jds janatha dal secular
 
 
Sri H D Deve Gowda - Party President

ಜನತಾದಳ (ಜಾತ್ಯಾತೀತ) ಉಗಮ

 

೧೯೭೪-೭೫ ದೇಶದಲ್ಲಿ ಬಡತನ, ಭ್ರಷ್ಟಾಚಾರ ತಾಂಡವವಾಡುತ್ತಿದ್ದ ವರ್ಷ. ನಿರುದ್ಯೋಗದಿಂದ ಯುವಜನತೆ ದಂಗೆ ಏಳಬಹುದಾಗಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ದಿ|| ಜಯಪ್ರಕಾಶ ನಾರಾಯಣ ಅವರು ನೇತೃತ್ವ ವಹಿಸಿ ಬಿಹಾರದಲ್ಲಿ ಶಾಂತಿಯುತ ಚಳುವಳಿ ಪ್ರಾರಂಭಿಸಿದ್ದರು. ಕಾಂಗ್ರೆಸ್ಸಿನ ಆಡಳಿತದಿಂದ ಬೇಸರಪಟ್ಟ ದೇಶದ ಯುವಜನತೆ ಈ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಈ ಚಳುವಳಿ ದೇಶಾದ್ಯಂತ ವ್ಯಾಪಿಸಿತ್ತು.

 

ಆ ಸಂದರ್ಭದಲ್ಲಿ ಜರುಗಿದ ೨ ಘಟನೆಗಳು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರನ್ನು ಚಿಂತೆಗೊಳಗಾಗುವಂತೆ ಮಾಡಿದವು. ೧೯೭೫ರ ಮೇ ತಿಂಗಳಿನಲ್ಲಿ ಗುಜರಾತ್ ವಿಧಾನಸಭೆಗೆ ಜರುಗಿದ ಉಪಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಕಾಂಗ್ರೆಸ್ಸಿಗರಲ್ಲಿ ಹೆಚ್ಚಿನ ವಿಧಾನಸಭಾ ಸ್ಥಾನಗಳಲ್ಲಿ ಜಯಗಳಿಸಿ ಸರಕಾರ ರಚಿಸುವ ಹಂತ ತಲುಪಿದ್ದ ಮೊದಲ ಘಟನೆ.

 

೧೯೭೧ ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಶ್ರೀಮತಿ ಇಂದಿರಾಗಂಧಿಯವರು ಚುನಾವಣೆಯಲ್ಲಿ ಅಕ್ರಮವೆಸಗಿದ್ದರೆಂದು ಆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ವಿರೋಧಿ ಆಭ್ಯರ್ಥಿ ಶ್ರೀ ರಾಜನಾರಾಯಣ ಆವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಎತ್ತಿ ಹಿಡಿದ ಅಲಹಾಬಾದ್ನ ಉಚ್ಛ ನ್ಯಾಯಾಲಯ ಶ್ರೀಮತಿ ಇಂದಿರಾ ಗಾಂಧಿಯವರ ಆಯ್ಕೆಯನ್ನು ಅನೂರ್ಜಿತಗೊಳಿಸಿದ್ದು.

Deve Gowda

 

ಮೇಲೆ ಹೇಳಿದ ೨ ಘಟನೆಗಳು ಇಂದಿರಾಗಾಂಧಿಯವರನ್ನು ವಿಚಾರಣೆಗೊಳಪಡಿಸಿದ್ದವು. ಉಚ್ಛ ನ್ಯಾಯಾಲಯದ ತೀರ್ಪಿನಿಂದಾಗಿ ಪ್ರಧಾನಿ ಸ್ಥಾನ ತ್ಯಜಿಸುವುದನ್ನು ತಪ್ಪಿಸಿಕೊಳ್ಳಲು ಆಗ ಇಂದಿರಾ ಗಾಂಧಿಯವರು ಬಳಸಿದ ಅಸ್ತ್ರ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ. ಅದು ೨೫-೦೬-೧೯೭೫.

 

ದೇಶದ ನೇತಾರರಾದ ಜಯಪ್ರಕಾಶ ನಾರಾಯಣ ಆಚಾರ್ಯ ಕೃಪಾಲಾನಿ, ಶ್ರೀ ಎಸ್. ನಿಜಲಿಂಗಪ್ಪ, ಶ್ರೀ ಮುರಾದಜಿದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಆಡ್ವಾನಿ, ಶ್ರೀ ರಾಮಕೃಷ್ಣ ಹೆಗಡೆ, ಜೆ.ಹೆಚ್. ಪಾಟೀಲ್, ಹೆಚ್.ಡಿ. ದೇವೇಗೌಡ, ಜೆ.ಸಿ. ಚಳುವಳಿಯ ಮಂಡೂಸಿಯಲ್ಲಿದ್ದ ಲಾಲೂ ಪ್ರಸಾದ ಯಾದವ್, ಮನಮೋಹನ್ ಸಿಂಗ್ ಮೊದಲಾದವರು ಜೈಲು ಸೇರಿದರು. ಆಗ ಆಡಳಿತ ಪಕ್ಷದಲ್ಲಿದ್ದ ಶ್ರೀ ಚಂದ್ರಶೇಖರ, ಮೋಹನಧಾರಿಯಾ ಮೊದಲಾದವರು ಇಂದಿರಾಗಾಂಧಿಯವರ ಆಡಳಿತವನ್ನು ವಿರೋಧಿಸಿದ್ದರಿಂದ ಜೈಲು ಸೇರಬೇಕಾಯ್ತು, ಪತ್ರಿಕಾ ಸ್ವಾತಂತ್ರ್ಯವು ಇಲ್ಲದಂತಾಗಿತ್ತು. ಆಭಿವ್ಯಕ್ತಿ ಸ್ವಾವಲಂಬವೂ ಇರಲಿಲ್ಲ. ಕತ್ತರಿ ಪ್ರಯೋಗ ಮಾಡಲಾತುತ್ತಿತ್ತು. ಸರಕಾರವನ್ನು ಇಂದಿರಾ ಗಾಂದಿಯವರನ್ನು ಕಾಂಗ್ರೆಸ್ ಪಕ್ಷವನ್ನು ಹೊಗಳಿ ಬಹು ಪರಾಕ್ ಲೇಖನಗಳು ಪ್ರಸಾರವಾಗುತ್ತಿದ್ದವು. ಆಕಾಶವಾಣಿಯಲ್ಲಿ ಸುದ್ಧಿ ಪ್ರಸಾರವಾಗುತ್ತಿತ್ತು. ಸರ್ಕಾರದ ವಿರೋಧವಾಗಿ ಮಾತನಾಡೂವ, ಭಾಷಣ ಮಾಡುವ, ಲೇಖನ ಬರೆಯುವ, ವರದಿ ಪ್ರಕಟಿಸುವ ಸ್ವಾತಂತ್ರ್ಯವೇ ಇರಲಿಲ್ಲ. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿತ್ತು.

 

ಆದೇನೋ ಎಂತೋ ಆಗಿನ ಪ್ರಾಧಾನಿ ಇಂದಿರಾಗಾಂಧಿಯವರು ೧೯೭೭ರ ಜನವರಿಯಲ್ಲಿ ಲೋಕಸಭೆಗೆ ಚುನಾವಣೆ ಘೋಶಿಸಿದರು. ತುರ್ತು ಪರಿಸ್ಥಿತಿ ಸಂಪೂರ್ಣ ತೆಗೆದುಹಾಕದಿದ್ದರೂ ಸ್ವಲ್ಪ ಮಟ್ಟಿಗೆ ಸಡಿಲಿಸಲಾಯ್ತು.

 

ಹಲವಾರು ಗುಂಪುಗಳಲ್ಲಿ ಹಂಚಿಹೋಗಿದ್ದ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ಕಾಂಗ್ರೆಸ್ ರಚಿಸುವ ಕೆಲಸಕ್ಕೆ ಕೈ ಹಾಕಿದವರು. ಶ್ರೀ ಜಯಪ್ರಕಾಶ ನಾರಾಯಣ ಮತ್ತು ಆಚಾರಕ್ಕೆ ಕೃಪಲಾನಿ. ಕಾಂಗ್ರೇಸ್ ವಿರೋಧಿ ಶೇ. ೬೫ ರಷ್ಟು ಮತಗಳು ಹಲವಾರು ಪಕ್ಷಗಳಿಗೆ ಹಂಚಿಹೋಗಿ ಶೇ. ೩೫ ರಷ್ಟು ಮತಗಳಿಸುತ್ತಿದ್ದ ಕಾಂಗ್ರ್‍ಏಸ್ ಅಧಿಕಾರ ಹಿಡಿಯುವುದು. ಅದನ್ನು ವಿವಿಧ ರಾಜಕೀಯ ಪಕ್ಷಗಳ ನೇತಾರರಿಗೆ ಮನದಟ್ಟು ಮಾಡಿಕೊಟ್ಟ ಶ್ರೀ ಜಯಪ್ರಕಾಶ ನಾರಾಯಣ ಅವರು ನಾಲ್ಕು ರಾಷ್ಟ್ರೀಯ ಪಕ್ಷಗಳನ್ನು (ಸಂಸ್ಥಾನ ಕಾಂಗ್ರೇಸ್, ಭಾರತೀಯ ಜನಸಂಘ, ಭಾರತೀಯ ಲೋಕದಳ ಮತ್ತು ಪ್ರಜಾ ಸಮಾಜವಾದಿ ಪಕ್ಷ) ಸಮ್ಮಿಲನಗೊಳಿಸಿ ಜನತಾ ಪಕ್ಷ ಉಯಯವಾಗುವಂತೆ ಮಾಡಿದರು. ಆ ಹೊಸ ಪಕ್ಷಕ್ಕೆ ರಾಷ್ಟ್ರ್‍ಈಯ ಅಧ್ಯಕ್ಷರಾಗಿ ಶ್ರೀ ಮುರಾರ್ಜಿ ದೇಸಾಯಿಯವರು ನೇಮಕವಾದರೆ ಕರ್ನಾಟಕ ಪ್ರದೇಶ ಜನತಾ ಪಕ್ಷದ ಅಧ್ಯಕ್ಷರಾಗಿ ಶ್ರೀ ವೀರೇಂದ್ರ ಪಾಟೇಲರು ನೇಮಕವಾಗಿದ್ದರು.

 

೧೯೭೭ರಲ್ಲಿ ಲೋಕಸಭೆಗೆ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಅವರ ಪುತ್ರ ಸಂಜಯಗಾಂಧಿ ಕ್ರಮವಾಗಿ ರಾಯಬರೇಲಿ ಮತ್ತು ಅಮೋಧಿಕೇಂದ್ರಗಳಿಂದ ಪರಾಭವಗೊಂಡರು. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೇಸ್ ಪರಾಭವಗೊಂಡಿತ್ತು.

 

೧೯೭೮ರಲ್ಲಿ ನಡೆದ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ದೇವರಾಜ ಆರಸ್ ನಾಯಕತ್ವದ ಕಾಂಗ್ರೇಸ್ ಬಹುಮತ ಗಳಿಸಿತು. ೬೮ ಸ್ಥಾನ ಗಳಿಸಿದ ಜನತಾ ಪಕ್ಷದ ಪ್ರಮುಖ ವಿರೋಧಪಕ್ಷವಾಗಿ ಹೊರ ಹೊಮ್ಮಿತು. ಶ್ರೀ ಹೆಚ್.ಡಿ. ದೇವೇಗೌಡ ವಿರೋಧ ಪಕ್ಷದ ನಾಯಕರಾದರು.

 

ಕೇಂದ್ರದಲ್ಲಿ ಜನತಾ ಪಕ್ಷದ ನಾಯಕರ ಒಳಜಗಳದಿಂದಾಗಿ ಮೂರೇ ವರ್ಷದಲ್ಲಿ ಶ್ರೀ ಮುರಾರಜಿ ದೇಸಾಯಿಯವರ ಸರ್ಕಾರ ಪತನಗೊಂಡಿತು. ಚರಣಸಿಂಗ್ ಮತ್ತು ರಾಜನಾರಾಯಣದಲ್ಲಿದ್ದ ಅಧಿಕಾರ ವ್ಯಾಮೋಹ ಹಾಗೂ ಕಾಂಗ್ರೇಸ್ ನಾಯಕರ ......... ಇದಕ್ಕೆ ಕಾರಣ

 

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತುರ್ತಾಗಿ ಜನ್ಮ ತಾಳಿದ ಜನತಾ ಪಕ್ಷ ಮೊದಲ ಸಲ ವಿಭಜನೆಯಾಯ್ತು. ಚರಣಸಿಂಗ್ ಅವರ ನೇತೃತ್ವದಲ್ಲಿ ಭಾರತೀಯ ಕ್ರಾಂತಿದಳ (ಬಿ.ಕೆ.ಡಿ) ರಚನೆಯಾಯ್ತು. ೧೯೮೦ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿಯೇ ಶ್ರೀಮತಿ ಇಂದಿರಾಗಾಂಧಿ ಮತ್ತು ಶ್ರೀ ಡಿ. ದೇವರಾಜ ಅರಸರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಕಾಂಗ್ರೆಸ್ ೩ನೇ ಸಲ ವಿಭಜನೆಗೊಳಗಾಯ್ತು. ದೇವರಾಜ ಅರಸರ ನೇತೃತ್ವದಲ್ಲಿ ಕರ್ನಾಟಕ ಕಾಂಗ್ರೆಸ್ ಜನನ ಶ್ರೀಮತಿ ಇಂದಿರಾಗಾಂಧಿಯವರ ಬಣಕ್ಕೆ 'ಇಂದಿರಾ ಕಾಂಗ್ರೆಸ್' ಎಂದು ನಾಮಕರಣ.

 

೧೯೮೦ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಬಹುಮತ. ಇತ್ತ ಕರ್ನಾಟಕದಲ್ಲಿ ದೇವರಾಜು ಅರಸು ಅವರ ಬಣದಲ್ಲಿದ್ದ ಬಹುತೇಕ ಶಾಸಕರು ಇಂದಿರಾ ಕಾಂಗ್ರೆಸ್ಸಿಗೆ ವಲಸೆ. ದೇವರಾಜ ಅರಸು ನೇತೃತ್ವದ ಸರಕಾರದ ಪತನ. ಶ್ರೀ ಆರ್. ಗುಂಡೂರಾವ್ ನೇತೃತ್ವದ ಸರ್ಕಾರ ರಚನೆ.

 

ಶ್ರೀ ಹೆಚ್.ಡಿ. ದೇವೇಗೌಡರ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದ ಜನತಾ ಪಕ್ಷ ಸರ್ಕಾರದ ಲೋಪದೋಷಗಳನ್ನು ಸಮರ್ಥವಾಗಿ ಎತ್ತಿ ತೋರಿಸಿ ಜನಪ್ರಿಯತೆಯಲ್ಲಿ ಸಾಗುತ್ತಿತ್ತು. ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ, ದಲಿತ-ಅಲ್ಪ ಸಂಖ್ಯಾತರ ವಿರೋಧಿ ಧೋರಣೆಗಳನ್ನು ಶ್ರೀ ಹೆಚ್.ಡಿ. ದೇವೇಗೌಡರು ಸಮರ್ಥವಾಗಿ ವಿಧಾನಸಭೆಯಲ್ಲಿ ಖಂಡಿಸಿ ಮಾತನಾಡುತ್ತಿದ್ದರು.

 

ಕೇಂದ್ರದಲ್ಲಿ ವಿರೋಧಪಕ್ಷಗಳ ಸಾಲಿನಲ್ಲಿ ಕುಳಿತ ಜನತಾ ಪಕ್ಷದ ದ್ವಿಸದಸ್ಯತ್ಬ (ಜನತಾ ಪಕ್ಷದ ಸದಸ್ಯರು ಬೇರೊಂದು ಸಂಘದ ಸದಸ್ಯತ್ವ ಹೊಂದಬಾರದು) ಎಂಬ ಕಾರಣಕ್ಕೆ ಮತ್ತೊಮ್ಮೆ ಜನತಾ ಪಕ್ಷ ವಿಭಜನೆಯಾಯ್ತು. ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ರಚನೆಯಾದ ಹೊಸ ಪಕ್ಷ 'ಭಾರತೀಯ' ಜನತಾ ಪಕ್ಷ.

 

೧೯೮೩ರಲ್ಲಿ ಕರ್ನಾಟಕ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ಪಕ್ಷ ಮತ್ತು ದಿ|| ದೇವರಾಜ ಅರಸು ಸ್ಥಾಪಿಸಿದ್ದ ಕ್ರಾಂತಿರಂಗ ಮೈತ್ರಿಕೂಟ ಕಾಂಗ್ರೆಸ್ಸಿಗಿಂತಲೂ ಹೆಚ್ಚಿನ ಸ್ಥಾನ ಗಳಿಸಿದ್ದವು. ೧೮ಜನ ಭಾಜಪ ಶಾಸಕರ ಹಾಗೂ ೧೮ ಜನ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ರಾಮಕೃಷ್ಣ ಹೆಗಡೆಯವರ ನಾಯಕತ್ವದಲ್ಲಿ ಸರ್ಕಾರ ರಚನೆಯಾಯ್ತು. ಜನತಾ ಪಕ್ಷದ ಹಿರಿಯ ನಾಯಕರಾಗಿದ್ದ ಶ್ರೀ ಹೆಚ್.ಡಿ. ದೇವೇಗೌಡ, ಶ್ರೀ ಎಸ್. ಆರ್. ಬೊಮ್ಮಾಯಿ ಮತ್ತು ಜೆ.ಹೆಚ್. ಪಾಟೀಲ್ ಅವರು ಮಂತ್ರಿಮಂಡಲ ಸೇರಿದ್ದರು.

 

೧೯೮೪ರಲ್ಲಿ ನಡೆದ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನುಕಂಪದ ಅಡಿಯಲ್ಲಿ ಭಾರೀ ಬಹುಮತಗಳಿಸಲು ಮತ್ತೆ ಹೊಸದಾಗಿ ಜನಾದೇಶ ಪಡೆಯಲು ಶ್ರಿ ರಾಮಕೃಷ್ಣ ಹೆಗಡೆಯವರ ವಿಧಾನಸಭೆ ವಿಸರ್ಜನೆ ಚುನಾವಣೆಗೆ ಮುಂದಾದರು. ಆಗ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ೧೩೯ ಸ್ಥಾನ ಗಳಿಸಿತು.

 

೧೯೮೩-೯೫ರ ಜನತಾ ಪಕ್ಷದ ಆಡಳಿತ ಜನ ಮೆಚ್ಚುಗೆ ಗಳಿಸಿದ್ದಾರೆ. ೧೯೮೫-೮೯ರ ಆಡಳಿತ ಒಳಜಗಳದಿಂದಾಗಿ ಜನ ರೋಸಿಹೋಗುವಂತೆ ಮಾಡಿತ್ತು.

 

೧೯೮೯ರ ಆರಂಭದಲ್ಲಿ ಚರಣಸಿಂಗ್ ಅವರು ಸ್ಥಾಪಿಸಿದ್ದ ದೇವಿಲಾಲ ನಾಯಕತ್ವದ ಭಾರತೀಯ ಕ್ರಾಂತಿದಳ (ಬಿ.ಕೆ.ಡಿ) ಜನತಾ ಪಕ್ಷದಲ್ಲಿ ವಿಲೀನಗೊಂಡ ನಂತರ ರಚನೆಯಾದದ್ದು 'ಜನತಾದಳ' ರಾಮಕೃಷ್ಣ ಹೆಗಡೆಯವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದ ಶ್ರೀ ಹೆಚ್.ಡಿ. ದೇವೇಗೌಡರು 'ನೀರಾವರಿಗಾಗಿ ಕಾಯ್ದಿರಿಸಿದ ಹಣ ಕಡಿಮೆಯಾಯ್ತು ಎಂದು ಪ್ರತಿಭಟನೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದುದ್ದು ದೇವೇಗೌಡರಿಗೆ ರೈತರ ಪರ ಇದ್ದ ಕಳಕಳಿಯ ಅರಿವು ಉಂಟಾಗುತ್ತದೆ. ಅದೇ ಭಿನ್ನಾಭಿಪ್ರಾಯದಿಂದಾಗಿ ಶ್ರೀ ದೇವೇಗೌಡರು ಮುಂದೆ ರಾಜೀನಾಮೆ ಕೊಟ್ಟು ಪ್ರತ್ಯೇಕವಾಗಿ ಸಮಾಜವಾದಿ ಜನತಾಪಕ್ಷ ರಚಿಸಿದ್ದರು. ೧೯೮೯ರಲಿ ಲೋಕಸಭೆ ಮತ್ತು ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕೇಂದ್ರದಲ್ಲಿ ಜನತಾದಳದ ಸಮ್ಮಿಶ್ರ ಸರ್ಕಾರ ರಚನೆ ಉಂಟಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಯ್ತು.

 

೧೯೯೦ರಲ್ಲಿ ಕೇಂದ್ರದಲ್ಲಿದ್ದ ವಿ.ಪಿ. ಸಿಂಗ್ ನೇತೃತ್ವದ ಜನತಾದಳದ ಸರ್ಕಾರ ಪಥನಗೊಂಡು, ಜನತಾದಳದಿಂದ ವಿಭಜನೆಗೊಂಡಿತು. ಅಲ್ಲಿಗೆ ಮತ್ತೊಮ್ಮೆ ಜನತಾದಳ ವಿಭಜನೆಗೊಂಡಂತಾಯ್ತು. ಆ ಸರ್ಕಾರವೂ ಪಥನಗೊಂಡ ನಂತರ ೧೯೯೧ರಲ್ಲಿ ಲೋಕಸಭೆಗೆ ಮತ್ತೊಮ್ಮೆ ಚುನಾವಣೆ ಜರುಗಿತು. ಶ್ರೀ ಹೆಚ್.ಡಿ. ದೇವೇಗೌಡರು ಹಾಸನ ಲೋಕಸಭಾ ಕೇಂದ್ರದಿಂದ ಆಯ್ಕೆಯಾದರೆ ಶ್ರೀ ರಾಮಕೃಷ್ಣ ಹೆಗಡೆ (ಬಾಗಲಕೋಟೆ) ಮತ್ತು ಶ್ರೀ ಸಿದ್ದರಾಮಯ್ಯ (ಕೊಪ್ಪಳ) ಪರಾಭವಗೊಂಡಿದ್ದರು. ಶ್ರೀ ಹೆಚ್.ಡಿ. ದೇವೇಗೌಡರು ಲೋಕಸಭೆಯಲ್ಲಿ ಸಮರ್ಥವಾಗಿ ಚರ್ಚೆಯಲ್ಲಿ ಭಾಗವಯಿಸುತ್ತಿದ್ದರಲ್ಲದೇ ಲೋಕಸಭೆಯ ಹೊರಗೂ ಜನಪರ ಹೋರಾಟಗಳ್ಳಲ್ಲಿ ಭಾಗವಹಿಸುತ್ತಿದ್ದರು. ಕರ್ನಾಟಕ ವಿಕಾಸರಂಗ ಸ್ಥಾಪಿಸಿ ಕರ್ನಾಟಕದ ಗತಿ ಸಮಸ್ಯೆ ಜಲಸಮಸ್ಯೆ, ಕರ್ನಾಟಕಕ್ಕೆ ಪ್ರತ್ಯೇಕ ರೈಲ್ವೆ ವಲಯ ಸ್ಥಾಪನೆಗಾಗಿ ಹೋರಾಟ ನೆನಪಿನಲ್ಲಿಟ್ಟುಕೊಳ್ಳುವಂಥವುಗಳು

 

ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿತುಕೊಂಡಿದ್ದು ಕರ್ನಾಟಕದ ಜನತಾದಳದ ನಾಯಕರ ಒಗ್ಗಟ್ಟಿನಿಂದ ೧೯೯೪ರ ವಿಧಾನಸಭೆ ಚುನಾವಣೆ ಎದುರಿಸಿದರು. ಅದರ ಫಲ ಕರ್ನಾಟಕದಲ್ಲಿ ಜನತಾದಳ ೧೧೬ ಸ್ಥಾನ ಗಳಿಸಿ ನಿಚ್ಚಳ ಬಹುಮತ ಗಳಿಸಿ, ಶ್ರೀ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಸರ್ಕಾರ ರಚಿಸಿತು.

 

೧೯೯೬ರಲ್ಲಿ ಲೋಕಸಭೆಗೆ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಶ್ರೀ ಹೆಚ್.ಕೆ. ದೇವೇಗೌಡರು ಮಾಡಿದ ಶ್ರಮ ಫಲಿಸಿ ಕರ್ನಾಟಕದ ೨೩ ಲೋಕಸಭಾ ಸ್ಥಾನಗಳಲ್ಲಿ ಜನತಾದಳವು ೧೬ ಸ್ಥಾನ ಗಳಿಸಿತು. ರಾಷ್ಟ್ರ ಮಟ್ಟದಲ್ಲಿ ಜನತಾ ದಳವು ೫೮ ಸ್ಥಾನ ಗಳಿಸಿತು. ಕಾಂಗ್ರೆಸ್ ಬೆಂಬಲದೊಂದಿಗೆ ಜನತಾದಳದ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ರಚಿಸಿತು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಶ್ರೀ ಹೆಚ್.ಡಿ. ದೇವೇಗೌಡರು ಆ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದರು. ಮೊದಲ ಬಾರಿಗೆ ದಕ್ಷಿಣ ಭಾರತದವರೊಬ್ಬರು ಅದರಲ್ಲೂ ಕರ್ನಾಟಕದವರೊಬ್ಬರು ಪ್ರಧಾನಿ ಸ್ಥಾನವನ್ನಲಂಕರಿಸಿದಂತಾಯ್ತು. ಕರ್ನಾಟಕದ ಭಾಗ್ಯದ ಬಾಗಿಲು ತೆರೆದಂತಾಯ್ತು.

 

ಶ್ರೀ ಹೆಚ್.ಡಿ. ದೇವೇಗೌಡರು ಪ್ರಧಾನಿಯಾದ ನಂತರ ತೆರನಾದ ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ಶ್ರೀ ಜೆ.ಹೆಚ್. ಪಾಟೀಲರು ಅಲಂಕರಿಸಿದರು. ಶ್ರೀ ಹೆಚ್.ಡಿ. ದೇವೇಗೌಡರು ರಾಜ್ಯ ಸಭೆಯ ಸದಸ್ಯರಾದರು. ಪ್ರಾಧಾನಿಯಾದ ದೇವೇಗೌಡರು ಕೇಂದ್ರದ ಹಲವಾರು ಯೋಜನೆಗಳನ್ನು ಕರ್ನಾಟಕ ರಾಜ್ಯಕ್ಕೆ ಅದರಲ್ಲೂ ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಿದರು. ಹಲವಾರು ರೈಲ್ವೆ ಮಾರ್ಗಗಳ ರಚನೆಗೆ ಚಾಲನೆ ನೀಡಿದರು. ಹಾಸನದಿಂದ ಶ್ರವಣಬೆಳಗೊಳ ಮಾರ್ಗವಾಗಿ ಬೆಂಗಳೂರಿಗೆ ರೈಲ್ವೆ ಮಾರ್ಗದ ಯೋಜನೆ ದೇವೇಗೌಡರ ಚಿಂತನೆಯ ಫಲವೆನ್ನಬಹುದು.

 

ಆದರೆ ೧೧ ತಿಂಗಳಲ್ಲಿಯೇ ಕಾಂಗ್ರೆಸ್ ಪಕ್ಷ ಶ್ರೀ ದೇವೇಗೌಡರ ನೇತೃತ್ವದ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದ್ದಿದ್ದರಿಂದ ಸರ್ಕಾರದ ಸದನ ಶ್ರೀ ಐ.ಕೆ. ಗುಜ್ರಾಲ್ ನೇತೃತ್ವದಲ್ಲಿ ಸರ್ಕಾರ ರಚನೆ ೫ ತಿಂಗಳಲ್ಲಿಯೇ ವೃತ್ತಿ ಕಾಂಗ್ರೇಸ್ ಪಕ್ಷ ಕ್ಯಾತೆ ತೆಗೆದಿದ್ದರಿಂದ ಸರ್ಕಾರದ ಪತನ.

 

೧೯೯೮ರಲ್ಲಿ ಜರುಗಿದ ಚುನಾವಣೆಯಲ್ಲಿ ದೇವೇಗೌಡರ ಪುನರಾಯ್ಕೆ. ಆದರೆ ಕೇಂದ್ರದ ಭಾ.ಜ.ಪ. ನೇತೃತ್ವದ ಸರ್ಕಾರ ರಚನೆ. ಆ ಸರ್ಕಾರವೂ ೧೩ ತಿಂಗಳಲ್ಲಿ ಪತನ. ೧೯೯೯ರಲ್ಲಿ ಮರು ಚುನಾವಣೆ. ಆಗ ಕರ್ನಾಟಕ ವಿಧಾನಸಭೆಗೆ ಚುನಾವಣೆ ಮತ್ತು ಒಡೆತನದ ಜನತಾದಳ ಕರ್ನಾಟಕದಲ್ಲಿ ಶ್ರೀ ಜೆ.ಹೆಚ್. ಪಾಟೀಲ್ ಮತ್ತು ರಾಮಕೃಷ್ಣ ಹೆಗಡೆ ನೇತೃತ್ವದ ಜನತಾದಳ (ಜಾತ್ಯಾತೀತ) ರಚನೆ. ತೆನೆ ಹೊತ್ತ ಮಹಿಳೆ ಪಕ್ಷದ ಗುರುತು.

 

೧೯೯೯ರ ಚುನಾವಣೆ ಜನತಾದಳದ ಒಡೆತನ ಫಲವಾಗಿ ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಸ್ಥಾಪನೆ. ಕೇಂದ್ರದಲ್ಲಿ ಅಟಲ್ ಬಿಹಾರಿ ವಜಪೇಯಿ ನೇತೃತ್ವದ ಭಾ.ಜ.ಪ. ಸಮ್ಮಿಶ್ರ ಸರ್ಕಾರ ಸ್ಥಾಪನೆ.

 

ಹೆಡೆಬಿಡದ ಛಲದಂಕ "ತ್ರಿವಿಕ್ರಮ' ನಂತೆ ಹೋರಾಟ' ನಡೆಸಿದ ಶ್ರೀ ದೇವೇಗೌಡರು ೨೦೦೨ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಲೋಕಸಭೆಗೆ ಆಯ್ದ ಕರ್ನಾಟಕದ ಹಿತಕ್ಕಾಗಿ ರೈತರ ಕಲ್ಯಾಣಕ್ಕಾಗಿ ಹೋರಾಡುವ ವೀರ ಸೇನಾನಿಯ ಪ್ರವೇಶ ಲೋಕಸಭೆಗೆ ಎಂದರೆ ಅತಿಶಯೋಕ್ತಿಯೇನಲ್ಲ.

 

೨೦೦೪ರಲ್ಲಿ ಲೋಕಸಭೆ ಮತ್ತು ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆ ಫಲಿತಾಂಶ ದೇವೇಗೌಡರ ಶ್ರಮದ ಫಲ. ಜನತಾದಳ (ಜಾತ್ಯಾತೀತ) ೫೮ ವಿಧಾನಸಭಾ ಕ್ಷೇತ್ರದಲ್ಲಿ ಜಯಭೇರಿ ಸರ್ಕಾರ ರಚನೆಯಲ್ಲಿ ಪ್ರಮೂಖ ಪಾತ್ರ ವಹಿಸಿದ ಶ್ರೀ ದೇವೇಗೌಡರ ಪ್ರಯತ್ನದ ಫಲವಾಗಿ ಕೋಮುವಾದಿ ಭಾ.ಜ.ಪ.ವನ್ನು ಅಧಿಕಾರದಿಂದ ದೂರವಿಟ್ಟು ಕಾಂಗ್ರೇಸ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರದ ರಚನೆ.

 

ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ಕಾಂಗ್ರೆಸ್ ಪಕ್ಷವು ಜನತಾದಳವನ್ನು ಒಡೆಯುವ ಸಂಚು ವಂತಿಸಿದ್ದನ್ನ ಅರಿತ ಶ್ರೀ ಕುಮಾರಸ್ವಾಮಿಯವರು ಜನತಾದಳದ ೩೯ ಶಾಸಕರೊಡನೆ ಕಾಂಗ್ರೆಸ್-ಜನತಾದಳ (ಜಾ) ಸರ್ಕಾರವನ್ನು ಪಲನಗೊಳಿಸಿ, ತಮ್ಮ ನೀತೃತ್ವದಲ್ಲಿ ಭಾ.ಜ.ಪ.ದೊಡನೆ ಸಮ್ಮಿಶ್ರ ಸರ್ಕಾರ ರಚಿಸಿದರು.

 

ದಿಟ್ಟ ಶೈಲಿಯ, ಜನಪರ ಯುವ ನೇತಾರ ಕರ್ನಾಟಕದ ಮುಖ್ಯಮಂತ್ರಿಯಾದದ್ದು ಕರ್ನಾಟಕದ ಭಾಗ್ಯವೆನ್ನಬಹುದು.

 

ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಕೆಲವು ಯೋಜನೆಗಳು, ಹಲವಾರು. ಅದನ್ನು ವಿವರವಾಗಿ ಬರೆದರೆ ಮಹಾಭಾರತ-ರಾಮಾಯಣದಂತಹ ದೊಡ್ಡ ಗ್ರಂಥವಾದೀತು.

 

ಅವುಗಳಲ್ಲಿ ಒಂದೆರಡು ಅಂಶಗಳನ್ನು ಮಾತ್ರ ಇಲ್ಲ ಕೊಡಲಾಗಿದೆ. "ಗ್ರಾಮ ವಾಸ್ತವ್ಯ" ಒಂದು ಹೊಸ ಪರಿಕಲ್ಪನೆ.

 

ಭಾರತ ಹಳ್ಳಿಗಳಲ್ಲಿ ಉಸಿರಾಡುತ್ತಿದೆ ಎನ್ನುವ ಮಾತನ್ನು ಎಲ್ಲರೂ ಹೇಳಿದ್ದಾರೆ. ಆದರೆ ಉಸಿರು ಸರಾಗವಾಗಿದೆಯೇ? ನಮ್ಮ ಹಳ್ಳಿಗರು ವಾಸಿಸುತ್ತಿರುವ ಪರಿಸಜ ಹೇಗಿದೆ? ಅದರ ಬಗೆಗೆ ನೋಡಿದವರು. ಚಿಂತಿಸಿದವರು. ಬಹು ವಿರಳ. ಇಂತಹ ನೊಂದ ಪರಿಸ್ಥಿತಿಯಲ್ಲಿ ಗ್ರಾಮಗಳಿಗೆ ತೆರಳಿ ಹಳ್ಳಿಗಳೊಂದಿಗೆ ವಾಸಿಸಿ. ಅವರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅವುಗಳಿಗೆ ಪರಿಹಾರ ಕಲ್ಪಿಸುವ ವಿಧಾನವನ್ನು ಆಚರಣೆಗೆ ತಂದವರು ನಮ್ಮ ಮುಖ್ಯಮಂತ್ರಿ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು.

 

'ಜನತಾದರ್ಶನ'ದಲ್ಲಿ ಸಾರ್ವಜನಿಕರ ತಮ್ಮ ಊರಿನಿಂದ ಬೆಂಗಳೂರಿಗೆ ಬಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದರು. ಅದರ ಬದಲಿಗೆ ರ್ ಗ್ರಾಮ ವಾಸ್ತವ್ಯದಲ್ಲಿ ಜಿಲ್ಲೆಯ ತಾಲ್ಲೂಕೊಂದರ ಗ್ರಾಮಕ್ಕೆ ಬಂದು ಮುಖ್ಯಮಂತ್ರಿಗಳು ಅಲ್ಲಿಯೇ ವಾಸ್ತವ್ಯ ಹೂಡಿದಾಗ ಆ ತಾಲ್ಲೂಕಿನ / ಜಿಲ್ಲೆಯ ಜನತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಮ್ಮ ಸಮಸ್ಯೆ ಹೇಳಿಕೊಂಡು ಕೆಲವು ಸಮಸ್ಯೆಗಳಿಗೆ ಮುಖ್ಯಮಂತ್ರಿಗಳಿಂದ ಅಲ್ಲಿಯೇ ಪರಿಹಾರ ದೊರಕಿಸಿಕೊಳ್ಳುತ್ತಿತ್ತು.

 

೨೦೦೬ರ ಆಗಸ್ಟ್ ೪ರಂದು ಬೆಳಗಾವಿ ಜಿಲ್ಲೆಯ ಅಥವಾ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಪ್ರಾರಂಭವಾದ ಗ್ರಾಮವಾಸ್ತವ್ಯದ ಅಭಿಯಾನ ಗುಲ್ಬರ್ಗಾ, ಮೈಸೂರು, ಹಾವೇರಿ, ಶಿವಮೊಗ್ಗ, ಬಾಗಲಕೋಟೆ, ಚಿಕ್ಕಮಗಳೂರು, ಮಂಡ್ಯ, ತುಮಕೂರು ಜಿಲ್ಲೆಗಳ ಹದಿನಾರು ಗ್ರಾಮಗಳಲ್ಲಿ ತನ್ನ ವ್ಯಾಪ್ತಿಯನ್ನು ಪಸರಿಸಿಕೊಂಡಿದೆ. ಈ ಮೇಲಿನ ೯ ಜಿಲ್ಲೆಗಳ ಉತ್ತೂರು, ಮಣ್ಣೂರು, ಚಿಕ್ಕಕಾನ್ಯ, ಬನ್ನೂರು, ಅಬಲೂರು, ಕಾಟೇನಕಟ್ಟೆ, ಹಿರ್‍ಏಚಿಕ್ಕನಗೇರಿ, ಮಕೋಳ, ನಾಗಳ್ಳಿ, ಸೀಹಳ್ಳಿ, ಬೆಳವಾಡಿ, ಬೀವುಕಲ್ಲುಕೊಪ್ಪಲು, ಹೊನ್ನಗೊಂಡನಹಳ್ಳಿ ಹಾಗೂ ಇಂಗಳಗಿ ಗ್ರಾಮಗಳು ಒಳಗೊಂಡಿವೆ. ಮುಖ್ಯಮಂತ್ರಿಗಳೊಂದಿಗೆ ಆಡಳಿತ ವಾಸ್ತವ್ಯ ಹೂಡಿ ಈ ಹಳ್ಳಿಗಳಿಗ್ ಅನೇಕ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ.

 

ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಿರುವ ರಸ್ತೆ, ಸೇತುವೆ ಸೌಲಭ್ಯ, ಶಾಲಾ-ಕಾಲೇಜುಗಳು, ಕುಡಿಯುವ ನೀರು ಸೌಲಭ್ಯ, ವಿದ್ಯುತ್, ಆಸ್ಪತ್ರೆ ಸೌಲಭ್ಯ, ಮೊದಲಾದವು ಅವರಿಂದ ಪ್ರಗತಿಯಲ್ಲಿ ದೊರಕಿದ್ದು ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಫಲಶೃತಿಯನ್ನಬಹುದು.

 

ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಪರಿಕಲ್ಪನೆಯು ಮಾನವೀಯವಾದ ಇನ್ನೊಂದು ಮುಖವನ್ನು ತೋರಿಸಿಕೊಟ್ಟಿದೆ.

 

ಬಾಗಲಕೋಟೆ ಜಿಲ್ಲೆಯ ಮುಧೋಳು ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ.

 

"ನಮ್ಮ ರಾಜ್ಯದ ಸೋಂಕು, ವಕೀಲರ ಬದುಕು ಇನ್ನು ಮುಂದೆ ಬೆಳಕಾಗುತ್ತದೆ. ಅವರ ಮನದ ಕತ್ತಲನ್ನು ದೂರ ಮಾಡಲು ಪುಟ್ಟದೊಂದು ಬೆಳಕಿಂಡಿಯನ್ನು ಹಬ್ಬದ ಹೆಗ್ಗಳಿಕೆ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರದು.

 

ಗ್ರಾಮೀಣ ಬದುಕನ್ನು ಅರಿತುಕೊಳ್ಳ್ಲು ನೋವನ್ನು ತಿಳಿದುಕೊಳ್ಳಲು, ಅವುಗಳ ಪರಿಹಾರಕ್ಕಾಗಿ ಶ್ರಮಿಸಲು ಒಂದು ಒಳ್ಳೆಯ ಮಾರ್ಗವನ್ನು ಕಂಡುಕೊಂಡರು ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು. ನಿಜಕ್ಕೂ ಇದೊಂದು ಅದ್ಭುತ ಕಲ್ಪನೆ.

 

ಶೀ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಇನ್ನೊಂದು ಯೋಜನೆ "ಸುವರ್ಣ ಗ್ರಾಮೋದಯ"

 

ನಮ್ಮ ದೇಶದ ಗ್ರಾಮಗಳನ್ನು ಅಭಿವೃದ್ಧಿಪದಿಸದೇ, ರೈತರ ನೋವುಗಳನ್ನು ಅಳಿಸಿಹಾಕಿ, ಅವರ ಜೀವನದಲ್ಲಿ ನೋವು ತರಿಸದೇ ನಮ್ಮ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಕಂಡುಕೂಂಡ ಹೆಚ್.ಡಿ. ಕುಮಾರಸ್ವಾಮಿಯವರು ಹಾಕಿಕೊಂಡ ಯೋಜನೆ "ಸುವರ್ಣ ಗ್ರಾಮೋದಯ"

 

೧೦೦ ಗ್ರಾಮಗಳನ್ನು ಆರಿಸಿಕೊಂಡು ಪ್ರತಿ ಗ್ರಾಮಕ್ಕೆ ಒಂದು ಕೋಟಿ ರೂಪಾಯಿ ವೆಚ್ಚ ಮಾಡಿ ಆ ೧೦೦ ಗ್ರಾಮಗಳ ಸುರ್ವಾಂಗೀಣ ಆಭಿವೃದ್ಧಿಪಡಿಸುವ ಗುರಿಯೊಂದಿಗೆ ಶ್ರೀ ಕುಮಾರಸ್ವಾಮಿಯವರು ಆರಂಬಿಸಿದ್ದು ಈ ಯೋಜನೆ.

 

ಗ್ರಾಮಗಳ ಚೊಕ್ಕ ಪರಿಸರ ಮೇಲ್ದರ್ಜೆಗೇರಿಸುವುದು, ಗ್ರಾಮೀಣ ಜನತೆಯ ಆದಾಯಮಟ್ಟ ಹೆಚ್ಚಿಸಲು ಭೂ ಚಟುವಟಿಕೆಗಳ ಉತ್ತೇಜನ ನೀಡುವುದು. ಶಿಕ್ಷಣ, ಆರೋಗ್ಯ ಸೇವೆ, ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಸೌಲಭ್ಯ ಒದಗಿಸುವುದ್ ಈ ಅಂಶಗಳನ್ನೊಳಗೊಂಡಂತೆ ಸಂಪನ್ಮೂಲ ಹೆಚ್ಚಿಸುವುದು. ಸ್ವಸಹಾಯ ಗುಂಪುಗಳು, ಸಾಂಸ್ಕೃತಿಕ ಗುಂಪುಗಳ ಮೂಲಕ ಸಮುದಾಯಿಕ ಜಾಗೃತಿ ಮತ್ತು ಅಭಿವೃದ್ದಿಗಾಗಿ ಶ್ರಮಿಸುವದು ಈ "ಸುವರ್ಣ ಗ್ರಾಮೋದಯ" ಯೋಜನೆಯ ಉದ್ದೇಶ.

 

ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾತಿ ಜಾರಿಗೆ ತಂದಿರುವ ಹಲವಾರು ಯೋಜನೆಗಳಲ್ಲಿ ಇವು ಕೆಲವು ಮಾತ್ರ. ಎಲ್ಲವನ್ನು ಸಂಕ್ಷಿಪ್ತವಾಗಿ ವಿವರಿಸಿದರೂ ಅದೊಂದು ಮಹಾಗ್ರಂಥವಾದೀತು. ಈಗ ಇಷ್ಟು ಸಾಕು.