರು ಹಳೇಕೋಟೆಯಲ್ಲಿ ಶಿಕ್ಷಣ ಪಡೆಯುವಾಗ ಇಡೀ ಭಾರತದಲ್ಲಿ ಸ್ವಾತಂತ್ರ ಚಳುವಳಿಯು ಉಗ್ರರೂಪ ತಾಳಿತ್ತು. ಒಂದು ಕಡೆ ಮಹಾತ್ಮಗಾಂಧಿಜಿಯವರು ಕರೆಯು ಬಹುಪಾಲು ಜನರನ್ನು ಸ್ವಾಂತತ್ರ್ಯ ಹೋರಾಟದ ಕಡೆ ಸೆಳೆದಿತ್ತು. ಚಿಕ್ಕವರಿಂದ ಮೊದಲುಗೊಂಡು ವೃದ್ದರವರೆಗೂ ಚಳುವಳಿಯಲ್ಲಿ ಧುಮುಕುವವರೇ ಇರಲಿಲ್ಲ. ಇದರಲ್ಲಿ ದೇವೇಗೌಡರೇನು ಹಿಂದೆ ಬಿದ್ದಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ಬಿಸಿ ಅವರಿಗೂ ತಗುಲಿತ್ತು. ಅವರೂ ಇವರ ದೇಶಭಕ್ತಯುವಕರ ಜೊತೆಗೂಡಿ ಕಾಂಗ್ರೆಸ್ ಬಾವುಟ ಹಿಡಿದು ಪ್ರಭಾತ ಪೇರಿಯಲ್ಲಿ ಭಾಗವಹಿಸಿದ್ದರು.

ಹಳೇಕೋಟೆ ಮಾಧ್ಯಮಿಕ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿದ ದೇವೇಗೌಡರು ನಂತರ ಮುಂದಿನ ಶಿಕ್ಷಣಕ್ಕಾಗಿ ಹೊಳೆನರಸೀಪುರದ ಪುರಸಭಾ ಪ್ರೌಢಶಾಲೆಗೆ ಪ್ರವೇಶ ಪಡೆದರು. ತಕ್ಕಮಟ್ಟಿಗೆ ವಿದ್ಯಾರ್ಥಿ ಮುಖಂಡರಾಗಿದ್ದ ದೇವೇಗೌಡರಿಗೆ ತಾಲ್ಲೂಕಿನ ಮುಖಂಡರಾಗಿ ಜನಪ್ರಿಯ ವ್ಯಕ್ತಿಯೆನಿಸಿಕೊಂಡಿದ್ದ ಎ.ಜಿ. ರಾಮಚಂದ್ರರಾಯರ ಪರಿಚಯವಾಗಿ ಕ್ರಮೇಣ ಅವರ ಪ್ರಭಾವಕ್ಕೆ ಸಿಲುಕಿದರು. ಮಹತ್ತರವಾದ ಸಂಗತಿಗಳನ್ನು ಅವರಿಂದ ತಿಳಿದುಕೊಂಡರು. ನಾಯಕ ಗುಣಗಳಿದ್ದ ದೇವೇಗೌಡರು ಓದಿನಲ್ಲೇನು ಹಿಂದೆ ಬಿದ್ದಿರಲಿಲ್ಲ. ಹೊಳೆನರಸೀಪುರದ ಪುರಸಭಾ ಪ್ರೌಢಶಾಲೆಯಲ್ಲಿ ಮೆಟ್ರಿಕ್ ಮುಗಿಸಿದ ಅವರು ಹಾಸನದ ಎಲ್.ಎ. ಪಾಲಿಟೆಕ್ನಿಕ್ ಸಂಸ್ಥೆಗೆ ಪ್ರವೇಶ ಪಡೆದು ಮೂರು ವರ್ಷದ ಡಿಪ್ಲೋಮಾ ಇಂಜಿನಿಯರಿಂಗ್ ಶಿಕ್ಷಣ ಪಡೆದರು.

ಅಂದಿನ ಕಾಕ್ಕೆ ಹರದನಹಳ್ಳಿಯಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದು ಇಂಜಿನಿಯರಾದವರೆಂದರೆ ದೇವೇಗೌಡರೊಬ್ಬರೇ. ಅವರ ವಿದ್ಯೆಗೆ ದೊಡ್ಡ ಕೆಲಸವೇ ದೊಕರಕಬಹುದಾಗಿತ್ತು. ಆದರೆ ದೇವೇಗೌಡರಿಗೆ ಮೊದಲಿನಿಂದಲೂ ಒಬ್ಬರ ಕೈಯಡಿಯಾಳಾಗಿ ದುಡಿಯುವ ಮನೋಭಾವ ಉಳ್ಳವರಲ್ಲ. ಹಾಗಾಗಿ ಅವರಿಗೆ ಸರಕಾರಿ ಇಲಾಖೆ ಸೇರಿ ಇಂಜಿನಿಯರಾಗಿ ದುಡಿಯುವದನ್ನು ಇಷ್ಟಪಡಲಿಲ್ಲ.

ದುಡಿಮೆಗಾರರಾಗಿ ದೇವೇಗೌಡರು :

೧೯೫೩ ರಲ,ಲಿ ದೇವೇಗೌಡರು ಸ್ವತಂತ್ರವಾಗಿ ದುಡಿಯಲು ನಿರ್ಧರಿಸಿ ಕಡೆಗೆ ತಾಲ್ಲೂಕು ಕಾಮಗಾರಿ ಇಂಜಿನಿಯರೊಬ್ಬರ ಪರಿಚಯವಾಗಿ ಅವರಿಗೆ ತಮ್ಮ ಉದ್ದೇಶವನ್ನು ತಿಳಿಸಿದರು. ಆ ಇಂಜಿನಿಯರ್ ಬಿಳಿ ಹಲವಾರು ಗುತ್ತಿಗೆ ಕಾಮಗಾರಿಗಳಿದ್ದವು. ಅವರು ದೇವೇಗೌಡರಿಗೆ ತಾಲ್ಲೂಕಿನಲ್ಲಿ ಮಳೆಯ ಅತಿವೃಷ್ಟಿಯಿಂದ ಒಡೆದು ಹೋಗಿದ್ದ ಕೆರೆಯ ಕಾಮಗಾರಿಕೆಯನ್ನು ಯುವಕರಾಗಿದ್ದ ದೇವೇಗೌಡರಿಗೆ ನೀಡಿದರು. ಈ ಕಾಮಗಾರಿಯಲ್ಲಿ ದೇವೇಗೌಡರು ಆರಂಭದಿಂದಲೂ ದುಡಿಮೆಗಾರರನ್ನು ವಿಶ್ವಾಸದಿಂದ ಕಂಡು ಪ್ರಿಯರಾದರು. ನಂತರವೂ ಹಲವಾರು ಕಾಮಗಾರಿಗಳನ್ನು ದೇವೇಗೌಡರು ಸಹಿಸಿಕೊಂಡು ಯಶಸ್ವಿಯಾಗಿ ಪೂರೈಸಿದರು.

ದೇವೇಗೌಡರು ಡೊಪ್ಲೊಮಾ ಇಂಜನಿಯರಾಗಿ ಕಾಮಗಾರಿ ಕಾರ್ಯಗಳನ್ನು ವಹಿಸಿಕೊಂಡು ಲಾಭದಾಯಕ ವೃತ್ತಿಯಲ್ಲಿದ್ದರೂ ಸಹ ವ್ಯವಸಾಯದ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡಿರಲಿಲ್ಲ. ಕಾಮಗಾರಿ ದುಡಿಮೆಯೊಂದಿಗೆ ಹಳ್ಳಿಯಲ್ಲಿ ಕೃಷಿಭೂಮಿಯಲ್ಲಿಯೂ ವ್ಯವಸಾಯ ಮಾಡಿ ಅಭಿವೃದ್ಧಿ ಪಡಿಸಿದವರು ತಮ್ಮ ಕುಟುಂಬಕ್ಕೆ ಸೇರಿದ ಹೊಲಗದ್ದೆಗಳನ್ನು ಉತ್ತಮಗೊಳಿಸಲು ಶಕ್ತಿಮೀರಿ ಕಾಯಕ ನಡೆಸಿದರು. ತಮ್ಮ ಅರಿವಿಗೆ ಬಂದ ದಿನ ಜನರ ಕಷ್ಟಗಳನ್ನು ಹೋಗಲಾಡಿಸಲು ತಕ್ಕ ನೆರವು ನೀಡಿದರು. ವಿದ್ಯಾವಂತರಾಗಿ ಸುಖವಾಗಿ ಸರ್ಕಾರಿ ಸೇವೆಯಲ್ಲಿ ನೆಮ್ಮದಿಯಿಂದಿರಬಹುದಾದ ದೇವೇಗೌಡರು ಹೊಲ ಗದ್ದೆ ತೋಟಗಳ ಮಣ್ಣಿನಲ್ಲಿ ದುಡಿದು ಮಣ್ಣಿನ ಮಗ ಎಂದೇ ಪ್ರಸಿದ್ದರಾದರು.

೧೯೪೪ ರ ಮೇ ತಿಂಗಳಲ್ಲಿ ಹಾಸನ ತಾಲ್ಲೂಕಿನ ಮುತ್ತಿಗೆ ಹಳ್ಳಿಯ ಪಟೇಲರಾದ ದೇವೇಗೌಡರ ಮಗಳು ಚಿನ್ನಮ್ಮನೊಂದಿಗೆ ಅವರ ವಿವಾಹವು ನಡೆಯಿತು. ವ್ಯವಸಾಯದಲ್ಲಿ ತೊಡಗಿದ ದೇವೇಗೌಡರು ಕ್ರಮೇಣ ಕಾಮಗಾರಿಗಳನ್ನು ನಡೆಸುವುದನ್ನು ನಿಲ್ಲಿಸಿದರು.

ಎ.ಜಿ. ರಾಮಚಂದ್ರರಾಯರು ಹೊಳೆನರಸೀಪುರ ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ ೧೯೫೨ ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ಕೆಂಗಲ್ ಹನುಮಂತಯ್ಯನವರ ಸಚಿವ ಸಂಪುಟದಲ್ಲಿ ವಿದ್ಯಾಮಂತ್ರಿಗಳಾಗಿದ್ದರು. ಸಜ್ಜನರು, ಸಾತ್ವಿಕರು, ಸರಳರು ಪ್ರಸ್ತುತ ಲೇಖಕ ತನ್ನ ಶಾಲಾ ದಿನಗಳಲ್ಲಿ ಕಂಡಂತೆ ರಜಮೋತ್ಸವ ಮೊದಲಾದ ಕಾರ್ಯಕ್ರಮಗಳಲ್ಲಿ ಅಧ್ಯಕ್ಷರಾಗಿಯೋ ಮುಖ್ಯ ಅತಿಥಿಗಳಾಗಿಯೋ ಭಾಗವಹಿಸಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವಂಥ ಮಾತುಗಳನ್ನಾಡುತ್ತಿದ್ದರು. ದೇವೇಗೌಡರು ಅವರನ್ನು ಗುರುಗಳನ್ನಾಗಿ ಸ್ವೀಕರಿಸಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆದರು. ಗೆಳೆಯರ ಬೆಂಬಲದಿಂದ ತಾಲ್ಲೂಕು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಚುನಾವಣೆಗೆ ನಿಂತರು. ಆದರೆ ಗಿಲ್ಲಲಿಲ್ಲವಾದರೂ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರವೇಶಿಸಿದ್ದರು. ೧೯೬೦ ರಲ್ಲಿ ತಾಲ್ಲೂಕು ಬೋರ್ಡ್ ಚುನಾವಣೆ ನಡೆದಾಗ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಜೇತರಾದರು. ತಾಲ್ಲೂಕು ಬೋರ್ಡ್ ಸದಸ್ಯರಾಗಿ ತಾಲ್ಲೂಕಿನ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಜನರ ವಿಶ್ವಾಸ ಸಂಪಾದಿಸಿದರು.

ಕೆಲವರ ಜೀವನವೇ ಹಾಗೆ, ನಮ್ಮಲ್ಲಿ ಹಿಂದೆ ಎಂ.ಆರ್. ಶ್ರೀನಿವಾಸಮೂರ್ತಿಗಳೆಂಬುವರಿದ್ದರು ಇವರು ವಿಜ್ಞಾನ ಪದವೀಧರರಾದರೂ ಬರೆದದ್ದು ಸಾಹಿತ್ಯ, ವಚನಗಳನ್ನು ಸಂಪಾದಿಸಿದರು. ಮಹಾತ್ಯಾಗ ಎಂಬ ಅತ್ಯಂತ ಜನಪ್ರಿಯ ಕಾದಂಬರಿ ಬರೆದರು. ದೇವೇಗೌಡರು ಇಂಜಿನಿಯರಾಗಲು ಬಯಸಿದರೂ ಆರಿಸಿಕೊಂಡ ಕ್ಷೇತ್ರ ರಾಜಕಾರಣ, ತಮ್ಮ ಸತತ ಪರಿಶ್ರಮದಿಂದ ಅಪಾರ ಯಶಸ್ಸನ್ನೇ ಕಂಡರು.

೧೯೬೨ ರಲ್ಲಿ ಸಾರ್ವತ್ರಿಕ ಚುನಾವಣೆಗಳು, ನಡೆದಾಗ ಎ.ಜಿ. ರಾಮಚಂದ್ರರಾಯರು ವಯಸ್ಸಾಗಿದ್ದುದರಿಂದ ತಾವು ಸ್ಪರ್ದಿಸದೆ ಶಿಷ್ಯ ದೇವೇಗೌಡರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಲ್ಲಿಸಿದರು. ಆದರೆ ದೆಹಲಿಯ ವರಿಷ್ಠರು ದೇವೇಗೌಡರಿಗೆ ಬದಲು ದೊಡ್ಡೇಗೌಡ ಎಂಬುವರಿಗೆ ಅವಕಾಶ ನೀಡಿತು. ಇದರಿಂದ ರಾಮಚಂದ್ರರಾಯರಿಗೆ ನೋವಾಯಿತು. ಶಿಷ್ಯನನ್ನು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿಸಿದರು. ದೇವೇಗೌಡರು ಗೆದ್ದು ಬಂದು ಶಾಸಕರಾದರು. ಇಲ್ಲಿಂದೀಚಿಗೆ ಅವರು ಸತತವಾಗಿ ವಿಧಾನಸಭೆಗೂ, ಲೋಕಸಭೆಗೂ ಆರಿಸಿ ಬರುತ್ತಲೇ ಇದ್ದಾರೆ. ಅದೃಷ್ಟ ಅರ್ಹತೆ ಎರಡೂ ಅವರದಾಗಿದೆ. ಪ್ರಥಮ ಬಾರಿಗೆ ಶಾಸಕರಾದಾಗ ದೇವೇಗೌಡರು ಶಾಸನ ಸಭೆಯಲ್ಲಿ ಭಾಷಣ ಮಾಡಿ ಹಾರಂಗಿ ಯೋಜನೆ ಹಾಸನ ಮಂಗಳೂರು ರೈಲ್ವೆಮಾರ್ಗ, ಸಣ್ಣನೀರಾವರಿ ಯೋಜನೆಗಳು, ಗ್ರಾಮೀಣ ಗೃಹ ಯೋಜನೆ ಈ ವಿಷಯಗಳನ್ನು ಪ್ರಸ್ತಾಪಿಸಿ ಕಾಮಗಾರಿ ಸಚಿವರಾಗಿದ್ದ ವೀರೇಂದ್ರಪಾಟೀಲರು ಮೊದಲಾದವರ ಗಮನ ಸೆಳೆದರು. ಅಂದಿನ ಸಭಾಪತಿಗಳು ವೈಕುಂಠ ಬಾಳಿಗರು, ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ದೇವೇಗೌಡರು ಪ್ರತಿನಿಧಿ ಭಾಷಣ ಮಾಡಿದ್ದರು. ಎಸ್.ಆರ್. ಕಂಠಿಯವರು ಮುಖ್ಯಮಂತ್ರಿಗಳು, ದೇವೇಗೌಡರ ಭಾಷಣ ನಿರ್ಭೀತಿಯಿಂದ ಕೂಡಿದುದಾಗಿತ್ತು ಕಂಠಿಯವರು ನಿಜಲಿಂಗಪ್ಪನವರಿಗೆ ಮುಖ್ಯಮಂತ್ರಿ ಪದವಿಯನ್ನು ಒಪ್ಪಿಸಿದುದರಿಂದ ಎಸ್ಸೆನ್ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡರು.

ದೇವೇಗೌಡರಿಗೆ ಮೊದಲಿನಿಂದಲೂ ರೈತ ಜನರ ಮೇಲೆ ಅಪಾರ ಕರುಣೆ. ಅವರ ಬಾಳು ಹಸನಾಗಲು, ಬದುಕು ಹಸಿರಾಗಲು ಕೆರೆಗಳು ಮತ್ತು ಸಣ್ಣ ಆಣೆಕಟ್ಟುಗಳ ಮೂಲಕ ನೀರಾವರಿ ಅಭಿವೃದ್ಧಿಯಾಗಬೇಕೆಂದು ಈ ಕಾರ್ಯದಲ್ಲಿ ನಿರತರಾದರು. ಭೂ ಸಂಪತ್ತು, ಜಲಸಂಪತ್ತು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕೆಂದು ಕೃಷಿಗೆ ಆದ್ಯತೆ ನೀಡಿದರು. ಬಹುತೇಕ ಕೆರೆಕಟ್ಟೆಗಳನ್ನು ಹಾಗೂ ಗ್ರಾಮಾಂತರ ರಸ್ತೆಗಳನ್ನು ಸರ್ಕಾರದ ವತಿಯಿಂದ ಮಂಜೂರು ಮಾಡಿಸಿ ಅವು ಕಾರ್ಯಗತವಾಗುವಂತೆ ಮಾಡಿದರು. ಕಾಲಕಾಲಕ್ಕೆ ಶಾಸನಸಭೆಯಲ್ಲಿ ರೈತರ ಹೆಸರಿನಲ್ಲಿ ಶೋಷಣೆ ಆಗುತ್ತಿರುವ ಬಗ್ಗೆಯಾಗಲಿ, ರೈತರಿಗೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವ ವಿಷಯದಲ್ಲಿ ಯಾಗಲೀ, ರೈತರ ಭತ್ತಕ್ಕೆ ನಿಗದಿತ ಬೆಲೆ ಗೊತ್ತು ಮಾಡುವ ವಿಷಯದಲ್ಲಿಯಾಗಲೀ ಸದಸ್ಯರ ಗಮನ ಸೆಳೆಯಲು ಮಾತನಾಡಿ ಪರಿಹಾರ ಕೊಡಿಸುವಲ್ಲಿ ಶ್ರಮಿಸಿದರು. ೧೯೬೫ - ೬೬ ರಲ್ಲಿ ಕರ್ನಾಟಕದಲ್ಲಿ ಕ್ಷಾಮ ತಲೆದೋರಿ ಆಹಾದ ಅಭಾವ ಕಂಡು ಬಂದಾಗ ದೇವೇಗೌಡರು ಕ್ಷಾಮಕ್ಕೆ ತುತ್ತಾದ ಜನರ ಸಂಕಷ್ಟದಲ್ಲಿ ಪಾಲ್ಗೊಂಡು ಸರ್ಕಾರ ನೀಡುವ ಎಲ್ಲ ಸೌಲಭ್ಯಗಳು ಜನರ ಕೈಗೆ ಸಿಗುವಂತೆ ವ್ಯವಸ್ಥೆ ಮಾಡಿದರು.

ದೇವೇಗೌಡರ ಅವಿರತ ಹೋರಾಟದ ಫಲ ಹೇಮಾವತಿ ಯೋಜನೆ, ಹೇಮಾವತಿ ಕಾವೇರಿಯ ಉಪನದಿ, ಈ ನದಿಗೆ ಹಾಸನ ಜಿಲ್ಲೆಯ ಗೊರೂರು ಬಳಿ ಆಣೆಕಟ್ಟು ಕಟ್ಟಲು ಸರ್ಕಾರ ಒಪ್ಪಿ ೧೯೬೭ ರಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡಿತು. ಇದರೊಂದಿಗೆ ದೇವೇಗೌಡರು ಹಾಸನ ಜಿಲ್ಲೆಯಲ್ಲಿ ಸುಮಾರು ಮೂವತ್ತು ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ಕೊಡಿಸಿ ಹೇಮಾವತಿ ನೀರು ಪೂರ್ಣ ಬಳಕೆಯಾಗುವಂತೆ ಮಾಡಿದರು. ಬಡತನದಲ್ಲಿ ಸೊರಗಿ ಹೋಗಿದ್ದ ಹಾಸನ ಜಿಲ್ಲೆ ನೀರಾವರಿ ಯೋಜನೆಯಿಂದ ಕಂಗೊಳಿಸುವಂತಾಯಿತು. ದೇವೇಗೌಡರಿಗೆ ರೈತರ ಬಗ್ಗೆ ಇರುವ ಅಪಾರ ಕಾಳಜಿ, ನೀರಿನ ಬಗೆಗಿನ ಅವರ ಪ್ರತಿಪಾದನೆ ಸಚಿವ ಸಂಪುಟದ ಸದಸ್ಯರ ಮೆಚ್ಚುಗೆ ಪಡೆಯಿತು. ಇಷ್ಟಾಗಿ ಎಲ್ಲ ಏತ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡಿದರೂ ನೀರು ಪೂರ್ತಿಯಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ದೇವೇಗೌಡರ ನಿರ್ಣಯ.

೧೯೭೨ ರಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗಿ ದೇವರಾಜ ಅರಸು ಅವರು ಅಧಿಕಾರ ವಹಿಸಿಕೊಂಡಾಗ ದೇವೇಗೌಡರು ವಿರೋಧ ಪಕ್ಷ ನಾಯಕರಾಗಿದ್ದರು. ಅರಸು ಅವರು ಹೇಮಾವತಿ ಜಲಾಶಯದ ನೀರು ಹಾಸನ, ಮೈಸೂರುಗಳಿಗೆ ಮಾತ್ರವಲ್ಲದೆ ಮಂಡ್ಯ, ತುಮಕೂರು ಜಿಲ್ಲೆಗಳಿಗೂ ವಿಸ್ತರಿಸುವಂತೆ ಮಾಡಿದರು. ೧೯೮೩ ರಲ್ಲಿ ದೇವೇಗೌಡರೇ ನೀರಾವರಿ ಮತ್ತು ಕಾಮಗಾರಿ ಮಂತ್ರಿಗಳಾದಾಗ ಹೇಮಾವತಿ ಯೋಜನೆಗಿದ್ದ ಅಡೆತಡೆಗಳನ್ನು ನಿವಾರಿಸಿ ಯೋಜನೆ ಕಾರ್ಯಗತವಾಗುವಂತೆ ಮಾಡಿದರು. ಹೇಮಾವತಿ ಜಲಾಶಯದ ಎಡದಂಡೆ ನಾಲೆಗೆ ತಮ್ಮ ಗುರುಗಳಾದ ಎ.ಜಿ. ರಾಮಚಂದ್ರರಾಯ ಹೆಸರನ್ನು ಬಲದಂಡೆ ನಾಲೆಗೆ ಖ್ಯಾತ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಗೊರೂರು ರಾಮಸ್ವಾಮಿ ಐಯ್ಯಂಗಾರರ ಹೆಸರನ್ನು ಇಟ್ಟರು. ಇದೇ ರೀತಿ ಬೇರೆ ಬೇರೆ ನಾಲೆಗಳಿಗೆ ಬೋರಣ್ಣಗೌಡ ಟಿ,. ಸುಬ್ರಮಣ್ಯಂ ಹಾಗೂ ಟಿ. ಮರಿಯಪ್ಪನವರ ಹೆಸರುಗಳನ್ನೂ ಇಡುವಲ್ಲಿ ಸಫಲರಾದರು. ಕ್ಷೇತ್ರದ ಪ್ರತಿನಿಧಿಯಾಗಿ ಕೃಷಿಗೆ ಆದ್ಯತೆ ನೀಡಿ ನೆಲಕ್ಕೆ ನೀರುಣಿಸಿದರು. ಬಾಳು ಹಸನಾಗಲು ಕೃಷಿಯೇ ಆಧಾರ. ಆಹಾರದ ಅಭಾವ ಎಂದೂ ತಲೆದೋರಬಾರದು ಇದು ಅವರ ಗುರಿ.

ಕಾವೇರಿ ನೀರಿನ ಬಗೆಗೂ ದೇವೇಗೌಡರು ಅನವರತ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ನೀರಿನ ವಿಚಾರದಲ್ಲಿ ದೇವೇಗೌಡರು ಬಹು ದೂರದೃಷ್ಟಿ ಚಿಂತಕರೆಂದು ಹೆಸರಾದವರು. ಹರಿಯುವ ನೀರಿನ ಬಳಕೆಯಂತೆ ಜಲಾಶಯಗಳಲ್ಲಿ ಉಂಟಾಗುವ ನೀರಿನ ಕೊರತೆಯನ್ನು ತುಂಬುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾದಾಗ ನೀರಾವರಿಗೆ ಹೆಚ್ಚಿನ ಒತ್ತು ನೀಡಿದುದು ಕನ್ನಡ ಜನತೆಗೆ ತಿಳಿದ ವಿಚಾರವೇ ಆಗಿದೆ. ಕ್ರಿ.ಶ. ೨೦೦೦ ದೊಳಗೆ ಕೃಷ್ಣಾ ಜಲಾಶಯ ಯೋಜನೆಗಳನ್ನು ಮುಗಿಸಿ ನೀರು ಬಳಕೆಯಾಗಬೇಕೆಂಬ ದೃಢಸಂಕಲ್ಪ ಮಾಡಿದರು.

ಅದರ ಸಾಕಾರಕ್ಕೆ ಕೃಷ್ಣ ಜನಲಭಾಗ್ಯ ನಿಧಿ ಸ್ಥಾಪಿಸಿದರು. ನಾಡಿನ ನೀರಾವರಿ ಬಗ್ಗೆ ವಿಶೇಷ ಕಾಳಜಿ ವಹಿಸಿದವರ ಪೈಕಿ ದೇವೇಗೌಡರು ಅಗ್ರ ಗಣ್ಯರಾಗುತ್ತಾರೆ. ನೀರಿನ ಪ್ರತಿಪಾದಕ ಎಂದೇ ಅವರು ಖ್ಯಾತರು. ಒಮ್ಮೆ ಸದನದಲ್ಲಿ ಮಾತನಾಡುತ್ತಾ ಅವರು ನಾವು ನೀರಾವರಿ ಸಾಮರ್ಥ್ಯದ ಬಳಕೆ ವಿಚಾರದಲ್ಲಿ ಹಿಂದೆ ಉಳಿದಿದ್ದೇವೆ. ಮದ್ರಾಸ್ - ಆಂದ್ರ ರಾಜ್ಯದಲ್ಲಿ ಹೆಚ್ಚು ಶಕ್ತಿ ಸಂಪಾದಿಸಿದ್ದಾರೆ. ನಮ್ಮ ರಾಜ್ಯದಲ್ಲೂ ಆ ಶಕ್ತಿಯನ್ನು ಹೆಚ್ಚಿಸುದಕ್ಕೆ ಅನು ಕಾರ್ಯಕ್ರಮಹಾಕಿಕೊಳ್ಳಲಾಗಿದೆ? ಎಂದು ಪ್ರಶ್ನಿಸಿದರು. ಕಾವೇರಿ ನೀರು ಹಂಚಿಕೆ ವಿವಾದದ ವಿಷಯದಲ್ಲಿ ಇನ್ನೂ ಒಂದು ಇತ್ಯರ್ಥಕ್ಕೆ ಬರಲಾಗಿಲ್ಲ. ದೇವೇಗೌಡರು ಲೋಕಸಭಾ ಸದಸ್ಯರಾದಾಗ ೧೯೯೨ರಲ್ಲಿ ಕಾವೇರಿ ನೀರಿನ ಹಂಚಿಕೆ ಕುರಿತು ಅಧ್ಯಯನ ಮಾಡಿ ಮಾತನಾಡಿ ಕೇಂದ್ರದ ವರಿಷ್ಟರನ್ನು ಬೆರಗುಗೊಳಿಸಿದರು. ಆಗ ಕರ್ನಾಟಕ ಮುಖ್ಯಮಂತ್ರಿಗಳಾಗಿದ್ದ ಎಸ್. ಬಂಗಾರಪ್ಪನವರಿಗೆ ಬೆಂಬಲ ನೀಡಿ ಕರ್ನಾಟಕದ ಕಾವೇರಿ ಜಲಾಶಯನ ಪ್ರದೇಶದ ನೀರಾವರಿ ಸಂರಕ್ಷಣೆಗೆ ಕರ್ನಾಟಕ ಸರ್ಕಾರಕ್ಕೆ ವಿಶೇಷ ಅಧಿಕಾರ ದೊರಕಿಸಿಕೊಡುವಂಥ ಸುಗ್ರೀವಾಜ್ಞೆ ಹೊರಬರುವಂತೆ ಮಾಡಿದರು. ದೇವೇಗೌಡರು ತಮಿಳುನಾಡಿನ ಜನರ ಆರ್ಭಟಕ್ಕೆ ಜಗ್ಗಲಿಲ,ಲ, ತಮಿಳುನಾಡಿನ ಕರ್ನಾಟಕಗಳ ನಡುವೆ ಕಾವೇರಿ ನೀರಿನ ಹಂಚಿಕೆ ವಿವಾದ ಬ್ರಹ್ಮಗಂಟಾಗಿಯೇ ಉಳಿದಿದೆ ಎಂಬುದು ನಿಚ್ಛಳ. ದೇವೇಗೌಡರೇ ೧೯೯೫ ರಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಒಂದು ಪವಾಡವೇ ನಡೆಯಿತು. ಕಾವೇರಿ ವಿವಾದ ಸಮಸ್ಯೆಯಾಗಿ ಸುಪ್ರೀಂಕೋರ್ಟ್ ಕಟ್ಟೆ ಹತ್ತಿದ್ದು ಇತಿಹಾಸ. ೧೯೯೫ ರಲ್ಲಿ ಸರ್ವೋನ್ನತ ನ್ಯಾಯಾಲಯ ನ್ಯಾಯಾಧಿಕಾರಣ ನಿಗಧಿಪಡಿಸಿದಂತೆ ತಮಿಳುನಾಡಿಗೆ ಕಾವೇರಿ ಜಲಾನಯನದಿಂದ (ಕೆ.ಆರ್.ಎಸ್.) ಹನ್ನೊಂದು ಟಿ.ಎಂ.ಸಿ. ನೀರನ್ನು ಬಿಡಲು ಆದೇಶಿಸಿತ್ತು. ದೇವೇಗೌಡರು ಕಾನೂನು ತಜ್ಞರ ಸಲಹೆಯ ಮೇರಗೆ ಐದು ಟಿ.ಎಂ.ಸಿ. ನೀರು ತಮಿಳುನಾಡಿಗೆ ಬಿಟ್ಟರು. ಆಗ ಹಲವರ ವಿರೋಧಕ್ಕೆ ಅವರು ಪಾತ್ರರಾದರು. ಆದರೆ ನೀರು ಬಿಡದಿದ್ದರೆ ನ್ಯಾಯಾಲಯದ ನಿಂದನೆಗೆ ಒಳಗಾಗಬೇಕಿತ್ತು. ನೀರಾವರಿ ಕಾರ್ಯದರ್ಶಿ ಜೈಲಿಗೆ ಹೋಗಬೇಕಾಗುತ್ತಿತ್ತು ಎಂದು ವಾದಿಸಿದರು. ತಮಿಳುನಾಡಿಗೆ ನೀರು ಬಿಟ್ಟ ಬಗ್ಗೆ ಪರ ವಿರೋಧ ವಾತಾವರಣ ಸೃಷ್ಟಿಗೊಂಡಿತು. ಆದರೆ ನೀರು ಬಿಟ್ಟ ೨೪ ಗಂಟೆಯೊಳಗೆ ಧಾರಾಕಾರವಾಗಿ ಮಳೆ ಸುರಿದು ಜಲಾಶಯ ತುಂಬಿ ತುಳುಕಿ ಒಂದು ಪವಾಡವೇ ನಡೆಯಿತು. ಆತಂಕ ನಿವಾ‌ಋಣೆಯಾಯಿತು. ಇದು ದೇವೇಗೌಡನ ಭಾಗ್ಯ. ದೇವಿ ಕೃಪೆ (ಟಿ.ಎಂ.ಸಿ. = ಥೌಸಂಡ್ ಮಿಲಿಯನ್ ಕ್ಯುಬಿಕ ಫೀಟ್ = ಸಾವಿರ ದಶಲಕ್ಷ ಘನ ಅಡಿ ಅಥವಾ ಶತಕೋಟಿ ಘನಡಿ).

ನಾಡಿನ ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಅರವತ್ತರ ದಶಕದಲ್ಲೇ ದೇವೇಗೌಡರು ಕಾಳಜಿ ವಹಿಸಿದರು. ಸರ್ಕಾರವೇ ವಿದ್ಯಾಭ್ಯಾಸದ ಎಲ್ಲ ಖರ್ಚನ್ನು ವಹಿಸಿಕೊಂಡು ಉಚಿತ ವಿದ್ಯೆಯನ್ನು ನೀಡಬೇಕು ಎಂದು ವಾದಿಸಿದರು. ಸರ್ಕಾರದ ಉಚಿತ ವಿದ್ಯಾಭ್ಯಾಸ ನೀಡುವುದಾಗಿ ಭರವಸೆ ನೀಡಿತ್ತಾದರೂ ಮಕ್ಕಳಿಂದ ಶುಲ್ಕ ವಸೂಲು ಮಾಡುತ್ತಿದ್ದುದನ್ನು ಗಮನಿಸಿ ದೇವೇಗೌಡರು ಶಿಕಷಣದ ಹೆಸರಿನಲ್ಲಿ ಶಾಲೆಗಳು ಪೋಷಕರನ್ನು ಸುಲಿಗೆ ಮಾಡುತ್ತಿರುವ ಕುರಿತು ಖಂಡಿಸಿದರು. ೧೯೭೩ ರ ಶಿಕ್ಷಣ ಮಸೂದೆಯ ಜಾರಿಯಲ್ಲಿ ಗೌಡರ ಪಾತ್ರ ಹಿರಿದಾದುದಾಗಿದೆ. ಪ್ರವಾಸ ಕೈಗೊಂಡು ಸ್ಥಳೀಯರ ಭಾವನೆಗಳನ್ನು ಅರಿತು ಸ್ಥಳಕ್ಕೆ ಅನುಗುಣವಾಗಿ ಬಹಳಷ್ಟು ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿದರು.

೧೯೬೮ ರಲ್ಲಿ ನಿಜಲಿಂಗಪ್ಪನವರು ತಮ್ಮ ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡಿ ಕಾಂಗ್ರೆಸ್ ಅಧ್ಯಕ್ಷರಾದಾಗ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ವೀರೇಂದ್ರರ ಒತ್ತಾಯಕ್ಕೆ ಮಣಿದು ಕಾಂಗ್ರೆಸ್ ಪಕ್ಷ ಸೇರಿದರು. ಆದರೆ ರಾಷ್ಟ್ರಪತಿ ಆಯ್ಕೆ ವಿಚಾರದಲ್ಲಿ ಇಂದಿರಾಗಾಂಧಿಯವರಿಗೂ ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪನವರಿಗೂ ಭಿನ್ನಾಭಿಪ್ರಾಯ ಉಂಟಾಗಿ ಕಾಂಗ್ರೆಸ್ ಇಬ್ಬಾಗವಾಯಿತು. ದೇವೇಗೌಡರು ಆಗ ಸಂಸ್ಥಾ ಕಾಂಗ್ರೆಸ್ ಸೇರಿದರು. ೧೯೭೨ ರಲ್ಲಿ ಇಂದಿರಾ ನೇತೃತ್ವದ ಆಡಳಿತ ಕಾಂಗ್ರೆಸ್ ಅದ್ಬುತ ಜಯಗಳಿಸಿತು. ಹೊಳೆನರಸೀಪುರ ಕ್ಷೇತ್ರದಿಂದ ಸಂಸ್ಥಾನ ಕಾಂಗ್ರೆಸ್ ಅಭ್ಯರ್ಥಿಯಾಗಿ ದೇವೇಗೌಡರು ಗೆದ್ದಿದ್ದರು. ರಾಜ್ಯ ವಿಧಾನ ಸಭೆಗೆ ಆಯ್ಕೆಯಾದ ಅವರು ವಿರೋಧ ಪಕ್ಷದ ನಾಯಕರಾದರು. ದೇವರಾಜ ಅರಸು ಮುಖ್ಯಮಂತ್ರಿಗಳು, ಸಭಾಪತಿ ಕೆ.ಎಸ್. ನಾಗರತ್ನಮ್ಮ ಒಂದು ಶಾಸನಸಭೆಯ ಅಧ್ಯಕ್ಷರಾಗಿ ಒಬ್ಬ ಮಹಿಳೆ ಆಯ್ಕೆಗೊಂಡದ್ದು ಭಾರತದಲ್ಲೇ ಪ್ರಥಮ. ಅರಸು ತಮ್ಮ ಅಧಿಕಾರಾವಧಿಯಲ್ಲಿ ಪ್ರಜಾಕಲ್ಯಾಣಕಾರಕ ಅದ್ಭುತ ಸಾಧನೆಗಳನ್ನು ಮಾಡಿದರು. ಒಳ್ಳೆಯ ಕೆಲಸಕ್ಕೆ ವಿರೋಧ ಪಕ್ಷದ ನಾಯಕರಾಗಿ ದೇವೇಗೌಡರು ಸಂಪೂರ್ಣ ಬೆಂಬಲ ನೀಡಿದರು.

೧೯೭೨ರ ೯ ನೇಜೂನ್‌ರಂದು ದೇವೇಗೌಡರ ಮೇಲೆ ಅಪಾರ ಪ್ರಭಾವ ಬೀರಿದ್ದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ತೀರಿಕೊಂಡರು. ಅವರು ಅನಾರೋಗ್ಯ ಪೀಡಿತರಾಗಿ ಸಂಕಟ ಪರಿಸ್ಥಿತಿಯಲ್ಲಿದ್ದಾಗ ದೇವೇಗೌಡರು ಸರ್ಕಾರ ಅವರಿಗೆ ಸಕಲ ಖರ್ಚನ್ನೂ ಕೊಡಲು ಆಲೋಚನೆ ಮಾಡಬೇಕು ಎಂದು ಕೋರಿದ್ದರು. ಗೋಪಾಲಗೌಡರು ಪ್ರಾಮಾಣಿಕ, ತತ್ವನಿಷ್ಟರಾಜಕಾರಣಿ ಎಂದು ಕೊಂಡಾಡಿದರು. ಅವರ ಅಗಲಿಕೆಗಾಗಿ ದು:ಖಿಸಿದರು.

ದೇವರಾಜ ಅರಸು ಅವರು ಭೂ ಸುಧಾರಣೆಯನ್ನು ಅನುಷ್ಠಾನಕ್ಕೆ ತರುವಲ್ಲಿ ದೇವೇಗೌಡರು ನೆರವಾದರು. ಅದೊಂದು ರಕ್ತರಹಿತ ಕ್ರಾಂತಿಯ ಸಾಧನೆ. ಗೇಣಿದಾರರಿಗೆ ರಕ್ಷಣೆ ನೀಡುವುದರಲ್ಲಿ ಕಾನೂನು ನೆರವಾಯಿತು. ಸರ್ಕಾರ ಸಮಗ್ರ ಭೂಸುಧಾರಣೆ ಮಸೂದೆಯನ್ನು ತರುವ ಭರವಸೆ ನೀಡಬೇಕೆಂದು ದೇವೇಗೌಡರು ಒತ್ತಾಯವನ್ನೂ ತಂದಿದ್ದರು. ಕಂದಾಯ ಸಚಿವ ಹುಚ್ಚಮಾಸ್ತಿಗೌಡರು ಈ ಬಗ್ಗೆ ದೃಢಸಂಕಲ್ಪ ಮಾಡಿದ್ದರು. ಮೂವರ ಪ್ರಯತ್ನ ಭೂ ಸುಧಾರಣೆ ಕಾನೂನು ಜಾರಿಗೆ ಬಂದಿತು. ರೈತ ಕುಲವನ್ನು ಬೆಳಗಿಸಿದವರಲ್ಲಿ ಈ ಮೂವರೂ ಪ್ರಶಂಸೆಗೆ ಒಳಗಾದರು. ಈ ನಿಟ್ಟಿನಲ್ಲಿ ಈ ಹಿಂದೆಯೇ ಉತ್ತಮ ಕೆಲಸ ಮಾಡಿದ್ದ ರಡಿದಾಳ ಮಂಜಪ್ಪನವರನ್ನು ದೇವೇಗೌಡರು ನೆನೆಯಲು ಮರೆಯಲಿಲ್ಲ.

ಭಾರತದ ಅವನತಿಗೆ ಜಾತೀಯತೆ, ಮತೀಯ ಭಾವನೆ ಎಂಬುದನ್ನು ದೇವೇಗೌಡರು ಕಂಡುಕೊಂಡಿದ್ದರು. ದುಸ್ಥಿತಿಯಲ್ಲಿರುವ ಬಡವರನ್ನು ಮೇಲೆತ್ತುವುದು ಸರ್ಕಾರದ ಕರ್ತವ್ಯವೆಂದು ಒತ್ತಿ ಹೇಳಿದರು. ಜಾತೀಯತೆ ಹಾಗೂ ಬಡವರ ದುಸ್ಥಿತಿ ಎರಡೂ ಹೋಗಬೇಕು ಎಂಬುದು ಅವರ ನಿಲುವು ಜಾತೀಯತೆಯನ್ನು ಹೋಗಲಾಡಿಸದೆ ಅತಿ ಮಾಡಿ ಸಮಾಜದ ಪ್ರಗತಿಯನ್ನು ಕುಂಠಿತಗೊಳಿಸಲಾಗಿದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿದರು. ದೇವರಾಜ ಅರಸರು ಮೈಸೂರು ಮಹಾರಾಜರ ಅರಮನೆಗಳನ್ನು ಸರ್ಕಾರ ನಿರ್ವಹಿಸುತ್ತಾ ಬಂದಿದ್ದರೂ ಅವನ್ನು ರಾಜರಿಗೆ ಕೊಡುವಲ್ಲಿ ಯತ್ನಿಸುತ್ತಿದ್ದಾರೆಂದು ವಿರೋಧ ಪಕ್ಷದ ನಾಯಕರಾಗಿದ್ದಾಗ ದೇವೇಗೌಡರು ಎಚ್ಚರಿಸಿದರು. ಯಾರ ವಶದಲ್ಲಿ ಈ ಆಸ್ತಿ ಇದೆಯೋ ಅದನ್ನು ಮಾರಾಟ ಮಾಡುವುದಕ್ಕೆ ಅವರಿಗೆ ಹಕ್ಕಿಲ್ಲ ಹಾಗೂ ಅದನ್ನು ಕೊಂಡುಕೊಳ್ಳುವ ಹಕ್ಕೂ ಸರ್ಕಾರಕ್ಕೆ ಇಲ್ಲ ಎಂಬುದನ್ನು ಗಮನಕ್ಕೆ ತಂದರು. ವಿರೋಧ ಪಕ್ಷದ ಸಮರ್ಥ ನಾಯಕರೆನಿಸಿದರು.

೧೯೭೫ ರ ಜೂನ್ ನಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಹಲವರು ನಾಯಕರು ಬಂದಿತರಾದರು. ಆ ಪೈಕಿ ದೇವೇಗೌಡರೂ ಒಬ್ಬರು. ಇದರಿಂದ ಇಂದಿರಾ ಗುಂಪಿನವರೇ ಆಗಿದ್ದ ಚಂದ್ರಶೇಖರ್ ಸಿಡಿದೆದ್ದು ಹೊರಬಂದು ಜಯಪ್ರಕಾಶ್ ನಾರಾಯಣರೊಂದಿಗೆ ಸೇರಿಕೊಂಡರು. ಅವರ ಆದೇಶದ ಮೇರಗೆ ಸಂಸ್ಥಾ ಕಾಂಗ್ರೆಸ್, ಲೋಕದಳ, ಸಮಾಜವಾದಿ ಪಕ್ಷ, ಜನಸಂಘ, ಜಗಜೀವನರಮ್‌ರವರ ಕಾಂಗ್ರೆಸ್, ಸ್ವತಂತ್ರ ಪಕ್ಷ ಇವೇ ಮೊದಲಾದ ಮಿತ್ರ ಪಕ್ಷಗಳು ಸೇರಿ ಜನತಾಪಕ್ಷವನ್ನು ರೂಪಿಸಿದರು. ೧೯೭೭ ರ ಚುನಾವಣೆಗಳಲ್ಲಿ ಕೇಂದ್ರದಲ್ಲಿ ಜನತಾಪಕ್ಷ ಬಹುಮತಗಲಿಸಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸೇತರ ಸರ್ಕಾರ ರಚಿಸಿತು. ಕರ್ನಾಟಕದಲ್ಲಿ ಮೊರಾರ್ಜಿ ದೇಸಾಯಿಯವರು (ಆಗ ಪ್ರಧಾನಿ) ದೇವೇಗೌಡರನ್ನು ಜನತಾಪಕ್ಷದ ಅಧ್ಯಕ್ಷರನ್ನಾಗಿ ಆರಿಸಿದರು. ಜನತಾ ಒಂದು ಪಕ್ಷವಾಗಿರದೆ ಹಲವು ಪಕ್ಷಗಳ ಸಮ್ಮಿಶ್ರವಾಗಿದ್ದಿತು. ದೇವೇಗೌಡರು ಪಕ್ಷದ ಅಧ್ಯಕ್ಷರಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷವನ್ನು ಸಂಘಟಿಸಿದರು. ಆದರೂ ೧೯೭೮ ರ ಮಹಾಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಕರ್ನಾಟಕದಲ್ಲಿ ಜಯಗಳಿಸಿ ದೇವರಾಜ ಅರಸು ಅವರೇ ಪುನ: ಮುಖ್ಯ ಮಂತ್ರಿಗಳಾದರು. ಆಗ ವಿಧಾನಸಭೆಯಲ್ಲಿ ಜನತಾ ಪಕ್ಷದ ಒಬ್ಬರಾದ ಎಸ್.ಆರ್. ಬೊಮ್ಮಾಯಿ ಅವರು ವಿರೋಧಪಕ್ಷದ ನಾಯಕರಾದರು. ಜನತಾಪಕ್ಷ ಕರ್ನಾಟಕದಲ್ಲಿ ಗೆಲುವಿನಿಂದ ಉದಯಿಸಿದ್ದು ೧೯೮೩ ರ ಚುನಾವಣೆಗಳಲ್ಲಿ ಆಗ ಅದು ಬಂಗಾರಪ್ಪನವರ ಕ್ರಾಂತಿರಂಗದೊಂದಿಗೆ ಒಂದಾಗಿ ಗೆಲುವು ಸಾಧಿಸಿತ್ತು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾದರು. ದೇವೇಗೌಡರು ಸಂಯಮತೋರಿ ಅವರ ಸಚಿವರ ಸಂಪುಟದಲ್ಲಿ ಸಚಿವರಾಗಿ ಉಳಿದರು. ಕಾಮಗಾರಿ ಮತ್ತು ನೀರಾವರಿ ಖಾತೆಗಳನ್ನು ವಹಿಸಿಕೊಂಡರು. ಇದು ಅವರಿಗೆ ಪ್ರಿಯವಾದ ಖಾತೆಯೇ ಆಗಿತ್ತು. ತಮ್ಮ ಪಾಲಿಗೆ ಬಂದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

೧೯೮೫ ರಲ್ಲಿ (ಮಾರ್ಚ್) ವಿಧನಸಭೆಗೆ ಚುನಾವಣೆಗಳು ನಡೆದು ಜನತಾ ಪಕ್ಷವೇ ಅಧಿಕಾರಕ್ಕೆ ಬಂದಿತು. ರಾಮಕೃಷ್ಣ ಹೆಗಡೆಯವರೇ ಪುನ: ಮುಖ್ಯಮಂತ್ರಿಗಳಾದರು. ಮತ್ತೆ ದೇವೇಗೌಡರಿಗೆ ಕಾಮಗಾರಿ-ನೀರಾವರಿ ಖಾತೆ ಲಭಿಸಿತು. ಆದರೆ ಹೆಗಡೆಯವರು ೧೯೮೮ ರಲ್ಲಿ ಕೆಲವು ವಿವಾದಗಳ ನಡುವೆ ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡಿದರು. ಇವುಗಳಲ್ಲಿ ಟೆಲಿಫೋನ್ ಕದ್ದಾಲಿಕೆ ಪ್ರಕರಣವೂ ಒಂದು. ಆದರೆ ಟೆಲಿಫೋನ್ ಕದ್ದಾಲಿಕೆ ಎಲ್ಲ ಕಾಲಕ್ಕೂ ಇರುವುದೇ. ಅಲ್ಲದೆ ಹೆಗಡೆ ವಿರುದ್ಧ ಭಿನ್ನಮತೀಯರ ತೀವ್ರ ಚಟುವಟಿಕೆಗಳು ಬೆಳೆದಿದ್ದವು. ಹೆಗಡೆ ರಾಜಿನಾಮೆ ನಂತರ ಆ ಸ್ಥಾನಕ್ಕೆ ದೇವೇಗೌಡ ಮತ್ತು ಬೊಮ್ಮಾಯಿ ಸ್ಪರ್ಧಿಸಿದರು. ಕೇಂದ್ರದ ವೀಕ್ಷಕರಾದ ಚಿಮನ್‌ಬಾಯ ಪಟೇಲ್ ನೇತೃತ್ವದಲ್ಲಿ ಮತದಾನ ನಡೆದು ಬೊಮ್ಮಾಯಿ ಮುಖ್ಯಮಂತ್ರಿಗಳಾದರು. ಇದೂ ಬಹುಕಲ ಉಳಿಯಲಿಲ್ಲ. ದೇಶದಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದಿತು. ರಾಜೀವ್‌ಗಾಂಧಿಯವರು ಪ್ರಧಾನಿ, ಬೊಮ್ಮಾಯಿ ಸಂಪುಟದಲ್ಲಿ ದೇವೇಗೌಡರು ಮಂತ್ರಿಗಳಾಗಿ ಮುಂದುವರೆದು, ಕೇಂದ್ರದಲ್ಲಿ ಚಂದ್ರಶೇಖರ್ ೧೯೮೮ ರ ವೇಳೆಗೆ ಜನತಾಪಕ್ಷದ ಅಧ್ಯಕ್ಷಸ್ಥಾನ ತ್ಯಜಿಸಿದರು. ಆ ಸ್ಥಾನಕ್ಕೆ ಚರಣಸಿಂಹರ ಮಗ ಅಜಿತ್ ಸಿಂಗರನ್ನು ಕೂರಿಸಿದರು. ಆಗಲೇ ಜನತಾಪಕ್ಷದ ಒಡಕಿಗೆ ಆರಂಭವಾಯಿತೆನ್ನಬಹುದು. ಚಂದ್ರಶೇಖರ್ ಅಜಿತ್ ಸಿಂಗ್‌ರ ಗುಂಪಿನಿಂದ ಸಮಾಜವಾದಿ ಜನತಾದಳ ಆಗಬೇಕೆಂದು ಆಶಿಸಿದರು. ಇವೆಲ್ಲದರ ನಡುವೆ ಜನತಾದಳ ಎಂಬ ಹೊಸ ಪಕ್ಷ ಉದಯವಾಯಿತು. ೧೯೮೯ ರ ಜನವರಿ ೨೫ ರಂದು ಕರ್ನಾಟಕದಲ್ಲಿ ಜನತಾಪಕ್ಷ ಜನತಾದಳ ಎರಡು ಪಕ್ಷಗಳಾದವು ಬೊಮ್ಮಾಯಿ ಜನತಾದಳದಲ್ಲಿದ್ದರು.

೧೯೮೯ ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ವೀರೇಂದ್ರಪಾಟೀಲ್‌ರ ನೇತೃತ್ವದ ಕಾಂಗ್ರೆಸ್ ವಿಜಯ ಸಾಧಿಸಿತು. ಜನತಾದಳ ಬಹುಮತ ಪಡೆಯಲಿಲ್ಲ. ಜನತಾಪಕ್ಷಕ್ಕೆ ದಯನೀಯ ಸೋಲುಂಟಾಗಿತ್ತು. ಇದರಿಂದಾಗಿ ಹೆಗಡೆ ಬಣವಾಗಲಿ ದೇವೇಗೌಡರ ಬಣವಾಗಲಿ ಅಧಿಕಾರಕ್ಕೆ ಬರಲಿಲ್ಲ. ದೇವೇಗೌಡರಿಗೂ ಇದು ಪ್ರಥಮ ಬಾರಿಗೆ ಆದ ಸೋಲು. ವಿರೇಂದ್ರಪಾಟೀಲರು ಕಾಂಗ್ರೆಸ್ (ಐ) ಪಕ್ಷ ನಾಯಕರಾಗಿ ಮುಖ್ಯಮಂತ್ರಿಗಳಾಗಿ ವಚನ ಪ್ರಮಾಣ ಸ್ವೀಕರಿಸಿದರು. ದೇವೇಗೌಡರು ಎಂದೂ ದೃತಿಗಡೆ‌ಉವವರಲ್ಲ. ಮತ್ತೆ ಜನತಾ ಪಕ್ಷವನ್ನು ಕಟ್ಟಿ ಸ್ಥಾಣ ಕಲ್ಪಿಸುವ ಸಂಕಲ್ಪ ಮಾಡಿದರು. ಕೇಂದ್ರದಲ್ಲಿ ಜನತಾದಳ ಅಧಿಕಾರಕ್ಕೆ ಬಂದು ವಿ.ಪಿ.ಸಿಂಗ್ ಪ್ರಧಾನಿಗಳಾದರು. ಆದರೆ ಅವರು ಬಿ.ಪಿ. ಮಂಡಲ ವರದಿ ಜಾರಿಗೆ ತಂದ ಹಿನ್ನೆಲೆಯಲ್ಲಿ ಉಂಟಾದ ಅಶಾಂತಿಯಿಂದಾಗಿ ಚಂದ್ರಶೇಖರ್‌ರವರ ಬೆಂಬಲ ಸಿಗದ ಕಾರಣ ರಾಜಿನಾಮೆ ನೀಡಬೇಕಾಯಿತು. ಸಮಾಜವಾದಿ ಜನತಾದಳ ಪಕ್ಷದ ನಾಯಕ ಚಂದ್ರಶೇಖರ್ ಪ್ರಧಾನಿಯಾದರು. ಆದರೆ ರಾಜೀವಗಾಂಧಿಯವರು ಸರ್ಕಾರ ರಚಿಸುವ ಯತ್ನದಲ್ಲಿರುವ ಸನ್ನಾಹ ತಿಳಿದು ಪ್ರಧಾನಿ ಪದವಿಗೆ ರಜೀನಾಮೆ ನೀಡಿದರೆ ಚಂದ್ರಶೇಖರ್ ಅವರು ರಾಜೀವಗಾಂದಿಯವರ ಕಾಂಗೈ ಬೆಂಬಲ ಪಡೆದೇ ಸರ್ಕಾರ ರಚಿಸಿದ್ದರು.

೧೯೯೧ ರ ಮೇ ತಿಂಗಳಿನಲ್ಲಿ ಲೋಕಸಭೆಗೆ ಚುನಾವಣೆಗಳು ನಡೆದು ರಾಮಕೃಷ್ಣ ಹೆಗಡೆ, ದೇವೇಗೌಡರು ಸ್ಪರ್ಧಿಸಿದರು. ಹಾಸನದ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸಮಾಜವಾದಿ ಜನತಾದಳ ಅಭ್ಯರ್ಥಿಯಾಗಿ ದೇವೇಗೌಡರು ನಿಂತು ಜಯಗಳಿಸಿದರು. ಆದರೆ ಜನತಾದಳ ಅಭ್ಯರ್ಥಿ ಹೆಗಡೆಯವರಿಗೆ ಹೆಚ್ಚು ಮತಗಳು ಬರದಕಾರಣ ಸೋಲನ್ನನುಭವಿಸಬೇಕಾಯಿತು.

ದೇವೇಗೌಡರು ಇದೇ ಪ್ರಥಮ ಬಾರಿಗೆ ರಾಷ್ಟ್ರ ರಾಜಕಾರಣದಲ್ಲಿ ಪ್ರವೇಶಿಸಿದುದು. ಯಾವ ಸ್ಥಾನದಲ್ಲೇ ಇರಲಿ ಅವರಿಗೆ ರೈತರ ಬಗ್ಗೆ ಕಾಳಜಿ ಕೃಷಿಪರ ಚಟುವಟಿಕೆಗಳಿಗೆ ಗಮನ ಹರಿಸಿದರು.

ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾಗಿ ಬೊಮ್ಮಾಯಿಯವರು ಇದ್ದರೆ ಕರ್ನಾಟಕ ರಾಜ್ಯ ಜನತಾದಳದ ಅಧ್ಯಕ್ಷರಾಗಿ ಜೆ.ಎಚ್.ಪಟೇಲರು ಇದ್ದರು. ಜೆ.ಎಚ್.ಪಟೇಲರು, ರಾಮಕೃಷ್ಣ ಹೆಗಡೆಯವರ ಜನತಾ ಸರ್ಕಾರದ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿಯೂ ಲೋಕಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿ ಅಪಾರ ಅನುಭವ ಗಳಿಸಿದವರು. ರಾಜ್ಯದಲ್ಲಿ ಜನತಾದಳ ಉತ್ಕರ್ಷಕ್ಕೆ ಬರದ ಕಾರಣ, ಜತನಾದಳ ಹಾಗೂ ಸಮಾಜವಾದಿ ಜನತಾದಳಗಳ ವಿಲೀನ ಅಗತ್ಯ ಎಂದು ನಿರುಫಿಸಿ ಜನತಾದಳವನ್ನು ಬೆಳೆಸುವುದು ಕರ್ತವ್ಯವಾಗಿದೆ ಎಂದು ಹೇಳಿದರು. ಪುನ: ರಾಜ್ಯದ ಎಲ್ಲ ನಾಯಕರೂ ಒಂದಾಗುವ ಸನ್ನಿವೇಶ ಒದಗಿತು. ೧೯೯೩ ರ ಆಗಸ್ಟ್ ಒಂಬತ್ತರಂದು ಜನತಾದಳ ಮತ್ತು ಸಮಾಜವಾದಿ ಜನತಾದಳ ಪಕ್ಷಗಳ ವಿಲೀನವಾಗಿ ವಿಲೀನ ಪಕ್ಷದ ಅಧ್ಯಕ್ಷರಾಗಿ ದೇವೇತಗೌಡರೇ ಆಯ್ಕೆಯಾದರು. ರಾಮಕೃಷ್ಣ ಹೆಗಡೆಯವರೂ ಬೆಂಬಲಿಸಿದರು. ಈ ಏಕೀಕೃತ ಪಕ್ಷವನ್ನು ಬಲಪಡಿಸಲು ಎಲ್ಲರೂ ಸಂಕಲ್ಪ ತೊಟ್ಟು ಶ್ರಮಿಸಲು ಮುಂದಾದರು. ದೇವೇಗೌಡರು ರಾಷ್ಟ್ರ ರಾಜಕಾರಣದಲ್ಲಿ ಪ್ರವೇಶಿಸಿದ್ದರೂ ರಾಜ್ಯ ರಾಜಕಾರಣದಲ್ಲಿ ಪುನ: ಕೆಲಸ ಮಾಡಲು ಅವಕಾಶವಾಯಿತು.

೧೪೪೮ ರಲ್ಲಿ ವಿಧಾನಸಭಾ ಚುನಾವಣೆಗಳು ನಡೆದವು. ದೇವೇಗೌಡರು ಚುನಾವಣೆಯಲ್ಲಿ ಜನತಾದಳ ಪಕ್ಷದ ಗೆಲುವಿಗಾಗಿ ಹಗಲೂ ರಾತ್ರಿ ಎಂಬಂತೆ ಶ್ರಮಿಸಿದರು. ಪುಣ್ಯವಶಾತ್ ೧೧೬ ಸ್ಥಾನಗಳು ಜನತಾದಳಕ್ಕೆ ಲಭಿಸಿ ಸರ್ಕಾರ ರಚಿಸುವಷ್ಟು ಬಹುಮತದ ಪಕ್ಷವಾಗಿ ಜನತಾದಳ ರೂಪುಗೊಂಡಿತ್ತು.

ಕರ್ನಾಟಕ ಮುಖ್ಯಮಂತ್ರಿಗಳಾಗಿ ದೇವೇಗೌಡರು ಆಯ್ಕೆಯಾದರು. ವೀಕ್ಷಕರಾಗಿ ಒರಿಸ್ಸಾದ ಮುಖ್ಯಮಂತ್ರಿ ಬಿಜುಪಾಟ್ನಾಯಕ್ ಹಾಗೂ ತಮಿಳುನಾಡಿನ ಪಕ್ಷದ ಹಿರಿಯ ಮುಖಂಡ ಇರಾಚೆಳಿಯನ್ ಬಂದಿದ್ದರು. ೧೯೯೪ ರ ಡಿಸೆಂಬರ್ ಹನ್ನೊಂದರಂದು ದೇವೇಗೌಡರು ಕರ್ನಾಟಕದ ಹದಿನಾಲ್ಕನೇ ಮುಖ್ಯಮಂತ್ರಿಗಳಾಗಿ ರಾಜ್ಯಪಲ ಖುರ್ಷಿದಾ‌ಅಲಂಖಾನ್ ಅವರ ನೇತೃತ್ವದಲ್ಲಿ ವಚನ ಸ್ವೀಕರಿಸಿದರು. ಸುಭದ್ರ, ಸ್ವಚ್ಛ, ಉತ್ತಮ ಸರಕಾರ ಕೊಡುವ ಆತ್ಮವಿಶ್ವಾಸವನ್ನು ಪ್ರಕಟಿಸಿದರು. ಅನುಭವಿ ರಾಜಕಾರಣಿಗಳೂ, ದಕ್ಷ ಸಂಘಟಕ್ಕೂ ಆಗಿದ್ದ ದೇವೇಗೌಡರು ಶಾಸನ ಸಭೆಯಲ್ಲಿ ಮೂವತ್ತು ವರ್ಷಗಳ ಕಾಲ ಕೆಲಸ ಮಾಡಿದವರು ಎಸ್. ನಿಜಲಿಂಗಪ್ಪನವರು. ದೇವೇಗ್ವಡರು ಈ ನಾಡಿನ ಮಣ್ಣಿನಮಗ ಅವರು ನಾಡಿನ ಮುಖ್ಯರಾಗಿ ಆಡಳಿತ ಚುಕ್ಕಾಣಿ ಹಿಡಿದಿರುವುದು ನನಗೆ ಸಂತಸ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ದೇವೇಗೌಡರ ಆಡಳಿತಾವಧಿಯಲ್ಲಿ ಎಲ್ಲ ನೀರಾವರಿ ಕಾಮಗಾರಿಗಳು ನಾಲ್ಕೈದು ವರ್ಷಗಳಲ್ಲಿ, ಪೂಣ್‌ಗೊಳ್ಳಬೇಕು ಎಂದು ಆಶಿಸಿದರು.

ದೇವೇಗೌಡರು ರಾಜ್ಯದ ರಾಜಕಾರಣ ಪ್ರವೇಶಿಸಿದ ಕಾರಣ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದರು. ಸಿ.ಎಂ. ಇಬ್ರಾಹಿಂ ಅವರಿಗೆ ರಾಜ್ಯದ ಜನತಾದಳದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಟ್ಟರು. ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ತತ್ವವನ್ನು ನಿರೂಪಿಸಿದರು.

ದೇವೇಗೌಡರು ಕೇಂದ್ರದ ಆರ್ಥಿಕ ನೀತಿಯು ದ್ವಂದ್ವದಿಂದ ಕೂಡಿರುವುದನ್ನು ಕೇಂದ್ರಕ್ಕೆ ಮನವರಿಕೆ ಮಾಡಿ ಮುಕ್ತ ಆರ್ಥಿಕ ನೀತಿ (ಉದಾರೀಕರಣ) ಯಿಂದ ದೇಶದ ಹಳ್ಳಿಗಾಡಿನ ರೈತರು, ಬಡವರ್ಗದ ಜನರು ತುಂಬ ಕಷ್ಟ ಅನುಭವಿಸಬೇಕಾಗಿದೆ ಎಂದು ಹೇಳಿದರು. ರಸಗೊಬ್ಬರದ ಬೆಲೆಯನ್ನು ತುಂಬಾ ಹೆಚ್ಚಿಸಿರುವುದು. ಸಬ್ಸಿಡಿ ರದ್ದು ಮಾಡಲು ಹೊರಟಿರುವುದು ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಆಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದರು. ಭಾರತ ಸರ್ಕಾರ ೧೯೯೧ ರಿಂದ ಉದಾರೀಕರಣ ನೀತಿಯನ್ನು ಕೈಗೊಂಡಿತ್ತು.

ದೇವೇಗೌಡರು ಮುಖ್ಯಮಂತ್ರಿಯಾದ ಸುಮಾರು ಒಂದೂವರೆ ತಿಂಗಳಿಗೆ ಗಣರಾಜ್ಯದಿನ ಆಚರಿಸುವ ಅವಕಾಶ ಬಂದಿತು. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಸಮಾರಂಭ ನಡೆಯಬೇಕಿತ್ತು. ಆದರೆ ಗಣರಾಜ್ಯದಿನ ಮತ್ತು ಸ್ವಾತಂತ್ರ್ಯ ದಿನಾಚರಣೆಗಳು ಬಂತೆಂದರೆ ಹುಬ್ಬಳ್ಳಿಯ ಜನ ಭಯಚಕಿತರಾಗುತ್ತಿದ್ದರು. ಅದೊಂದು ವಿವಾದದ ನೆಲೆಯಾಗಿತ್ತು. ಮತೀಯ ಗಲಭೆಗೆ ಅವಕಾಶ ಉಂಟಾಗುತ್ತಿತ್ತು. ಕಾರಣ ಭಾರತೀಯ ಜನತಾಪಕ್ಷ ಅಲ್ಲಿ ರಾಷ್ಟ್ರಧ್ವಜ ಹಾರಿಸಬೆಕೆಂಬ ಸಂಕಲ್ಪ ಹೊತ್ತಿತ್ತು. ಇದರಿಂದ ರಾಜಕೀಯ ಲಾಭ ಪಡೆಯುವುದೇ ಉದ್ದೇಶ ಎನ್ನಬಹುದು. ೧೯೯೫ ರ ಜನವರಿ ೨೬ ರಂದು ಬೆಳಿಗ್ಗೆ ೬.೧೫ಕ್ಕೆ ಪೋಲೀಸರ ಕಾವಲಿನ ನಡುವೆ ಅಂಜುಮಾನ್ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷರು ರಾಷ್ಟ್ರಧ್ಯಕ್ಷರು ರಾಷ್ಟ್ರಧ್ವಜ ಹಾರಿಸಿಯೇ ಬಿಟ್ಟರು. ಹುಬ್ಬಳ್ಳಿಯ ಹಲವರು ಗಣ್ಯರು ಈ ಕಾಯ್ ಕ್ರಮದಲ್ಲಿ ಪಾಲ್ಗೊಂಡಿದ್ದರು. ಲೋಕಸಭಾ ಸದಸ್ಯ ಬಿ.ಎಂ. ಮುಜಾಹಿದ್ ಮೊದಲಾದವರು ಇದ್ದರು. ಅಂದಿನಿಂದ ಭಾರತೀಯ ಜನತಾಪಕ್ಷವು ಧ್ವಜಾರೋಹಣ ಹೋರಾಟಕ್ಕೆ ಮಂಗಳ ಹಾಡಿದರು. ಇದರಿಂದ ದೇವೇಗೌಡರ ಸರ್ಕಾರ ಅಲ್ಪ ಸಂಖ್ಯಾತರ ರಕ್ಷಕ ಎಂಬುದೂ ರುಜುವಾತಾಯಿತು. ಮುಖ್ಯಮಂತ್ರಿಗಳಾಗಿ ದೇವೇಗೌಡರಿಗೂ ತೃಪ್ತಿ ತಂದಿತು. ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಮಾಜ ಘಾತಕಶಕ್ತಿಗಳನ್ನು ತೊಡೆದು ಹಾಕುವುದರಲ್ಲಿ ಯತ್ನಿಸಬೇಕಷ್ಟೇ.

ದೇವೇತಗೌಡರು ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯ ಕೃಷಿ ನೀತಿಯನ್ನು ಬದಲಾಯಿಸಲು ಸಂಕಲ್ಪ ಮಾಡಿದರು. ಕೃಷಿ ಕ್ಷೇತ್ರಕ್ಕೆ ಹೆಚ್ಚು ಗಮನಹರಿಸಬೇಕಾದುದು ಅವಶ್ಯಕ ಎಂಬುದನ್ನು ಮನಗಂಡು ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರವು ರಾಜ್ಯಕ್ಕೆ ಬಿಡುಗಡೆ ಮಾಡುವ ಹಣವನ್ನು ಹೆಚ್ಚಿಸಬೆಕೆಂದು ಒತ್ತಾಯ ತಂದರು. ರಸಗೊಬ್ಬರದ ಮೇಲಿನ ರಿಯಾಯಿತಿಯನ್ನು ಅಪಾರವಾಗಿ ಹೆಚ್ಚಿಸಿ ರೈತರಿಗೆ ನೆರವಾದರು. ಸಮತೋಲನ ಗೊಬ್ಬರದ ಬಳಕೆಯಿಂದ ಉತ್ಪಾದನೆ ಹೆಚ್ಚಲು ಇದರಿಂದ ಸಾಧ್ಯವಾಯಿತು.

ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ವಿದೇಶಿ ಹಾಗೂ ಸವದೇಶಿ ಬಂಡವಾಳ ಹೂಡಿಕೆಯನ್ನು ಸ್ವಾಗತಿಸಿದರು. ಕೆಲವು ಬೃಹತ್ ಪ್ರಮಾಣದ ಯೋಜನೆಗಳಿಗೆ ಅವಕಾಶ ಕಲ್ಪಸಿದರು. ಉದಾ: ಜಿಂದಾಲ್ ವಿಜಯನಗರ ಉಕ್ಕು, ಕೊಜೆಂಟ್ರಿಕ್ಸ್ ಸಂಸ್ಥೆ ಜತೆ ಮಂಗಳೂರಿನಲ್ಲಿ ೧೦೦೦ ಮೆಗಾವಾಟ್ ವಿದ್ಯುಚ್ಛಕ್ತಿ ಉತ್ಪಾದನೆಗೆ ಒಪ್ಪಂದ ಮೊದಲಾದವು. ವಿದ್ಯುತ್‌ಚ್ಛಕ್ತಿ ಕೊರತೆ ನೀಗಿಸಲು ರಾಯಚೂರು ಶಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಐದು ಮತ್ತು ಆರನೆಯ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹಿಸಿದರು. ಬೆಂಗಳೂರು ನಗರದಲ್ಲಿ ಸಿರಸಿ ವೃತ್ತದಿಂದ ಮಹಾನಗರಪಾಲಿಕೆವರೆಗೆ ಫ್ಲೈ‌ಓವರ್ ರಸ್ತೆ ನಿರ್ಮಾಣಕ್ಕಾಗಿ ಯೋಜನೆ ರೂಪಿಸಿ ಅದು ಕಾರ್ಯಗತವಾಗಲು ಶ್ರಮಿಸಿದರು. ಕೃಷ್ಣಾ ಮೇಲ್ದಂಡೆ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದಲೂ ಭದ್ರಾ ಮೇಲ್ದಂಡೆ ಯೋಜನೆಗೂ ಆಡಳಿತಾತ್ಮಕ ಮಂಜೂರಾತಿ ಕಲ್ಪಿಸಿದರು. ಕರ್ನಾಟಕದಲ್ಲಿ ಹುಟ್ಟು ಬೆಳೆದವರೆಲ್ಲ ಕನ್ನಡಿಗರು. ಅವರು ತಮಿಳರಿಲಿ, ತೆಲುಗರಿರಲಿ ಇಲ್ಲಿ ಹುಟ್ಟಿ ಬೆಳೆದವರಿಗೆ ಉದ್ಯೋಗ ಕೊಡಿ ಎಂದು ದೇವೇಗೌಡರು ವಾದಿಸಿದರು. ಒಂದು ಹಂತದಲ್ಲಿ ದೇವೇಗೌಡರು ಇನ್ನು ಮುಂದೆ ಉದ್ಯೋಗ ನೀಡುವಲ್ಲಿ ಕರ್ನಾಟಕದವರನ್ನೇ ಆಯ್ಕೆ ಮಾಡುವಂತೆ ಉದ್ಯಮಿಗಳಿಗೆ ಷರತ್ತು ಹಾಕಲು ಉದ್ದೇಶಿಸಿದೆ. ಈ ವಿಚಾರದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದರು.

ಅಬಕಾರಿ ಬಾಕಿ ವಸೂಲಿಗೆ ಸಂಬಂಧಿಸಿದ ಪ್ರಕರಣಗಳನ್ನು ಸಿವಿಲ್ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಿಂದ ಹೊರತುಪಡಿಸುವ ನಿರ್ಧಾರ ಕೈಗೊಂಡು ಅಬಕಾರಿ ಅಧಿನಿಯಮದ ತಿದ್ದುಪಡಿಗೆ ರಾಷ್ಟ್ರಪತಿ ಒಪ್ಪಿಗೆ ದೊರಕುವಂತೆ ಮಾಡಿದುದರಿಂದ ನ್ಯಾಯಾಲಯಗಳು ಮಧ್ಯೆ ಪ್ರವೇಶ ಮಾಡುವುದನ್ನು ತಡೆಯುವಂತಾಯಿತು. ಅಬಕಾರಿ ಇಲಾಖೆಯಲ್ಲಿಯೇ ಒಟ್ಟು ಸಿವಿಲ ನ್ಯಾಯಾಧೀಶರನ್ನು ನೇಮಿಸಲಾಯಿತು.

ಎಲ್ಲ ಗ್ರಾಮಗಳಿಗೂ ಕುಡಿಯುವ ನೀರಿನ ಸೌಲಭ್ಯ ಅಂಗವಿಕಲರಿಗೆ ಸ್ವಯಂ ಉದ್ಯೋಗ ಒದಗಿಸುವ ಸಲುವಾಗಿ ಆಧಾರ ಯೋಜನೆ, ಬಡವರಿಗಾಗಿ ಆರೋಗ್ಯ ನಿಧಿ ಯೋಜನೆ, ಅಶಕ್ತ ಮಹಿಳೆಯರಿಗೆ ಸ್ವಶಕ್ತಿ ಕಾರ್ಯಕ್ರಮ ಇವು ಮುಖ್ಯಮಂತ್ರಿಗಳಾಗಿ ದೇವೇಗೌಡರು ನಿರೂಪಿಸಿದ ಯೋಜನೆಗಳು ಜಿಲ್ಲೆಗೊಂದು ಮೊರಾರ್ಜಿ ವಸತಿ ಶಾಲೆ ಸ್ಥಾಪಿಸಲೂ ಮುಂದಾದರು. ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿಸಿದಲ್ಲದೆ ಬಡವರಿಗೆ ಅಗ್ಗದ ದರದಲ್ಲಿ ಅಕ್ಕಿ ನೀಡುವ ಪ್ರಯತ್ನ ಮಾಡಿದರು. ಲೇಖಕಿಯರಿಗೆ ಪ್ರೋತ್ಸಾಹ ನೀಡಲು ಅತ್ತಿಮಬ್ಬೆ ಪ್ರಶಸ್ತಿ‌ಅ ಸ್ಥಾಪಿಸಿದರು. ಈಗಾಗಲೇ ಟಿ. ಸುನಂದಮ್ಮ, ವೈದೇಹಿ, ಕಮಲಾಹಂಪನಾ ಈ ಕೆಲವು ಲೇಖಕಿಯವರು ಈ ಪ್ರಶಸ್ತಿ ಪಡೆದಿದ್ದಾರೆ.

ಅಧಿಕಾರ ವಿಕೇಂದ್ರಿಕರಣದ ಪ್ರಬಲ ಪ್ರತಿಪಾದಕ ಪಕ್ಷ ಜನತಾದಳ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿ ಅಧಿಕಾರ ವಿಕೇಂದ್ರೀಕರಣ ನೀತಿ ತಂದು ಮಂಡಲ ಪಂಚಾಯಿತಿ ಮತ್ತು ಜಿಲ್ಲಾ ಪರಿಷತ್ತುಗಳಿಗೆ ಅಧಿಕಾರ ನೀಡುವಲ್ಲಿ ಶ್ರಮಿಸಿದ್ದರು. ತಾವು ಅಧಿಕಾರಕ್ಕೆ ಬಂದ ಆರಂಭದಲ್ಲೇ ಮಂಡಲ ಪಂಚಾಯಿತಿ ಮತ್ತು ಜಿಲ್ಲಾ ಪರಿಷತ್ತುಗಳಿಗೆ ಚುನಾವಣೆ ನಡೆಸಿದರು. ಫಲಿತಾಂಶ ಸ್ವಾಗತಾರ್ಹವಾಯಿತು.

ದೇವೇಗೌಡರು ಅಪರಾಧಗಳ ಮೂಲಸ್ಥನವೆನ್ನಬಹುದಾದ ಕ್ಯಾಬರೆ, ವಿಡಿಯೋ ಗೇಮ್ಸ್ ಮೊದಲಾದ ಸಮಾಜಘಾತಕ ಚಟುವಟಿಕೆಗಳಿಗೆ ನಿಷೇಧ ತಂದರು. ತಮ್ಮ ಜನತಾದರ್ಶನ ಕಾಂiiಕ್ರಮದಿಂದ ದೇವೇಗೌಡರು ಜನರ ಸಮಸ್ಯೆಗಳನ್ನು ತಿಳಿದು ಸಾಧ್ಯವಿದ್ದಷ್ಟೂ ಪರಿಹರಿಸಲು ಮುಂದಾದರು. ಇದರ ಫಲವೇ ಜಿಲ್ಲಾಧಿಕಾರಿಗಳು ಜನಸಂಪರ್ಕ ಸಭೆಯನ್ನು ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ನಡೆಸುವ ಏರ್ಪಾಟು. ಈ ಸಭೆಗಳಲ್ಲಿ ಜಿಲ್ಲಾ ಉಸ್ತುವಾರಿಮಂತ್ರಿ, ಶಾಸಕ, ಜಿಲ್ಲಾಧಿಕಾರಿ, ತಹಶೀಲ್ದಾರ, ಕಂದಾಯ ಪರಿವೀಕ್ಷಕ, ಗ್ರಾಮಲೆಕ್ಕಿಗ ಇವರೆಲ್ಲ ಭಾಗವಹಿಸಲು ಆದೇಶ ನೀಡಲಾಯಿತು. ಇದರಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಆಡಳಿತ ವರ್ಗ ಸ್ಪಂದಿಸಿ ಪರಿಹಾರ ನೀಡುವಲ್ಲಿ ಮುಂದಾಗಲು ಸಾಧ್ಯವಾಯಿತು. ಪ್ರಜಾಪ್ರಭುತ್ವದ ಬೇರುಗಳೂ ಬಲಗೊಳ್ಳುವಂತಾಯಿತು.

೧೯೯೭ ಏಪ್ರಿಲ್ ೨೭ ಮತ್ತು ಮೇ ೨ ರಂದು ಹನ್ನೊಂದನೇ ಲೋಕಸಭಾ ಚುನಾವಣೆಗಳು ನಡೆಯುವುದೆಂದು ಚುನಾವಣಾ ಆಯೋಗ ಘೋಷಿಸಿತು. ಲೋಕಸಭಾ ಚುನಾವಣೆಗಳಲ್ಲಿ ಜನತಾದಳ ಪಕ್ಷ ಹದಿನಾರು ಸ್ಥಾನಗಳನ್ನು ಗಳಿಸಿತು. ಇದರಲ್ಲಿ ಮುಖ್ಯಮಂತ್ರಿಗಳಾಗಿ ಗೌಡರ ಪಾತ್ರ ಹಿರಿದಾದುದಾಗಿತ್ತು. ಈ ಚುನಾವಣೆ ಒಂದು ಹೊಸ ತಿರುವನ್ನೇ ತಂದಿತು. ಯಾವುದೇ ಪಕ್ಷ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಯಿತು. ಮೊದಲಿಗೆ ಅಟಲ್ ಬಿಹಾರಿ ವಾಜಪೇಯಿಯವರು ಭಾರತೀಯ ಜನತಾ ಪಕ್ಷ ಸರ್ಕಾರವನ್ನು ರಚಿಸಿದರಾದರೂ ಅವರು ಹದಿಮೂರು ದಿನಗಳ ಕಾಲ ಆಡಳಿತ ನಡೆಸಿ ವಿಶ್ವಾಸಮತ ನಿರ್ಣಯ ಸಮಯದಲ್ಲಿ ಬಹುಮತ ಸಾಬೀತುಪಡಿಸಲಾರದೆ ರಾಜೀನಾಮೆ ನೀಡಿದರು. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯ ಸ್ಥಾಪನೆಗೆ ಅಂದಿನ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಮುಂದಾದರು, ತೃತೀಯ ಶಕ್ತಿಗಳೆಲ್ಲ ಒಂದುಗೂಡಿ ಸಂಯುಕ್ತ ರಂಗದ ಸ್ಥಾಪನೆಯಾಯಿತು. ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಮಾರ್ಗದರ್ಶಕರಾದರು ಆಂದ್ರದ ಮುಖ್ಯಮಂತ್ರಿ ತಮಿಳುನಾಡಿನ ಮುಖ್ಯಮಂತ್ರಿ ಒತ್ತಾಸೆ ತಂದರು. ರಾಷ್ಟ್ರೀಯ ರಂಗ, ಎಡ ಪಕ್ಕಳು, ಪ್ರಾದೇಶಿಕ ಪಕ್ಷಗಳು, ಸ್ವತಂತ್ರ ಸದಸ್ಯರು ಹೀಗೆ ಎಲ್ಲವೂ ಒಂದಾಗಿದ್ದವು. ಸಂಯುಕ್ತರು ಸರ್ಕಾರ ರಚಿಸಲು ಮುಂದಾದಾಗ ಅತ್ಯಂತ ವಿಸ್ಮಯಕಾರಿ ಬೆಳವಣಿಗೆಯಲ್ಲಿ ದೇವೇಗೌಡರು ನಾಯಕತ್ವ ವಹಿಸುವ ಸೌಭಾಗ್ಯ ಒದಿಗಿತು. ಈ ಕಣದಲ್ಲಿ ರಾಮಕೃಷ್ಣ ಹೆಗಡೆಯವರೂ ಒಬ್ಬರಾಗಿದ್ದರು. ಸ್ವತ: ದೇವೇಗೌಡರೂ ತಾನೂ ಪ್ರಧಾನಮಂತ್ರಿಯಾಗುತ್ತೇನೆಂದು ಕನಸಿನಲ್ಲೂ ಸಹ ನಿರೀಕ್ಷಿಸಿರಲಿಲ್ಲ ಎನ್ನಬಹುದು. ಸಂಯುಕ್ತ ರಂಗದ ನಾಯಕರಾಗಿ ದೇವೇಗೌಡರ ನಾಯಕತ್ವದಲ್ಲಿ ಭಾರತಕ್ಕೆ ಸಮ್ಮಿಶ್ರ ಸರ್ಕಾರದ ಸ್ವರೂಪ ಮೊದಲ ಬಾರಿಗೆ ಪ್ರಾಪ್ತವಾದುದು ಗಮನಿಸಬೆಕಾದ ಅಂಶ. ವಿಶ್ವದ ಅತ್ಯಂತ ದೊಡ್ಡ ಪ್ರಜಾಸತ್ತೆಗೆ ಹೆಚ್.ಡಿ. ದೇವೇಗೌಡರು ಕರ್ನಾಟಕದ ಮೊದಲ ಒಡೆಯರಾಗಿ ಇಡೀ ನಾಡನ್ನೇ ಬೆರಗುಗೊಳಿಸಿದರು. ಇದೊಂದು ಐತಿಹಾಸಿಕ ಘಟನೆ ಎನಿಸಿತು. ದಕ್ಷಿಣ ಭಾರತದಿಂದ ಆದ ಪ್ರಧಾನಿಗಳಲ್ಲಿ ದೇವೇಗೌಡರು ಎರಡನೆಯವರು. ಅದುವರೆಗೂ ಒಂದು ರಾಜ್ಯವನ್ನಾಳಿದ ದೇವೇಗೌಡರಿಗೆ ದೇಶವನ್ನಾಳುವ ಅವಕಾಶ ಲಭಿಸಿತು. ಸಂಯುಕ್ತ ರಂಗಕ್ಕೆ ಕಾಂಗೈ ಪಕ್ಷ ಬೆಂಬಲ ನೀಡಿತು. ಆಗ ಅದರ ಅಧ್ಯಕ್ಷ ಸೀತಾರಾಂ ಕೇಸರಿಯವರು.

೧೯೯೬ ರ ಜೂನ್ ಒಂದರಂದು ದೇವೇಗೌಡರು ಭಾರತದ ೧೨ನೆಯ ಪ್ರದಾನಿಯಾಗಿ ಪ್ರಮಾಣದ ವಚನ ಸ್ವೀಕರಿಸಿದರು. ಇದರಿಂದಾಗಿ ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ಅವರು ಬಿಟ್ಟು ಕೊಡಬೇಕಾಯಿತು. ಪ್ರಧಾನಿಯಾಗಿ ದೇವೇಗೌಡರು ದೇಶದ ಅನೇಕ ಸಮಸ್ಯೆಗಳಿಗೆ ಸ್ಪಂಧಿಸಿದರು. ರೈತರ ಏಳಿಗೆಗಾಗಿ ಆಗಲೂ ಶ್ರಮಿಸಿದರು.

ದೇವೇಗೌಡರು ಪ್ರಧಾನಿಯಾಗಿ ಹತ್ತು ತಿಂಗಳು ಕಾಲ ಅಧಿಕಾರದಲ್ಲಿದ್ದರು. ಸೀತಾರಾಮ ಕೇಸರಿಯವರು ತಾವು ನೀಡಿದ ಬೆಂಬಲವನ್ನು ತೆಗೆದುಕೊಂಡ ಕಾರಣ ಅವರು ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು. ರಾಜಕೀಯದಲ್ಲಿ ಪ್ರಾಮಾಣಿಕತೆ ತರಲು, ಬಡವರ ಅಭಿವೃದ್ದಿಗೂ ದೇವೇಗೌಡರು ಶ್ರಮಿಸಿದ್ದರು. ಮುಖ್ಯಮಂತ್ರಿಗಳಾಗಿದ್ದಾಗ ಐ.ಎ.ಎಸ್. ಅಧಿಕಾರಿ ವಾಸುದೇವನ್ ಹಗರಣ, ಮಹಾಚೈತ್ರ ಪಠ್ಯಪುಸ್ತಕವನ್ನು ರದ್ದುಗೊಳಿಸುವ ಬಗೆಗಿನ ಚಳುವಳಿ, ಲೋಕಾಯುಕ್ತಕ್ಕೆ ತಿದ್ದುಪಡಿ ತರುವಲ್ಲಿ ಅಸ್ಥೆ ಎಲ್ಲವನ್ನೂ ತಮ್ಮ ಕುಶಾಗ್ರಮತಿಯಿಂದ ನಿಭಾಯಿಸಿದ್ದರು. ಎಲ್ಲ ಕಾಲದಲ್ಲಿ ಟೀಕೆ ಟಿಪ್ಪಣೆಗಳಿರುವಂಥದೇ ಹೊಸನೀತಿಯನ್ನು ತಂದಾಗ ವಿರೋಧ ಕಂಡುಬರುವುದೂ ಸಹಜ. ಆದರೆ ಛಲಗಾರ ದೇವೇಗೌಡರು ಯಾವುದನ್ನೂ ಎದುರಿಸುವ ಸಾಹಸಿ. ಪ್ರಧಾನಿ ಪಟ್ಟದಿಂದ ಹೊರಬಂದ ಮೇಲೂ ರಾಜ್ಯದ ಹಾಗೂ ದೇಶದ ಹಿತಾಸಕ್ತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವರಲ್ಲದೆ ಎಲ್ಲೇ ಅನ್ಯಾಯ, ಅಕ್ರಮಗಳಾಗಲೀ ಸಂಬಂದಪಟ್ಟವರನ್ನು ಎಚ್ಚರಿಸುವ ಕೆಲಸ ಮಾಡುತ್ತಲಿರುತ್ತಾರೆ.

ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಮಾಡಿದ ಮತ್ತೊಂದು ಸ್ತುತ್ಯಾರ್ಹ ಕೆಲಸವೆಂದರೆ ಭಾರತ ಸರ್ಕಾರದ ಪ್ರಕಟಣ ವಿಭಾಗ ಹೊರತಂದಿರುವ ಗಾಂಧೀಜಿಯವರ ಇಡೀ ಬರಹ, ಭಾಷಣಗಳನ್ನು ಒಳಗೊಂಡ ಕಲೆಕ್ಟ್ ವರ್ಕ್ಸ್ ಆಫ್ ಮಹಾತ್ಮಗಾಂಧಿ ಹೆಸರಿನ ನೂರು ಸಂಪುಟಗಳನ್ನು ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸುವ ಭಾರತೀಯ ವಿದ್ಯಾಭವನದ ಯೋಜನೆಗೆ ಬೆಂಬಲ ನೀಡಿ ಧನಸಹಾಯ ಒದಗಿಸಿದುದಾಗಿದೆ. ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳನ್ನು ಬಿಂಬಿಸುವ ಈ ಕೃತಿಗಳು ಕನ್ನಡಿಗರಿಗೆ ದೊರೆಯುವಂತಾಯಿತು.

೧೯೯೫ ರಲ್ಲಿ ಜುಲೈ ೨೩ ರಂದು ದೇವೇಗೌಡರಿಗೆ ನ್ಯಾಷನಲ್ ಪ್ರೆಸ್ ಇಂಡಿಯಾ ಸಂಸ್ಥೆಯು ಭಾರತ ಸೂರ್ಯ ಪ್ರಶಸ್ತಿಯನ್ನು ದೇವೇಗೌಡರಿಗೆ ನೀಡಿ ಗೌರವಿಸಿತು. ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಪರಿಣಾಮಕಾರಿ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ಸಲ್ಲುತ್ತದೆ.

ಹರದನಹಳ್ಳಿಯಿಂದ ಕೆಂಪುಕೋಟೆಯವರೆಗೆ ಗೌಡರು ಸವೆಸಿದ ದುರ್ಗಮ ಹಾದಿ ಹುಟ್ಟು ಹೋರಾಟಗಾರ :

ಹಾಸನ ಜಿಲ್ಲೆಯ ಕುಗ್ರಾಮ ಹರದನಹಳ್ಳಿಯ ದೊಡ್ಡೇಗ್ಭಡ ಹಾಗೂ ದೇವಮ್ಮ ಅವರ ಮಗನಾಗಿ ೧೯೩೩ ರ ಮೇ ೧೮ ರಂದು ಸಾಮಾನ್ಯ ರೈತ ಕುಟುಂಬದಲ್ಲಿ ಹೆಚ್.ಡಿ. ದೇವೇಗೌಡರು ಜನಿಸಿದರು. ಬಡತನದ ಬದುಕಿನ ನಡುವೆ ರೈತಾಪಿ ಕಸುಬಿನ ಜೊತೆಯಲ್ಲಿ ಡಿಪ್ಲೋಮಾವರೆಗೆ ಅಧ್ಯಯನ ನಡೆಸಿದರು. ನಂತರ ತಾಲ್ಲೂಕು ಅಭಿವೃದ್ಧಿ ಮಂಡಳಿ ಮೂಲಕ ಸಾರ್ವಜನಿಕ ಬದುಕಿಗೆ ಅಡಿಯಿಟ್ಟ ಆರಂಭದ ದಿನಗಳಲ್ಲಿಯೇ ಈ ಮಣ್ಣಿನ ಮಗನಿಗೆ ಕಾದಿದ್ದು ಪರರ ಹೊಟ್ಟೆ ತುಂಬಿಸಲು ಗಾಣದೆತ್ತಿನಂತೆ ದುಡಿದು ನಿರಂತರ ಶೋಷಣೆಗೆ ಗುರಿಯಾಗಿದ್ದ ಹಳ್ಳಿಗಾಡಿನ ರೈತ ಸಮುದಾಯದ ಯಾತನಾಮಯ ಬದುಕು, ಅತ್ಯಂತ ಉಪೇಕ್ಷೆಗೆ ಗುರಿಯಾಗಿದ್ದ, ರೈತರ ಸಮಸ್ಯೆ ಅವರನ್ನು ಸದಾ ಬಾಧಿಸುತ್ತಿತ್ತು. ರೈತರ ಹೊಲಕ್ಕೆ ನೀರು ಹರಿಸಿದರೆ ಪ್ರತಿಯಾಗಿ ರೈತರು ಸ್ವರ್ಗವನ್ನು ಸೃಷ್ಟಿಸುತ್ತಾರೆ ಎಂಬ ಅಚಲ ವಿಶ್ವಾಸ ಅವರದು. ಶಾಸನ ಸಭೆಯ ಒಳಗೆ ಹೊರಗೆ, ಅಧಿಕಾರದಲ್ಲಿ ಇದ್ದಾಗ ಇಲ್ಲದಿದ್ದಾಗ ನಿರಂತರವಾಗಿ ನೀರಾವರಿ ಹೋರಾಟವನ್ನು ಮುಂದುವರೆಸಿ ಕೊಂಡು ಬಂದ ಅವಿರತ ಹೋರಾಟಗಾರ ಎಂದರೆ ಉತ್ಪ್ರೇಕ್ಷೆಯಾಗಲಾರದು. ಸತತವಾಗಿ ಆರು ಸಲ ವಿಧಾನಸಭೆಯಲ್ಲಿ ಹೊಳೆನರಸೀಪುರ ಕವಿತ್ರವನ್ನು ಪ್ರತಿನಿದಿಸಿದ್ದ ಗೌಡರು, ವಿರೋಧಿ ಸಾಲಿನಲ್ಲಿ ಕುಳಿತು ಪುಟವಿಟ್ಟ ಚಿನ್ನದಂತೆ ದಿನದಿಂದ ದಿನಕ್ಕೆ ತಮ್ಮ ವಾಗ್ದಾಳಿ, ವಿಷಯಮಂಡನೆಯ ಶೈಲಿ, ಅಧ್ಯಯನ ಪರತೆಯಿಂದಾಗಿ ಅಪಾರ ಅಬಿಮಾನಿ, ವೃಂದವನ್ನು ನಾಡ ತುಂಬೆಲ್ಲಾ ಸೃಷ್ಟಿಸಿಕೊಂಡರು. ತುಳಿತಕ್ಕೆ ಒಳಗಾದವರ ಬದುಕಿಗೆ ಹೊಸ ಅರ್ಥ ಬರೆದ ಸಮರ್ಥ ಆಡಳಿತಗಾರ ದಿವಂತರ ದೇವರಾಜ್ ಅರಸು ಅವರಂತಹ ದಕ್ಷ ಮುಖ್ಯಮಂತ್ರಿ ಕೂಡ ವಿರೋದಿನಾಯಕ ದೇವೇಗೌಡರು ಶಾಸನ ಸಭೆಯಲ್ಲಿ ಎದ್ದು ನಿಂತರೆ ಮೈಯೆಲ್ಲ ಕಿವಿಯಾಗಿ ಆಲಿಸುತ್ತಿದ್ದರು. ಯಾವ ಲೋಪ ಅಸ್ಪೋಟಗೊಳ್ಳುವುದೋ ಎಂಬ ಅಳುಕು ಅವರನ್ನು ಕಾಡುತ್ತಿತ್ತು. ಅಂದು ಗೌಡರು ಸಿಡಿಸಿದ್ದ ನಿರ್ಮಲಾ ಇಂಜನಿಯರಿಂಗ್ ಹಗರಣ, ಸುಮಿತ್ರಾ ದೇಸಾಯಿ ಹಗರಣ, ಬಿನ್ನಿಮಿಲ್ ಲಾಕ್‌ಔಟ್ ಹಾಗೂ ಅರಸು ಅವರ ಅಳಿಯ ಎಂ.ಡಿ. ನಟರಾಜ್ ಭೂ ಹಗರಣಗಳು ಸರ್ಕಾರವನ್ನು ಪೇಚಿಗೆ ಸಿಕ್ಕಿಸಿದ್ದವು. ಅಂತಹ ವಿರೋಧಿ ನಾಯಕರ ಕಾಲ ಈಗ ಇತಿಹಾಸ.

ಏಳು ಬೀಳುಗಳ ಮಧ್ಯೆಯೂ ಜೀವಂತ :

ಶಾಸಕರಾಗಿದ್ದಾಗ ಕಾವೇರಿ ನೀರಿನ ಬಗ್ಗೆ ಖಾಸಗಿ ನಿರ್ಣಯವನ್ನು ಮಂಡಿಸಿ ತಮ್ಮ ನೀರಾವರಿ ಕಾಳಜಿಯನ್ನು ಜಗಜ್ಚಾಹೀರುಗೊಳಿಸಿದ್ದ ಗೌಡರು, ನೀರಾವರಿ ಮತ್ತು ಲೋಕೋಪಯೋಗಿ ಸಚಿವರಾಗಿ ಕರ್ನಾಟಕ ಉದ್ದಗಲಕ್ಕೂ ನಿಲ್ಲದೆ, ಕೂರದೆ, ಊಟ-ನಿದ್ರೆ, ವಿಶ್ರಾಂತಿ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಂಚರಿಸಿ ಸಮಸ್ಯೆಗಳ ಅಧ್ಯಯನ ಹಾಗೂ ಅವುಗಳ ಪರಿಹಾರಕ್ಕೆ ಸೂಕ್ತ ಕಾರ್ಯಕ್ರಮಗಳನ್ನು ಹಾಕಿಕೊಂಡರು. ಅದರ ಫಲವೇ ಹಳ್ಳಿ ಹೆದ್ದಾರಿ, ಸೇತು ಬಂಧನ, ಗಂಗಾ ಕಲ್ಯಾಣ, ಹೆರಿಗೆ ಭತ್ಯ ಹಾಗೂ ವಿಧವಾ ಮಾಶಾಸನದಂತಹ ಹತ್ತು ಹಲವು ಯೋಜನೆಗಳ ಜಾರಿ, ನೀರಾವರಿಗೆ ಸಾಕಷ್ಟು ಹಣ ಬಿಡುಗಡೆ ಮಾಡದೆ ರಾಜಕೀಯವಾಗಿ ಗೌಡರನ್ನು ಹತ್ತಿಕ್ಕುವ ಯತ್ನ ನಡೆದಾಗ ರಾಜಿನಾಮೆ ಕೊಟ್ಟು ಹೊರಬಂದ ಗೌಡರು ತಮ್ಮದೇ ಆದ ಸಮಾಜವಾದಿ ಜನತಾಪಕ್ಷ ಕಟ್ಟಿದರು. ೧೯೮೯ ರ ವಿಧಾನಸಭಾ ಚುನಾವಣೆಯಲ್ಲಿ ತಾವೂ ಸೋತು ಕೇವಲ ಎರಡು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅವರ ರಾಜಕೀಯ ಮುಗಿದೇ ಹೋಯಿತು ಎಂಬ ಅನಿಸಿಕೆಗೆ ಆಸ್ಪದವಾದರು. ಆದರೆ ಗೌಡರ ಛಲ ಬಿಡದ ನಿರಂತರ ಹೊರಾಟ ಪ್ರವೃತ್ತಿ ಅವರನ್ನು ಸುಮ್ಮನಿರಲು ಬಿಡಲಿಲ್ಲ. ಕರ್ನಾಟಕ ವಿಕಾಸ ವೇದಿಕೆ ಹುಟ್ಟು ಹಾಕಿ ನಾಡಿನ ಹತ್ತು ಹಲವು ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮುಂದುವರೆಸಿದರು. ಈ ಹೋರಾಟ ಹಾಗೂ ಲೋಕೋಪಯೋಗಿ ಸಚಿವರಾಗಿ ರಾಜ್ಯದ ಎಲ್ಲೆಡೆ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳ ಫಲದಿಂದಾಗಿ ೧೯೯೧ ರ ಲೋಕಸಭಾ ಚುನಾವಣೆಯಲ್ಲಿ ರಾಜೀವ್‌ಗಾಂಧಿ ಹತ್ಯೆಯ ಅನುಕಂಪದ ಅಲೆಯ ನಡುವೆಯೂ ಹಾಸನ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಬಂದರು.

೧೯೮೯ ರ ವಿಧನಸಭೆ ಸೋಲು ಹಾಗೂ ೧೯೯೧ ರ ಲೋಕಸಭೆಯ ಗೆಲುವು ಅವರ ಜೀವನದಲ್ಲಿ ಪರಿವರ್ತನೆಯ ಕಾಲವಾಯಿತು. ರಾಜ್ಯ ರಾಜಕಾರಣಕ್ಕೆ ಸೀಮಿತಗೊಂಡಿದ್ದ ಗೌಡರು ಸಂಸತ್ ಪ್ರವೇಶಿಸುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಕ್ರಮೇಣವಾಗಿ ತಮ್ಮ ಪರಿಚಯ ಮಾಡಿಕೊಟ್ಟರು. ದೆಹಲಿಯಲ್ಲಿ ಕರ್ನಾಟಕದ ೨೮ ಸಂಸತ್ ಸದಸ್ಯರ ಇರುವಿಕೆಯನ್ನು ತಮ್ಮ ಏಕಾಂಗಿ ಧ್ವನಿಯ ಮೂಲಕವೇ ಸಾರಿದರು. ಕನ್ನಡದ ಕಹಳೆಯನ್ನು ಸಂಸತ್ತಿನಲ್ಲಿ ಸಮರ್ಥವಾಗಿ ಮುಳಗಿಸಿ, ರಾಜ್ಯದ ಸಮಸ್ಯೆಗಳತ್ತ ಕೇಂದ್ರದ ಕಣ್ಣು ತೆರೆಸಿದ ಪ್ರಥಮ ಕನ್ನಡಿಗ ಎಂಬ ಕೀರ್ತಿಗೆ ಪಾತ್ರರಾದರು. ರಸಗೊಬ್ಬರ ಸಬ್ಸಿಡಿ ಕೈಬಿಟ್ಟ ಸರ್ಕಾರದ ನೀತಿಯನ್ನು ಖಂಡಿಸಿ ಧರಣಿ ಕುಳಿತ ಏಕೈಕ ಸಂಸತ್ ಸದಸ್ಯರಾಗಿದ್ದ ಗೌಡರು ರೈತರ ಅಭಿಮಾನಕ್ಕೆ ಪಾತ್ರರಾದರು. ಲೋಕಸಭೆಯಲ್ಲಿ ನೀರಾವರಿ, ಕೃಷಿ, ತೋಟಗಾರಿಕೆ, ರೈಲ್ವೆ ಇತ್ಯಾದಿ ವಿಷಯಗಳ ಬಗ್ಗೆ ಗೌಡರು ಮಾಡಿದ ಪಾಂಡಿತ್ಯಪೂರ್ಣ ಭಾಷಣಗಳು ಚರಿತ್ರಾರ್ಹ ದಾಖಲೆಗಳಾದವು. ಗೌಡರು ವಿಷಯ ಮಂಡಿಸುವಾಗ ಸದನದ ಹಿರಿಯ ಸದಸ್ಯರು ಗಂಟೆಗಟ್ಟಲೆ ಅವುಗಳನ್ನು ಆಲಿಸಿ ಗೌಡರ ಬೆನ್ನುತಟ್ಟಿದ್ದು ಅವರ ಪ್ರತಿಭೆಯ ಧ್ಯೋತಕ.

ನಂತರ ಗೌಡರು ಮತ್ತೆ ಜನತಾದಳಕ್ಕೆ ಸೇರಿ ಅದರ ಅಧ್ಯಕ್ಷತೆಯ ಹೊಣೆಯನ್ನು ಹೆಗಲಿಗೇರಿಸಿಕೊಂಡು ರಾಜ್ಯದಲ್ಲೆಲ್ಲ ಪಕ್ಷ ಸಂಘಟಿಸಿದರು. ಪಕ್ಷದ ಅಧ್ಯಕ್ಷರಾಗಿ ೧೯೯೪ ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಬಾರಿ ಜಯತಂದು ಕೊಟ್ಟರು. ಹೀಗೆ ಗೌಡರು ಅದುಮಿದ ಅಣುಬಾಂಬಿನಂತೆ ಸ್ಪೋಟಿಸಿದಾಗ ಅವರ ರಾಜಕೀಯ ವಿರೋಧಿಗಳು ಚುನಾವಣೆಯಲ್ಲಿ ನಾಮಾವಶೇಷವಾದರು. ಗೌಡರು ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರವನ್ನು ವಹಿಸಿಕೊಂಡರು.

ಈದ್ದಾ ಸಮಸ್ಯೆ ಪರಿಹಾರ :

ಪ್ರತಿವರ್ಷ ಹುಬ್ಬಳ್ಳಿಯ ಈಗ್ಗಾ ಮೈದಾನದ ವಿವಾದ ರಾಜ್ಯದ ಅಸಂಖ್ಯ ಪ್ರಜಾಪ್ರಭುತ್ವ ವಾದಿಗಳ ಆತಂಕಕ್ಕೆ ಕಾರಣವಾಗಿದ್ದು, ಹಿಂಸಾಚಾರ ಗೋಲಿಬಾರು, ಲಾಠಿ ಬೂಟುಗಳ ಸಪ್ಪಳಕ್ಕೆ ವಾರ್ಷಿಕ ವೀಳ್ಯ ನೀಡುತ್ತಿತ್ತು. ಈದ್ಗಾ ವಿವಾದವನ್ನು ತಮ್ಮ ಸಾರ್ವಜನಿಕ ಬದುಕಿನ ಅನುಭವದ ಹಿನ್ನೆಲೆಯಿಂದಲೇ ಅಧಿಕಾರ ಹಿಡಿದ ಕೆಲವೇ ದಿನಗಳಲ್ಲಿ ಹುಲ್ಲುಕಡ್ಡಿ ಎತ್ತುವಂತೆ ಪರಿಹಿರಿಸಿ ತಮ್ಮ ರ್ಕಾರದ ಕಿರೀಟಕ್ಕೆ ಗರಿ ತೊಡಿಸುವ ಜೊತೆಗೆ ಮತೀಯವಾದ ಬಿ.ಜೆ.ಪಿ.ಗಳಿಗೆ ಶಾಶ್ವತ ಜಗಳದ ವಿಷಯವೇ ಇಲ್ಲದಂತೆ ಮಾಡಿ ಸಮರ್ಥ ಮುಖ್ಯಮಂತ್ರಿಯ ಸೂಚನೆ ನೀಡಿದರು. ಹೀಗೆ ಕರ್ನಾಟಕದ ಯಶಸ್ವಿ ಮುಖ್ಯಮಂತ್ರಿಯಾಗುವ ಸೂಚನೆ ಕಂಡು ಬಂದಾಗ ಒಂದೆಡೆ ಉತ್ತರ ಕರ್ನಾಟಕ ಕಡೆಗಾಣಿಸಲಾಗುತ್ತಿದೆ ಎಂಬ ಕೂಗು, ಮತ್ತೊಂದೆಡೆ ಗುಲ್ಬರ್ಗ ವಿಶ್ವವಿದ್ಯಾನಿಲಯಕ್ಕೆ ಬಸವೇಶ್ವರರ ಹೆಸರಿಡಬೇಕೆಂಬ ಬೇಡಿಕೆ ಹುಟ್ಟು ಹಾಕಿ ಪರೋಕ್ಷವಾಗಿ ಕೋಮುವಾದ ರಾಜಕೀಯ ಪಕ್ಷಗಳ ಹಾಗೂ ಇತರ ಮತೀಯವಾದಿ ಮುಖಂಡರು ಆ ಚಳುವಳಿಗೆ ಬೆಂಬಲ ನೀಡಿದರು. ಅದೇ ಸಮಯಕ್ಕೆ ಗುಲ್ಬರ್ಗ ವಿಶ್ವವಿದ್ಯಾನಿಲಯಕ್ಕೆ ಅಂಬೇಡ್ಕರ್ ಅವರ ಹೆಸರಿಡಬೇಕೆಂಬ ಬೇಡಿಕೆ ಆ ಭಾಗದ ದಲಿತ ಸಮುದಾಯದಿಂದ ಮತ್ತೆ ಕೇಳಿ ಬಂದು, ಗೌಡರನ್ನು ಇಕ್ಕಟ್ಟಿಗೆ ಸಿಲುಕಿಸಿದವು.

ಗೌಡರು ಮುಖ್ಯಮಂತ್ರಿ ಪದವಿಯಲ್ಲಿ ನೆಮ್ಮದಿಯಾಗಿ ಆಡಳಿತ ಮಾಡದಂತೆ ಸೃಷ್ಟಿಸಿದ ಈ ನಾಮಕರಣ ಚಳವಳಿ ಹಾಗೂ ಉತ್ತರ ಕರ್ನಾಟಕ ಕಡೆಗಾಣಿಸಲಾಗುತ್ತಿದೆ ಎಂಬ ಅಪಪ್ರಚಾರಕ್ಕೆ ಅವರು ಎದೆಗುಂದಿಸಲಿಲ್ಲ. ಅದನ್ನು ಸವಾಲಾಗಿ ನವೀಕರಿಸಿದ ಗೌಡರು ಉತ್ತರ ಕರ್ನಾಟಕದವರೇ ಆದ ಬಿ.ಡಿ.ಜತ್ತಿ, ಎಸ್. ಆರ್.ಕಂಠಿ, ನಿಜಲಿಂಗಪ್ಪಮ ವಿರೇಂದ್ರ ಪಾಟೀಲರು ಮುಖ್ಯಮಂತ್ರಿಗಳಾಗಿದ್ದಾಗ ಮಾಡಲಾಗದ ಕೆಲಸವನ್ನು ಮಾಡಿ ತೋರಿಸಿದರು. ವಾಸ್ತವವಾಗಿ ಅಂದಿನವರೆಗೆ ಕೃಷ್ಣಾನದಿ ನೀರಿನ ಹಕ್ಕು ರಾಜ್ಯದ ಕೈಬಿಟ್ಟು ಹೋಯಿತು ಎಂಬ ನಂಬಿಕೆ ವ್ಯಾಪಕವಾಗಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಗತ್ಯವಿರುವ ಸಾವಿರಾರು ಕೋಟಿ ಸಂಪನ್ಮೂಲ ಕ್ರೂಢೀಕರಣ ಸಾಧ್ಯವೇ‌ಇಲ್ಲ. ಕಾಮಗಾರಿ ಬರೀ ಕನಸು ಎಂದೇ ನಂಬಲಾಗಿತ್ತು.

ರಾಜ್ಯ ಬೊಕ್ಕಸಕ್ಕೆ ಸ್ಥಿರತೆ :

ಅಧಿಕಾರ ಹಿಡಿದಾಗ ಕಾಂಗ್ರೆಸ್ ಸರ್ಕಾರ ಬಳುವಳಿಯಾಗಿ ಬಿಟ್ಟು ಹೋಗಿದ್ದ ಐನೂರ ಇಪ್ಪತ್ತೇಳು ಕೋಟಿ ಬಿಲ್ಲು ಬಾಕಿಯನ್ನು ಚುಕ್ತಾ ಮಾಡಿ ನಂತರ ನೀರಾವರಿ ಯೋಜನೆಗಳಿಗೆ ವ್ಯವಸ್ಥಿತ ಚಾಲನೆ ನಿಡಬೇಕೆಂಬ ಗೌಡರ ಕಾರ್ಯತಂತ್ರ ತೀಕ್ಷ್ಣ ಟೀಕೆಗೆ ಗುರಿಯಾಯಿತು. ಎಲ್ಲ ಕೆಲಸ ನಿಂತೇ ಹೋಯಿತು ಎಂಬ ಬೊಬ್ಬೆ ಕೇಳಲಾರಂಭಿಸಿತು. ಗೌಡರು ತಲೆ ಕೆಡಿಸಿಕೊಳ್ಳದೆ ರಾಜ್ಯದ ಹಣಕಾಸು ಸ್ಥಿತಿ ಸುಧಾರಣೆಗೆ ಬಿಗಿ ಕ್ರಮಕೈಗೊಂಡರು. ಕೃಷ್ಣ ಮೇಲ್ದಂಡೆ ಯೋಜನೆಗೆ ಹಣ ಸಂಗ್ರಹಕ್ಕೆ ಕೃಷ್ಣಾ ಜಲಭಾಗ್ಯ ನಿಗಮ ಹುಟುಕುಹಾಕಿ ಸಾವಿರ ಕೋಟಿ ಸಂಗ್ರಹಿಸಿ ಕಾಮಗಾರಿಗಳಿಗೆ ಚಾಲನೆ ಕೊಟ್ಟಗ ರಾಜ್ಯದ ಇತಿಹಾಸದಲ್ಲೇ ಮೊದಲನೇ ಬಾರಿಗೆ ಕೃಷ್ಣಾ ನೀರಿನ ಹಕ್ಕನ್ನು ಉಳಿಸಿಕೊಳ್ಳಬಹುದೆಂಬ ಭರವಸೆ ಮೂಡಿತು. ಇಷ್ಟಾದರೂ ಗೌಡರನ್ನು ಉತ್ತರ ಕರ್ನಾಟಕದ ವಿರೋದಿ ಎಂದು ಚಿತ್ರಿಸುವ ವ್ಯವಸ್ಥಿತ ಪಿತೂರಿ ಕೆಲವು ಶಕ್ತಿಗಳಿಂದ ನಿರಂತರವಾಗಿ ನಡೆಯಿತು. ರಾಜ್ಯದ ನೀರಾವರಿ ಯೋಜನೆಗಳಿಗೆ ತಮ್ಮ ಅಧಿಕಾರದಲ್ಲಿ ಹಣ ಬಿಡುಗಡೆ ಮಾಡದೆ, ವಿಲಾಸಿ ನೃತ್ಯ ಗ್ರಾಮ, ಕಲೆ ಸಂಸ್ಕೃತಿ ಹಾಗೂ ಪ್ರಚಾರದ ಹೆಸರಿನಲ್ಲಿ ಕರ್ನಾಟಕ ಬೊಕ್ಕಸ ಬರಿದುಮಾಡಟಿ ಸರ್ಕಾರಿ ಕರ್ಮಚಾರಿಗಳ ಸಂಬಳಕ್ಕೂ ಹಣವಿಲ್ಲದಂತೆ ಮಾಡಿದ್ದವರು ಈ ಅಪಪ್ರಚಾರಕ್ಕೆ ಪ್ರಚೋದನೆ ನೀಡುತ್ತಾ ಬಂದರು. ಜಾತಿವಾದಿ ಮನಸ್ಸುಗಳು ಹಾಗೂ ಪೂರ್ವಗ್ರಹ ಪೀಡಿತ ಕೆಲವು ಪತ್ರಕರ್ತರು ಗೌಡರ ವಿರುದ್ಧ ಅಪಪ್ರಚಾರವನ್ನು ಇಂದಿಗೂ ಮುಂದುವರಿಸುತ್ತಲೇ ಇದ್ದಾರೆ. ಇವರಲ್ಲರ ಅಪಪ್ರಚಾರದ ಹಿಂದೆ ಗೌಡರ ವಿರುದ್ದ ಲಿಂಗಾಯಿತರನ್ನು ಎತ್ತಿ ಕಟ್ಟುವ ರಾಜಕೀಯ ಸಂಚು ಇತ್ತು ಎಂಬುದರಲ್ಲಿ ಸಂಶಯವೇ ಇಲ್ಲ. ಉತ್ತರ ಕರ್ನಾಟಕ ಜನರನ್ನೂ ಹಸಿ ಸುಳ್ಳುಗಳಿಂದ ದಿಕ್ಕುತಪ್ಪಿಸುವ ಕೆಲಸವನ್ನು ಬಿಟ್ಟರೆ ಈ ಮೌಲ್ಯಾಧಾರಿತ ಮುಖಂಡರುಗಳು ಕರ್ನಾಟಕವನ್ನು ಯಾವ ದಡಕ್ಕೂ ಸೇರಿಸದ ತ್ರಿಶಂಕುಗಳೆಂಬುದು ರಾಜ್ಯದ ಜನತೆಗೆ ಮನವರಿಕೆಯಾಗಿದೆ.

ಮೂಲಭೂತ ಸೌಕರ್ಯಗಳ ಪೂರೈಕೆ :

ಮೂಲಭೂತ ಸೌಲಭ್ಯವಂಚಿತ ಹಳ್ಳಿಗರ ಶಿಕ್ಷಣ, ಆರೋಗ್ಯ, ಸಾರಿಗೆ, ನೀರಾವರಿ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದನ್ನು ಆಧ್ಯತೆಯ ಮೇಲೆ ಕೈಗೆತ್ತಿಕೊಂಡ ಗೌಡರು ಹಿಂದಿನ ಸರ್ಕಾರಗಳಲ್ಲಿ ಬಹುತೇಕ ಸ್ಥಗಿತಗೊಂಡಿದ್ದ ಸರ್ಕಾರಿ ಕರ್ಮಚಾರಿಗಳ ನೇಮಕಾತಿಗೆ ಮತ್ತೆ ಚಾಲನೆ ನೀಡಿದರು. ಅದರ ಫಲವೇ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ೫೫ ಸಾವಿರ ಹುದ್ದೆಗಳಿಗೆ ನೇಮಕಾತಿ ಆರಂಭವಾಯಿತು. ರಾಜ್ಯದ ನಿರುದ್ಯೋಗಿ ಪದವೀಧರರಿಗೆ ಉದ್ಯೋಗಗಳ ಅವಕಾಶ ಕಲ್ಪಿಸಿದರು. ೧೯ ಸಾವಿರ ಶಿಕ್ಷಕರ ನೇಮಕ ೩೧೬೨ ವೈದ್ಯರು, ೨೦೦೦ ದಾದಿಯರು ಹಾಗೂ ೩೬೬೬ ಅರವೈದ್ಯ ಸಿಬ್ಬಂದಿ ನೇಮಕ ಪೂರ್ಣಗೊಂಡವು. ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿನ ಶಿಕ್ಷಕ ಕೊರತೆಯನ್ನು ನೀಗಿಸಿ ಪ್ರಾಥಮಿಕ ಶಿಕ್ಷಣ ಬಲಪಡಿಸುವ ದಿಟ್ಟ ಹೆಜ್ಜೆ ಇಟ್ಟರು. ಅದೇರೀತಿ ವೈದ್ಯರ ನೇಮಕಾತಿ ಮೂಲಕ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಉತ್ತಮ ಪಡಿಸಲು ಯತ್ನಿಸಿದರು.

ಮಹಿಳೆಯರಿಗೂ ಸಮಾನತೆ :

ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ಶತಮಾನಗಳಿಂದಲೂ ಮಹಿಳೆಯರನ್ನು ನಿರಂತರವಾಗಿ ಶೋಷಣೆಗೆ ಗುರುಮಾಡುತ್ತಲೇ ಬಂದಿದ್ದೇವೆ. ಗ್ರಾಮ-ನಗರ, ಬಡವ-ಶ್ರೀಮಂತ, ಜಾತಿ_ಧರ್ಮಗಳ ಎಲ್ಲೆಗಳನ್ನು ಮೀರಿ ಮಹಿಳೆಯರನ್ನು ಜೀವಂತವಾಗಿ ಸುಡುವ ಬರ್ಬರ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳಾ ಸ್ವಾತಂತ್ರ್ಯ ಹಾಗೂ ಸಮಾನತೆ ಕೇವಲ ಬಾಣಗಳಲ್ಲಿ ಮಾತ್ರ ಇತ್ತು. ಗೌಡರು ತಮ್ಮ ಸಮಾಜಿಕ ಬದುಕಿನ ಸುದೀರ್ಘ ಅನುಭವದ ಹಿನ್ನೆಲೆಯಲ್ಲಿ ಮಹಿಳೆಯರಿಗೆ ರಾಜಕೀಯ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಕಾಯಿದೆ ಮೂಲಕ ದಕ್ಕಿಸಿಕೊಡಲು ಯಾವುದೇ ಅಬ್ಬರದ ಪ್ರಚಾರವಿಲ್ಲದೆ ಕಾರ್ಯಪ್ರವೃತ್ತರಾದರು. ಭಾರತ ದೇಶದಲ್ಲಿಯೇ ಉದ್ಯೋಗದಲ್ಲಿ ಶೇಕಡಾ ೩೩ ಮಹಿಳೆಯರಿಗೆ ಮೀಸಲಾತಿ ನೀಡಿದ ಪ್ರಥಮ ರಾಜ್ಯ ಕರ್ನಾಟಕವಾಗಲು ಗೌಡರ ದಿಟ್ಟ ಕ್ರಮವೇ ಕಾರಣವಾಯಿತು. ಇದರಿಂದಾಗಿ ಈ ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರಿ ನೇಮಕಾತಿಗಳಲ್ಲಿ ಮಹಿಳೆಯರು ಶೇಕಡ ೪೦ ಕ್ಕಿಂತ ಹೆಚ್ಚು ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಮಹಿಳೆಯರಿಗೆ ನಿಷಿದ್ದ ಎನ್ನಲಾಗುತ್ತಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ, ನಗರ ಯೋಜನಾ ನಿರ್ಧೇಶಕರು ಹಾಗೂ ವಾಣಿಜ್ಯ ತೆರಿಗೆ ಸಹಾಯಕ ಕಮೀಷನರ್ ಹುದ್ದೆಗಳು ಮಹಿಳೆಯರ ಪಾಲಾಗಿವೆ. ಇದರ ಜೊತೆಗೆ ಗ್ರಾಮೀಣ ಪ್ರದೇಶದವರಿಗೆ ಉದ್ಯೋಗ ಮೀಸಲಾತಿ ನೀಡಿದ ಕೀರ್ತಿಯೂ ದೇವೇಗೌಡರದೆ.

ಸಾಮಾಜಿಕ ನ್ಯಾಯ : ಚಾರಿತ್ರಿಕ ದಾಖಲೆ :

ಗ್ರಾಮ ತಾಲ್ಲೂಕು ಜಿಲ್ಲಾ ಪಂಚಾಯಿತಿ ಹಾಗೂ ಪುರಸಭೆ ನಗರಸಭೆ, ನಗರ ಪಾಲಿಕೆಗಳಲ್ಲಿ ಶೇಕಡಾ ೩೩ ಸ್ಥಾನಗಳನ್ನು ಮೀಸಲಿಡುವ ಮೂಲಕ ರಾಜಕೀಯ ಮೀಸಲಾತಿಯನ್ನು ಜಾರಿಗೆ ತಂದರು. ಇದಕ್ಕೆ ಅಗತ್ಯವಾದ ತಿದ್ದುಪಡಿಯನ್ನು ಕರ್ನಾಟಕ ಪಂಚಾಯತ್ ರಾಜ್ ಕಾಯಿದೆಗೆ ತರಲಾಯಿತು. ನಂತರ ನಡೆದ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಮಹಿಳೆಯರಿಗೆ, ಹಿಂದುಳಿದವರಿಗೆ ತಲಾ ಶೇಕಡ ೩೩ ರಷ್ಟು ಸ್ಥಾನಗಳನ್ನು ಮೀಸಲಿಟ್ಟು ದೇಶದಲ್ಲೇ ಕ್ರಾಂತಿಕಾರಕ ಪರಿವರ್ತನೆಗೆ ನಾಂದಿ ಹಾಡಿದರು. ಅದರ ಫಲವಾಗಿ ರಾಜ್ಯದ ೯೧೯ ಜಿಲ್ಲಾ ಪಂಚಾಯಿತಿ ಸದಸ್ಯರಲ್ಲಿ ೩೩೫ ಜನ ಮಹಿಳೆಯರು ೩೩೪೦ ತಾಲ್ಲೂಕು ಪಂಚಾಯಿತಿ ಸದಸ್ಯರಲ್ಲಿ ೧೩೪೩ ಮಹಿಳೆಯರು ಹಾಗೂ ೮೦೬೨೭ ಗ್ರಾಮ ಂಚಾಯಿತಿ ಸದಸ್ಯರಲ್ಲಿ ೩೫,೦೩೫ ಮಹಿಳಾ ಸದಸ್ಯರು ಆಯ್ಕೆಯಾಗಿ ಬಂದರು. ಸಾರ್ವಜನಿಕ ಬದುಕಿಗೆ ಈ ಪ್ರಮಾಣದಲ್ಲಿ ಮಹಿಳೆಯರ ಪ್ರವೇಶವಾದ ನಿದರ್ಶನ ರಾಷ್ಟ್ರದಲ್ಲಿ ಎಲ್ಲೂ ಇಲ್ಲ. ಮಹಿಳೆಯರನ್ನು ಕೇವಲ ಸದಸ್ಯನ ಮಟ್ಟದಲ್ಲೇ ಇಡುವ ಅಪಾಯವನ್ನು ಗುರುತಿಸಿದ್ದ ಗೌಡರು ಈ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳಿಗೂ ಮೀಸಲಾತಿಯನ್ನು ತಂದಿದ್ದರು. ಅದರಿಂದಾಗಿ ಮಹಿಳೆಯರಿಗೆ ರಾಜ್ಯದ ೨೦ ಜಿಲ್ಲಾ ಪಂಚಯಿತಿ ಅಧ್ಯಕ್ಷ ಪಾದ್ಯಕ್ಷ ಪದವಿಗಳಲ್ಲಿ ೭ನ್ನು ೧೭೫ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಲ್ಲಿ ೫೯ ನ್ನು ಹಾಗೂ ೫,೬೪೦ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಲ್ಲಿ ೧೯೪೦ ನ್ನು ನೀಡಲಾಗಿದೆ. ವಿಧಾನ ಸಭೆ ಹಾಗೂ ಲೋಕಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಅಗತ್ಯವಿರುವ ಮಸೂದೆಯನ್ನು ತಾವು ಪ್ರತಿನಿಧಿಗಳಾಗಿದ್ದಾಗ ತರಲು ಕಾರ್ಯಪ್ರವೃತ್ತರಾದ ಗೌಡರು ಮಹಿಳಾ ಕಲ್ಯಾಣದ ಬಗ್ಗೆ ಮಾತನಾಡದೆ ಕ್ರಾಂತಿಕಾರಕ ಬದಲಾವಣೆಯನ್ನು ತಂದರು. ಪ್ರಗತಿಪರರೆಲ್ಲರು ಮೆಚ್ಚುಗೆಗೆ ಪಾತ್ರರಾದರು. ಇದು ಗೌಡರ ಮಾರ್ಗ; ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂಬ ಮನುಧರ್ಮ ಶಾಸ್ತ್ರವನ್ನೇ ತನ್ನ ಸಂವಿಧಾನ ಮಾಡಿಕೊಂಡಿರುವ ಬಿ.ಜೆ.ಪಿ. ಕೂಡ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮೀಸಲಾತಿ ನೀಡುವುದಾಗಿ ಘೋಷಿಸಿರುವುದು ಕರ್ನಾಟಕದ ಈ ಮಣ್ಣಿನ ಮಗ ಮಾಡಿದ ಸಾಧನೆಯ ಅನುಕರಣೆ ಎಂದರೆ ತಪ್ಪಾಗುವುದೆ?

ಹೀಗೆ ಗೌಡರು, ಎಲ್ಲ ಅಡತಡೆಗಳಿಂದ ಮಾಧ್ಯಮಗಳ ಅವಿರತ ನಿಂದನೆ ನಡುವೆ ತಣ್ಣನೆ ಕೆಲಸ ಮಾಡಿದರು. ಅವರು ಮಾಡಿದ ಅಭಿವೃದ್ಧಿ ಕೆಲಸಗಳ ಪ್ರತಿಫಲ ಅವರ ಅವಧಿಯಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲೂ ವ್ಯಕ್ತವಾಯಿತು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಸಭೆ ಪೌರಸಭೆ ಚುನಾವಣೆUಳಲ್ಲೂ ವ್ಯಕ್ತವಾಯಿತು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಸಭೆ ಪೌರಸಭೆ ಚುನಾವಣೆಗಳಲ್ಲಿ ಜನತಾದಳಕ್ಕೆ ಗೌಡರು ಅಭೂತಪೂರ್ವ ಗೆಲುವು ತಂದಿತ್ತರು. ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಹದಿನಾರು ಕ್ಷೇತ್ರಗಳಿಂದ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೀರ್ತಿಗೆ ಭಾಜನರಾದರು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ವ್ಯವಸ್ಥೆಯಲ್ಲಿ ಬಹುಸಂಖ್ಯಾತೆ ಬಲಾಢ್ಯ ಒಕ್ಕಲಿಗರ ಲಿಂಗಾಯಿತ ಜನಾಂಗದವರ ಕೈಯಲ್ಲೆ ಆಡಳಿತ ಕೇಂದ್ರೀಕೃತವಾಗುತ್ತಿದ್ದ ಅಪಾಯ ಗುರುತಿಸಿ, ಪಕ್ಷವು ನಂಬಿರುವ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕಾಗಿ ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತಂದು ಹಿಂದುಳಿದವರಿಗೆ ಪ್ರಥಮ ಬಾರಿಗೆ ಮೀಸಲಾತಿ ನೀಡಿದರು. ಅದರಿಂದಾಗಿ ಹಿಂದುಳಿದವರಿಗೆ ರಾಜ್ಯ ೯೧೯ ಜಿಲ್ಲಾ ಪಂಚಾಯಿತಿ ಸ್ಥಾನಗಳ ಪೈಕಿ ೩೦೬, ತಾಲ್ಲೂಕು ಪಂಚಾಯಿತಿಯ ೩೩೪೦ ಸ್ಥಾನಗಳ ಪೈಕಿ ೧೧೧೭ ಹಾಗೂ ಗ್ರಾಮ ಪಂಚಾಯಿತಿಯ ೮೦೬೨೭ ಸ್ಥಾನಗಳ ಪೈಕಿ ೨೬೮೨೮ ಸ್ಥಾನಗಳು ಮೀಸಲಾದವು. ಇದರ ಜೊತೆಗೆ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಪೈಕಿ ೭, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಪೈಕಿ ೧೮೮೦ ಹಿಂದುಳಿದ ವರ್ಗಗಳಿಗೆ ಮೀಸಲಾದವು. ಈ ವಿಚಾರದಲ್ಲಿಯೂ ಕರ್ನಾಟಕವು ದೇಶದ ಇತರ ರಾಜ್ಯಗಳಿಗಿಂತ ಒಂದು ಹೆಜ್ಜೆ ಮುಂದು ಹೋಯಿತು. ರಾಜ್ಯ ರಾಜಕಾರಣದಲ್ಲಿ ದೇವರಾಜ್ ಅರಸು ಅವರು ಕಡೆಗಣಿಸಲಾಗಿದ್ದ ಜಾತಿಯವರಿಗೆ ಸ್ಥಾನಮನ ಕಲ್ಪಿಸಿದ್ದರು. ಅದರ ಅದಕ್ಕೆ ಸಂವಿಧಾನಬದ್ದ ಮಾನ್ಯತೆಯನ್ನು ತಂದುಕೊಟ್ಟ ಕೀರ್ತಿ ಗೌಡರಿಗೆ ಸಲ್ಲಲೇಬೇಕು. ಹೀಗೆ ದೇಶದಲ್ಲೇ ಮೊದಲ ಬಾರಿಗೆ ಹಿಂದುಳಿದವರಿಗೆ ಮೀಸಲಾತಿ ಮೂಲಕ ರಾಜಕೀಯ ಅಧಿಕಾರ ನೀಡಿದ ಗೌಡರು ದೇವರಾಜ ಅರಸು, ವಿ.ಪಿ.ಸಿಂಗ್ ಅವರಂತಹವರ ಕನಸನ್ನು ಕಾನೂನು ತಿದ್ದುಪಡಿಮೂಲಕ ನನಸು ಮಾಡಿದ್ದರು. ಆದರೂ ಕೂಡ ಗೌಡರನ್ನು ಹಿಂದುಳಿದವರ ವಿರೋಧಿ ಎಂದು ಚಿತ್ರಿಸುವ ಹುನ್ನಾರ ಇಂದಿಗೂ ನಡೆದಿದೆ. ಮಹಿಳಾ ಉದ್ದಾರವನ್ನು ಕೇವಲ ಭಾಷಣದಲ್ಲಿ ಮಾಡುತ್ತಾ ಇಂದಿಗೂ ಲೋಕಸಭೆಯಲ್ಲಿ ಶೇಕಡಾ ಮೂವತ್ತರಷ್ಟು ಮಹಿಳಾ ಮೀಸಲಾತಿಯನ್ನು ವಿರೋಧಿಸುತ್ತಿರುವ ಮೌಲ್ಯಾಧಾರಿತ ದುರಣೀರು, ಈ ಹಿಂದೆ ಮಂಡಲ್ ವರದಿಯನ್ನು ವಿರೋದಿಸಿ ತಮ್ಮ ಮೀಸಲಾತಿ ವಿರೋಧಿ ನಿಲುವನ್ನು ಬಹಿರಂಗಪಡಿಸಿದ್ದರು.

****