ಿ.
ಆದರ ಸಿದ್ದರಾಮಯ್ಯನವರು
ದಕ್ಷತೆ ಮತ್ತು
ಬದ್ಧತೆಯಿಂದ
ಕಾರ್ಯ ನಿರ್ವಹಿಸಿದರು.
ಜೊತೆಗೆ ದೇವೇಗೌಡರ
ನೇತೃತ್ವದ ಕೇಂದ್ರದ
ಸಂಯುಕ್ತ ರಂಗ
ಸರ್ಕಾರದಿಂದಲೂ
ನೆರವು ಒದಗಿಬಂದಿತು.
ಹೀಗಾಗಿ ಎಲ್ಲಾ
ಸಾಲಗಳನ್ನು ತೀರಿಸಿ,
ಓವರ್‌ಡ್ರಾಪ್ಟ್
ಪಡೆಯದೆಯೇ, ಎಲ್ಲಾ
ಜನಪರ ಅಭಿವೃದ್ಧಿ
ಕಾರ್ಯಗಳಿಗೂ
ಹಣಕಾಸಿನ ಕೊರತೆ
ಉಂಟಾಗದಂತೆ ರಾಜ್ಯದ
ಹಣಕಾಸಿನ ಸ್ಥಿತಿಯನ್ನು
ಸಮರ್ಥವಾಘಿ ನಿರ್ವಹಿಸುವರು
ಸಿದ್ದರಾಮಯ್ಯನವರು.
ಮುಂದೆ ದೇವೇಗೌಡರು
ಪ್ರಧಾನಿಯಾದ
ಮೇಲೆ ದಿ|| ಶ್ರೀ.
ಜೆ.ಹೆಚ್. ಪಟೇಲರು
ಮುಖ್ಯಮಂತ್ರಿಯಾಗಿ,
ಶ್ರೀ ಸಿದ್ದರಾಮಯ್ಯನವರು
ಉಪ ಮುಖ್ಯಮಂತ್ರಿಗಳಾದರು,
ದೇವೇಗೌಡರು ಆರಂಭಿಸಿದ
ಮತ್ತು ಹಮ್ಮಿಕೊಂಡ
ಎಲ್ಲಾ ಅಭಿವೃದ್ಧಿ
ಕಾರ್ಯಗಳಿಗೂ,
ಈ ಇಬ್ಬರೂ ನಾಯಕರು
ಮತ್ತು ಸಚಿವ
ಸಂಪುಟದ ಎಲ್ಲಾ
ಸಹೋದ್ಯೋಗಿಗಳೂ
ಸಕಾರಾತ್ಮಕವಾಗಿ
ಸ್ಪಂದಿಸಿದರು.
ಎಂತಲೇ ದೇವೇಗ್ವಡರು,
ಇಷ್ಟೆಲ್ಲಾ
ಕಾರ್ಯಗಳನ್ನು
ಸಾಧಿಸಲು ಸಾಧ್ಯವಾಯಿತು.
ಅದನ್ನೂ ಈ ಸಂದರ್ಭದಲ್ಲಿ
ಕೃತಜ್ಞತಾಪೂರ್ವಕವಾಗಿ
ನೆನಪಿಸಿ ಕೊಳ್ಳಬಯಸುತ್ತೇವೆ.
ಈಗ ಪಟೇಲರು
ನಮ್ಮ ಮಧ್ಯೆ
ಇಲ್ಲ. ಎಲ್ಲರ
ಸಹಮತದೊಂದಿಗೆ
ಅವಿಭಜಿತ ಜನತಾ
ದಳದ ಅಧ್ಯಕ್ಷರಾಗಿ
ಆಯ್ಕೆಗೊಂಡ ಶ್ರೀ.
ಸಿದ್ದರಾಮಯ್ಯನವರು
ಈಗ ಜಾತ್ಯಾತೀತ
ಜನತಾದಳದ ರಾಜಾಧ್ಯಕ್ಷರಾಗಿದ್ದಾರೆ.
ದೇವೇಗೌಡರ ಹೋರಾಟದಲ್ಲಿ
ಸಿದ್ದರಾಮಯ್ಯನವರೂ
ದೇವೇಗೌಡರ ಜೊತೆಯಲ್ಲಿ
ಇತರ ಮುಖಂಡರುಗಳೊಂದಿಗೆ
ಹೆಜ್ಜೆ ಹಾಕುತ್ತಾ
ಸಾಗುತ್ತಿದ್ದಾರೆ.
ಕೆಂಪೇಗೌಡರ
ಕನಸು :
ಬೆಂಗಳುರು ನಿರ್ಮಾಪಕ
ಕೆಂಪೇಗೌಡರು
ಒಂದು ರಾತ್ರಿ
ಕಂಡ ಕನಸು ಮುಂದೆ
ಬೆಂಗಳೂರು ನಗರ
ನಿರ್ಮಾಣಕ್ಕೆ
ಹೇಗೆ ಕಾರಣವಾಯಿತೆಂಬುದರ
ಬಗ್ಗೆ ದಂತಕಥೆಯೊಂದು
ಪ್ರಚಲಿತವಿದೆಯಷ್ಟೇ.
ಆ ದಂತಕಥೆಯ
ಸತ್ಯಾಸತ್ಯತೆ
ಏನೇ ಇರಲಿ, ಅದು
ನೀಡುವ ಸಂದೇಶ
ನಮಗೆ ಮಹತ್ವದ್ದಾಗಿದೆ.
ಒಬ್ಬ ಆಡಳಿತಗಾರನಾದವನ
ದಕ್ಷತೆಯನ್ನು
ಒರೆಗಲ್ಲಿಗೆ
ಹಚ್ಚುವುದು ಅವನು
ದೂರದೃಷ್ಟಿಯಿಂದ
ಕೈಗೊಳ್ಳುವ ಕಾರ್ಯಗಳಿಂದ
ಎಂಬುದು ನಾವು
ಅರಿಯಬೇಕಾದ ಸಂಗತಿ.
ಕೆಂಪೇಗೌಡರು
ಕಂಡ ಕನಸು ಅವರ
ದೂರದೃಷ್ಟಿಯ
ಸಂಕೇತವೆಂದೇ
ನಾವು ಭಾವಿಸಬೇಕು.
ಕೆಂಪೇಗೌಡರಾದರೋ
ವಿದ್ಯಾಶಾಸ್ತ್ರ
ಪಾರಂಗತ ಪಂಡಿತ
ಕುಟುಂಬದಿಂದ
ಬಂದವರಲ್ಲ.
ಅರ್ಥಶಾಸ್ತ್ರ,
ರಾಜಕೀಯ ಶಾಸ್ತ್ರಗಳನ್ನು
ಅರೆದು ಕುಡಿದವರಲ್ಲ.
ಶೂದ್ರ ಸಮುದಾಯಿದಿಂದ
ಬಂದವರು. ಆದರೆ
ಸ್ವಾಭಿಮಾನಿ;
ಛಲಗಾರ. ಅಪಾರ
ದೂರದೃಷ್ಟಿಯುಳ್ಳ
ಆಡಳಿತಗಾರ.
ಎಂತಲೇ ಬೆಂಗಳೂರು
ನಗರವನ್ನು ನಿರ್ಮಿಸುವಾಗ
ಅವರು ನಾಲ್ಕು
ದಿಕ್ಕುಗಳಲ್ಲಿ
ಸ್ಥಾಪಿಸಿದರೆನ್ನಲಾದ
ನಾಲ್ಕು ಗೋಪುರಗಳು
ನಗರೀಕರಣದ ಅಪಾಯದ
ಮುನ್ಸೂಚನೆ ನೀಡಿದ
ಸ್ತೂಪಗಳೇ ಸರಿ;
ಇಂದಿನ ಘನ ಪಂಡಿತರೆನ್ನಿಸಿಕೊಂಡ
ಆಡಳಿತಗಾರರು,
ಹವಾನಿಯಂತ್ರಿತ
ಕೊಠಡಿಯಲ್ಲಿರುವ
ಐ.ಎ.ಎಸ್. ಅಧಿಕಾರಿಗಳು
ಬೆಂಗಳೂರಿನ ಬೆಳವಣಿಗೆಯ
ವೇಗವನ್ನು ತಡೆಯಲು
ಬೆಂಗಳೂರಿನ ಸುತ್ತ
ಜಾರಿಗೆ ತರಲು
ಹೊರಟ ಹಸಿರುಪಟ್ಟಿ
ಯ ಯೋಜನೆಯನ್ನು
ಅಂದೇ ಕಲ್ಪಿಸಿಕೊಂಡಿದ್ದವರು
ಕೆಂಪೇಗೌಡರು
ಎಂಬುದಕ್ಕೆ ಆ
ಗೋಪುರಗಳೇ ಸಾಕ್ಷಿ
ಆದುದರಿಂದ ಇನ್‌ಫರ್ಮೇನ್
ಟೆಕ್ನಾಲಜಿಯ
ಹುಚ್ಚು ಹಿಡಿದಿರುವ
ಇಂದಿನ ಬೆಂಗಳೂರನ್ನು
ಸಿಲಿಕಾನ್ ಕಣಿವೆ
ಎಂದು ಬಣ್ಣಿಸುವುದರಲ್ಲಿ
ಕೆಂಪೇಗೌಡರನ್ನು
ಮರೆತೆವಾದರೆ,
ಕುವೆಂಪು ಹೇಳಿದಂತೆ
ಅಯ್ಯೋ! ನಾವು
ಕನ್ನಡವನ್ನೇ
ಮರೆತಂತೆ !.
ದೇವೇಗೌಡರನ್ನು
ಮರೆತ ಬೆಂಗಳೂರು
ಇದೇ ಮಾತನ್ನು
ನಾವು ದೇವೇಗೌಡರ
ಬಗ್ಗೆಯೂ ಹೇಳಬೇಕಾದ
ಪರಿಸ್ಥಿತಿ ಒದಗಿಬಂದಿದೆ.
೧೯೭೦ ರ ದಶಕದ್ದಿ
ಬೆಂಗಳೂರಿನ ಸಹಸ್ರಾರು
ಮಂದಿಗೆ ಅನ್ನ
ಮತ್ತು ಬದುಕು
ನೀಡಿದ ಬಿನ್ನಿ
ಮಿಲ್ ಲಾಕ್ ಔಟ್
ಆಗಿ ಮುಚ್ಚಿಕೊಂಡಾಗ,
ಕಾರ್ಮಿಕರು ಬೀದಿಗೆ
ಬಿದ್ದು ಪರಿತಪಿಸುತ್ತಿದ್ದಾಗ
ಬೆಂಗಳೂರಿನ ಕಾರ್ಮಿಕರ
ಪರವಾಗಿ ಬೀದಿಗಿಳಿದವರು
ಅಂದಿನ ವಿರೋಧ
ಪಕ್ಷದ ನಾಯಕರಾದ
ಹೆಚ್.ಡಿ. ದೇವೇಗೌಡರು.
ದೇವೇಗೌಡರು
೧೯೮೩ ರಲ್ಲಿ
ಮೊಟ್ಟಮೊದಲ ಕಾಂಗ್ರೆಸ್ಸೇತರ
ಸರ್ಕಾರದಲ್ಲಿ
ಲೋಕೋಪಯೋಗಿ ಮತ್ತು
ನೀರಾವರಿ ಸಚಿವರಾದಾಗಲೂ
ಕೂಡ ಬೆಂಗಳೂರಿನ
ಬೆಳವಣಿಗೆ ಮತ್ತು
ಅಭಿವೃದ್ಧಿಯ
ಬಗ್ಗೆ ತಮ್ಮದೇ
ಆದ ಕಲ್ಪನೆಯಿಟ್ಟುಕೊಂಡಿದ್ದರೆಂಬುದಕ್ಕೆ
ಆ ಕಾಲದಲ್ಲಿ
ಆರಂಭಗೊಂಡ ರಿಂಗ್
ರಸ್ತೆ, ರಾಷ್ಟ್ರೀಯ
ಹೆದ್ದಾರಿ ೪
ರಲ್ಲಿ ಬೆಂಗಳೂರಿನಿಂದ
ತುಮಕೂರಿನವರೆಗೆ
ನಾಲ್ಕು ಲೇನ್
ಮಾರ್ಗ ಮತ್ತು
ಯಶವಂತಪುರದ ಮೇಲ್ಸೇತುವೆಗಳು
ಸಾಕ್ಷಿ. ಆದರೆ
ಬೆಂಗಳೂರಿನ ಅಭಿವೃದ್ಧಿಯ
ವಿಷಯದಲ್ಲಿ ಅದು
ಅವರಿಗಿದ್ದ ಅಧಿಕಾರ
ಪರಿಮಿತವಾಗಿತ್ತು.
ನೀರಾವರಿ ಸಚಿವರಾಗಿ
ಅಂದು ಅವರ ಮುಂದೆ
ಇದ್ದದ್ದು ಕೃಷ್ಣಾ-ಕಾವೇರಿಯಂತ
ಬೃಹತ್ ನೀರಾವರಿ
ಯೋಜನೆಗಳು.
ಹೀಗಾಗಿ ನೀರಾವರಿಯ
ಬಗ್ಗೆ ಅವರು
ನಡೆಸಿದ ಹೋರಾಟದಿಂದ
ದೇವೇಗೌಡರನ್ನು
ಕೇವಲ ಹಳ್ಳಿಗರಿಗೆ
ಗಂಟು ಹಾಕುವ
ಪ್ರಯತ್ನ ಕೆಲವು
ಸಂಕುಚಿತ ಮನೋಭಾವದ
ಶಕ್ತಿ-ವ್ಯಕ್ತಿಗಳಿಂದ
ನಡೆಯಿತು. ಆದರೆ
ಮುಂದೆ ದೇವೇಗೌಡರೇ
ಈ ರಾಜ್ಯದ ಮುಖ್ಯಮಂತ್ರಿಯಾದಾಗ,
ಅವರು ತಮ್ಮ ಕನಸಿನ
ಬೆಂಗಳೂರಿನ ಬಗ್ಗೆ
ಮನಬಿಚ್ಚಿ ಮಾತನಾಡುವ
ಮತ್ತು ಕಾರ್ಯತ:
ಮಾಡಿ ತೋರಿಸುವ
ದಿಟ್ಟತನ ತೋರಿದರು.
ಮುಖ್ಯಮಂತ್ರಿಯಾದ
ಕೆಲವೇ ದಿನಗಳಲ್ಲಿ
ಅವರು ತಮ್ಮ ಮನಸ್ಸಿನ
ಭಾವನೆಯನ್ನು
ಬೆಂಗಳೂರಿನ ಜನರೊಂದಿಗೆ
ಹೀಗೆ ಹಂಚಿಕೊಂಡರು.
ಬೆಂಗಳೂರು ಸೌಂದರ್ಯ
ಕಾಪಾಡಲು ದೇವೇಗೌಡ
ಪಣ :
ಬೆಂಗಳೂರು ಜುಲೈ
೧೦ : ಸರ್ಕಾರ
ಯಾರಿಗೂ ಬೆಂಗಳೂರಿನ
ಒಂದು ಅಂಗುಲ
ಭೂಮಿಯನ್ನು ಕೊಟ್ಟಿಲ್ಲ.
ಕೆಂಪೇಗೌಡ ನಿರ್ಮಿಸಿದ
ಈ ಸುಂದರ ನಗರದ
ಸೌಂದರ್ಯಕ್ಕೆ
ಧಕ್ಕೆ ತರಲು
ಖಂಡಿತ ಅವಕಾಶ
ನೀಡುವುದಿಲ್ಲ
ಎಂದು ಮುಖ್ಯಮಂತ್ರಿ
ಹೆಚ್.ಡಿ. ದೇವೇಗೌಡರು
ಇಂದು ಇಲ್ಲಿ
ಹೇಳಿದರು.
ಏಷಿಯಾದಲ್ಲೇ
ಅತ್ಯಂತ ವೇಗವಾಗಿ
ಬೆಳೆಯುತ್ತಿರುವ
ನಗರವೆಂಬ ಖ್ಯಾತಿಗೆ
ಪಾತ್ರವಾಗಿರುವ
ಬೆಂಗಳೂರಿನಲ್ಲಿ
ವಸತಿ ಸಮಸ್ಯೆ
ಭೀಕರವಾಗಿದೆ.
ಇದಕ್ಕೆ ನಾನಾ
ಕಾರಣಗಳಿವೆ.
ಕೇಂದ್ರ ಸರ್ಕಾರದ
ಉದಾರೀಕರಣ ನೀತಿಯ
ಸರಿಸಮನಾಗಿ ವಸತಿಯ
ಸಮಸ್ಯೆ ದಿನೇ
ದಿನೇ ಹೆಚ್ಚುತ್ತಿದೆ.
ಬೆಂಗಳೂರಿನಲ್ಲಿ
ಚಿನ್ನವನ್ನಾದರೂ
ಕೊಳ್ಳಬಹುದು,
ಭೂಮಿ ಕೊಳ್ಳುವುದು
ಕಷ್ಟ ಎನ್ನುವಂತಹ
ವಾತಾವರಣ ನಿರ್ಮಾಣವಾಗಿದೆ
ಎಂದು ಅವರು ಅಭಿಪ್ರಾಯ
ಪಟ್ಟರು.
ಸಮಸ್ಯೆಗಳ ಪರಿಹಾರ
ಕೇವಲ ಪ್ರಾಮಾಣಿಕ
ಪ್ರಯತ್ನಿದಿಂದಷ್ಟೇ
ಸಾಧ್ಯವೆಂದು
ನನಗನ್ನಿಸುತ್ತಿಲ್ಲ.
ಏಕೆಂದರೆ ಖಾಸತಿ
ನಿರ್ಮಾಣಗಾರರು
ಸಾವಿರಾರು ಎಕರೆ
ಜಾಗಗಳನ್ನು ಆಕ್ರಮಿಸಿಕೊಂಡು
ಕೂತಿದ್ದಾರೆ.
ಅದನ್ನು ಸರಿಪಡಿಸಲು
ಕಾನೂನು ತಿದ್ದುಪಡಿ
ಮಾಡೋಣವೆಂದರೆ
ಅವರು ನಮ್ಮನ್ನೇ
ಸರಿಪಡಿಸುವ ಪ್ರಯತ್ನ
ಮಾಡುತ್ತಾರೆ
ಎಂದು ವ್ಯಂಗ್ಯವಾಡಿದ
ಅವರು ನಾನು
ಹೆದರಿಕೊಂಡು
ಈ ಮಾತುಗಳನ್ನು
ಆಡುತ್ತಿಲ್ಲ.
ಇರುವ ಸಮಸ್ಯೆಯನ್ನು
ನಿಮ್ಮ ಮುಂದೆ
ಇಡುತ್ತಿದ್ದೇನೆ.
ಎಂದು ಸ್ಪಷ್ಟಪಡಿಸಿದರು.
(ಪ್ರಜಾವಾಣಿ
ವರದಿ, ಜುಲೈ
೧೧, ೧೯೯೫).
ಜುಲೈ ೩೧, ೧೯೯೫ರ
ಪ್ರಜಾವಾಣಿ ವರದಿ
:
... ದೇವೇಗ್ಭಡರು
ಗ್ರಾಮೀಣ ಪ್ರದೇಶದ
ಪರವಾದವರು.
ಅವರಿಗೆ ನಗರ
ಪ್ರದೇಶಗಳ ಸಮಸ್ಯೆಗಳ
ಬಗ್ಗೆ ಕಾಳಜಿ
ಇಲ್ಲ ಎಂದು ಬಹಳಷ್ಟು
ಜನರು ಅನುಮಾನ
ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಈ ಅನುಮಾನ
ಸರಿಯಲ್ಲ. ತಾವು
ಈ ಹಿಂದೆ ನೀರಾವರಿ
ಸಚಿವರಾಗಿದ್ದಾಗಲೇ
ಹಳ್ಳಿಗಳ ಅಭಿವೃದ್ದಿಗೆ
ಸಾಕಷ್ಟು ದುಡಿದು
ಮುಖ್ಯಮಂತ್ರಿಯಾಗಿ
ಬೆಂಗಳೂರು ನಗರದ
ಅಭಿವೃದ್ಧಿಗೆ
ಏನಾದರೂ ಮಾಡಬೇಕೆಂಬ
ಕಾಳಜಿಯಿಂದ ಬೆಂಗಳೂರು
ಅಭಿವೃದ್ಧಿ ಪ್ರಾಧಿಕಾಋದ
ಆಡಳಿತವನ್ನು
ತಾವೇ ಇಟ್ಟುಕೊಂಡಿರುವುದಾಗಿ
ಮುಖ್ಯ ಮಂತ್ರಿ
ದೇವೇಗೌಡರು ಸ್ಪಷ್ಟಪಡಿಸಿದರು.
ಹೀಗೆ ಹೇಳಿದ್ದ
ದೇವೇಗೌಡರು ಹಾಗೆಯೇ
ನಡೆದುಕೊಂಡರು.
ಅಂದಿನಿಂದಲೂ
ಇಂದಿನವರೆಗೂ
ಬೆಂಗಳೂರಿಗರ
ಬದುಕಿನಲ್ಲಿ
ಒಂದಿಲ್ಲೊಂದು
ರೀತಿಯಲ್ಲಿ ದೇವೇಗೌಡ
ಕೊಡುವ ನಿತ್ಯಸತ್ಯವಾಗಿ
ಕಾಣಿಸುತ್ತಿದೆ.
ಆದರೆ ಅವರು
ಮಾಡಿದ ಸಾಧನೆಗಳನ್ನು
ಮರೆಮಾಚುವ ಜಾಣಮರೆವು
ಮತ್ತು ಜಾಣಕುರುಡು
ನಮ್ಮ ರಾಜಕೀಯ
ಮಂದಿಗೆ ತಗಲುಬಿಟ್ಟಿದೆ.
ಇದಕ್ಕೆ ಉದಾಹರಣೆಗಳು
ಸಾಕುಬೇಕಾದಷ್ಟಿವೆ.
ಖಾಲಿ ಪಾತ್ರೆಗಳ
ಸಪ್ಪಳ :
ತೀರಾ ಇತ್ತೀಚಿನ
ಉದಾಹರಣೆಯೆಂದರೆ
ಈಗ್ಗೆ ಸುಮಾರು
೮-೧೦ ತಿಂಗಳುಗಳಿಂದ
ಬೆಂಗಳೂರು ನಗರದಲ್ಲಿ
ಒಂದಿಲ್ಲೊಂದು
ಸರ್ಕಾರಿ ಉದ್ಘಾಟನಾ
ಸಮಾರಂಭ ಜರುಗುತ್ತಲೇ
ಇದೆ. ಬಿ.ಡಿ.ಎ.
ವತಿಯಿಂದಲೋ,
ಬೆಂಗಳೂರು ಮಹಾನಗರಪಾಲಿಕೆವತಿಯಿಂದಲೋ,
ಜಲಮಂಡಳಿ ವತಿಯಿಂದಲೋ
ಒಂದಲ್ಲ ಒಂದು
ಬಡಾವಣೆಯಲ್ಲಿ
ಒಂದಲ್ಲ ಒಂದು
ಅದ್ದೂರಿ ಸಮಾರಂಭ
ನಡೆಯುತ್ತಿದೆ.
ಇಂದಿನ ಕಾಂಗ್ರೆಸ್
ಸರ್ಕಾರದ ಮುಖ್ಯವಂತ್ರಿ
ಮತ್ತು ಮಂತ್ರಿ
ಮಹೋದಯರುಗಳದ್ದೇ
ಇದಕ್ಕೆ ಸಾರಥ್ಯ.
ಸರ್ಕಾರದಿಂದ
ಪುಟಗಟ್ಟಲೇ ಪತ್ರಿಕಾ
ಜಾಹೀರಾತು ಬಿಡುಗಡೆ.
ಈ ಎಲ್ಲಾ ಅಭಿವೃದ್ಧಿ
ಕಾರ್ಯಗಳೂ ಇಂದಿನ
ಸರ್ಕಾರದ ಸಾಧನೆಗಳೇನೋ
ಎಂಬಂತೆ ಜನಮನದಲ್ಲಿ
ಭ್ರಾಂತಿ ಬಿತ್ತುವ
ಹುನ್ನಾರ. ಬೆಳೆಯೇನೋ
ಕಟಾವಿಗೆ ಬಂದಿದೆ.
ಕೊಯ್ಲು ಮಾಡಬೇಕು
ನಿಜ. ಆದರೆ
ಉತ್ತು, ಬಿತ್ತು
ಕಳೆ ಕಿತ್ತು,
ಬೇಸಾಯ ಮಾಡಿದವರನ್ನೇ
ಮರೆಯುವುದು ಸರಿಯೇ?
ಇದು ಬೆಂಗಳೂರಿನ
ಜನತೆ ಇಂದು ಕೇಳಬೇಕಾದ
ಪ್ರಶ್ನೆ. ಬೆಂಗಳೂರಿನ
ಜನರು ಕೆಂಪೇಗೌಡರನ್ನು
ಮರೆಯುವುದು ಸಾಧ್ಯವಿಲ್ಲ.
ಬೆಂಗಳೂರು ಕರಗವನ್ನೂ
ಕೂಡ ಅವರು ಮರೆಯುವುದು
ಸಾಧ್ಯವಿಲ್ಲ.
ಹಾಗೆಯೇ ದೇವೇಗೌಡರನ್ನೂ
ಕೂಡ ಮರೆಯುವುದು
ಸಾಧ್ಯವಿಲ್ಲದ
ಮಾತು. ಈಗಿನ
ಕಾಂಗ್ರೆಸ್ ಸರ್ಕಾರದ
ಮರೆತ - ಮೊರೆತಗಳ
ಅರ್ಭಟವೆಲ್ಲಾ
ಖಾಲಿ ಪಾತ್ರೆಗಳ
ಸಪ್ಪಳವಷ್ಟೇ!
ಫ್ಲೈ ಓವರ್
ಇರಬಹುದು, ವರ್ತುಲ
ರಸ್ತೆ ಇರುಬಹದು,
ಕೊಳಚೆ ನಿರ್ಮೂಲನೆ
ಇರಬಹುದು, ಕಾವೇರಿ
೪ ನೇ ಹಂತದ ಯೋಜನೆ
ಇರಬಹುದು, ಇವೆಲ್ಲಾ
ದೇವೇಗೌಡರ ದೂರದೃಷ್ಟಿಯ
ಫಲಗಳು. ಮುಖ್ಯಮಂತ್ರಿಯಾಗಿ,
ಪ್ರಧಾನಿಯಾಗಿ
ಅವರು ಕನಸಿದ
ಬೆಂಗಳೂರನ್ನು
ನನಸಾಗಿಸಲು ಅವರು
ಇಟ್ಟ ದಿಟ್ಟ
ಹೆಜ್ಜೆಗಳು,
ನೂರಾರು ಕೋಟಿ
ರೂಪಾಯಿಗಳನ್ನು
ಇವುಗಳಿಗಾಗಿ
ತೊಡಗಿಸಿದವರು.
ಕಾರ್ಯರಂಭಗೊಳಿಸಿದವರೂ
ಅವರೇ, ಆದರೆ
ಅವು ಮುಗಿಯುವ
ಹಂತ ತಲುಪಿದಾಗ
ದೇವೇಗೌಡರು ಅಧಿಕಾರ
ವಂಚಿತರಾದದ್ದು
ಜನತಾಂತ್ರಿಕ
ವಾಸ್ತವ ಅಣಕ.
ಆದರೆ ಅದೇ ಜನತಂತ್ರದ
ತಿರುಳೂ ಕೂಡ.
ಇಲ್ಲಿ ಬಹುಮುಖ್ಯವಾಗಿ
ಗಮನಿಸಬೇಕಾದ
ಸಂಗತಿಯೆಂದರೆ,
ಸರ್ಕಾರಗಳು ಬರುತ್ತವೆ;
ಹೋಗುತ್ತವೆ.
ಕಟ್ಟಡಗಳ ಸುಣ್ಣ-ಬಣ್ಣ,
ರಸ್ತೆಗಳಿಗೆ
ಡಾಂಬರೀಕರಣ,
ಹೊಸ ಕಟ್ಟಡಗಳ
ನಿರ್ಮಾಣ, ಇವು
ಯಾರು ಅಧಿಕಾರದಲ್ಲಿರಲಿ
ಬಿಡಲಿ, ಸರ್ಕಾರಿ
ಯಂತ್ರದ ಬಳಕೆಯಿಂದ
ಯಾಂತ್ರಿಕವಾಗಿ
ನಡೆಯುತ್ತಲೇ
ಇರುತ್ತವೆ.
ಆದರೆ ಇವು ಒಂದು
ಸರ್ಕಾರದ ಸಾಧನೆಯ
ಕುರುಹುಗಳಲ್ಲ.
ಒಂದು ಜೀವಂತ
ಸರ್ಕಾರ ಮತ್ತು
ಅದರ ದಕ್ಷ ನೇತಾರ
ಎಂಉದು ಸಾಬೀತಾಗುವುದು
ಆ ಆಡಳಿತಗಾರ
ತಳೆಯುವ ಮುಂದಾಲೋಚನೆ
ಮತ್ತು ಅಡಿಪಾಯ
ಹಾಕುವ ಶಾಶ್ವತ,
ದೂರಗಾಮಿ ಯೋಜನೆಗಳಿಂದ,
ಈ ದೃಷ್ಟಿಯಿಂದ
ನೋಡಿದರೆ ಮಾತ್ರ
ನಮಗೆ ದೇವೇಗೌಡರ
ಕೊಡುಗೆಯ ಮಹತ್ವದ
ಅರಿವಾಗುತ್ತದೆ.
ಭವಿಷ್ಯದ ಬೆಂಗಳೂರಿಗೆ
ದೇವೇಗೌಡರು ಮಾಡಿದ
ಯೋಚನೆ ಏನು?
ಅವರು ಆರಂಭಿಸಿದ
ಯೋಜನೆಗಳು ಯಾವುವು?
ತೊಡಗಿಸಿದ ಬಂಡವಾಳ
ಎಷ್ಟು? ಅವುಗಳ
ಫಲಶೃತಿ ಏನು?
ಎಂಬೆಲ್ಲವಕ್ಕೂ
ಸಾಕ್ಷ್ಯಾಧಾರಗಳ
ಸಮೇತದ ಉತ್ತರ
ಮುಂದಿನ ಪುಟಗಳಲ್ಲಿ
ಇವೆ. ಇವು ಬರಿಯ
ಮಾತಿನ ಉತ್ಪ್ರೇಕ್ಷೆಯಲ್ಲ;
ರುಜುವಾತುಗಳ
ಮೂಲಕ ಕೈಗೊಂಡ
ಸಮೀಕ್ಷೆ. ಬೆಂಗಳೂರಿನ
ಜನರು ಇದನ್ನ
ಓದಿ ಅರ್ಥಮಾಡಿಕೊಳ್ಳಬೇಕೆಂಬುದೇ
ನಮ್ಮ ಅಪೇಕ್ಷೆ.
ಬೆಂಗಳೂರಿಗೆ
ನಾಲ್ಕನೇ ಹಂತದ
ಕಾವೇರಿ ಹರಿದ
ಕಥೆ :
ಬೆಂಗಳೂರಿಗರೇ,
ನೀವು ಕುಡಿಯುವ
ನೀರ್ ಕಾವೇರಿ
:
ಆದರೆ?...
ಬೆಂಗಳೂರಿನ
ನಾಗರೀಕರಿಗೆ
ಬೇಸಿಗೆಯೆಂಬುದು
ಭಯಂಕರ ದು:ಸ್ವಪ್ನ.
ಕುಡಿಯುವ ನೀರಿನ
ಸಮಸ್ಯೆ ದೈನಂದಿನ
ಗೋಳು. ಕಾವೇರಿ
ನೀರು ತಂದು ಬೆಂಗಳೂರಿನ
ದಾಹ ತಣಿಸುವ
ಯೋಜನೆ ರೂಪುಗೊಂಡಿದ್ದೇ
ಇದಕ್ಕಾಗಿ.
ಕಾವೇರಿ ೪ನೇ
ಹಂತದ ಯೋಜನೆಯೂ
ಇದರ ಮುಂದುವರಿಕೆ.
ಸುಮಾರು ೧೩೦೦
ಕೋಟಿ ರೂಪಾಯಿಗಳ
ಅಗಾಧ ವೆಚ್ಚದ್ದು
ಈ ಯೋಜನೆ. ಕಾಂಗ್ರೆಸ್
ಸರ್ಕಾರ ೧೯೯೪
ರ ನವೆಂಬರ್ ಚುನಾವಣೆಗೆ
ಕೆಲವೇ ದಿನಗಳು
ಇರುವಾಗ ಈ ಯೋಜನೆಗೆ
ಸಾಂಕೇತಿಕವಾಗಿ
ಕ್ಷುಲ್ಲಕ ಮೊತ್ತದ
ಹಣವನ್ನು ಮೀಸಲಿಟ್ಟು
ದೊಡ್ಡ ಪ್ರಚಾರ
ಮಾಡಿದ್ದು ಬಿಟ್ಟರೆ
ಮತ್ತೆ ಅದು ಹಾಗೇಯೇ
ನೆನೆಗುದಿಗೆ
ಬಿದ್ದಿತ್ತು.
ಆದರೆ ದೇವೇಗೌಡರು
ಮುಖ್ಯಮಂತ್ರಿಯಾಗಿ,
ಮುಂದೆ ಪ್ರಧಾನಿಯಾಗಿ
ಈ ಆರ್ಥಿಕ ಬಿಕ್ಕಟ್ಟಿಗೆ
ಪರಿಹಾರ ಕಂಡುಹಿಡಿದರು.
ಸರ್ಕಾರಿ ಆಜ್ಞೆ
ಸಂಖ್ಯೆ ಹೆಚ್.ಯು.ಡಿ.
೧೫ ಎಂ.ಎನ್.ಐ.
೯೦ ಬೆಂಗಳೂರು
ದಿನಾಂಕ ೨೮.೦೬.೧೯೯೫
ರಲ್ಲಿ ಮುಖ್ಯಮಂತ್ರಿಯಾಗಿ
ದೇವೇಗೌಡರು ಕೈಗೊಂಡ
ಮಹತ್ವದ ನಿರ್ಧಾರ
ಮತ್ತು ಸರ್ಕಾರದ
ಆದೇಶದಂತೆ ೧೩೦೦
ಕೋಟಿ ರೂಪಾಯಿಗಳ
ಕಾವೇರಿ ೪ನೇ
ಹಂತದ ಯೋಜನೆಗೆ
ಈ ಕೆಳಗಿನ ಹಣವನ್ನು
ಒದಗಿಸುವ ವ್ಯವಸ್ಥೆಯಾಯಿತು.
(ರೂ.ಕೋಟಿಗಳಲ್ಲಿ)
೧. ಕರ್ನಾಟಕ
ಸರ್ಕಾರದ ಕೊಡುಗೆ
ರೂ. ೧೩೪.೦೦
೨. ಬಿ.ಡಿ.ಎ.
ಕೊಡುಗೆ ರೂ.
೩೩.೦೦
೩. ಮಹಾನಗರ ಪಾಲಿಕೆಯ
ಕೊಡುಗೆ ರೂ.
೩೩.೫೦
೪. ಬೆಂಗಳೂರು
ಜಲಮಂಡಳಿ ಕೊಡುಗೆ
ರೂ. ೬೭.೦೦
೫. ಓ.ಇ.ಸಿ.ಎಫ್.
ಸಾಲ ರೂ. ೮೦೪.೦೦
ಒಟ್ಟು ರೂ.
೧೦೭೨.೦೦
ಮೇಲ್ಕಂಡ ವಿತರಣೆಯಲ್ಲಿ
ಬೆಂಗಳೂರು ನಾಗರೀಕರಿಗೆ
೪ನೇ ಹಂತದ ಯೋಜನೆಯಲ್ಲಿ
ಕಾವೇರಿ ನೀರನ್ನು
ಹರಿಸಲು ಜಪಾನಿನ
ದಿ ಓವರ್‌ಸೀಸ್
ಎಕನಾಮಿಕ್ ಕೋ
ಅಪರೇಷನ್ ಫಂಡ್
(ಓ.ಇ.ಸಿ.ಎಫ್)
ಮತ್ತು ಬೆಂಗಳೂರು
ಜಲಮಂಡಳಿಯ ನಡುವೆ
ಒಪ್ಪಂದವೂ ನಡೆಯಿತು.
ದೇವೇಗೌಡರು
ಮುಖ್ಯಮಂತ್ರಿಯಾಗಿ
ಈ ವಿಷಯದಲ್ಲಿ
ತೋರಿದ ಅಸ್ಥೆ,
ಆಸಕ್ತಿ ಮತ್ತು
ನೀಡಿದ ಆಧ್ಯತೆಯ
ಫಲವೇ ಈ ಬೃಹತ್
ಮೊತ್ತದ ಸಾಲ
ಮಂಜೂರಾತಿ.
ಭಗೀರಥರಾದ ದೇವೇಗೌಡರು
:
ಬೆಂಗಳೂರು ನಗರದ
ಜನತೆ ಕುವೆಂಪು
ಹಏಳಿದಂತೆ ನಾವು
ಕುಡಿಯುವ ನೀರ್
ಕಾವೇರಿ ಎಂದು
ಹೆಮ್ಮೆ ಪಟ್ಟಿಕೊಳ್ಳಬಹುದು.
ಆದರೆ ಈ ವಿಷಯದಲ್ಲಿ
ತಲೆದೋರಿದ್ದ
ದೊಡ್ಡ ಅಡ್ಡಿಯೊಂದನ್ನು
ದೇವೇಗೌಡರು ನಿಭಾಯಿಸಿದ
ರೀತಿ ನಿಜಕ್ಕೂ
ಭಗೀರಥ ಯತ್ನವೇ
ಸರಿ. ದೇವೇಗೌಡರು
ಮುಖ್ಯಮಂತ್ರಿಯಾಗುವುದಕ್ಕೆ
ಮೊದಲು ಇಲ್ಲಿ
ಇದ್ದದ್ದು,
ಕಾಂಗ್ರೆಸ್ ಸರ್ಕಾರವೇ.
ಆದರೆ ಕಾವೇರಿ
೪ ನೇ ಹಂತದ
ಕುಡಿಯುವ ನೀರಿನ
ಯೋಜನೆಯಲ್ಲಿ
ಕರ್ನಾಟಕ ೯ ಟಿ.ಎಂ.ಸಿ.
ಯಷ್ಟು ನೀರನ್ನು
ಬಳಕೆ ಮಾಡಿಕೊಳ್ಳಲು
ಆಗಿನ ಕೇಂದ್ರ
ಸರ್ಕಾರದ ಅಧಿಕಾರಿಗಳು
ಎತ್ತಿದರು.
ಕಾವೇರಿ ವಿವಾದ
ನ್ಯಾಯ ಮಂಡಳಿಯ
ಮುಂದೆ ಇರುವುದರಿಂದ
ಇದನ್ನೆ ಅನುಮತಿ
ನಈಡಲು ಸಆಧ್ಯವಾಗದು
ಎಂಬ ವಾದ ಅವರಿಂದ.
ರಾಜ್ಯ ಸರ್ಕಾರ
ಮತ್ತು ಕೇಂದ್ರ
ಸರ್ಕಾರಗಳೆರಡೂ
ಕಾಂಗ್ರೆಸ್ ಸರ್ಕಾರಗಳೇ
ಆಗಿದ್ದರೂ, ಅವರಿಂದ
ಕರ್ನಾಟಕಕ್ಕೆ
ನ್ಯಾಯ ದೊರಕಿಸಿಕೊಡಲು
ಸಾಧ್ಯವಾಗಲಿಲ್ಲ.
ಮುಂದೆ ದೇವೇಗೌಡರು
ಮುಖ್ಯಮಂತ್ರಿಯಾದರು.
ದೇವೇಗೌಡರು
ಈ ಕಾವೇರಿ ನಾಲ್ಕನೇ
ಹಂತದ ಕುಡಿಯುವ
ನೀರಿನ ಯೋಜನೆಗೆ
ಹಣವನ್ನು ವ್ಯವಸ್ಥೆ
ಮಾಡಿದರೂ, ಕಾವೇರಿ
ನೀರಿನ ಬಳಕೆಗೇ
ಅಡ್ಡಿ ಎಂಬಂತಹ
ಸ್ಥಿತಿ ನಿರ್ಮಾಣವಾಯಿತು.
ದೇವೇಗೌಡರು
ಕಾಂಗ್ರೆಸ್ಸಿನ
ಕೇಂದ್ರ ಸರ್ಕಾರದ
ಮುಂದೆ ಪರಿಪರಿಯಾಗಿ
ಅನೇಕ ಬಾರಿ ಮೊರೆಯಿಟ್ಟರೂ
ಕೇಂದ್ರ ಸರ್ಕಾರ
ಇದಕ್ಕೆ ಅನುಮತಿ
ನೀಡಲಿಲ್ಲ.
ಅದೃಷ್ಟವಶಾತ್
ದೇವೇಗೌಡರೇ ಪ್ರದಾನಿಯಾಗಿದ್ದರಿಂದ
ಬೆಂಗಳೂರಿನ ಜನರು
ಬದುಕಿದರು.
ಸ್ವಯಂ ದೇವೇಗೌಡರಿಂದ
ಸಂಬಂಧಿಸಿದ ಉನ್ನತಾಧಿಕಾರಿಗಳಿಗೆ
ಬುಲಾವ್, ಕಡತಗಳ
ಸಮೇತ ಅಧಿಕಾರಿಗಳು
ಹಾಜರ್. ಅವರು
ಎತ್ತಿದ ಅಕ್ಷೇಪಣೆಗಳಿಗೆಲ್ಲಾ
ಗೌಡರಿಂದ ಮನವರಿಕೆಯಾಗುವಂತಹ
ಉತ್ತರ, ನ್ಯಾಯ
ಮಂಡಳಿ, ನೀರಾವರಿ
ಇಲಾಖೆ, ಜಲಸಂಪನ್ಮೂಲ
ಇಲಾಖೆ, ಇವುಗಳಿಗೆಲ್ಲಾ
ಸ್ಪಷ್ಟ ತಿಳುವಳಿಕೆಯ
ಮಾರ್ಗದರ್ಶನ
ಗೌಡರಿಂದ ಪರಿಣಾಮವಾಗಿ
ಕಾವೇರಿ ೪ನೇ
ಹಂತದ ಬೆಂಗಳೂರು
ನಗರದ ಕುಡಿಯುವ
ನೀರು ಸರಬರಾಜು
ಯೋಜನೆಯ ಕಡತಕ್ಕೆ
ಮುಕ್ತಿ. ಇದು
ನಮ್ಮಲ್ಲಿ ಎಷ್ಟು
ಜನಕ್ಕೆ ತಾನೇ
ಗೊತ್ತು?
ದೇವೇಗೌಡರ ಮೆದುಳಿನ
ಕೂಸು ಬೆಂಗಳೂರು
ಮೆಗಾಸಿಟಿ.
ಜನರ ಬಳಿಗೇ ಮುಖ್ಯಮಂತ್ರಿ
: ದೇವೇಗೌಡರ
ಜನತಾ ದರ್ಶನ
:
ದೇವೇಗೌಡರು
ಹಳ್ಳಿಯಿಂದ ದಿಲ್ಲಿಯವರೆಗೆ
ಜನರಿಂದಲೇ, ಜನರ
ಮಧ್ಯದಿಂದಲೇ
ಬೆಳೆದು ಬಂದವರು.
ಎಂತಲೇ ಅವರಿಗೆ
ಜನಗಳ ಮಧ್ಯೆ
ಇದ್ದು, ಜನರ
ಕಷ್ಟ ಸುಖಗಳನ್ನು
ಖುದ್ದು ಅರಿತು,
ಜನರ ಸಮಸ್ಯೆಗಳಿಗೆ
ಪರಿಹಾರ ಕಂಡು
ಹಿಡಿಯಬೇಕೆಂಬ
ಇರಾದೆ. ಅವರಿಗೆ
ಹವಾ ನಿಯಂತ್ರಿತ
ಕೊಠಡಿಯಲ್ಲಿ
ಐಷಾರಾಮವಾಗಿ
ಕುಳಿತು ಕಾಗದಗಳ
ಮೇಲೆ ಪರಿಹಾರ
ಹುಡುಕುವುದರಲ್ಲಿ
ನಂಬಿಕೆ ಇಲ್ಲ.
ಕಣ್ಣಾರೆ ಕಾಣಬೇಕು,
ಖುದ್ದು ಅರಿಯಬೇಕು,
ವಾಸ್ತವಿಕ ಪರಿಹಾರ
ಕಂಡುಹಿಡಿಯಬೇಕು.
ಇದು ಅವರು ಸಾರ್ವಜನಿಕ
ಬದುಕಿನಲ್ಲಿ
ರೂಢಿಸಿಕೊಂಡು
ಬಂದಿರುವ ಆಚಾರ.
ದಿನದ ೨೪ ಗಂಟೆಯೂ
ದುಡಿಯಬಲ್ಲ,
ನಾಡನ್ನು ಸುತ್ತಬಲ್ಲ,
ಬಿಸಿಲು-ಧೂಳು
ಲೆಕ್ಕಿಸದೆ ಜನರತ್ತ
ನಡೆಯಬಲ್ಲ ಇಚ್ಚಾಶಕ್ತಿ
ಅವರಿಗಿದೆ.
ಆದುದರಿಂದ ಜನರ
ಬಳಿಗೇ ಸರ್ಕಾರವನ್ನು
ಕೊಂಡೊಯ್ಯಲು
ಮುಖ್ಯಮಂತ್ರಿಯಾಗಿ
ಅವರು ರೂಪಿಸಿಕೊಂಡದ್ದು
ವಿನೂತನ ಮಾದರಿಯ
ಜನತಾ ದರ್ಶನ
ಮತ್ತು ನಗರ ಪ್ರದಕ್ಷಿಣೆ.
ಬೆಂಗಳೂರು ದಿನೇ
ದಿನೇ ಮಿತಿಮೀರಿ
ಬೆಳೆಯುತ್ತಿದೆ.
ಜನಬಾಹುಳ್ಯ
ಸಂಚಾರ ಒತ್ತಡ,
ಪರಿಸರ ಮಾಲಿನ್ಯಗಳಿಂದಾಗಿ
ದೈನಂದಿನ ಬದುಕು
ದುರ್ಭರವಾಗುತ್ತಿದೆ.
ಭೌತಿಕ ಮತ್ತು
ಮಾನಸಿಕ ಒತ್ತಡಗಳಿಂದ
ಜನ ಬಳಲುತ್ತಿದ್ದಾರೆ.
ಇದು ಮುಖ್ಯಮಂತ್ರಿಗಳಾಗಿದ್ದಾಗ
ದೇವೇಗೌಡರು ಪ್ರತಿವಾರ
ಕೈಗೊಳ್ಳುತ್ತಿದ್ದ
ಬೆಂಗಳೂರು ನಗರ
ಪ್ರದಕ್ಷಿಣೆಯ
ಸಮಯದಲ್ಲಿ ಕಣ್ಣಾರೆ
ಕಂಡಿದ್ದ ಅನುಭವ.
ಎಂತಲೇ ಗೊತ್ತುಗುರಿಯಿಲ್ಲದಂತೆ
ಬೆಳೆಯುತ್ತಿರುವ
ಈ ನಗರದ ಜನರ,
ಅದರಲ್ಲೂ ಬಡವರು,
ಮಧ್ಯಮ ವರ್ಗದವರೂ
ಹಾಗೂ ಕೊಳಗೇರಿ
ನಿವಾಸಿಗಳ ಬದುಕನ್ನು
ಹಸನಾಗಿಸಬೇಕೆಂಬ
ಕಾಳಜಿ ಅವರದು.
ಈ ನಿಟ್ಟಿನಲ್ಲಿ
ಅವರಿಟ್ಟ ಮೊದಲ
ಹೆಜ್ಜೆ ರೆವಿನ್ಯೂ
ನಿವೇಶನಗಳ ಸಕ್ರಮ.
ಜನತಾ ದಳದಿಂದ
ರೆವಿನ್ಯೂ ನಿವೇಶನಗಳ
ಸಕ್ರಮ : ಕಾಂಗ್ರೆಸ್
ಸರ್ಕಾರದಿಂದ
ಮನೆಗಳ ನೆಲಸಮ
:
ಬೆಂಗಳೂರು ಬೆಳೆಯುತ್ತಿರುವುದರೊಂದಿಗೆ
ಬೆಳೆಯುತ್ತಾ
ಹೋದದ್ದು ವಸತಿ
ಸಮಸ್ಯೆ. ಹಿಂದಿನ
ಸರ್ಕಾರಗಳು ಬೆಳವಣಿಗೆಯ
ನಿಯಂತ್ರಣಕ್ಕಾಗಲೀ,
ವ್ಯವಸ್ಥಿತ ವಸತಿ
ಸೌಲಭ್ಯಕ್ಕಾಗಲೀ
ದೂರದೃಷ್ಟಿಯ
ಕ್ರಮಗಳನ್ನು
ಕೈಗೊಳ್ಳದೇ ಹೋದುದ್ದರ
ಫಲವಾಗಿ ಹುಟ್ಟಿಕೊಂಡ
ಸಮಸ್ಯೆ ರೆವಿನ್ಯೂ
ನಿವೇಶನಗಳದ್ದು,
ಬಡವರು, ಮಧ್ಯಮವರ್ಗದವರು,
ಅಂಗೈಯಗಲದ ನಿವೇಶನ
ಪಡೆದು ಮನೆ ಕಟ್ಟಿಕೊಳ್ಳಲು
ಕಂಡುಕೊಂಡ ಒಳದಾರಿ
ಇದು! ಹೀಗೆ
ಬೆಂಗಳೂರು ನಗರದ
ಸುತ್ತಮುತ್ತ
ಬೃಹದಾಕಾರವಾಗಿ
ಹುಟ್ಟಿಕೊಂಡ
ರೆವಿನ್ಯೂ ನಿವೇಶನಗಳು
ಕಾನೂನಿನ ದೃಷ್ಟಿಯಲ್ಲಿ
ಅಕ್ರಮ ವೆನಿಸಿಕೊಂಡವು.
ಅಲ್ಲಿ ವಾಸಿಸುವ
ಜನರಿಗೆ ನೀರು,
ವಿದ್ಯುತ್, ಒಳಚರಂಡಿ
ಸೌಲಭ್ಯಗಳಂತಹ
ನಾಗರೀಕ ಸೌಲಭ್ಯಗಳ
ಪೂರೈಕೆ ಇಲ್ಲ.
ಇತ್ತ ಬೆಂಗಳೂರು
ಮಹಾನಗರಪಾಲಿಕೆ,
ಅತ್ತ ಬಿ.ಡಿ.ಎ.
ಎರಡರಿಂದಲೂ ಅವಕೃಪೆಗೆ
ಪಾತ್ರರಾದ ಜನರು
ಇವರು. ಹೊಟ್ಟೆ
ಬಟ್ಟೆ ಕಟ್ಟಿ
ಕಾಸಿಗೆ ಕಾಸು
ಸೇರಿಸಿ, ಹಿಡಿಯಗಲ
ನಿವೇಶನಗಳಲ್ಲಿ
ಸೂರೊಂದನ್ನು
ಕಟ್ಟಿಕೊಂಡರೂ
ಅವರ ನೆತ್ತಿಯ
ಮೇಲೆ ಸದಾ ತೂಗುಕತ್ತಿ.
ಯಾವ ಘಳಿಗೆಯಲ್ಲಿ
ಬಿ.ಡಿ.ಎ.ನ ಬುಲ್ಡೋಜರ್
ಬರುತ್ತದೋ ಎಂಬ
ಭೀತಿ. ಆಡಳಿತ
ನಡೆಸಿದ ಎಲ್ಲಾ
ಸರ್ಕಾರಗಳಿಗೂ
ಈ ಬಡವರ ಮೊರೆ,
ದೂರು, ಆದರೆ
ಪರಿಹಾರ ಕಾಣಲೇ
ಇಲ್ಲ. ಈ ಸಮಸ್ಯೆಯ
ಹುತ್ತಕ್ಕೆ ಕೈ
ಹಾಕುವ ಧೈರ್ಯವನ್ನು
ಯಾವ ಮುಖ್ಯಮಂತ್ರಿಯೂ
ಮಾಡಲಿಲ್ಲ.
ಆದರೆ ಬಡವರ ಪರವಾಗಿ
ಈ ಧೈರ್ಯ ಮಾಡಿದವರು
ದೇವೇಗೌಡರು.
ಅದೂ ಅವರು ಅಧಿಕಾಋಕ್ಕೆ
ಬಂದ ಏಳೇ ತಿಂಗಳಲ್ಲಿ
! ದೇವೇಗೌಡರು
ಕೈಗೊಂಡ ಅಕ್ರಮ
ರೆವಿನ್ಯೂ ನಿವೇಶನಗಳ
ಸಕ್ರಮದ ಬಗ್ಗೆ
ಅವರು ಮುಖ್ಯಮಂತ್ರಿಯಾಗಿ
ಆದಿದ್ದು ಮಾಡಿದ್ದೇನು
ಎಂಬುದಕ್ಕೆ ಈ
ಸಾಕ್ಷ್ಯ ನೋಡಿ.
ಪ್ರಜಾವಾಣಿ ವರದಿ
: ಜುಲೈ ೩೦,
೧೯೯೫ :
ನಗರದ ಖಾಸಗಿ
ರೆವಿನ್ಯೂ ಬಡಾವಣೆಗಳ
ಸಕ್ರಮ
ಬೆಂಗಳೂರು,
ಜುಲೈ ೨೯ :
ನಗರದ ಸುತ್ತ
ಮುತ್ತ ಅಸ್ತಿತ್ವದಲ್ಲಿರುವ
ಎಲ್ಲಾ ಖಾಸಗಿ
ರೆವಿನ್ಯೂ ಬಡಾವಣೆಗಳನ್ನು
ಅತಿ ಶೀಘ್ರದಲ್ಲಿಯೇ
ಸಕ್ರಮಗೊಳಿಸಲು
ಸರ್ಕಾರ ಉದ್ದೇಶಿಸಿದೆ
ಎಂದು ಮುಖ್ಯಮಂತ್ರಿ
ಎಚ್.ಡಿ. ದೇವೇಗೌಡ
ಅವರು ಇಂದು ಇಲ್ಲಿ
ಪ್ರಕಟಿಸಿದರು.
ಬೆಂಗಳೂರು ಮಹಾನಗರ
ಪಾಲಿಕೆ ವ್ಯಾಪ್ತಿಯಲ್ಲಿರುವ
ಖಾಸಗಿ ರೆವಿನ್ಯೂ
ನಿವೇಶನಗಳನ್ನು
ಸಕ್ರಮಗೊಳಿಸುವ
ಕಾರ್ಯವನ್ನು
ಉದ್ಘಾಟಿಸಿ ಮಾತನಾಡಿದ
ಅವರು, ಬೆಂಗಳೂರು
ಅಭಿವೃದ್ಧಿ ಪ್ರಾಧಿಕಾರ,
ಅಧಿಸೂಚಿತ ಪ್ರದೇಶಗಳು
ಮತ್ತು ಇದಕ್ಕೆ
ಹೊರತಾದ ಪ್ರದೇಶಗಳಲ್ಲಿ
ಅಸ್ತಿತ್ವದಲ್ಲಿರುವ
ಎಲ್ಲ ರೆವಿನ್ಯೂ
ಬಡಾವಣೆಗಳನ್ನೂ
ಸಕ್ರಮಗೊಳಿಸಲು
ಕ್ರಮ ಕೈಗೊಳ್ಳಲಾಗುತ್ತಿದೆ
ಎಂದರು.
ರೆವಿನ್ಯೂ ಬಡಾವಣೆಗಳನ್ನು
ಸಕ್ರಮಗೊಳಿಸಬೇಕೆಂಬ
ಬೇಡಿಕೆ ತುಂಬಾ
ಹಳೆಯದು. ಹಿಂದಿನ
ಸರ್ಕಾರಗಳು ಈ
ಬಗ್ಗೆ ಯಾವುದೇ
ನಿರ್ಧಾರ ಕೈಗೊಳ್ಳುವ
ಮೂಲಕ ಈ ಸಮಸ್ಯೆಗೆ
ಖಾಯಂ ಪರಿಹಾರ
ಕಲ್ಪಿಸಲು ಮುಂದಾಗಿದೆ
ಎಂದು ಹೇಳಿದರು.
ಮೊದಲ ಹಂತದಲ್ಲಿ
ಮಹಾನಗರ ಪಾಲಿಕೆಯ
ವ್ಯಾಪ್ತಿಯಲ್ಲಿರುವ
ಖಾಸಗಿ ರೆವಿನ್ಯೂ
ಬಡಾವಣೆಗಳನ್ನು
ಸಕ್ರಮಗೊಳಿಸುವ
ಕಾರ್ಯವನ್ನು
ಆರಂಭಿಸಲಾಗಿದ್ದು
ಒಂದು ತಿಂಗಳ
ಅವದಿಯೊಳಗೆ ಬೆಂಗಳೂರು
ನಗರದಲ್ಲಿ ಸುಮಾರು
ಒಂದು ಲಕ್ಷ ರೆವಿನ್ಯೂ
ನಿವೇಶನಗಳನ್ನು
ಸಕ್ರಮಗೊಳಿಸಿ,
ಸಂಬಂಧಪಟ್ಟವರ
ಹೆಸರಿಗೆ ಖಾತಾ
ಮಾಡಿಕೊಡುವುದು
ಎಂದು ಮುಖ್ಯಮಂತ್ರಿ
ದೇವೇಗೌಡರು ವಿವರಿಸಿದರು.
೫೦ ರೂ. ಅಭಿವೃದ್ಧಿ
ಶುಲ್ಕ : ಸಮಸ್ಯೆಗಳು
ತುಂಬಿ ತುಳುಕುತ್ತಿರುವ
ಬೆಂಗಳೂರು ನಗರದಲ್ಲಿ
ವಸತಿ ಸಮಸ್ಯೆ
ಪ್ರಮುಖವಾದದ್ದು.
ಇದನ್ನು ಮನಗಂಡೇ
ಸರ್ಕಾರ ರೆವಿನ್ಯೂ
ಬಡಾವಣೆಗಳನ್ನು
ಸಕ್ರಮಗೊಳಿಸಲು
ಹಾಗೂ ಈ ಪ್ರದೇಶಗಳಿಗೆ
ನಾಗರೀಕ ಸೌಲಭ್ಯಗಳನ್ನು
ಕಲ್ಪಿಸಲು ಆಸ್ತೆ
ವಹಿಸಿದೆ. ರೆವಿನ್ಯೂ
ನಿವೇಶನ ಮಾಲೀಕರಿಗೆ
ಹೆಚ್ಚು ಹೊರೆಯಾಗದಂತೆ
ರೆವಿನ್ಯೂ ನಿವೇಶನಗಳನ್ನು
ಸಕ್ರಮಗೊಳಿಸಲು
ಚದುರ ಗಜ ಒಂದಕ್ಕೆ
೫೦ ರೂ.ಗಳಂತೆ
ಅಭಿವೃದ್ಧಿ ಶುಲ್ಕ
ನಿಗಧಿಪಡಿಸಿದೆ.
ಇದರಿಂದ ಸಂಗ್ರಹವಾಗುವ
ಹಣವನ್ನು ಈ ಬಡಾವಣೆಗಳ
ಅಭಿವೃದ್ಧಿಗೆ
ಬಳಸಲಾಗುವುದು
ಎಂದು ನುಡಿದರು.
ರೆವಿನ್ಯೂ
ನಿವೇಶನಗಳನ್ನು
ಸಕ್ರಮಗೊಳಿಸುವ
ಸಂದರ್ಭದಲ್ಲಿ
ಜನರಿಗೆ ಕಿರುಕುಳ
ಕೊಡಬೇಡಿ.
ಲಂಚಕ್ಕೆ ಕೈ
ಒಡ್ಡಬೇಟಿ, ಇಂಥ
ಪ್ರಕರಣಗಳು ಏನಾದರೂ
ತಮ್ಮ ಗಮನಕ್ಕೆ
ಬಂದರೆ ಕಠಿಣ
ಕ್ರಮ ಎದುರಿಸಬೇಕಾಗುತ್ತದೆ
ಎಂದು ಮುಖ್ಯಮಂತ್ರಿಗಳು
ಮಹಾನಗರಪಾಲಿಕೆ
ಅಧಿಕಾರಿಗಳಿಗೆ
ಎಚ್ಚರಿಕೆ ನೀಡಿದರು.
ದೇವೇಗೌಡರು ಗ್ರಾಮೀಣ
ಪ್ರದೇಶದ ಪರವಾದವರು.
ಅವರಿಗೆ ನಗರ
ಪ್ರದೇಶಗಳ ಸಮಸ್ಯೆಗಳ
ಬಗ್ಗೆ ಕಾಳಜಿ
ಇಲ್ಲ ಎಂದು ಬಹಳಷ್ಟು
ಜನರು ಅನುಮಾನ
ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಈ ಅನುಮಾನ
ಸರಿಯಲ್ಲ. ತಾವು
ಹಿಂದೆ ನೀರಾವರಿ
ಸಚಿವರಾಗಿದ್ದಾಗಲೇ
ಹಳ್ಳಿಗಳ ಅಭಿವೃದ್ಧಿಗೆ
ಸಾಕಷ್ಟು ದುಡಿದಿದ್ದು,
ಮುಖ್ಯಮಂತ್ರಿಯಾಗಿ
ಬೆಂಗಳೂರು ನಗರದ
ಅಭಿವೃದ್ಧಿಗೆ
ಏನಾದರೂ ಮಾಡಬೇಕೆಂಬ
ಕಾಳಜಿಯಿಂದ ಬೆಂಗಳೂರು
ಅಭಿವೃದ್ಧಿ ಪ್ರಾಧಿಕಾರದ
ಆಡಳಿತವನ್ನು
ತಾವೆ ಇಟ್ಟುಕೊಂಡಿರುವುದಾಗಿ
ಮುಖ್ಯಮಂತ್ರಿಗಳು
ಸ್ಪಷ್ಟಪಡಿಸಿದರು.
ಬೆಂಗಳೂರು ನಗರದ
ಎಲ್ಲಾ ಸಮಸ್ಯೆಗಳ
ಬಗ್ಗೆ ಕಾಳಜಿ
ಇಲ್ಲ ಎಂದು ಬಹಳಷ್ಟು
ಜನರು ಅನುಮಾನ
ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಈ ಅನುಮಾನ
ಸರಿಲ್ಲ. ತಾವು
ಈ ಹಿಂದೆ ನೀರಾವರಿ
ಸಚಿವರಾಗಿದ್ದಾಗಲೇ
ಹಳ್ಳಿಗಳ ಅಭಿವೃದ್ಧಿಗೆ
ಸಾಕಷ್ಟು ದುಡಿದಿದ್ದು,
ಮುಖ್ಯಮಂತ್ರಿಯಾಗಿ
ಬೆಂಗಳೂರು ನಗರದ
ಅಭಿವೃದ್ಧಿಗೆ
ಏನಾದರೂ ಮಾಡಬೇಕೆಂಬ
ಕಾಳಜಿಯಿಂದ ಬೆಂಗಳೂರು
ಅಭಿವೃದ್ಧಿ ಪ್ರಾದಿಕಾರದ
ಆಡಳಿತವನ್ನು
ತಾವೇ ಇಟ್ಟುಕೊಂಡಿರುವುದಾಗಿ
ಮುಖ್ಯಮಂತ್ರಿಗಳು
ಸ್ಪಷ್ಟಪಡಿಸಿದರು.
ಬೆಂಗಳೂರು ನಗರದ
ಎಲ್ಲ ಸಮಸ್ಯೆಗಳೂ
ತಮಗೆ ಅರಿವಿದ್ದು,
ಇವುಗಳನ್ನು ತ್ವರಿತವಾಗಿ
ಪರಿಹರಿಸಲೆಂದೇ
ಮಹಾನಗರಪಾಲಿಕೆ
ಮತ್ತು ಜಲಮಂಡಳಿಗೆ
ದಕ್ಷ ಅಧಿಕಾರಿಗಳನ್ನು
ನೇಮಿಸಿರುವುದಾಗಿ
ಅವರು ಹೇಳಿದರು.
ದೇವೇಗೌಡರು ನುಡಿದಂತೆ
ನಡೆಯುತ್ತಾರೆಂಬುದಕ್ಕೆ
ಮೇಲಿನ ವರದಿಯೇ
ಸಾಕ್ಷಿ. ಆದರೆ
ಕಾಂಗ್ರೆಸ್ ಸರ್ಕಾರ
ಅಧಿಕಾರಕ್ಕೆ
ಬಂದ ಮೇಲೆ ಬಡವನ
ಮನೆಗಳನ್ನು ನೆಲಸಮ
ಮಾಡುತ್ತಿದ್ದು,
ಬಡವರ ಗೋಳನ್ನು
ಕೇಳುವವರೇ ಇಲ್ಲದಂತಾಗಿರುವುದು
ಪರಿಸ್ಥಿತಿಯ
ಕ್ರೂರ ವ್ಯಂಗ್ಯವಾಗಿದೆ.
ಅತಂತ್ರ ವಾರ್ಡ್‌ಗಳಿಗೆ
ಮುಕ್ತಿ :
ಸುಮಾರು ನೂರಾರು
ಬಡಾವಣೆಗಳು ಬೆಂಗಳೂರು
ನಗರದ ಸೆರಗಿನಲ್ಲಿದ್ದವುಗಳೇ
ಬೆಂಗಳೂರು ಮಹಾನಗರಪಾಲಿಕೆ
ವ್ಯಾಪ್ತಿಯೊಳಗೆ
ಚಾಚಿಕೊಂಡಿದ್ದಂತಹವುಗಳು.
ಇವುಗಳು ಬಿ.ಡಿ.ಎ.
ವ್ಯಾಪ್ತಿಗೆ
ಬರುವಂತಹವುಗಳು,.
ಆದರೂ ನಾಗರೀಕ
ಸೌಲಭ್ಯಗಳಿಂದ
ವಂಚಿತವಾಗಿದ್ದಂತವುಗಳು.
ಜನಪ್ರತಿನಿಧಿಗಳಾಗುವವರು
ಪುರಸಭೆ ಅಥವಾ
ತಾಲ್ಲೂಕು ಪಂಚಾಯಿತಿ
ವ್ಯಾಪ್ತಿಗೆ
ಸೇರಿದವರು.
ಅತ್ತ ಅವರ ಕೃಪೆಯೂ
ಇಲ್ಲ ಇತ್ತ ಇವರ
ಕೃಪೆಯೂ ಇಲ್ಲ
ಎಂಬಂತೆ ಎಡಬಿಡಂತಿಯಾಗಿದ್ದಂತಹವುಗಳು.
ಈ ಬಡಾವಣೆಗಳ
ಜನರು ಬೆಂಗಳೂರಿನಲ್ಲಿ
ಇನ್ನೂ ಬೆಂಗಳೂರಿನ
ನಾಗರೀಕರಾಗಿರಲಿಲ್ಲ.
ಈ ಅತಂತ್ರ ಮತ್ತು
ಸಂದಿಗ್ಧತೆಯ
ಸಮಸ್ಯೆಯನ್ನು
ಹೋಗಲಾಡಿಸಿವರು
ದೇವೇಗೌಡರು.
ಈ ನೂರಾರು ಬಡಾವಣೆಗಳನ್ನು
ವೈಜ್ಞಾನಿಕವಾಗಿ
ಗುರುತಿಸಿ, ೩೩
ವಾರ್ಡ್‌ಗಳಾಗಿ
ಪರಿವರ್ತಿಸಿ,
ಅವುಗಳನ್ನು ಬೆಂಗಳೂರು
ಮಹಾನಗರ ಪಾಲಿಕೆಗೆ
ಸೇರಿಸಿದ ಕೀರ್ತಿ
ದೇವೇಗೌಡರದ್ದು.
ತನ್ಮೂಲಕ ಮಹಾನಗರಪಾಲಿಕೆಯು
ಸದಸ್ಯರನ್ನು
ತಮ್ಮ ಪ್ರತಿನಿಧಿಗಳನ್ನಾಗಿ
ಪಡೆದ ಈ ಜನ ಖಾತೆ,
ಕಂದಾಯ, ನೀರು,
ವಿದ್ಯುಚ್ಛಕ್ತಿ,
ಇವುಗಳೆಲ್ಲವನ್ನೂ
ಉಳಿದ ಬೆಂಗಳೂರು
ನಗರದ ನಾಗರೀಕರು
ಪಡೆಯುವಂತೆಯೇ
ಪಡೆಯುವಂತಾಯಿತು.
ಹೀಗೆ ಸುಮಾರು
೧೦ ಲಕ್ಷ ಜನರು
ಬೆಂಗಳೂರು ಮಹಾನಗರ
ಪಾಲಿಕೆಯ ಮತದಾರರಾಗಿ
ನಾಗರೀಕ ಸೌಲಭ್ಯಗಳಿಗೆ
ಹಕ್ಕದಾರರು.
ಇದು ದೇವೇಗೌಡರ
ರಾಜಕೀಯ ಇಚ್ಚಾಶಕ್ತಿಗೊಂದು
ನಿದರ್ಶನ.
ಗೌಡರ ಸಾಧನೆ
: ಕಾಂಗ್ರೆಸ್‌ನದು
ಸೊನ್ನೆ!
ಕಾಂಗ್ರೆಸ್
ಸರ್ಕಾರ ಅಧಿಕಾರಕ್ಕೆ
ಬಂದು ೨ ವರ್ಷವಾಯಿತು.
ಈ ಎರಡು ವರ್ಷಗಳಲ್ಲಿ
ಅವರು ಬೆಂಗಳೂರು
ನಗರದಲ್ಲಿ ಮಾಡಿದ
ಸಾಧನೆ ಎಂದರೆ
ಹೈ-ಟೆಕ್ ಜನರ
ಟಾಸ್ಕ್ ಪೋರ್ಸ್
ರಚನೆ. ಇನ್‌ಫರ್ಮೇಷನ್
ಟೆಕ್ನಾಲಜಿಯ
ಪುರೋಹಿತರುಗಳದ್ದೇ
ಇವುಗಳಿಗೆ ಪೌರೋಹಿತ್ಯ
! ಕಾಂಗ್ರೆಸ್
ಸರ್ಕಾರವಾಗಲೀ,
ಈ ಟಾಸ್ಕ್‌ಫೋರ್ಸ್‌ಗಳಾಗಲೀ
ಇದುವರೆಗತೆ
ಬೆಂಗಳೂರು ನಗರದ
ರಸ್ತೆ ಸಾರಿಗೆ
ಸೌಲಭ್ಯಗಳಿಗೆಂದು
ಒಂದು ಸ್ಪಷ್ಟ
ಕ್ರಿಯಾ ಯೋಜನೆ
ರೂಪಿಸಿಲ್ಲ.
ಒಂದು ಪೈಸೆ
ಹೊಸದಾಗಿ ಖರ್ಚು
ಮಾಡಿಲ್ಲ. ಆದರೂ
ಬೆಂಗಳೂರು ಮಹಾನಗರಪಾಲಿಕೆ
ಮತ್ತು ಬಿ.ಡಿ.ಎ.ಗಳು
ವಾರಕ್ಕೊಂದರಂತೆ
ಇಂದು ಇಲ್ಲಿ,
ನಾಳೆ ಅಲ್ಲಿ
ಎಂಬಂತೆ ಫೈ-ಓವರ್,
ಮೇಲ್ಸೇತುವೆ,
ಕೆಳಸೇತುವೆ ಎಂದು
ಉದ್ಘಾಟನಾ ಸಮಾರಂಭಗಳನ್ನು
ಅದ್ದೂರಿಯಾಗಿ
ನಡೆಸುತ್ತಿದ್ದು,
ಇವೆಲ್ಲಾ ಕಾಂಗ್ರೆಸ್
ಸರ್ಕಾರ ಮಾಡಿದ್ದೇನೋ
ಎಂಬಂತೆ ಅಬ್ಬರದ
ಪ್ರಚಾರ ಸಾಗಿದೆ.
ಜನರ ಜ್ಞಾಪನಶಕ್ತಿ
ಮೊಟಕು ಎಂಬ ಗಾದೆಯಂತೆ
ಬೆಂಗಳೂರಿನ ಜನರೂ
ಕೂಡ ಈ ಕೆಲಸಗಳನ್ನು
ಮಾಡಿದವರನ್ನೇ
ಮರೆತುಬಿಟ್ಟಿದ್ದಾರೆ!
ಆದುದರಿಂದ ಜನರು
ಭ್ರಮೆಯಿಂದ ಹೊರಬಂದು
ವಸ್ತು ಸ್ಥಿತಿಯನ್ನು
ಅರಿಯಲೆಂದು ನಾವು
ಈ ಸತ್ಯಾಂಶಗಳನ್ನು
ನಿಮ್ಮ ಮುಂದಿಡುತ್ತಿದ್ದೇವೆ.
ಅ) ಫ್ಲೈ-ಓವರ್‌ಗಳ
ವಿವರ :
ದೇವೇಗೌಡರು
ಮುಖ್ಯಮಂತ್ರಿಗಳಾಗಿದ್ದಾಗಿನ
ಅವಧಿ (೧೯೯೪
ರಿಂದ ೧೯೯೬)
ಮತ್ತು ಪ್ರಧಾನಮಂತ್ರಿಯಾಗಿದ್ದಾಗಿನ
ಅವಧಿ (೧೯೬೬
ರಿಂದ ೧೯೯೭)
ಈ ಅವಧಿಗಳಲ್ಲಿ
ಬೆಂಗಳೂರಿನಲ್ಲಿನ
ಜನರ ಹಿತದೃಷ್ಟಿಯಿಂದ
ಮತ್ತು ರಸ್ತೆ
ಸುರಕ್ಷತೆಯ ದೃಷ್ಟಿಯಿಂದ
ಕೈಗೊಂಡ ಯೋಜನೆಗಳು
ಮತ್ತು ಕಾಮಗಾರಿಗಳು
ಹಾಗೂ ಅವುಗಳಿಗೆ
ತೊಡಗಿಸಲಾದ ಮತ್ತು
ಮೀಸಲಿಟ್ಟ ಬಂಡವಾಳದ
ವಿವರಗಳ ತ:ಖ್ತೆ
ಈ ಮುಂದಿನಂತಿದೆ.
(ರೂ. ಕೋಟಿಗಳಲ್ಲಿ)
ಯೋಜನೆ/ಕಾಮಗಾರಿ
ಹೆಸರು ೧೯೯೫-೯೬
೧೯೯೬-೯೭ ೧೯೯೭-೯೮
೧ ಮೇಖ್ರಿ ವೃತ್ತದ
ಫ್ಲೈ-ಓವರ್ ೯೪.೦೦
೧೨.೫೭ ೧೫.೦೦
೨ ರಿಚ್‌ಮಂಡ್
ವೃತ್ತದ ಬಳಿಯ
ಫ್ಲೈ-ಓವರ್
೨೦.೦೦
೩ ರಿಚ್‌ಮಂಡ್
ವೃತ್ತದ ಬಳಿ
ಫ್ಲೈ-ಓವರ್
೨೦.೦೦
೪ ಟ್ರಿನಿಟಿ
ವೃತ್ತದ ಬಳಿಯ
ಫ್ಲೈ-ಓವರ್
೨೦.೦೦
೫ ಶಿವಜಿನಗರ
ಬಸ್‌ನಿಲ್ದಾಣದ
ಬಳಿ ಸಬ್-ವೇ
೧.೨೫
೬ ಟಾನಂದರಾವ್
ವೃತ್ತದ ಬಳಿ
ಫ್ಲೈ-ಓವರ್ ೧೦.೦೦
೭ ಹಡ್ಸನ್ ವೃತ್ತದ
ಬಳಿ ಫ್ಲೈ-ಓವರ್
೮೦.೦೦
೮ ಸುಭಾಷ್‌ನಗರದಿಂದ
ಮಾಗಡಿ ರಸ್ತೆ,
ಮೈಸೂರು ರಸ್ತೆ
ಮತ್ತು ಪಶ್ಚಿಮ
ಕಾರ್ಡ್ ರಸ್ತೆಯನ್ನು
ಸಂಪರ್ಕಿಸುವಂತೆ
ಫ್ಲೈ-ಓವರ್ ೧೦೦.೦೦
೯ ಜೆ.ಸಿ. ರಸ್ತೆಯ
ಕಾರ್ ಪಾರ್ಕಿಂಗ್
ನಿಲ್ದಾಣ ಸಹಭಾಗಿತ್ವದಲ್ಲಿ
೧೦ ಸಂಗ್ ಚಲನಚಿತ್ರ
ಮಂದಿರದ ಬಳಿಯ
ಪಾದಾಚಾರಿಗಳ
ಸಬ್ -ವೇ ೨.೫೦
೧೧ ಮಹಾರಾಣಿ
ಕಾಲೇಜ್‌ನಿಂದ
ರಾಜಾಜಿನಗರ ಎಂಟ್ರನ್ಸ್‌ವರೆಗೆ
ಕಾರಿಡಾರ್ ಇಂಪ್ರೂವ್‌ಮೆಂಟ್
೧೦೦.೦೦
ಆ) ಉದ್ಯಾನವನಗಳು,
ಮಾರುಕಟ್ಟೆ ಸಂಕೀರ್ಣಗಳು
ಮತ್ತು ಕ್ರೀಡಾಂಗಣ
:
(ರೂ. ಕೋಟಿಗಳಲ್ಲಿ)
ಯೋಜನೆ/ಕಾಮಗಾರಿ
ಹೆಸರು ೧೯೯೫-೯೬
೧೯೯೬-೯೭ ೧೯೯೭-೯೮
೧ ಮಲ್ಲೇಶ್ವರಂನಲ,ಲಿ
ಮಾರುಕಟ್ಟೆ ಸಂಕೀರ್ಣ
ಸಹಭಾಗಿತ್ವದಲ್ಲಿ
೨ ಕೃಷ್ಣರಾಜೇಂದ್ರ
ಮಾರುಕಟ್ಟೆ ೨ನೇ
ಫೇಸ್ ಪುನರಾಧುನೀಕರಣ
೬.೦೦
೩ ಕೃಷ್ಣರಾಜೇಂದ್ರ
ಮಾರುಕಟ್ಟೆ ೩ನೇ
ಫೇಸ್ ಪುನರಾಧುನೀಕರಣ
೯.೦೦
೪ ಮಡಿವಾಳದ ಸಂತೆ
ಮೈದಾನದಲ್ಲಿ
ಮಾರುಕಟ್ಟೆ ಸಂಕೀರ್ಣ
೧೬.೬೦ ೪.೦೦
೫ ಜಯನಗರದ ೨ನೇ
ಬ್ಲಾಕ್‌ನಲ್ಲಿ
೫.೫೦
೬ ಶೇಷಾದ್ರಿಪುರಂನಲ್ಲಿ
ವಿವಿಧೋದ್ದೇಶ
ಅಂಗಡಿ ಸಂಕೀರ್ಣ
ಸಹಭಾಗಿತ್ವದಲ್ಲಿ
೭ ಅಕ್ಕಿತಿಮ್ಮನಹಳ್ಳಿ
(ಶಾಂತಿನಗರ)
ವಿವಿಧೋದ್ದೇಶ
ಅಂಗಡಿ ಸಂಕೀರ್ಣ
ಸಹಭಾಗಿತ್ವದಲ್ಲಿ
೮ ದಾಸರಹಳ್ಳಿಯಲ್ಲಿ
ಡಾ|| ಅಂಬೇಡ್ಕರ್
ಕ್ರೀಡಾಂಗಣ
೨.೦೦
೯ ಸಿದ್ದಯ್ಯ
ರಸ್ತೆಯಲ್ಲಿ
ಅಂಗಡಿ ಸಂಕೀರ್ಣ
೧೦.೦೦
೧೦ ಯಶವಂತಪುರದ
ಜೆ.ಪಿ. ಉದ್ಯಾನವನದ
ಅಭಿವೃದ್ಧಿ
೩.೫೬
೧೧ ತಾವರೆಕೆರೆ
ರೀಜನಲ್ ಪಾರ್ಕ್
ಅಭಿವೃದ್ಧಿ
೨.೫೬
೧೨ ಕೆಂಪಾಬುಧಿ
ಕೆರೆ ಸೌಂದರಶೈಕರಣ
೪.೦೦
೧೩ ಕೊಳಚೆ ಬೀರಿನ
ಚರಂಡಿಗಳ ಪುನರ್
ಆಧುನೀಕರಣ
೮೦.೦೦
೧೪ ಬೊಮ್ಮನಹಳ್ಳಿ
ವಿದ್ಯುತ್ ಚಿತಾಗಾರ
ನಿರ್ಮಾಣ ೨.೦೦
೧೫ ಬನಶಂಕರಿ
ವಿದ್ಯುತ್ ಚಿತಾಗಾರ
ನಿರ್ಮಾಣ ೨.೧೦
೧೬ ಬಸವನಗುಡಿ
ಗಾಂಧಿ ಬಜಾರ್‌ನಲ್ಲಿ
ಅಂಗಡಿ ಸಂಕೀರ್ಣ
ಸಹಭಾಗಿತ್ವದಲ್ಲಿ
ಎಲ್ಲಕ್ಕಿಂತ
ಮಿಗಿಲಾಗಿ ರಾಷ್ಟ್ರೀಯ
ಕ್ರೀಡಾಕೂಟಕ್ಕೆಂದು
ಕೋರಮಂಗಲದ ಬಳಿ
ನಿರ್ಮಾಣಗೊಂಡ
ಅಮೂಲ್ಯ ಕಟ್ಟಡಗಳು
ಇಂದು ಬೆಂಗಳೂರು
ನಗರದ ಆಸ್ತಿಯಾಗಿರುವುದಕ್ಕೆ
ದೇವೇಗೌಡರೇ ಕಾರಣ.
ಸುಸಜ್ಜಿತ ಒಳಾಂಗಣ
ಕ್ರೀಡಾಂಗಣ,
ಕಂಠೀರವ ಸ್ಟೇಡಿಯಂನ
ಆಧುನೀಕರಣ, ಕನ್ನಡ
ಭವನ ನಿರ್ಮಾಣ,
ಖನಿಜ ಭವನ ನಿರ್ಮಾಣ,
ಇವುಗಳೂ ಕೂಡ
ದೇವೇಗೌಡರ ನೇತೃತ್ವದ
ಜನತಾದಳ ಸರ್ಕಾರದ
ಕೊಡುಗೆಗಳೇ ಇದಲ್ಲದೆ
ಬೆಂಗಳೂರು ನಗರದ
ರಸ್ತೆಗಳ ಡಾಂಬರೀಕರಣ,
ಸುಧಾರಣೆ ಮತ್ತು
ರಿಪೇರಿಗಾಗಿ
೧೨೦ ಕೋಟಿ ರೂಪಾಯಿಗಳ
ಬಾಂಡ್ ವ್ಯವಸ್ಥೆಯಾದದ್ದೂ
ಜನತಾದಳ ಸರ್ಕಾರದಲ್ಲೇ.
ಇ) ದೇವರಾಜ ಅರಸ್
ಟ್ರಕ್ ಟರ್ಮಿನಲ್
:
ಬೆಂಗಳೂರು ನಗರದ
ಹೃದಯಭಾಗದಲ್ಲಿ
ಜನದಟ್ಟಣೆ ಮತ್ತು
ಸಂಚಾರ ಒತ್ತಡ
ಜಾಸ್ತಿ. ಆದುದರಿಂದ
ಬೆಂಗಳೂರು ನಗರವನ್ನು
ಪ್ರವೇಶಿಸುವ
ಸರಕು ಸಾಗಾಣಿಕೆಯ
ಭಾರಿ ವಾಹನಗಳು
ಮತ್ತು ಲಾರಿಗಳು
ಬೆಂಗಳೂರಿನ ವರ್ತುಲ
ರಸ್ತೆಯಲ್ಲಿಯೇ
ಸಂಚರಿಸುವಂತಾದಲ್ಲಿ
ನಗರದ ಒಳಗಡೆ
ಸಂಚಾರದ ಒತ್ತಡ
ಅಷ್ಟರಮಟ್ಟಿಗೆ
ಕಡಿಮೆಯಾಗಬಲ್ಲದು.
ನಗರಕ್ಕೆ ಹೊರರಾಜ್ಯಗಳಿಂದ
ದಿನಂಪ್ರತಿ ಬರುವ
ಸಾವಿರಾರು ಲಾರಿಗಳು,
ಟ್ರಕ್‌ಗಳು,
ಸಾಗಾಣಿಕಾ ವಾಹನಗಳ
ನಿಲುಗಡೆಯೂ ಒಂದು
ದೊಡ್ಡ ಸಮಸ್ಯೆ.
ಇದರ ಪರಿಹಾರಕ್ಕಾಗಿ
ರೂಪುಗೊಂಡದ್ದೇ
ಟ್ರಕ್ ಟರ್ಮಿನಲ್.
ದೇವೇಗೌಡರ ಕಾಲದಲ್ಲಿ
ಇದಕ್ಕೆ ಅಂಕುರಾರ್ಪಣ.
ದೇವರಾಜ ಅರಸ್‌ರ
ಸ್ಮರಣೆಗಾಗಿ
ಈ ಟರ್ಮಿನಲ್‌ನ
ಅರ್ಪಣೆ. ಅದರಲ್ಲೂ
ದೇವೇಗೌಡರು ತೋರಿದ್ದು
ದೊಡ್ಡತನ.
ಈ) ಅಮೂಲ್ಯ ೮೦
ಎಕರೆ ಬೆಂಗಳೂರಿನ
ಸಾರ್ವಜನಿಕರಿಗೆ
ಲಭ್ಯ :
ಬೆಂಗಳೂರಿನಲ್ಲಿ
ರಸ್ತೆ ನಿರ್ಮಾಣವಿರಲಿ,
ಒಳಚರಂಡಿ ಇರಲಿ,
ಟೆಲಿಫೋನ್ ಸಂಪರ್ಕವಿರಲಿ,
ನೀರು ಸರಬರಾಜಿರಲೀ,
ವರ್ತುಲ ರಸ್ತೆಯಿರಲಿ,
ಹೊರವರ್ತುಲ ರಸ್ತೆ
ಇರಲಿ, ಯಾವುದಾದರೊಂದು
ವಿಸ್ತರಣೆ ಮತ್ತು
ಅಭಿವೃದ್ಧಿ ಕಾರ್ಯ
ಮಾಡಬೇಕಾದರೆ
ಬೆಂಗಳೂರಿನ ಸುತ್ತಮುತ್ತ
ಇದ್ದ ಒಂದು ದೊಡ್ಡ
ಅಡ್ಡಿ ಎಂದರೆ
ರಕ್ಷಣಾ ಇಲಾಖೆಯ
ನಿಷೇಧಿತ ಪ್ರದೇಶ
ಎಂಬ ಬೋರ್ಡ್
ಹೊತ್ತ ಹತ್ತು
ಹಲವು ಎಕರೆಯ
ಅಮೂಲ್ಯ ಭೂಮಿ/
ಇದರಿಂದ ಬೆಂಗಳೂರಿನಲ್ಲಿ
ಏನೊಂದೂ ವ್ಯವಸ್ಥಿತ
ವಿಸ್ತರಣೆ ಹಾಗೂ
ಸಾರ್ವಜನಿಕೋಪಯೋಗಿ
ಅಭಿವೃದ್ಧಿ ಕಾರ್ಯಕೈಗೊಳ್ಳಲು
ಅಡ್ಡಿಯಾಗಿತ್ತು.
ಈ ಜಟಿಲ ಸಮಸ್ಯೆಗೆ
೩೦ ವರ್ಷಗಳ ಸುದೀರ್ಘ
ಕಾಲದಿಂದ ಪರಿಹಾರವೇ
ದೊರಕಿರಲಿಲ್ಲ.
ಸತತವಾಗಿ ಕೇಂದ್ರದಲ್ಲಿ
ಕಾಂಗ್ರೆಸ್ ಸರ್ಕಾರವೇ
ಇದ್ದರೂ, ಕರ್ನಾಟಕದಿಂದ
ಜಾಫರ್ ಷರೀಫ್,
ಕೆಂಗಲ್ ಹನುಮಂತಯ್ಯ
ಮೊದಲಾದ ಘಟಾನುಘಟಿಗಳೇ
ಕೇಂದ್ರದಲ್ಲಿ
ಸಚಿವರಾಗಿದ್ದರೂ
ಕೂಡ ಬೆಂಗಳೂರು
ನಗರದ ಜನಕ್ಕೆ
ಈ ರಕ್ಷಣಾ ಇಲಾಖೆ
ಜಮೀನನ್ನು ತೆರವು
ಮಾಡಿಸಿಕೊಡಲು
ಸಾಧ್ಯವಾಗಲಿಲ್ಲ.
ಇಡೀ ಭಾರತ ದೇಶದಲ್ಲಿ
ಎಲ್ಲಿಯೂ ಕೂಡ
ರಕ್ಷಣಾ ಇಲಾಖೆಯವರು
ತಮ್ಮ ಸುಪರ್ದಿನ
ಒಂದೇ ಒಂದು ಅಂಗುಲ
ಭೂಮಿಯನ್ನು ಬಿಟ್ಟುಕೊಟ್ಟ
ನಿದರ್ಶನವೇ ಇಲ್ಲ.
ಹೀಗಾಗಿ ಬೆಂಗಳೂರಿನ
ಒಳಗೆ ಮತ್ತು
ಹೊರಗೆ ಇದ್ದ
ಈ ರಕ್ಷಣಾ ಇಲಾಖೆಯ
ಭೂಮಿಯು ಬೆಂಗಳೂರು
ಮಹಾನಗರಪಾಲಿಕೆಗಂತೂ
ಕನ್ನಡಿಯೊಳಗಿನ
ಗಂಟಾಗಿತ್ತು.
ಆದರೆ ದೇವೇಗೌಡರು
ತಮ್ಮ ಅಧಿಕಾರದ
ಅವಧಿಯಲ್ಲಿ ಅಪಾರ
ರಾಜಕೀಯ ಇಚ್ಚಾಶಕ್ತಿಯನ್ನು
ಮೆರೆದರು. ಈ
ಸುದೀರ್ಘ ಕಾಲದ
ವಿವಾದಕ್ಕೆ ಕೊನೆ
ಹಾಡಿದರು. ರಕ್ಷಣಾ
ಇಲಾಖೆಗೆ ಸೇರಿದ
೮೫ ಎಕರೆ ವಿಸ್ತೀರ್ಣದ
ಪ್ರದೇಶ ಬೆಂಗಳೂರಿನ
ಸಾರ್ವಜನಿಕರ
ಉಪಯೋಗಕ್ಕೆ ಲಭ್ಯವಾಗುವಂತಾಯಿತು.
ಹೀಗೆ ಭಾರತದ
೫೦ ವರ್ಷದ ಇತಿಹಾಸದಲ್ಲಿ
ರಕ್ಷಣಾ ಇಲಾಖೆಯವರು
ಎಲ್ಲಿಯಾದರೂ
ತಮ್ಮ ಸುಪರ್ದಿನ
ಭೂಮಿಯನ್ನು ಬಿಟ್ಟುಕೊಟ್ಟಿದ್ದರೆ
ಅದು ಬೆಂಗಳೂರಿನಲ್ಲಿ
ಮಾತ್ರ. ಅಂದ
ಮೇಲೆ ದೇವೇಗೌಡರ
ಹಠ, ಛಲ ಮತ್ತು
ಸಾಧನೆಯ ಮಹತ್ವ
ನಿಮಗೆ ಅರಿವಾಗಬೇಕು.
ಆದ್ದರಿಂದಲೇ
ಇಂದು ಬೆಂಗಳೂರಿನಲ್ಲಿ
ಅಭಿವೃದ್ಧಿ ವಿಸ್ತರಣೆಯ
ಕಾರ್ಯಗಳು, ವರ್ತುಲ
ರಸ್ತೆಗಳ ನಿರ್ಮಾಣ
ಸಾಧ್ಯವಾಗುವಂತಾಗಿದೆ.
ಉ) ಟೆಕ್ನಾಲಜಿಕಲ್
ಪಾರ್ಕ್ :
ದೇವೇಗೌಡರು
ರೈತಪರ ಧೋರಣೆಯುಳ್ಳವರು
ಎಂಬುದರಲ್ಲಿ
ಎರಡು ಮಾತಿಲ್ಲ.
ಅವರು ಅತಿಯಾದ
ಹೈ-ಟೆಕ್ ಸಂಸ್ಕೃತಿಯ
ವಿರೋಧಿ ಎಂಬುದು
ನಿಜವೇ. ಆದರೆ
ಸ್ಪರ್ಧಾತ್ಮಕ
ಜಗತ್ತಿನೊಂದಿಗೆ
ನಮ್ಮ ಕನ್ನಡದ
ಯುವಕ ಯುವತಿಯರು
ಸ್ಪರ್ಧಿಸುವಂತಾಗಲು
ಇನ್‌ಫರ್ಮೇಷನ್
ಟೆಕ್ನಾಲಜಿ ಒಂದು
ಅಗತ್ಯ ಬೆಳಕಿನ
ಕಿಂಡಿಯೆಂಬುದನ್ನು
ದೇವೇಗೌಡರು ಅರಿಯದವರೇನಾಗಿರಲಿಲ್ಲ.
ನಿಜಕ್ಕೂ ವಿಚಿತ್ರ
ಮತ್ತು ಆಶ್ಚರ್ಯದ
ಸಂಗತಿಯೆಂದರೆ
ಅಂದಿನ ಕಾಂಗ್ರೆಸ್
ಸರ್ಕಾರದ ಮುಂದೆ
ಟೆಕ್ನಾಲಜಿಕಲ್
ಪಾರ್ಕನ್ನು ಬೆಂಗಳೂರಿನಲ್ಲಿ
ಸ್ಥಾಪಿಸುವ ಕಡತ
ಮಂಡಿತವಾಗಿದ್ದರೂ
ಆ ಕಡತ ಉಪೇಕ್ಷೆಗೆ
ಗುರಿಯಾಗಿ ಧೂಳು
ಹಿಡಿದು ಮೂಲೆಗೆ
ಬಿದ್ದಿತ್ತು.
ಆದರೆ ಹಳ್ಳಿಗರ
ಪರ ಎಂಬ ಅಪವಾದ
ಪಡೆದ ದೇವೇಗೌಡರು
ಮುಖ್ಯಮಂತ್ರಿಯಾದೊಡನೆಯೇ
ಈ ಕಡತಕ್ಕೆ ಮುಕ್ತಿ
ದೊರಕಿತು. ದಾವೋಸ್‌ನಲ್ಲಿ
ನಡೆದ ಅಂತರ ರಾಷ್ಟ್ರೀಯ
ಆರ್ಥಿಕ ಸಮ್ಮೇಳನದಲ್ಲಿ
ಏಕೈಕ ಕಾಂಗ್ರೆಸ್ಸೇತರ
ಮುಖ್ಯಮಂತ್ರಿಯಾಗಿ
ಭಾಗವಹಿಸುವ ಅವಕಾಶ
ಪಡೆದ ದೇವೇಗೌಡರು
ಅದೇ ಸಂದರ್ಭವನ್ನು
ಬಳಸಿಕೊಂಡು ಬೆಂಗಳೂರಿನಲ್ಲಿ
ಒಂದು ಸಮಷ್ಠಿ
ರೂಪದ ಸಿಂಗಪೂರ್
ಟಾಟಾ ಟೆಕ್ನಾಲಜಿಕಲ್
ಪಾರ್ಕಿಗೆ ಅಡಿಗಲ್ಲು
ಹಾಕಿದರು. ಅಷ್ಟೇ
ಅಲ್ಲ, ಇದರ ನಿರ್ಮಾಣ
ಕಾರ್ಯ ಜನತಾದಳದ
ಅಧಿಕಾರದ ಅವಧಿಯಲ್ಲಿಯೇ
ಮುಗಿದು ಅಸ್ತಿತ್ವಕ್ಕೂ
ಬಂತು. ಇಂದು
ಈ ಟೆಕ್ನಾಲಜಿಕಲ್
ಪಾರ್ಕ್ ಸಹಸ್ರಾರು
ಪ್ರತಿಭಾವಂತ
ಯುವಕ ಯುವತಿಯವರಿಗೆ
ಮಾಹಿತಿ ಮತ್ತು
ಜ್ಞಾನವಿಕಾಸದ
ಕೇಂದ್ರವಾಗಿದೆ.
ತಮ್ಮ ಸರ್ಕಾರದ
ಅಯವ್ಯಯದಲ್ಲಿ
ದೇವೇಗೌಡರು ಪ್ರಧಾನಿಯಾಗಿ
ಐ.ಟಿ. ಉದ್ಯಮಿಗಳಿಗೆ
೧೦ ವರ್ಷಗಳ ಕಾಲ
ತೆರಿಗೆ ವಿನಾಯಿತಿ
ನೀಡಿದರೆಂಬುದನ್ನು
ನೀವು ಮರೆತಿರಲಾರಿರಿ.
ಹೀಗೆ ದೇವೇಗೌಡರು
ಗ್ರಾಮೀಣ ಭಾರತಕ್ಕೆ
ಕೊಡುವಷ್ಟೇ ಆಧ್ಯತೆಯನ್ನು
ನಗರದ ಆದ್ಯತೆಗಳಿಗೂ
ನೀಡಿದರು.
ಊ) ಕೇಂದ್ರೋದ್ಯಮಗಳು,
ಕಾರ್ಮಿಕರು ಮತ್ತು
ದೇವೇಗೌಡರು :
ಬೆಂಗಳೂರು ನಗರದಲ್ಲಿ
ಪ್ರಮುಖ ಕೇಂದ್ರೋದ್ಯಮಗಳಾದ
ಹೆಚ್.ಎಂ.ಟಿ.,
ಬಿ.ಇ.ಎಲ್.,
ಐ.ಟಿ.ಐ. ಹೆಚ್.ಎ.ಎಲ್.
ಮೊದಲಾದವುಗಳಿವೆ.
ಈ ಕೇಂದ್ರೋದ್ಯಮಗಳು
ಬೆಂಗಳೂರಿನ ಸಹಸ್ರಾರು
ಕಾರ್ಮಿಕರಿಗೆ
ಬದುಕು ಮತ್ತು
ಭದ್ರತೆ ನೀಡಿವೆ.
ಆದರೆ ಇತ್ತೀಚಿನ
ಹಲವು ವರ್ಷಗಳಿಂದ
ಈ ಉದ್ದಿಮೆಗಳು
ಕುಂಠಿತಗೊಂಡು,
ಅವುಗಳು ನಷ್ಟದ
ಹಂತ ತಲುಪಿದಾಗ
ಕಾರ್ಮಿಕರ ಬದುಕಿನ
ಮೇಲೆ ಆತಂಕದ
ಕಾರ್ಮೊಡ ಕಾಣಿಸಿಕೊಂಡಿತ್ತು.
ಅದೃಷ್ಟವಶಾತ್,
ದೇವೇಗೌಡರು ಪ್ರಧಾನಿಯಾಗಿದ್ದುದರಿಂದ
ಪರಿಸ್ಥಿತಿ ತಹಬಂದಿಗೆ
ಬಂದಿತು. ದೇವೇಗೌಡರು
ಪ್ರಗತಿ ಕುಂಠಿತವಾಗಿದ್ದ
ಕೇಂದ್ರೋದ್ಯಮಗಳ
ಪುನಶ್ಚೇತನಕ್ಕಾಗಿ
ಹೇಗೆ ಶ್ರಮಿಸಿದರು
ಎಂಬುದಕ್ಕೆ ಮುಂದಿನ
ನಿದರ್ಶನಗಳು
ಸಾಕ್ಷಿ.
೧) ಬೆಂಗಳೂರಿನ
ಐ.ಟಿ.ಐ. ಕಾರ್ಖಾನೆ
ಎಲ್ಲರೂ ಬಲ್ಲಂತೆ
ಅತ್ಯಂತ ಹಳೆಯ
ಕಾರ್ಖಾನೆ.
ಸಾವಿರಾರು ಕಾರ್ಮಿಕರಿಗೆ
ಬದುಕು ನೀಡಿರುವಂತಹುದು.
ಆದರೆ, ಐ.ಟಿ.ಐ.
ಕಾರ್ಖಾನೆ ಕುಂಠಿತಗೊಂಡಿದೆ
ಎಂಬ ನೆಪವೊಡ್ಡಿ
ಅದನ್ನು ಮುಚ್ಚುವ
ಪ್ರಯತ್ನವನ್ನು
ಕೇಂದ್ರದಲ್ಲಿದ್ದ
ಕಾಂಗ್ರೆಸ್ ಸರ್ಕಾರ
ನಡೆಸಿತ್ತು.
ಇದಕ್ಕೆ ಆರಂಭಿಕವಾಗಿ
ಅನೇಕ ಕಾರ್ಮಿಕರುಗಳನ್ನು
ಸ್ವಯಂ ಸೇವಾ
ನಿವೃತ್ತಿ ಅಡಿಯಲ್ಲಿ
ಬಲವಂತವಾಗಿ ಮನೆಗೆ
ಕಳುಹಿಸಲಾಗಿತ್ತು.
ಅಷ್ಟೇ ಅಲ್ಲ
ಅವರಿಗೆ ಕೊಡಬೇಕಾದ
ಬಾಕಿ ಹಣವನ್ನೂ
ಕೊಡದೇ ಸತಾಯಿಸುತ್ತಿತ್ತು.
ದೇವೇಗೌಡರು ಪ್ರಧಾನಿಯಾದೊಡನೆಯೇ
ಐ.ಟಿ.ಐ. ಕಾರ್ಖಾನೆಗೆ
೫೮ ಕೋಟಿ ರೂಪಾಯಿಗಳನ್ನು
ಬಿಡುಗಡೆ ಮಾಡಿ
ಅವುಗಳಿಂದ ನಿವೃತ್ತಿಗೊಂಡ
ಕಾರ್ಮಿಕರಿಗೆ
ಬರಬೇಕಾದ ಬಾಕಿ
ಹಣ ತೀರುವಳಿಯಾಗುವಂತೆ
ನೋಡಿಕೊಂಡರು.
ಹಿಂದಿನ ಕಾಂಗ್ರೆಸ್
ಸರ್ಕಾರ ಐ.ಟಿ.ಐ.
ಕಾರ್ಖಾನೆಗೆ
ಕೊಡಬಹುದಾಗಿದ್ದ
ಆರ್ಡರ್‌ಗಳೆಲ್ಲವನ್ನು
ಖಾಸಗಿ ಕಂಪನಿಗಳಿಗೆ
ಕೊಟ್ಟು ಐ.ಟಿ.ಐ.
ಯನ್ನು ನಿರ್ಲಕ್ಷಿಸಿತ್ತು.
ಆದರೆ ದೇವೇಗೌಡರು
ಪ್ರಧಾನಿಯಾಗಿ
ಬೆಂಗಳೂರಿನ ಐ.ಟಿ.ಐ.
ಕಾರ್ಖಾನೆಗೆ
೧೪೦೦ ಕೋಟಿ ರೂಪಾಯಿಗಳ
ಆರ್ಡರ್ ದೊರಕಿಸಿಕೊಟ್ಟರು.
ಅಷ್ಟೇ ಅಲ್ಲದೆ
ಬೆಲೆ ವ್ಯತ್ಯಾಸದ
ದರ ಎಂಬ ತ:ಖ್ತೆಯ
ಅಡಿಯಲ್ಲಿ ಕೇಂದ್ರ
ಸರ್ಕಾರದಿಂದ
ಬೆಂಗಳೂರಿನ ಐ.ಟಿ.ಐ.ಗೆ
೧೭೧ ಕೋಟಿ ರೂಪಾಯಿಗಳ
ಬಂಪರ್ ಬಂತು.
ಇದೆಲ್ಲದರ ಪರಿಣಾಮವಾಗಿ
ಐ.ಟಿ.ಐ. ಕಾರ್ಖಾನೆ
ಪುನಶ್ಚೇತನಗೊಂಡು
ಇಂದು ಪ್ರಗತಿಯ
ಹಾದಿಯಲ್ಲಿ ಸಾಗುತ್ತಾ
ಕಾರ್ಮಿಕರಿಗೆ
ಭದ್ರತೆ ನೀಡುತ್ತಾ
ಸಾಗಿದೆ. ಇದು
ದೇವೇಗೌಡರ ಬಳುವಳಿ.
೨) ಇದೇ ಕಥೆ
ಬಿ.ಇ.ಎಂ.ಎಲ್.
ಗೂ ಅನ್ವಯಿಸುತ್ತದೆ.
ಬಿ.ಇ.ಎಂ.ಎಲ್.
ನ ರೈಲ್ವೇ ಕೋಚ್
ವಿಭಾಗದ ಆರ್ಡರ್‌ಗಳೇ
ಇಲ್ಲದೆ ಆ ವಿಭಾಗ
ಕುಂಠಿತಗೊಂಡಿತ್ತು.
ದಿನಾ ಕಾರ್ಮಿಕರು
ಲೇ ಆಫ್ ಎದುರಿಸುತ್ತಿದ್ದರು.
ಕಾಂಗ್ರೆಸ್
ಸರ್ಕಾರ ಇದರ
ಬಗ್ಗೆ ತಲೆಕೆಡಿಸಿಕೊಂಡೇ
ಇರಲಿಲ್ಲ. ಕಾರ್ಮಿಕರು
ಮುಷ್ಕರ ಹೂಡಿದರೂ
ಕೇಂದ್ರ ಸರ್ಕಾರದ
ಕಣ್ಣು ತೆರೆದಿರಲಿಲ್ಲ.
ಆದರೆ ದೇವೇಗೌಡರು
ಪ್ರಧಾನಮಂತ್ರಿಯಾದೊಡೆನೆಯೇ
ಬೆಂಗಳೂರಿನ ಈ
ಬಿ.ಇ.ಎಂ.ಎಲ್.
ಘಟಕಕ್ಕೆ ಸಾಕಷ್ಟು
ರೈಲ್ವೇ ಕೋಚ್‌ಗಳ
ನಿರ್ಮಾಣದ ಆರ್ಡರ್
ದೊರಕಿಸಿಕೊಟ್ಟು
ಘಟಕ ಪುನಶ್ಚೇತನಗೊಳ್ಳುವಂತೆ
ಮಾಡಿದರು.
೩) ಹೆಚ್.ಎಂ.ಟಿ.
ಬೆಂಗಳೂರಿನ ಪ್ರಖ್ಯಾತ
ಕೇಂದ್ರೋದ್ಯಮ.
ಇಂತಹ ಉದ್ಯಮವೂ
ಕೂಡ ಅವಸಾನದ
ಅಂಚಿಗೆ ಸಾಗಿತ್ತು.
ಆದರೆ ದೇವೇಗೌಡರು
ಪ್ರಧಾನಮಂತ್ರಿಯಾದೊಡೆನೆಯೇ
೨೫ ಕೋಟಿ ರೂಪಾಯಿಗಳ
ನೆರವು ಸಿಗುವಂತಾಗಿ
ಹೆಚ್.ಎಂ.ಟಿ.
ಚೇತರಿಸಿಕೊಳ್ಳುವ
ಹಾದಿ ಹಿಡಿಯಿತು.
ಇಂಡಿಯನ್ ಇನ್ಸಿಟಿಟ್ಯೂಟ್
ಆಫ್ ಸೈನ್ಸ್‌ಗೆ
೩೦ ಕೋಟಿ : ಪ್ರಧಾನಿಗೌಡರಿಂದ
ಸ್ಥಳದಲ್ಲೇ ಆಜ್ಞೆ
:
ನಗರದ ಇಂಡಿಯನ್
ಇನ್ಸಿಟಿಟ್ಯೂಟ್
ಆಫ್ ಸೈನ್ಸ್
ಬೆಂಗಳೂರು ನಗರದ
ಹೆಮ್ಮೆ, ಪ್ರತಿಭಾವಂತ
ವಿಜ್ಞಾನಿಗಳನ್ನು
ಸೃಷ್ಟಿಸುವ ಸೃಜನಾತ್ಮಕ
ತಾಣ. ಆದರೆ
ಈ ಸಂಸ್ಥೆಗೂ
ಆರ್ಥಿಕ ಬಿಕ್ಕಟ್ಟು
ತಲೆದೋರಿತ್ತು.
ದೇವೇಗೌಡರು
ಪ್ರಧಾನಮಂತ್ರಿಯಾದಾಗ
ಆ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ
ಭಾಗವಹಿಸಬೇಕಾಗಿ
ಬಂತು. ಆಗ ಸಂಸ್ಥೆಯ
ಕಾರ್ಯಕ್ರಮವೊಂದರಲ್ಲಿ
ಭಾಗವಹಿಸಬೇಕಾಗಿ
ಬಂತು. ಆಗ ಸಂಸ್ಥೆಯ
ನಿರ್ದೇಶಕರು
ತಮ್ಮ ಸಂಸ್ಥೆಯ
ಆರ್ಥಿಕ ಬಿಕ್ಕಟ್ಟನ್ನು
ವಿವರಿಸಿ, ಕೇಂದ್ರದಿಂದ
ನೆರವು ಕೋರಿದರು.
ತಕ್ಷಣವೇ ಪ್ರಧಾನಿಯಾಗಿ
ದೇವೇಗೌಡರು ಸ್ಥಳದಲ್ಲೇ
೩೦ ಕೋಟಿ ರೂಪಾಯಿಗಳ
ನೆರವನ್ನು ಘೋಷಿಸಿದರು.
ಅಷ್ಟೇ ಅಲ್ಲ,
ತಾವು ಪ್ರಧಾನಮಂತ್ರಿಯಾಗಿದ್ದ
ಅವಧಿಯಲ್ಲೇ ೨೪
ಕೋಟಿ ರೂಪಾಯಿಗಳು
ಸಂಸ್ಥೆಗೆ ದೊರೆಯುವಂತೆ
ಮಾಡಿದರು.
ಬೆಂಗಳೂರು ರೈಲ್ವೆ
ವಿಭಾಗ : ದೇವೇಗೌಡರ
ಕೊಡುಗೆ :
ದೇವೇಗೌಡರು
ಪ್ರಧಾನಿಯಾಗುವುದಕ್ಕೆ
ಮುಂಚೆ ಬೆಂಗಳೂರು
ಅಷ್ಟೇ ಅಲ್ಲ.
ಇಡೀ ಕರ್ನಾಟಕವೇ
ರೈಲ್ವೆ ವಿಷಯದಲ್ಲಿ
ಕೇಂದ್ರದ ಮಲತಾಯಿ
ಧೋರಣೆಗೆ ತುತ್ತಾಗಿತ್ತು.
ಕರ್ನಾಟಕಕ್ಕೆ
ಪ್ರತ್ಯೇಕ ನೈರುತ್ಯ
ರೈಲ್ವೇ ವಲಯವನ್ನು
ಮಂಜೂರು ಮಾಡಿ
ಕನ್ನಡಿಗರ ಬಹುದಿನಗಳ
ಕನಸನ್ನು ನನಸು
ಮಾಡಿದರು. ಅಷ್ಟೇ
ಅಲ್ಲದೆ ಈ ನೈರುತ್ಯ
ರೈಲ್ವೇ ವಲಯದ
ಕೇಂದ್ರ ಕಛೇರಿ
ಬೆಂಗಳೂರಿನಲ್ಲಿ
ಕಾರ್ಯಾರಂಭಗೊಂಡು
ಸುಮಾರು ೧೨
ಕೋಟಿ ರೂ.ಗಳವರೆಗೂ
ವೆಚ್ಚಮಾಡಲಾಯಿತು.
ಆದರೆ ಇತ್ತೀಚೆಗೆ
ಸುಪ್ರೀಂ ಕೋರ್ಟು
ತೀರ್ಪು ನೀಡಿ
ಈ ಕೇಂದ್ರ ಕಛೇರಿಯನ್ನು
ಹುಬ್ಬಳ್ಳಿಗೆ
ಸ್ಥಳಾಂತರಿಸಲು
ಅನುವು ಮಾಡಿಕೊಟ್ಟಿದೆ.
ನ್ಯಾಯಾಲಯದ
ಈ ತೀಪ್ನ್ನು
ನಾವು ಸ್ವಾಗತಿಸುತ್ತೇವೆ.
ಅದರೆ ಪ್ರಧಾನಿ
ವಾಜಿಏಯಿಯವರು
ತಮ್ಮ ಸ್ವಂತ
ರಾಜ್ಯವಾದ ಮಧ್ಯಪ್ರದೇಶಕ್ಕೆ
ಎರಡು ರೈಲ್ವೆ
ವಲಯಗಳನ್ನು ನೀಡಿರುವಂತೆಯೇ
ಕರ್ನಾಟಕದಲ್ಲೂ
ಬೆಂಗಳೂರು ಮತ್ತು
ಹುಬ್ಬಳ್ಳಿ ಕೇಂದ್ರಗಳಾಗಿರುವಂತೆ
ಎರಡು ರೈಲ್ವೇ
ವಲಯಗಳನ್ನು ಮಂಜೂರು
ಮಾಡಬಹುದಗಿತ್ತು
ಎಂಬುದು ನಮ್ಮ
ಕೊರಗು. ಅದೇನೇ
ಇರಲಿ ಕರ್ನಾಟಕಕ್ಕೆ
ಪ್ರತ್ಯೇಕ ರೈಲ್ವೇ
ವಲಯವನ್ನು ನೀಡಿದ
ಕೀರ್ತಿ ದೇವೇಗೌಡರಿಗೆ
ಸಲ್ಲುತ್ತದೆಯೇ
ವಿನ: ಎನ್.ಡಿ.ಎ.
ಸರ್ಕಾರಕ್ಕಲ್ಲ.
ಅಷ್ಟೇ ಅಲ್ಲ
ದೇವೇಗೌಡರು ಇಡೀ
ಕರ್ನಾಟಕದ ಉದ್ದಗಲದಲ್ಲಿ
ಸಾವಿರ ಕಿಲೋಮೀಟರ್
ರೈಲ್ವೆ ಮಾರ್ಗ
ಗಳಿಗೆ ಬಿತ್ತನೆ
ಮಾಡಿದರು. ಆದರೆ
ನಾವು ಇಲ್ಲಿ
ಕೇವಲ ಬೆಂಗಳೂರು
ನಗರಕ್ಕೆ ಸಂಬಂಧಿಸಿದಂತೆ
ದೇವೇಗೌಡರ ಕೊಡುಗೆಗಳನ್ನು
ಉದಾಹರಿಸುತ್ತಿದ್ದೇವೆ.
೧) ೨೯೫ ಕೋಟಿ
ರೂಪಾಯಿ ಅಂದಾಜು
ವೆಚ್ಚದ ೧೬೬
ಕಿ.ಮೀ. ಉದ್ದದ
ಬೆಂಗಳೂರು ಹಾಸನ
ರೈಲು ಮಾರ್ಗ
ದೇವೇಗೌಡರ ಕಾಲದಲ್ಲಿ
ಮಂಜೂರಾತಿ ಪಡೆದು
ಆರಂಭಗೊಂಡಿತ್ತು.
ಆದರೆ ಈಗಿನ
ಬಿ.ಜೆ.ಪಿ. ಸರ್ಕಾರ
ಬಂದ ಮೇಲೆ ಈ
ಯೋಜನೆ ನೆನೆಗುದಿಗೆ
ಬಿದ್ದಿದೆ.
೨) ೨೨೫ ಕೋಟಿ
ರೂಪಾಯಿ ಅಂದಾಜು
ವೆಚ್ಚದ ೨೦೦
ಕಿ.ಮೀ. ಉದ್ದದ
ಬೆಂಗಳೂರು ಕನಕಪುರ
ಸತ್ಯಮಂಗಲ ಯೋಜನೆ
ಕರ್ನಾಟಕವನ್ನು
ಕನಿಷ್ಠ ಉದ್ದದಲ್ಲಿ
ತಮಿಳುನಾಡಿಗೆ
ಬೆಸೆಯುವ ಮಾರ್ಗವಾಗಿದೆ.
ಜೋಡಿ ಹಳಿ ಮಾರ್ಗಗಳು
:
೧) ಬೆಂಗಳೂರು-ಕೆಂಗೇರಿ
:
೧೨.೪೫ ಕಿ.ಮೀ.
ಉದ್ದದ ೨೦.೭೬
ಕೋಟಿ ರೂಪಾಯಿ
ಅಂದಾಜು ವೆಚ್ಚದ
ಈ ಕಾರ್ಯದಲ್ಲಿ
ಜೋಡಿ ಹಳಿ ಕಾಮಗಾರಿ
ಕೆಲಸ ಪೂರ್ಣಗೊಂಡಿದ್ದು,
ವಿದ್ಯುತೀಕರಣ
ಕಾರ್ಯಕ್ಕೆ ಮಂಜೂರಾತಿ
ನಿರೀಕ್ಷಿಸಲಾಗುತ್ತಿದೆ.
೨) ವೈಟ್ ಫೀಲ್ಡ್
-ಬಂಗಾರಪೇಟೆ-ಕುಪ್ಪಂ
:
೮೧.೨೧ ಕಿ.ಮೀ.
ಉದ್ದದ ೧೦೫ ಕೋಟಿ
ರೂಪಾಯಿ ವೆಚ್ಚದ
ಈ ಕಾಮಗಾರಿಯ
ಪೈಕಿ ವೈಟ್ ಫೀಲ್ಡ್
ಮಾಲೂರು ಈಗಾಗಲೇ
ಪ್ರಯಾಣಿಕರಿಗಾಗಿ
ತೆರೆಯಲ್ಪಟ್ಟಿದ್ದು,
ಮಾಲೂರು-ಬಂಗಾರಪೇಟೆ
ವಿಭಾಗದಲ್ಲಿ
ಕಾಮಗಾರಿ ಪ್ರಗತಿಯಲ್ಲಿದೆ.
೩) ಕೆಂಗೇರಿ-ರಾಮನಗರಂ
:
೩.೨.೪೩ ಕಿ.ಮೀ.
ಉದ್ದದ ೪೫ ಕೋಟಿ
ರೂಪಾಯಿ ಅಂದಾಜು
ವೆಚ್ಚದ ಈ ಕಾರ್ಯ
ಹೊಸದಾಗಿ ಕೈಗೆತ್ತಿಕೊಂಡಿರುವುದಾಗಿದೆ.
ಅಂತಿಮ ಸ್ಥಳ
ಸರ್ವೇಕ್ಷಣ ಪ್ರಗತಿಯಲ್ಲಿದ್ದು,
ಅಂದಾಜನ್ನು ರೈಲ್ವೆ
ಮಂಡಳಿಗೆ ಕಳುಹಿಸಲಾಗಿದೆ.
೪) ಯಶವಂತಪುರ-ತುಮಕೂರು
:
೬೩.೯೫ ಕಿ.ಮೀ.
ಉದ್ದದ ೬೧.೫೭
ಕೋಟಿ ರೂಪಾಯಿ
ಅಂದಾಜು ವೆಚ್ಚದ
ಈ ಕಾರ್ಯವೂ ಕೂಡ
ಹೊಸದಾಗಿ ಕೈಗೆತ್ತಿಕೊಂಡಿರುವುದಾಗಿದ್ದು,
ಆಡಳಿತಾತ್ಮಕ
ಮಂಜೂರಾತಿಗಾಗಿ
ಕಾಯಲಾಗುತ್ತಿದೆ.
೫) ಬೆಂಗಳೂರು-ವೈಟ್
ಫೀಲ್ಡ್ ಮತ್ತು
ಬೆಂಗಳೂರು-ಕೃಷ್ಣರಾಜಪುರಂ
:
೨೩.೦೮ ಕಿ.ಮೀ.
ಉದ್ದದ ಬೆಂಗಳೂರು-ವೈಟ್
ಫೀಲ್ಡ್ ಮತ್ತು
೧೩೨.೭೬ ಕಿ.ಮೀ.
ಉದ್ದದ ಬೆಂಗಳೂರು-ಕೃಷ್ಣರಾಜಪುರಂ
ಮಾರ್ಗಗಳ ಜೋಡಿಹಳಿ
ಕಾಮಗಾರಿಗಳ ಒಟ್ಟು
ಅಂದಾಜು ವೆಚ್ಚ
೬೩.೬೧ ಕೋಟಿ
ರೂಪಾಯಿಗಳಷ್ಟು
ಸ್ಥಳ ಸರ್ವೇಕ್ಷಣಕ್ಕೆ
ಈಗಾಗಲೇ ಟೆಂಡರ್
ಕರೆಯಲಾಗಿದೆ.
ಕೃಷ್ಣರಾಜಪುರಂ
ಬಳಿಯ ತಂತಿ ಕಮಾನು
ಸೇತುವೆ ಮತ್ತು
ಕಾಂಗ್ರೆಸ್ಸಿನ
ಬಡಾಯಿ :
ಬೆಂಗಳೂರಿನ
ನಾಗರೀಕರು
ಇತ್ತೀಚೆಗೆ ಕೆಲವು
ದಿನಗಳ ಹಿಂದೆ
ಪತ್ರಿಕೆಗಳಲ್ಲಿ
ಅಚ್ಚಾದ ಫೋಟೋ
ಮತ್ತು ವರದಿಯೊಂದನ್ನು
ನೋಡಿರಬಹುದು.
ಮುಖ್ಯಮಂತ್ರಿ
ಎಸ್.ಎಂ. ಕೃಷ್ಣರವರೂ,
ಮಂತ್ರಿ ರೋಷನ್
ಬೇಗ್‌ರವರೂ,
ಮಂತ್ರಿ ಕೃಷ್ಣಪ್ಪನವರು
ಮತ್ತು ಸಂಸದ
ಸಿ.ಕೆ. ಜಾಫರ್
ಷರೀಫ್‌ರವರೂ
ಹೀಗೆ ಕಾಂಗ್ರೆಸ್ಸಿಗರ
ದಂಡೇ ಕೆ. ಆರ್.
ಪುರಂನ ನಿರ್ಮಾಣ
ಹಂತದಲ್ಲಿರುವ
ತಂತಿ ಕಮಾನು
ಸೇತುವೆಯ ಬಳಿ
ನಿಂತುಸ್ಥಳ ವೀಕ್ಷಣೆ
ಮಾಡುತ್ತಿರುವ
ಚಿತ್ರ ಅದಾಗಿತ್ತು.
ಆ ಚಿತ್ರ ಮತ್ತು
ಪತ್ರಿಕಾ ವರದಿಯನ್ನು
ಓದಿದವರೆಗೆ ಇದು
ಕಾಂಗ್ರೆಸ್ ಸರ್ಕಾರ
ಮಾಡಿದ ಕೆಲಸವೇನೋ
ಎಂಬ ಭ್ರಮೆ ಹುಟ್ಟುವಂತಿತ್ತು.
ಆದರೆ ನಿಜಕ್ಕೂ
ವಿಪರ್ಯಾಸದ ಸಂಗತಿಯೆಂದರೆ
ಈ ಅದ್ಬುತ ತೂಗುಸೇತುವೆಯ
ನಿರ್ಮಾಣದಲ್ಲಿ
ಕಾಂಗ್ರೆಸ್ಸಿಗರದ್ದು
ಕಿಂಚಿತ್ತೂ ಕೊಡುಗೆಯಿಲ್ಲ.
ಕೇಂದ್ರದಲ್ಲಿ
ಕಾಂಗ್ರೆಸ್ ಸರ್ಕಾರವಿದ್ದಾಗ
ಜಾಫರ್ ಷರೀಫ್
ಮತ್ತು ರಾಜಶೇಖರ
ಮೂರ್ತಿಯವರ ಜಟಾಪಟಿಯಲ್ಲಿ
ಈ ಯೋಜನೆಯ ಕಡತ
ಮೂಲೆಗೆ ಬಿದ್ದಿತ್ತು.
ಆದರೆ ದೇವೇಗೌಡರು
ಪ್ರಧಾನಿಯಾದೊಡನೆಯೇ
ಇದಕ್ಕೆ ಜೀವ
ಸಿಕ್ಕಿ, ಹಣ
ಮಂಜೂರಾಯಿತು.
ಈ ಕಾಮಗಾರಿಗೆ
ತಗುಲಿರುವ ಒಟ್ಟು
ವೆಚ್ಚ ರೂ.೪೮
ಕೋಟಿಗಳು, ಇಷ್ಟೂ
ಹಣವನ್ನು ನೀಡಿದ್ದು
ದೇವೇಗೌಡರು ಮತ್ತು
ಗುಜ್ರಾಲ್ ನೇತೃತ್ವದ
ಸಂಯುಕ್ತರಂಗ
ಸರ್ಕಾರಗಳೇ ಎಂಬುದನ್ನು
ಬೆಂಗಳೂರಿನ ಜನ
ಅರಿಯಬೇಕು.
ಇತರೆ ಸೇತುವೆಗಳು
:
ಜನರು ಮತ್ತು
ಸಂಚಾರದ ಅನುಕೂಲತೆಯ
ದೃಷ್ಟಿಯಿಂದ
ಬೆಂಗಳೂರು-ಧರ್ಮಾವರಂ
(ಮೂರು ಕ್ರಾಸಿಂಗ್‌ಗಳು),
ಬೆಂಗಳೂರು-ತುಮಕೂರು
೨ನೇ ದರ್ಜೆ ಲಾಕಿಂಗ್,
ಬೆಂಗಳೂರು ನಗರಕ್ಕೆ
೨ನೇ ಗೇಜ್ ಮೊದಲಾದುವುಗಳಿಗೆ
ದೇವೇಗೌಡರ ಕಾಲದಲ್ಲಿ
ಚಾಲನೆ ಸಿಕ್ಕಿತ್ತು.
ಇವಲ್ಲದೆ ಯಲಹಂಕದ
ಬಳಿ, ಬೆಂಗಳೂರು
ಪೂರ್ವ ಬೈಯಪ್ಪನಹಳ್ಳಿ,
ವೈಟ್ ಫೀಲ್ಡ್
ಬಳಿ, ಹೆಬ್ಬಾಳ
ರಸ್ತೆಯಲ್ಲಿ
ಬೆಳಂದೂರು ಬಾಣಸವಾದಿ
ಬಳಿ ಹೊಸ ಸೇತುವೆಗಳ
ನಿರ್ಮಾಣ ಕಾರ್ಯ
ಭರದಿಂದ ಸಾಗುವಂತಾಯಿತು.
ಹೀಗೆ ಅಂದು
ಅಧಿಕಾರವಿದ್ದಾಗ,
ದೇವೇಗೌಡರು ತಮ್ಮ
ದೂರದೃಷ್ಟಿಯಿಂದ
ಬೆಂಗಳೂರಿನ ಭವಿಷ್ಯಕ್ಕಾಗಿ
ಅಡಿಪಾಯ ಹಾಕಿದ
ಯೋಜನೆಗಳೇ ಈಗ
ಕಾಂಗ್ರೆಸ್ ಸರ್ಕಾರದಿಂದ
ಉದ್ಘಾಟನೆಗೊಳ್ಳುತ್ತಿವೆ.
ಆದರೆ ಕೋರಮಂಗಲದ
ಸುಂದರ ವರ್ತುಲ
ರಸ್ತೆಯಲ್ಲಿ
ನೀವು ಸಂಚರಿಸುವಾಗ,
ಸಿಟಿ ಮಾರ್ಕೆಟ್‌ನ
ಫ್ಲೈ_ಓವರ್ ಮೇಲೆ
ಸಲೀಸಾಗಿ ನೀವು
ಸಂಚರಿಸುವಾಗ,
ಮೇಖ್ರಿ ವೃತ್ತದ
ಕೆಳ ಸೇತುವೆಯಲ್ಲಿ
ಸಂಚಾರ ಒತ್ತಡವಿಲ್ಲದೆ
ನೀವು ಚಲಿಸುವಾಗ
ರಿಚ್‌ಮಂಡ್ ವೃತ್ತದ
ಬಳಿ ಸಲೀಸಾಗಿ
ಹಾದುಹೋಗುವಾಗ
ನೀವು ದೇವೇಗೌಡರನ್ನು
ಮತ್ತು ಜನತಾ
ದಳ ಸರ್ಕಾರವನ್ನು
ಸ್ಮರಿಸಿಕೊಳ್ಳಲೇಬೇಕು.
ಏಕೆಂದರೆ ಇದು
ಕಾಂಗ್ರೆಸ್ ಕೊಡುಗೆಯಲ್ಲ
- ಜನತಾದಳದ ಕೊಡುಗೆ.
ಬೆಂಗಳೂರಿನ ಬಡವರೂ
ಮತ್ತು ದೇವೇಗೌಡರು
:
ನಗರದ ಬಡವರಿಗೂ
ಹಸಿರು ಕಾರ್ಡ್
:
ದೇವೇಗೌಡರು
ಮುಖ್ಯಮಂತ್ರಿಯಾಗಿದ್ದಾಗ
ಬೆಂಗಳೂರಿನ ಬಡವರನ್ನು
ಮರೆಯಲಿಲ್ಲ.
ಹಳ್ಳಿಯಿಂದ
ಬಂದಿದ್ದರೂ,
ರೈತನ ಮಗನಾಗಿದ್ದರೂ,
ದೇವೇಗೌಡರ ದೃಷ್ಟಿಯಲ್ಲಿ
ಎಲ್ಲ ಬಡವರೂ
ಒಂದೇ. ಹಿಂದಿದ್ದ
ಕಾಂಗ್ರೆಸ್ ಸರ್ಕಾರಗಳು
ಪಡಿತರ ಧಾನ್ಯಗಳನ್ನು
ಅಗ್ಗದ ಬೆಲೆಯಲ್ಲಿ
ಪಡೆಯುವ ಅನುಕೂಲವಿರುವ
ಹಸಿರು ಕಾರ್ಡುಗಳನ್ನು
ಕೇವಲ ಗ್ರಾಮೀಣ
ಪ್ರದೇಶದ ಬಡವರಿಗೆ
ಮಾತ್ರ ಅನ್ವಯಿಸಿದ್ದವು.
ಆದರೆ ದೇವೇಗೌಡರು
ಮುಖ್ಯಮಂತ್ರಿಯಾದೊಡನೆಯೇ
ತೆಗೆದುಕೊಂಡ
ಅತೀ ಮಹತ್ವದ
ತೀರ್ಮಾನವೆಂದರೆ
ಹಸಿರು ಕಾರ್ಡು
ಯೋಜನೆಯನ್ನು
ನಗರದ ಎಲ್ಲಾ
ಬಡವರಿಗೂ ವಿಸ್ತರಿಸಿದ್ದು.
ಹೀಗೆ ಬೆಂಗಳೂರು
ನಗರದ ಲಕ್ಷಾಂತರ
ಬಡವರೂ ಮತ್ತು
ಕೊಳಗೇರಿ ನಿವಾಸಿಗಳಿಗೂ
ಇಂದು ಹಸಿರು
ಕಾರ್ಡು ಸಿಕ್ಕಿದ್ದರೆ
ಅದಕ್ಕೆ ಕಾರಣಪುರುಷರಾದವರು
ದೇವೇಗೌಡರು ಎಂಬುದನ್ನು
ನಾವು ಮರೆಯಬಾರದು.
ಆದರೆ ಕಾಂಗ್ರೆಸ್
ಮತ್ತು ಬಿ.ಜೆ.ಪಿ.
ಸರ್ಕಾರಗಳಿಂದ
ನಗರದ ಬಡವರ ಸ್ಥಿತಿಯಂತೂ
ತೀರಾ ಶೋಚನೀಯವಾಗಿದೆ.
ಕೇಂದ್ರದ ಬಿ.ಜೆ.ಪಿ.
ಸರ್ಕಾರ ಬಡವರು
ಮತ್ತು ಮಧ್ಯಮ
ವರ್ಗದವರು ಬಳಸುವ
ಸೀಮೆ ಎಣ್ಣೆ,
ಡೀಸೆಲ್ ಮತ್ತು
ಅಡಿಗೆ ಅನಿಲದ
ಬೆಲೆಗಳನ್ನು
ಏರಿಸಿತು. ಈ
ಗಾಯದ ಮೇಲೆ ಬರೆ
ಎಳೆದಂತೆ ರಾಜ್ಯದ
ಕಾಂಗ್ರೆಸ್ ಸರ್ಕಾರವೂ
ಕೂಡ ನಗರದ ಬಡವರಿಗೆ
ಜನತಾದಳ ಕೊಟ್ಟಿದ್ದ
ಹಸಿರು ಕಾರ್ಡುಗಳ
ಸಂಖ್ಯೆಯನ್ನು
ಸಿಕ್ಕಾಪಟ್ಟೆ
ಕಡಿಮೆ ಮಾಡಿದ್ದಲ್ಲದೆ
ಪಡಿತರ ಕಾರ್ಡಿಗೆ
ಸಕ್ಕರೆ ಸಿಗದಂತೆಯೇ
ಮಾಡಿತು. ರಾಜ್ಯದಲ್ಲಿ
ಜನತಾದಳ ಸರ್ಕಾರ
ಸುಮಾರು ೬೦ ಲಕ್ಷ
ಜನರಿಗೆ ನೀಡಿದ್ದ
ಹಸಿರು ಕಾರ್ಡುಗಳನ್ನು
ಕೇವಲ ೨೦ ಲಕ್ಷಕ್ಕೆ
ಇಳಿಸಿ, ಲಕ್ಷಾಂತರ
ಬಡವರ ಬದುಕಿಗೆ
ಸಂಚಕಾರ ತಂದಿರುವುದು
ಕಾಂಗ್ರೆಸ್ ಸರ್ಕಾರ.
ಈ ಸಂದರ್ಭದಲ್ಲಿ
ಜನರು ಗಮನಿಸಬೇಕಾದ
ಮಹತ್ವದ ಸಂಗತಿಯೆಂದರೆ,
ದೇವೇಗೌಡರು ಪ್ರಧಾನಿಯಾಗಿದ್ದಾಗ
ಮತ್ತು ರಾಜ್ಯದಲ್ಲಿ
ಜನತಾದಳ ಸರ್ಕಾರವಿದ್ದಾಗ
ಪಡಿತರ ಧಾನ್ಯಗಳು
ಬಡವರಿಗೆ ಕಡಿಮೆ
ದರದಲ್ಲಿ ಸಿಗುವಂತಾಗಲು
ರಾಜ್ಯ ಸರ್ಕಾರ
ವೆಚ್ಚ ಮಾಡಬೇಕಾಗಿದ್ದ
ಹಣಕ್ಕೆ ಕೇಂದ್ರದಿಂದ
ಸಹಾಯಧನ ದೊರೆತಿದ್ದರೆ
ಫಲವಾಗಿ ಬಡವರು
ಕೊಳ್ಳುವ ಪಡಿತರ
ಧಾನ್ಯಗಳ ಬೆಲೆ
ಏರಲಿಲ್ಲವೆಂಬುದನ್ನು
ನಾವು ಜ್ಞಾಪಿಸಬಯಸುತ್ತೇವೆ.
ಕೊಳೆಗೇರಿಗಳ
ಬಗ್ಗೆ ವಿಶೇಷ
ಆಸಕ್ತಿ :
ದೇವೇಗೌಡರು
ಪ್ರಧಾನಿಯಾದೊಡನೆಯೇ
ಕೊಳೆಗೇರಿಗಳ
ಅಭಿವೃದ್ಧಿಗೆಂದೇ
ಪ್ರತ್ಯೇಕ ಧನಸಹಾಯವನ್ನು
ನೀಡಿದರು. ೫೦
ವರ್ಷಗಳ ಭಾರತದ
ಇತಿಹಾಸದಲ್ಲಿ
ಯಾವ ಕೇಂದ್ರ
ಸರ್ಕಾರವೂ ಕೊಳಗೇರಿಗಳ
ಅಭಿವೃದ್ಧಿಗೆಂದೇ
೨೫೦ ಕೋಟಿ ರೂಪಾಯಿಗಳನ್ನು
ಮತ್ತೆ ನಂತರ
೫೦೦ ಕೋಟಿ ರೂಪಾಯಿಗಳನ್ನು
ಒಟ್ಟು ೭೫೦ ಕೋಟಿ
ರೂಪಾಯಿಗಳನ್ನು
ನೀಡಿದರು. ಈ
ಬಾಬ್ತಿನಲ್ಲಿ
ಬೆಂಗಳೂರಿನ ಪಾಲಿಗೆ
ಸಿಕಕ ಸುಮಾರು
೧೬ ಕೋಟಿ ರೂಪಾಯಿಗಳಲ್ಲಿ
ಬೆಂಗಳೂರು ನಗರದ
ಬಡವರಿಗೆ ಮತ್ತು
ಕೊಳಗೇರಿ ನಿವಾಸಿಗಳಿಗೆ
ದೊರೆತ ಸೌಲಭ್ಯಗಳ
ಸಂಕ್ಷಿಪ್ತ ವಿವರ
ಈ ಮುಂದಿನ ರೀತಿ
ಇದೆ :
ಕೋಟಿ
ರೂ.ಗಳಲ್ಲಿ
೧ ಲಕ್ಷ್ಮೀಪುರಂ
ಬಳಿಯ ಕೊಳಚೆ
ನಿವಾಸಿಗಳ ಪುನರ್ವಸತಿಗಾಗಿ
೧.೩೩
೨ ಆಶ್ರಯ ಇ.ಡಬ್ಲ್ಯೂ.ಎಸ್.
ಮನೆಗಳು ೧.೯೯
೩ ಜಯನಗರದ ಅಸ್ಟಿನ್
ಟೌನ್‌ನ ಕೊಳಚೆ
ನಿವಾಸಿಗಳಿಗೆ
ಎಲ್.ಐ.ಜಿ. ಮನೆಗಳು
೦.೨೫
೪ ಅಲಸೂರಿನ ಯಲ್ಲಮ್ಮ
ದೇವಸ್ಥಾನದ ರಸ್ತೆಯ
ಕೊಳಚೆ ನಿವಾಸಿಗಳಿಗೆ
ಎಲ್.ಐ.ಜಿ. ಮನೆಗಳು
೦.೧೦
೫ ಭಾರತೀನಗರದ
ತಿಮ್ಮಯ್ಯ ರಸ್ತೆಯ
ಕೊಳಚೆ ನಿವಾಸಿಗಳಿಗೆ
ಎಲ್.ಐ.ಜಿ. ಮನೆಗಳು
೦.೦೪
೬ ರಾಜಾಜಿನಗರದ
೧ನೇ ಬ್ಲಾಕ್‌ನ
ಕೊಳಚೆ ನಿವಾಸಿಗಳಿಗೆ
ಎಲ್.ಐ.ಜಿ. ಮನೆಗಳು
೦.೦೬
೭ ಬೈಯಪ್ಪನಹಳ್ಳಿಯ
ಸಂಜಯನಗರ ಕೊಳಚೆ
ನಿವಾಸಿಗಳಿಗೆ
ಎಲ್.ಐ.ಜಿ. ಮನೆಗಳು
೦.೩೬
೮ ಬೆಂಗಳೂರಿನ
ಕಡಪಾಮಠ್‌ನ್
ಕೊಳಚೆ ನಿವಾಸಿಗಳಿಗೆ
ಲಗ್ಗೆರೆಯಲ್ಲಿ
ಎಲ್.ಐ.ಜಿ. ಮನೆಗಳು
೦.೩೮
೯ ಲಗ್ಗೆರೆ ೫ನೇ
ಫೇಸ್‌ನಲ್ಲಿ
ಕೊಳಚೆ ನಿವಾಸಿಗಳಿಗೆ
ಎಲ್.ಐ.ಜಿ. ಮನೆಗಳು
೧.೭೧
೧೦ ಬೆಂಗಳೂರು
ನಗರ ಜಿಲ್ಲೆಯ
ಬಡವರಿಗೆ ಆಶ್ರಯ
ಮನೆಗಳು ೧.೧೩
೧೧ ಲಗ್ಗೆರೆ
೨ನೇ ಫೇಸ್‌ನಲ್ಲಿ
ಕೊಳಚೆ ನಿವಾಸಿಗಳಿಗೆ
ಎಲ್.ಐ.ಜಿ. ಮನೆಗಳು
೧.೨೦
೧೨ ರಾಮಮೂರ್ತಿ
ನಗರದ ಅಹಮದ್‌ನಗರದ
ಕೊಳಚೆ ನಿವಾಸಿಗಳಿಗೆ
ಎಲ್.ಐ.ಜಿ. ಮನೆಗಳು
೦.೦೯
೧೩ ಡಾ|| ಅಂಬೇಡ್ಕರ್
ನಗರದ ಕೊಳಚೆ
ನಿವಾಸಿಗಳಿಗೆ
ಎಲ್.ಐ.ಜಿ. ಮನೆಗಳು
೦.೧೮
೧೪ ೧೯೯೭-೯೮
ನೇ ಸಾಲಿನಲ್ಲಿ
ಬೆಂಗಳೂರು ನಗರ
ಜಿಲ್ಲೆಗೆ ಆಶ್ರಯ
ಇ.ಡಬ್ಲೂ.ಎಸ್.
ಮನೆಗಳು ೧.೬೩
೧೫ ವಾಹಬ್ ಗಾರ್ಡನ್
ಕೊಳಚೆ ನಿವಾಸಿಗಳಿಗೆ
ಇ.ಡಬ್ಲೂ.ಎಸ್.
ಮನೆಗಳು ೦.೧೩
ಮೇಲ್ಕಂಡವುಗಳು
ಕೇವಲ ದೇವೇಗೌಡರ
ಸಾಧನೆಗಳ ಪರಿಪೂರ್ಣ
ಚಿತ್ರವಲ್ಲ.
ಕೇವಲ ಒಂದು
ಪಕ್ಷಿನೋಟ ಮಾತ್ರ.
ಸಾಮಾಜಿಕ ನ್ಯಾಯ
:
ದೇವೇಗೌಡರು
ಮತ್ತು ಅವರ ನೇತೃತ್ವದ
ಜನತಾದಳದ ಮೂಲ
ಮಂತ್ರವೇ ಸಾಮಾಜಿಕ
ನ್ಯಾಯ. ಆದ್ದರಿಂದಲೇ
ದೇವೇಗೌಡರು ಮುಖ್ಯಮಂತ್ರಿಯಾದೊಡನೆಯೇ
ಮಾಡಿದ ಮಹಾತ್ಕಾರ್ಯವೆಂದರೆ
ಮಹಾನಗರಪಾಲಿಕೆಗಳೂ
ಸೇರಿದಂತೆ ಎಲ್ಲ
ಸ್ಥಳೀಯ ಸಂಸ್ಥೆಗಳ
ಚುನಾವಣೆಗಳಲ್ಲಿ
ಕ್ಷೇತ್ರಗಳನ್ನು
ಹಿಂದುಳಿದ ವರ್ಗದವರಿಗೂ
ಮೀಸಲಿಟ್ಟಿದ್ದು,
ಸಂವಿಧಾನದಲ್ಲಿ
ಇಂತಹ ಅವಕಾಶ
ಇರದಿದ್ದಾಗ್ಯೂ
ಕರ್ನಾಟಕದಲ್ಲಿ
ಇಂತಹ ಕ್ರಾಂತಿಕಾರಕ
ತೀರ್ಮಾನ ಕೈಗೊಂಡವರು
ದೇವೇಗೌಡರು.
ಅಷ್ಟೇ ಅಲ್ಲ,
ಮೇಯರ್, ಉಪ ಮೇಯರ್,
ಜಿಲ್ಲಾ ಪಂಚಾಯಿತಿ
ಅಧ್ಯಕ್ಷ ಉಪಾಧ್ಯಕ್ಷ
ಪುರಸಭೆ, ನಗರಸಭೆ
ಮತ್ತು ಪಟ್ಟಣ
ಪಂಚಾಯಿತಿಗಳ
ಅಧ್ಯಕ್ಷ ಸ್ಥಾನಗಳು
ಇವೆಲ್ಲವುಗಳಲ್ಲೂ
ಹಿಂದುಳಿದ ವರ್ಗದವರಿಗೆ
ಮೀಸಲಾತಿ ಕೊಟ್ಟಿದ್ದು
ದೇವೇಗೌಡರ ನೇತೃತ್ವದ
ಜನತಾ ದಳ ಸರ್ಕಾರ.
ಆದ್ದರಿಂದಲೇ
ಇಂದು ಕಟ್ಟಕಡೆಯ
ಜನಕ್ಕೆ ಜನತಂತ್ರದ
ವ್ಯವಸ್ಥೆಯಲ್ಲಿ
ಮೊಟ್ಟಮೊದಲ ಸ್ಥಾನ
ಸಿಗುವಂತಾಗಿದೆ.
ಅಲ್ಪ ಸಂಖ್ಯಾತರು
ಮತ್ತು ಕೋಮು
ಸೌಹಾರ್ದ :
ಕಾಂಗ್ರೆಸ್
ಅಧಿಕಾರದಲ್ಲಿದ್ದಾಗ
ಬೆಂಗಳೂರಿನಲ್ಲಿ
ನಡೆದ ಕೋಮು ಗಲಭೆಗಳನ್ನು
ಜನ ಮರೆತಿರಲಾರರು.
ಉರ್ದು ವಾರ್ತೆ
ಚಳುವಳಿ, ಜಯನಗರ
ಗಣೇಶ ದೇವಸ್ಥಾನ
ಗಲಾಟೆ, ಈ ಸಂದರ್ಭಗಳಲ್ಲಿ
ಕೋಮು ಸೌಹಾರ್ದತೆ
ಹಾಳಾಗಿ ಜನ ಭಯ-ಭೀತಿಯಿಂದ
ನರಳುತ್ತಿದ್ದರು.
ಆದರೆ ಜನತಾದಳ
ಸರ್ಕಾರ ಅಧಿಕಾರಕ್ಕೆ
ಬಂದ ಮೇಲೆ ಅಂತಹ
ಒಂದೇ ಒಂದು ಕೋಮು
ಗಲಭೆ ಬೆಂಗಳೂರು
ನಗರದಲ್ಲಷ್ಟೆ
ಅಲ್ಲ. ಇಡೀ
ರಾಜ್ಯದಲ್ಲೇ
ನಡೆಯಲಿಲ್ಲ.
ಈದ್ಗಾ ಸಮಸ್ಯಾ
ಪರಿಹಾರ ಮಾಡಿದ
ನಂತರ ನಗರವೂ
ಸೇರಿದಂತೆ ರಾಜ್ಯದ
ಎಲ್ಲೆಡೆ ಕೋಮು
ಸೌಹಾರ್ದತೆ ಮತ್ತು
ಶಾಂತಿ ಮನೆಮಾಡಿತ್ತು.
ಜನತಾದಳ ಸರ್ಕಾರ
ಅಲ್ಪ ಸಂಖ್ಯಾತರಿಗೆ
ಶೇ. ೪ ರಷ್ಟು
ಶೈಕ್ಷಣಿಕ ಮತ್ತು
ಔದ್ಯೋಗಿಕ ಮೀಸಲಾತಿಯನ್ನು
ನೀಡುವುದರ ಜೊತೆಗೆ
ರಾಜಕೀಯ ಮೀಸಲಾತಿಯನ್ನೂ
ನೀಡಿ, ಹಿಂದೂಸ್ಥಾನದಲ್ಲಿಯೇ
ಹೊಸ ಆದರ್ಶದ
ಅಡಿಪಾಯ ಹಾಕಿಕೊಟ್ಟಿತು.
ಬೆಂಗಳೂರು ನಗರವೂ
ಸೇರಿದಂತೆ ರಾಜ್ಯದಲ್ಲಿ
ಅಲ್ಪ ಸಂಖ್ಯಾತರ
ಮಕ್ಕಳಿಗಾಗಿ
ವಸತಿ ಶಾಲೆಗಳನ್ನು
ತೆರೆದದ್ದೂ ಜನತಾದಳ
ಸರ್ಕಾರವೇ.
ಬಿ.ಜೆ.ಪಿ.ಯ
ಬಾಯಲ್ಲಿ ರಾಮನಾಮ
: ನಿರುದ್ಯೋಗಿಗಳಿಗೆ
ಹಾಕಿದ್ದು ಪಂಗನಾಮ
:
ಬಿ.ಜೆ.ಪಿ.
ಕೇಂದ್ರ ಸರ್ಕಾರ
ಅಧಿಕಾರಕ್ಕೆ
ಬಂದಾಗ ವರ್ಷಕ್ಕೆ
ಒಂದು ಕೋಟಿ ಉದ್ಯೋಗಗಳನ್ನು
ಸೃಷ್ಟಿಸುವುದಾಗಿ
ಹೇಳಿ ನಿರುದ್ಯೋಗಿಗಳ
ಮೂಗಿಗೆ ತುಪ್ಪ
ಹಚ್ಚುವ ಕೆಲಸ
ಮಾಡಿತು. ಆದರೆ
ಅದು ತನ್ನ ಮಾತನ್ನು
ತಾನೇ ನುಂಗಿಕೊಳ್ಳುವಂತೆ
ತದ್ದಿರುದ್ದ
ಕೆಲಸ ಮಾಡಿತು.
ಕೇಂದ್ರ ಸರ್ಕಾರದ
ನೌಕರರ ನಿವೃತ್ತಿಯ
ವಯಸ್ಸನ್ನು ೬೦
ಕ್ಕೆ ಏರಿಸುವಂತಹ
ಯುವ ವಿರೋಧಿ
ನಿಲುವನ್ನು ಅನುಸರಿಸಿತು.
ಅದರಂತೆಯೇ ಈಗಿನ
ನಮ್ಮ ರಾಜ್ಯದ
ಕಾಂಗ್ರೆಸ್ ಸರ್ಕಾರವು
ಉದ್ಯೋಗಾವಕಾಶಗಳ
ಮೇಲೆ ಮಿತಿ ಹಏರಿ
ನಿರುದ್ಯೋಗಿಗಳ
ಪಾಲಿಗೆ ದೊಡ್ಡ
ಸಂಚಕಾರ ತಂದಿದೆ.
ಆದರೆ ಜನತಾದಳ
ಸರ್ಕಾರ ಅಧಿಕಾರದಲ್ಲಿದ್ದಾಗ
ರಾಜ್ಯದಲ್ಲಿ
ಸುಮಾರು ೧,೫೦,೦೦೦
ಶಿಕ್ಷಕರ ಹುದ್ದೆಗಳಿಗೆ
ನೇಮಕವಾಯಿತು.
ಇದರಲ್ಲಿ ಶೇ.
೫೦ ಸ್ಥಾನಗಳು
ಸಂಪೂರ್ಣವಾಗಿ
ಮಹಿಳೆಯರಿಗೇ
ಮೀಸಲಾಗಿದ್ದವು.
ಹಾಗೆಯೇ ಉಳಿದ
ಉದ್ಯೋಗಾವಕಾಶಗಳಲ್ಲಿ
ಶೇ. ೩೩ ರಷ್ಟು
ಸ್ಥಾನಗಳು ಮಹಿಳೆಯರಿಗೆ
ಮೀಸಲಾಗಿದ್ದವು.
ತನ್ಮೂಲಕ ಕನ್ನಡ
ನಾಡಿನ ಯುವಕ-ಯುವತಿಯರಿಗೆ
ಬದುಕಿನ ಭದ್ರತೆ
ಒದಗಿಸಿದ ಕೀರ್ತಿ
ಜನತಾದಳ ಸರ್ಕಾರಕ್ಕೆ
ಸಲ್ಲುತ್ತದೆ.
ಯುವಜನತೆಗೆ
ಭ್ರಮೆ ಹುಟ್ಟಿಸಿ,
ಓಟು ಗಿಟ್ಟಿಸಿ
ನಂತರ ಅವರನ್ನು
ಮೋಸಗೊಳಿಸಿದ
ಕೀರ್ತಿ ಬಿ.ಜೆ.ಪಿ.
ನೇತೃತ್ವದ ಎನ್.ಡಿ.ಎ
ಸರ್ಕಾರಕ್ಕೆ
ಸಲ್ಲುತ್ತದೆ.
ವೈದ್ಯಕೀಯ ಸೌಲಭ್ಯದ
ಸಂಚಿತ ನಿಧಿ
:
ರಾಜಕಾರಣಿಗಳಿಗೆ,
ಅಧಿಕಾರಿಗಳಿಗೆ
ಮತ್ತು ಪ್ರತಿಷ್ಟಿತ
ವರ್ಗದವರಿಗೆ
ಮಾತ್ರ ದೊರೆಯುತ್ತಿದ್ದ
ಆರೋಗ್ಯ ಮತ್ತು
ವೈದ್ಯಕೀಯ ಸೌಲಭ್ಯವನ್ನು
ಎಲ್ಲಾ ವರ್ಗದವರಿಗೂ
ವಿಸ್ತರಿಸಿದ್ದು
ದೇವೇಗೌಡರ ಸಮಾಜವಾದಿ
ಬದ್ದತೆಯನ್ನು
ತೋರಿಸುತ್ತದೆ.
ಇದಕ್ಕಾಗಿಯೇ
ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ
ಬಡವರ ವೈದ್ಯಕೀಯ
ಸೇವಾ-ಸೌಲಭ್ಯಕ್ಕೆಂದು
೨೦ ಕೋಟಿ ರೂಪಾಯಿಗಳ
ಆರಂಭಿಕ ಸಂಚಿತ
ನಿಧಿಯೊಂದನ್ನು
ಸ್ಥಾಪಿಸಿ, ಅದನ್ನು
೧೦೦ ಕೋಟಿ ರೂಪಾಯಿಗಳವರೆಗೂ
ಹೆಚ್ಚಿಸಬೇಕೆಂಬ
ಉದ್ದೇಶ ಹೊಂದಿದ್ದರೆಂಬುದನ್ನು
ಈ ಸಂದರ್ಭದಲ್ಲಿ
ಉಲ್ಲೇಖಿಸಬಯಸುತ್ತೇವೆ.
ಆದರೆ ನಂತರದ
ಸರ್ಕಾರಗಳಲ್ಲಿ
ಈ ಸಂಚಿತ ನಿಧಿಯ
ಮೊತ್ತ ಹೆಚ್ಚದೇ
ಹೋದದ್ದು ವಿಷಾದನೀಯ
ಸಂಗತಿ.
ಆಟೋಚಾಲಕರು ಮತ್ತು
ದೇವೇಗೌಡರು :
ಬೆಂಗಳೂರಿನಲ್ಲಿ
ಆಟೋ ಚಾಲಕರ ಸಂಖ್ಯೆ
ಗಣನೀಯ ಪ್ರಮಾಣದಲ್ಲಿರುವಂತಹುದು.
ಅವರೆಲ್ಲಾ ಶ್ರಮಜೀವಿಗಳು
ಮತ್ತು ಬಡವರು.
ಅಂದಿನಂದಿನ
ಬದುಕಿಗೆ ಆಟೋ
ಓಡಿಸಿಯೇ ಅವರು
ಬದುಕಬೇಕು.
ಇದು ಅವರ ಆರೋಗ್ಯದ
ಮೇಲೂ ದುಷ್ಟರಿಣಾಮ
ಬೀರುವಂತಹದು.
ಜೊತೆಗೆ ಅಪಘಾತಗಳೂ
ನಿರೀಕ್ಷಿತವೇ.
ಇದನ್ನು ಅರಿತೇ
ದೇವೇಗೌಡರು ಆಟೋ
ಚಾಲಕರಿಗೆ ರೂ.೫೦,೦೦೦/-
ವರೆಗಿನ ಜೀವವಿಮಾ
ಸೌಲಭ್ಯ ಪಡೆಯಲು
ಸರ್ಕಾರದ ನೆರವು
ನೀಡುವ ಮೂಲಕ
ಶ್ರಮಿಕರ ಬಗೆಗಿನ
ತಮ್ಮ ಕಾಳಜಿಯನ್ನು
ಕಾರ್ಯತ: ಮಾಡಿ
ತೋರಿಸಿದರು.
ಆದರೆ ಇದೂ ಕೂಡ
ಇತ್ತೀಚಿನ ದಿನಗಳಲ್ಲಿ
ಸ್ಥಗಿತಗೊಂಡಿರುವುದು
ವಿಷಾದನೀಯ ಸಂಗತಿ.
ನರಕಸದೃಶ ಆಸ್ಪತ್ರೆಗಳು
:
ಜನತಾದಳ ಸರ್ಕಾರ
ಅಧಿಕಾರದಲ್ಲಿದ್ದಾಗ
ಬೆಂಗಳೂರು ನಗರವೂ
ಸೇರಿದಂತೆ ಕರ್ನಾಟಕದ
ಎಲ್ಲಾ ಸರ್ಕಾರಿ
ಆಸ್ಪತ್ರೆಗಳಲ್ಲೂ
ಜನರಿಗೆ ಸೌಜನ್ಯಪೂರ್ವಕವಾದ
ಸೇವೆ ಸಲ್ಲುತ್ತಿತ್ತು.
ಔಷದೋಪಕರಣಗಳು
ಮತ್ತು ವೈದ್ಯಕೀಯ
ಸಿಬ್ಬಂದಿಯಿಂದ
ಆಸ್ಪತ್ರೆಗಳು
ಸುಸಜ್ಜಿತವಾಗಿದ್ದವು.
ಎಂತಲೇ ಸರ್ಕಾರಿ
ಆಸ್ಪತ್ರೆಗಳಿಗೆ
ಬಡವರಷ್ಟೇ ಅಲ್ಲ
ಮಧ್ಯಮ ವರ್ಗದವರೂ
ಕೂಡ ಮಾರುಹೋಗುವಂತಾಗಿತ್ತು.
ಆದರೆ, ಕಾಂಗ್ರೆಸ್
ಸರ್ಕಾರ ಅಧಿಕಾರಕ್ಕೆ
ಬಂದ ಮೇಲೆ ನಗರದ
ಸರ್ಕಾರಿ ಆಸ್ಪತ್ರೆಗಳು
ನರಕಸದೃಶ್ಯವಾಗಿವೆ.
ಹೇಳುವವರೂ,
ಕೇಳುವವರೂ ಇಲ್ಲದಂತಾಗಿದೆ.
ಹೀಗಾಗಿ ಬಡವರೂ
ಕೂಡ ತಮ್ಮ ಪ್ರಾಣ
ಉಳಿಸಿಕೊಳ್ಳಲು
ಅನಿವಾರ್ಯವಾಗಿ
ಖಾಸಗಿ ನರ್ಸಿಂಗ್
ಹೋಂಗಳತ್ತ ಹೆಜ್ಜೆ
ಹಾಕತೊಡಗಿದ್ದಾರೆ.
ಇದು ಬಡವರಿಗೆ
ಕಾಂಗ್ರೆಸ್ ಸರ್ಕಾರ
ನೀಡಿರುವ ಕೊಡುಗೆ.
ಮಾತನಾಡದೆ ಮಾಡಿದ
ಜನತಾದಳದವರು
ಮಾಡದೇ ಮಾತನಾಡುತ್ತಿರುವ
ಕಾಂಗ್ರೆಸ್ಸಿಗರು;
ಮಾಡಬಾರದ್ದನ್ನು
ಮಾಡುತ್ತಿರುವ
ಬಿ.ಜೆ.ಪಿ. ಜನರು
:
ದೇವೇಗೌಡರಿಗೂ
ಮಾಧ್ಯಮಗಳಿಗೂ
ಇರುವ ಸಂಬಂಧ
ಎಲ್ಲರೂ ಬಲ್ಲರು.
ದೇವೇಗೌಡರು
ದೈತ್ಯಶಕ್ತಿಯ
ಕೆಲಸಗಾರರು.
ಹಠ ಮತ್ತು ಛಲ
ಹಿಡಿದು, ಸಾಧಿಸುವ
ಹೋರಾಟಗಾರರು,
ಹಳ್ಳಿಗನಾಗಿ
ಸ್ವಲ್ಪ ಒರಟೆನ್ನಬಹುದಾದ
ಸ್ವಭಾವದವರು.
ಆದರೆ ಹೃದಯದಲ್ಲಿ
ಮಾತ್ರ ಮಾನವೀಯತೆ
ಮತ್ತು ಬದ್ದತೆಯುಳ್ಳವರು.
ನಯವಂಚಕರಲ್ಲದ
ದೇವೇಗೌಡರದು
ನೇರ ನುಟೆ-ನುಡಿ.
ಆದುದರಿಂದ ದೇವೇಗೌಡರು
ತಾವು ಮಾಡಿದ
ಕೆಲಸಗಳನ್ನು
ಕೊಚ್ಚಿಕೊಳ್ಳಲು
ಹೋಗಲಿಲ್ಲ.
ಅವುಗಳ ಪ್ರಚಾರಕ್ಕಾಗಿ
ಅವರು ಯಾರನ್ನೂ
ಓಲೈಸಲಿಲ್ಲ.
ಹೀಗಾಗಿ ಅವರು
ಮತ್ತು ಅವರ ನೇತೃತ್ವದ
ಜನತಾದಳ ಸರ್ಕಾರ
ಎಷ್ಟೆಲ್ಲ ಸಾಧನೆಗಳನ್ನು
ಮಾಡಿದ್ದರೂ ಅವು
ಜನಕ್ಕೆ ಮುಟ್ಟಿತೇ
ವಿನ: ಮನಕ್ಕೆ
ತಟ್ಟಲಿಲ್ಲ.
ಇದು ದೇವೇಗೌಡರ
ಒಳ್ಳೆಯ ಗುಣವೂ
ಹೌದು; ಒಂದು
ಕೊರತೆತಯೂ ಹೌದು.
ಆದರೆ ನಡೆಯುತ್ತಿರುವ
ಯೋಜನೆಗಳಿಗೆ
ಹೊಸದಾಗಿ ಒಂದು
ರೂಪಾಯಿ ಬಿಡುಗಡೆ
ಮಾಡದೆ ಹಿಂದಿನ
ಸರ್ಕಾರ ಜಾರಿಗೊಳಿಸುವ
ಕೆಲಸಗಳನ್ನೇ
ಮುಂದುವರೆಸುತ್ತಿರುವ
ಮತ್ತು ಮಾತಿನಲ್ಲೆ
ಮಂಟಪ ಕಟ್ಟಿತ್ತಿದ್ದಾರೆ.
ಈ ಸರ್ಕಾರದ
ನಾಜೋಕುತನದ ಮಾತುಗಾರಿಕೆ,
ಮಾಧ್ಯಮಗಳ ಮೂಲಕ
ಮತ್ತು ಜಾಹಿರಾತುಗಳ
ಮೂಲಕ ಬಿಂಬಿಸುತ್ತಿರುವ
ಭ್ರಮೆ, ಉತ್ರ್ಪೇಕ್ಷೆಯ
ಅಂಕಿ-ಅಂಶಗಳ
ಮೂಲಕ ಕಾಂಗ್ರೆಸ್ಸಿನ
ಸರ್ಕಾರ ಬೆಂಗಳೂರು
ನಗರದ ಜನರನ್ನು
ದಾರಿತಪ್ಪಿಸುತ್ತಿದೆ.
ಬಿ.ಜೆ.ಪಿ.ಯವರೂ
ಕೂಡ ಒಂದೇ ಒಂದು
ಹೊಸ ಜನಪರವಾದ
ಕಾರ್ಯವನ್ನೂ
ಹಮ್ಮಿಕೊಳ್ಳದೇ
ಇದ್ದದ್ದನ್ನೂ
ಹಾಳು ಮಾಡುತ್ತ
ಸಗಿದ್ದಾರೆ.
ಸೀಮೆಎಣ್ಣೆ,
ಡೀಸೆಲ್, ಪೆಟ್ರೋಲ್,
ಅಡಿಗೆ ಅನಿಲ
ಇವುಗಳ ಬೆಲೆ
ಏರಿಸಿದ್ದು ಬಿ.ಜೆ.ಪಿ.
ಸರ್ಕಾರ, ಉದ್ಯೋಗಾವಕಾಶಗಳನ್ನೆಲ್ಲಾ
ಕಿತ್ತು ಹಾಕಿ,
ನಿರುದ್ಯೋಗಿಗಳ
ಹೊಟ್ಟೆಯ ಮೇಲೆ
ಹೊಡೆದದ್ದು ಬಿ.ಜೆ.ಪಿ.
ಸರ್ಕಾರ ಕೋಮು
ಅಶಾಂತಿ ಬಿತ್ತುತ್ತ
ಸಾಮಾಜಿಕ ನೆಮ್ಮದಿಗೆ
ಭಂಗ ತರುತ್ತಿರುವುದೂ
ಕೂಡ ಬಿ.ಜೆ.ಪಿ.
ಸರ್ಕಾರವೇ.
ಹೀಗೆ ಕಾಂಗ್ರೆಸ್
ಮತ್ತು ಬಿ.ಜೆ.ಪಿ.
ಗಳೆರಡೂ ಜನವಿರೋಧಿ
ಕೃತ್ಯಗಳಲ್ಲಿ
ಒಂದರ ಮೇಲೆ ಒಂದು
ಪೈಪೋಟಿ ಮಾಡುತ್ತಿವೆ.
ಎಂತಲೇ ಕಾಂಗ್ರೆಸ್
ಮತ್ತು ಬಿ.ಜೆ.ಪಿ.
ಗಳಿಗೆ ಪರ್ಯಾಯವಾಗಿ
ತೃತೀಯ ಶಕ್ತಿಯ
ನಿರ್ಮಾಣ ಇಂದಿನ
ಅನಿವಾರ್ಯ ಅಗತ್ಯವಾಗಿದೆ.
ಜನರು ಇದನ್ನು
ಅರ್ಥಮಾಡಿಕೊಳ್ಳುತ್ತಾರೆಂಬ
ಆಸೆ ನಮಗಿದೆ.
ಅಭಿಪ್ರಾಯ ಭೇದಗಳು
ಜನತಂತ್ರದಲ್ಲಿ
ಸರ್ವಸಾಮಾನ್ಯ
ವಿಮರ್ಶೆ ಮತ್ತು
ವಿಶ್ಲೇಷಣೆ ಅನಿವಾರ್ಯ.
ಟೀಕೆ ಟಿಪ್ಪಣಿಗಳು
ಆರೋಗ್ಯಕರ.
ಇವೆಲ್ಲವುಗಳ
ಮಧ್ಯೆಯೂ ಈ ಜನತಾದಳ
ಸರ್ಕಾರ ನಗರಕ್ಕೆ
ಸಲ್ಲಿಸಿದ ಸೇವೆಯನ್ನು
ಗುರುತಿಸಿ, ಸ್ಮರಿಸಿ,
ಮೆಚ್ಚುಗೆಯ ಎರಡು
ನುಡಿ ಉದುರಿಸಲು
ನಾವು ಜಿಪುಣರಾಗಬೇಕೇಕೆ?
ನಮ್ಮ ಕನ್ನಡಿಗನೊಬ್ಬ
ಪ್ರಧಾನಿಯಾಗಿ
ನಮ್ಮ ನಗರಕ್ಕೆ
ಇಷ್ಟೆಲ್ಲಾ ಮಾಡಿದರು
ಎಂದು ಹೇಳಿಕೊಳ್ಳುವುದಕ್ಕೆ
ಯಾವ ಕುತ್ತಾದರೂ
ನಮ್ಮನ್ನು ಕಾಡಬೇಕೇಕೇ?
ಆಗಿರುವ ಸಾಧನೆಗಳಿಗೆ
ರುಜುವಾತಿರುವಾಗ
ಅದನ್ನು ಅನುಮಾನಿಸುವ
ಅನ್ಯಮನಸ್ಯತೆಯೇಕೆ?
ಈ ದೃಷ್ಟಿಯಿಂದ
ಈ ಕಿರುಹೊತ್ತಿಗೆ
ದೇವೇಗೌಡರು ಮತ್ತು
ಜನತಾ ದಳ ಸರ್ಕಾರ
ಬೆಂಗಳೂರು ನಗರಕ್ಕೆ
ಮಾಡಿದ ಒಳ್ಳೆಯ
ಕೆಲಸದ ಬಗ್ಗೆ
ನಿಮ್ಮ ಗಮನಸೆಳೆಯುವಂತಾದಲ್ಲಿ
ನಮ್ಮ ಶ್ರಮ ಸಾರ್ಥಕವೆಂದು
ಭಾವಿಸುತ್ತೇವೆ.
**** |